Mango Shake: ಬೇಸಿಗೆಯಲ್ಲಿ ಮ್ಯಾಂಗೋ ಶೇಕ್ ಕುಡಿಯುವುದರಿಂದಾಗುವ ಆರೋಗ್ಯ ಸಮಸ್ಯೆಗಳೇನು?

Mango Shake:ಬೇಸಿಗೆ(Summer)ಯಲ್ಲಿ ಸಿಗುವ ಪ್ರಮುಖ ಹಣ್ಣುಗಳಲ್ಲಿ ಮಾವು (Mango)ಕೂಡ ಒಂದು, ಮಾವಿನ ಹಣ್ಣಿನಿಂದ ಬಗೆ ಬಗೆಯ ಖಾದ್ಯಗಳನ್ನು ಮಾಡುವುದರ ಜತೆಗೆ ಮ್ಯಾಂಗೋ ಶೇಕ್​​ಗಳನ್ನು ಮಾಡಿಯೂ ಕುಡಿಯುತ್ತಾರೆ. ಆದರೆ ಅದರಿಂದಾಂಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಇಲ್ಲಿದೆ ಮಾಹಿತಿ.

Mango Shake: ಬೇಸಿಗೆಯಲ್ಲಿ ಮ್ಯಾಂಗೋ ಶೇಕ್ ಕುಡಿಯುವುದರಿಂದಾಗುವ ಆರೋಗ್ಯ ಸಮಸ್ಯೆಗಳೇನು?
Mango Shake
Updated By: ನಯನಾ ರಾಜೀವ್

Updated on: May 12, 2022 | 5:22 PM

ಬೇಸಿಗೆ(Summer)ಯಲ್ಲಿ ಸಿಗುವ ಪ್ರಮುಖ ಹಣ್ಣುಗಳಲ್ಲಿ ಮಾವು (Mango)ಕೂಡ ಒಂದು, ಮಾವಿನ ಹಣ್ಣಿನಿಂದ ಬಗೆ ಬಗೆಯ ಖಾದ್ಯಗಳನ್ನು ಮಾಡುವುದರ ಜತೆಗೆ ಮ್ಯಾಂಗೋ ಶೇಕ್​​ಗಳನ್ನು ಮಾಡಿಯೂ ಕುಡಿಯುತ್ತಾರೆ. ಆದರೆ ಅದರಿಂದಾಂಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಮ್ಯಾಂಗೋ ಶೇಖ್​ನಿಂದ ಅನಾರೋಗ್ಯ
ಬೇಸಿಗೆಯಲ್ಲಿ ಮಾವಿನ ಶೇಕ್​ ಅನ್ನು ಹೆಚ್ಚು ಬಾರಿ ಕುಡಿಯುವುದರಿಂದ ದೇಹದ ಉಷ್ಣಾಂಶ ಮಿತಿಮೀರಿ ಮಲಬದ್ಧತೆ, ಗಂಟಲು ನೋವು ಸೇರಿ ಇನ್ನಿತರೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಮ್ಯಾಂಗೋ ಶೇಕ್‌ನ ಅತಿಯಾದ ಸೇವನೆಯಿಂದ ತೂಕ ಹೆಚ್ಚಾಗಬಹುದು. ಏಕೆಂದರೆ ಇದರೊಳಗೆ ಕ್ಯಾಲೋರಿಗಳ ಪ್ರಮಾಣ ಹೆಚ್ಚಾಗಿರುತ್ತದೆ. ಹಾಗಾಗಿ ಇದನ್ನು ಮಿತವಾಗಿ ತಿನ್ನಿ.

ಮ್ಯಾಂಗೋ ಶೇಕ್ ಅನ್ನು ಅತಿಯಾಗಿ ಸೇವಿಸಿದರೆ ಹೊಟ್ಟೆಯ ಸಮಸ್ಯೆಗಳನ್ನು ಸಹ ಎದುರಿಸಬೇಕಾಗಬಹುದು. ಹೊಟ್ಟೆಯ ಸಮಸ್ಯೆ ಕಾಣಿಸಿಕೊಂಡರೆ ವ್ಯಕ್ತಿಯು ವಾಂತಿ, ಅತಿಸಾರ, ವಾಕರಿಕೆ ಇತ್ಯಾದಿ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ.

ಅಲರ್ಜಿಯೂ ಉಂಟಾಗಬಹುದು
ಹೆಚ್ಚು ಮ್ಯಾಂಗೋ ಶೇಕ್ ಕುಡಿಯುವುದರಿಂದ ವಿವಿಧ ರೀತಿಯ ಚರ್ಮದ ಅಲರ್ಜಿ ಸಮಸ್ಯೆಯೂ ನಿಮ್ಮನ್ನು ಕಾಡಬಹುದು. ಕೆಲವರಿಗೆ ತುರಿಕೆ, ದದ್ದು ಇತ್ಯಾದಿ ಸಮಸ್ಯೆಗಳು ಉಂಟಾಗಬಹುದು.

ಮೇಲೆ ತಿಳಿಸಿದ ಅಂಶಗಳು ಯಾವುದನ್ನಾದರೂ ಅತಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು ಎಂದು ತೋರಿಸುತ್ತದೆ. ಹಾಗಾಗಿ, ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಶೇಕ್ ಅನ್ನು ಸೇವಿಸುವುದನ್ನು ತಪ್ಪಿಸಿ.

ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಹಾಗೂ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ನಿಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾದರೆ ವೈದ್ಯರ ಸಲಹೆ ಪಡೆಯಿರಿ

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:08 pm, Thu, 12 May 22