Period Cramps: ಋತುಚಕ್ರದ ಸೆಳೆತ ಹೆಚ್ಚಿಸಬಹುದಾದ 4 ಪ್ರಮುಖ ಪೋಷಕಾಂಶಗಳ ಕೊರತೆ ಯಾವುದು? ಮುಟ್ಟಿನ ನೋವಿಗೆ ಪರಿಹಾರ ಏನು?

| Updated By: ಅಕ್ಷತಾ ವರ್ಕಾಡಿ

Updated on: Apr 21, 2023 | 4:18 PM

ಡಿಸ್ಮೆನೋರಿಯಾ ಅಥವಾ ಮುಟ್ಟಿನ ಸೆಳೆತವು ಪ್ರತಿಯೊಬ್ಬ ಮಹಿಳೆಗೆ ಬರುವುದು ಸಾಮಾನ್ಯ. ಆದರೆ ನೋವಿನ ತೀವ್ರತೆಯ ಹಿಂದಿನ ಕಾರಣವು ಪ್ರತಿಯೊಬ್ಬ ಮಹಿಳೆಗೂ ಭಿನ್ನವಾಗಿರಬಹುದು. ಹಾಗಾಗಿ ಅದ್ಕಕೆ ಕಾರಣವೇನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Period Cramps: ಋತುಚಕ್ರದ ಸೆಳೆತ ಹೆಚ್ಚಿಸಬಹುದಾದ 4 ಪ್ರಮುಖ ಪೋಷಕಾಂಶಗಳ ಕೊರತೆ ಯಾವುದು? ಮುಟ್ಟಿನ ನೋವಿಗೆ ಪರಿಹಾರ ಏನು?
ಮುಟ್ಟಿನ ನೋವು ಅಥವಾ ಸೆಳೆತ
Image Credit source: HealthShots
Follow us on

ಮುಟ್ಟಿನ ನೋವು ಅಥವಾ ಸೆಳೆತವನ್ನು ಸಹಿಸಿಕೊಳ್ಳುವುದು ಸುಲಭವಲ್ಲ. ಋತುಚಕ್ರದ ಸೆಳೆತ ಅಥವಾ ಡಿಸ್ಮೆನೋರಿಯಾ ಎಂದರೆ ಕಿಬ್ಬೊಟ್ಟೆಯ ಕೆಳಭಾಗದಲ್ಲಿ ನೋವು ಉಂಟಾಗುವುದು. ಅನೇಕ ಮಹಿಳೆಯರು ತಮ್ಮ ಋತುಚಕ್ರಕ್ಕಿಂತ ಮೊದಲು ಅಥವಾ ಮುಟ್ಟಿನ ಸಮಯದಲ್ಲಿ ಸೆಳೆತ ಅನುಭವಿಸುತ್ತಾರೆ. ಪ್ರತಿಯೊಬ್ಬ ಮಹಿಳೆಯೂ ಈ ನೋವನ್ನು ಅನುಭವಿಸುತ್ತಿದ್ದರೂ, ಅದರ ತೀವ್ರತೆ ಎಲ್ಲರಿಗೂ ವಿಭಿನ್ನವಾಗಿರುತ್ತದೆ. ಈ ನರಳಾಟಕ್ಕೆ ಕಾರಣವಾಗುವುದು ಹಲವಾರು. ಮುಟ್ಟಿನ ನೋವು ಎಂಡೊಮೆಟ್ರಿಯೋಸಿಸ್, ಫೈಬ್ರಾಯ್ಡ್ಗಳು, ಗರ್ಭಕಂಠದ ಸ್ಟೆನೋಸಿಸ್ ಅಥವಾ ಪೆಲ್ವಿಕ್ ಉರಿಯೂತದ ಕಾಯಿಲೆಯಿಂದ ಉಂಟಾಗುತ್ತದೆ. ಆದಾಗ್ಯೂ, ಕೆಲವು ಪೌಷ್ಠಿಕಾಂಶದ ಕೊರತೆಯಿಂದಾಗಿ ನಿಮ್ಮ ಋತುಚಕ್ರದ ಸೆಳೆತಗಳು ಹೆಚ್ಚಾಗಬಹುದಾಗಿದೆ.

ಋತುಚಕ್ರದ ನೋವಿಗೆ ಕಾರಣವಾಗುವ 4 ಪೋಷಕಾಂಶಗಳ ಕೊರತೆ ಬಗೆಗಿನ ಮಾಹಿತಿ ಇಲ್ಲಿದೆ:

ಮೆಗ್ನೀಸಿಯಮ್:

ಪಿಎಂಎಸ್ ರೋಗಲಕ್ಷಣಗಳಿಗೆ, ವಿಶೇಷವಾಗಿ ಮುಟ್ಟಿನ ನೋವಿಗೆ ಮೆಗ್ನೀಸಿಯಮ್ ಸೂಪರ್ ಹೀರೊ. ಇದನ್ನು ಪ್ರತಿದಿನ ತೆಗೆದುಕೊಂಡರೆ, ಮೆಗ್ನೀಸಿಯಮ್ ಡಿಸ್ಮೆನೋರಿಯಾವನ್ನು (ಮುಟ್ಟಿನ ಸೆಳೆತ) ತಡೆಯಬಹುದು. ಇದು ಗರ್ಭಾಶಯದ ನಯವಾದ ಸ್ನಾಯುವನ್ನು ಸಡಿಲಗೊಳಿಸುವ ಮೂಲಕ ಮತ್ತು ಮುಟ್ಟಿನ ನೋವನ್ನು ಉಂಟುಮಾಡುವ ಪ್ರೊಸ್ಟಗ್ಲಾಂಡಿನ್ಗಳನ್ನು ಕಡಿಮೆ ಮಾಡುತ್ತದೆ.

ವಿಟಮಿನ್ ಡಿ:

ಪ್ರೊಸ್ಟಗ್ಲಾಂಡಿನ್ಗಳು ಎಂದು ಕರೆಯಲ್ಪಡುವ ಹಾರ್ಮೋನ್ ತರಹದ ವಸ್ತುಗಳ ಅತಿಯಾದ ಉತ್ಪಾದನೆಯು ನೋವಿನ ಅವಧಿಗಯನ್ನು ಹೆಚ್ಚಿಸುತ್ತದೆ. ವಿಟಮಿನ್ ಡಿ ಉರಿಯೂತ ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ, ಅಂದರೆ ಇದು ಪ್ರೊಸ್ಟಗ್ಲಾಂಡಿನ್ಗಳ ಉತ್ಪಾದನೆಯನ್ನು ನಿಯಂತ್ರಿಸುತ್ತದೆ ಮತ್ತು ಮುಟ್ಟಿನ ನೋವುಗಳನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ವಿಟಮಿನ್ ಡಿ ಮಟ್ಟವು ಕಡಿಮೆಯಿದ್ದರೆ, ಈ ಪ್ರೊಸ್ಟಗ್ಲಾಂಡಿನ್ಗಳನ್ನು ನಿಯಂತ್ರಿಸುವಲ್ಲಿ ವಿಫಲರಾಗುತ್ತೆವೆ ಅಲ್ಲದೆ ನೋವಿನ ಅವಧಿ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನು ಓದಿ: ನಿಮ್ಮ ಒತ್ತಡವು ಹೊಟ್ಟೆ, ಬೆನ್ನು, ಕಣ್ಣಿನ ಸಮಸ್ಯೆಗಳನ್ನು ಉಂಟು ಮಾಡಬಹುದು, ಎಚ್ಚರ

ಒಮೆಗಾ 3:

ಕೊಬ್ಬಿನಾಮ್ಲಗಳನ್ನು ಕಡಿಮೆ ಸೇವಿಸುವ ಮಹಿಳೆಯರಲ್ಲಿ (ಅಗಸೆ ಬೀಜಗಳು, ಚಿಯಾ ಬೀಜಗಳು, ತುಪ್ಪ ಮತ್ತು ವಾಲ್ನಟ್ಗಳಿಂದ ಬರುವವು) ಉತ್ತಮ ಸೇವನೆ ಮಾಡುವ ಮಹಿಳೆಯರಿಗಿಂತ ಹೆಚ್ಚು ಋತುಚಕ್ರದ ನೋವನ್ನುಅನುಭವಿಸುತ್ತಾರೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಒಮೆಗಾ 3 ಕೊಬ್ಬಿನಾಮ್ಲಗಳನ್ನು ಪೂರಕ ರೂಪದಲ್ಲಿ ತೆಗೆದುಕೊಳ್ಳುವುದು ಅತ್ಯಂತ ಸಹಾಯಕವಾಗಿದೆ.

ವಿಟಮಿನ್ ಇ:

ವಿಟಮಿನ್ ಇ ಇರುವ ಹಣ್ಣು-ಹಂಪಲು ತಿನ್ನುವುದರಿಂದ ಪಿಎಂಎಸ್ ಗೆ ಸಂಬಂಧಿಸಿದ ಸೆಳೆತ, ಆತಂಕ ಮತ್ತು ಕಡುಬಯಕೆಯ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನೋವನ್ನು ನಿವಾರಿಸುತ್ತದೆ, ಹಾರ್ಮೋನುಗಳನ್ನು ಸಮತೋಲನಗೊಳಿಸುವ ಮೂಲಕ ಮುಟ್ಟಿನಲ್ಲಿ ರಕ್ತ ಹೆಚ್ಚಾಗಿ ಹೋಗದಂತೆ ಕಡಿಮೆ ಮಾಡುತ್ತದೆ ಮತ್ತು ಋತುಚಕ್ರವನ್ನು ನಿಯಂತ್ರಿಸುತ್ತದೆ.

ಆದ್ದರಿಂದ, ಸರಿಯಾದ ಆಹಾರ, ಆರೋಗ್ಯಕರ ಜೀವನಶೈಲಿ ಮತ್ತು ನಮ್ಮ ದೈನಂದಿನ ಆಹಾರದಲ್ಲಿ ಈ ಪೋಷಕಾಂಶಗಳನ್ನು ಸೇರಿಸುವುದು ಮಹಿಳೆಯರ ಋತುಚಕ್ರದ ದಿನಗಳನ್ನು ಸರಾಗಗೊಳಿಸಲು ಸಹಾಯ ಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 4:18 pm, Fri, 21 April 23