35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಮಾನಸಿಕ ಕಾಯಿಲೆ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು?

ಭಾರತದಲ್ಲಿ ಮಾನಸಿಕ ಕಾಯಿಲೆ ಹೆಚ್ಚಾಗಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿಯೇ ಕಂಡುಬರುತ್ತಿವೆ. ಈ ರೀತಿ ಚಿಕ್ಕ ವಯಸ್ಸಿನಲ್ಲಿಯೇ ಮಾನಸಿಕ ಆರೋಗ್ಯ ಕ್ಷೀಣಿಸುವುದಕ್ಕೆ ಹಲವು ಕಾರಣಗಳಿರಬಹುದು. ಆದರೆ ಈ ಬಗ್ಗೆ ಸರಿಯಾಗಿ ತಿಳಿದು ಆರೋಗ್ಯ ಸುಧಾರಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇಲ್ಲವಾದಲ್ಲಿ ಈ ರೀತಿಯ ಸಮಸ್ಯೆ ಹೆಚ್ಚುತ್ತಲೇ ಇರುತ್ತದೆ. ಹಾಗಾಗಿ ಇದರ ಹೆಚ್ಚಳಕ್ಕೆ ಕಾರಣ ತಿಳಿಯುವುದರ ಜೊತೆಗೆ ಮಾನಸಿಕ ಆರೋಗ್ಯ ಹಾಳಾಗದಂತೆ ನೋಡಿಕೊಳ್ಳಲು ಯಾವ ರೀತಿಯ ಸಲಹೆಗಳನ್ನು ಪಾಲಿಸಬೇಕು ಎಂಬುದರ ಬಗ್ಗೆ ತಿಳಿಯುವುದು ಮುಖ್ಯವಾಗುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಮಾನಸಿಕ ಕಾಯಿಲೆ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು?
Mental Health Crisis In India
Image Credit source: Getty Images

Updated on: Feb 05, 2026 | 4:17 PM

ದೇಹಕ್ಕೆ ಬಂದ ರೋಗವನ್ನು ಗುಣಪಡಿಸಬಹುದು ಆದರೆ ಮನಸ್ಸಿಗಾದ ನೋವನ್ನು ವಾಸಿ ಮಾಡಲು ಮಾತ್ರೆ, ಔಷಧಗಳಿಂದ ಸಾಧ್ಯವಿಲ್ಲ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಮಾನಸಿಕ ಕಾಯಿಲೆಗಳಿಗೆ ಸಂಬಂಧ ಪಟ್ಟ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನ ಎಚ್ಛೆತ್ತುಕೊಳ್ಳುವುದು ಬಹಳ ಅನಿವಾರ್ಯವಾಗಿದೆ. ಈ ಬಗ್ಗೆ ಅನೇಕ ರೀತಿಯ ಸಂಶೋಧನೆಗಳು ಕೂಡ ನಡೆದಿದ್ದು, ಭಾರತೀಯ ಮನೋವೈದ್ಯಕೀಯ ಸಂಘದ ದತ್ತಾಂಶದ ಪ್ರಕಾರ, ಭಾರತದಲ್ಲಿ ಶೇಕಡ 60 ರಷ್ಟು ಮಾನಸಿಕ ಕಾಯಿಲೆಗಳು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕಂಡುಬರುತ್ತಿದೆ ಎಂಬ ಆಘಾತಕಾರಿ ಅಂಶವನ್ನು ಹೊರಹಾಕಿದೆ. ಅದರ ಡೇಟಾವನ್ನು ಮಾಲಿಕ್ಯುಲರ್ ಸೈಕಿಯಾಟ್ರಿ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಹಾಗಾದರೆ ಚಿಕ್ಕ ವಯಸ್ಸಿನಲ್ಲಿಯೇ ಮಾನಸಿಕ ಆರೋಗ್ಯ (Mental Health) ಕ್ಷೀಣಿಸುವುದಕ್ಕೆ ಕಾರಣವೇನು, ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಂಶೋಧನೆಯಿಂದ ತಿಳಿದು ಬಂದ ಮಾಹಿತಿ ಪ್ರಕಾರ, ಶೇಕಡ 34.6 ರಷ್ಟು ಮಾನಸಿಕ ಅಸ್ವಸ್ಥತೆಗಳು 14 ವರ್ಷಕ್ಕಿಂತ ಮೊದಲು, ಶೇಕಡ 48.4 ರಷ್ಟು 18 ವರ್ಷಕ್ಕಿಂತ ಮೊದಲು ಮತ್ತು ಶೇಕಡ 62.5 ರಷ್ಟು 25 ವರ್ಷ ವಯಸ್ಸಿನೊಳಗೆ ಪ್ರಾರಂಭವಾಗುತ್ತವೆ. ಇನ್ನು, ಹೆಚ್ಚಿನ ರೋಗಿಗಳಿಗೆ ಮಾನಸಿಕ ಅಸ್ವಸ್ಥತೆಯು ಪ್ರೌಢಾವಸ್ಥೆಗೆ ಮುಂಚೆಯೇ ಪ್ರಾರಂಭವಾಗುತ್ತದೆ ಮತ್ತು ಕ್ರಮೇಣ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ 25 ವರ್ಷ ವಯಸ್ಸಿನವರಲ್ಲಿ ಗಮನ ಕೊರತೆಯ ಹೈಪರ್ಆಕ್ಟಿವಿಟಿ ಡಿಸಾರ್ಡರ್ (ADHD), ಆತಂಕ ಮತ್ತು ಅಸ್ವಸ್ಥತೆ ಕಂಡುಬಂದಿರುವ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ ಎಂದು ತಜ್ಞರು ಹೇಳಿದ್ದಾರೆ. ಖಿನ್ನತೆಯ ಪ್ರಕರಣಗಳು ಸಹ ಮೊದಲಿಗಿಂತ ಚಿಕ್ಕ ವಯಸ್ಸಿನಲ್ಲಿಯೇ ಪ್ರಾರಂಭವಾಗುತ್ತಿದ್ದು ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಅವು ಗಂಭೀರ ಸಮಸ್ಯೆಯಾಗಬಹುದು.

ಚಿಕ್ಕ ವಯಸ್ಸಿನಲ್ಲಿಯೇ ಮಾನಸಿಕ ಆರೋಗ್ಯ ಕ್ಷೀಣಿಸುವುದಕ್ಕೆ ಕಾರಣವೇನು?

ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಮಾನಸಿಕ ಕಾಯಿಲೆಗಳು ಹೆಚ್ಚಾಗುವುದಕ್ಕೆ ಸಕಾಲಿಕ ಚಿಕಿತ್ಸೆಯ ಕೊರತೆ ಮತ್ತು ಈ ಪರಿಸ್ಥಿತಿಗಳ ಬಗ್ಗೆ ಸಾಕಷ್ಟು ಅರಿವು ಇಲ್ಲದಿರುವುದೇ ಮುಖ್ಯ ಕಾರಣವಾಗಿದೆ. ಹದಿಹರೆಯದಲ್ಲಿ ಪ್ರಾರಂಭವಾಗುವ ಮಾನಸಿಕ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡದಿದ್ದರೆ, ಜೀವನದುದ್ದಕ್ಕೂ ಇದು ಮಹಾಮಾರಿಯಾಗಿ ಬೆನ್ನಿಗಿರುತ್ತದೆ. ಇದು ವ್ಯಕ್ತಿಯ ಮೇಲೆ ಮಾತ್ರವಲ್ಲದೆ ಅವರ ಕುಟುಂಬದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: 30 ರಿಂದ 35 ನೇ ವಯಸ್ಸಿನಲ್ಲಿ ಬಿಪಿ ಬರುವುದನ್ನು ತಡೆಯಲು ಈ ಟ್ರಿಕ್ಸ್ ಪಾಲಿಸಿ ನೋಡಿ!

ಮಾನಸಿಕ ಆರೋಗ್ಯ ಹಾಳಾಗದಂತೆ ನೋಡಿಕೊಳ್ಳುವುದು ಹೇಗೆ?

  • ಪ್ರತಿದಿನ ಒಂದೇ ಸಮಯಕ್ಕೆ ಮಲಗಿ ಏಳುವ ಅಭ್ಯಾಸವನ್ನು ಪ್ರಾರಂಭಿಸಿಕೊಳ್ಳಬೇಕು.
  • ಪ್ರತಿದಿನ ವ್ಯಾಯಾಮ ಮತ್ತು ಯೋಗಾಭ್ಯಾಸ ಮಾಡಿ.
  • ಆದಷ್ಟು ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಕಡಿಮೆ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ