ತಲೆ ಕೂದಲು ಸೌಂದರ್ಯದ ಸಂಕೇತ, ನೀವು ನೋಡಲು ಹೇಗಿದ್ದರೂ ಕೂದಲು ಚೆನ್ನಾಗಿದ್ದರೆ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದಾಗಿ ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿದೆ. ತಲೆ ಕೂದಲು ಉದುರುವ ಸಮಸ್ಯೆಯನ್ನು ಹೆಣ್ಣುಮಕ್ಕಳು ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ.
ಕೂದಲು ಉದುರುವ ಸಮಸ್ಯೆಯು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು, ಹೌದು ಕೂದಲು ಉದುರುವ ಸಮಸ್ಯೆಯ ಬಗ್ಗೆ ತುಂಬಾ ಆಲೋಚನೆ ಮಾಡುವುದರಿಂದ ಖಿನ್ನತೆ, ಮಾನಸಿಕ ಒತ್ತಡ ಉಂಟಾಗಲಿದೆ.
ಜರ್ನಲ್ ಒಂದು ಪ್ರಕಟಿಸಿರುವ ವರದಿ ಪ್ರಕಾರ, ಸಮೀಕ್ಷೆಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಒಟ್ಟು 800 ಮಂದಿ ಪಾಲ್ಗೊಂಡಿದ್ದರು, ಅದರಲ್ಲಿ 442 ಮಂದಿ ಪುರುಷರು ಹಾಗೂ 358 ಮಂದಿ ಮಹಿಳೆಯರಿದ್ದರು.
18-30 ವರ್ಷದೊಳಗಿನ ಶೇ.30ರಷ್ಟು ಪುರುಷರು ಹಾಗೂ ಶೇ.27ರಷ್ಟು ಮಹಿಳೆಯರು ಕೂದಲು ಉದುರುವ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.
ಕೂದಲು ಉದುರುವಿಕೆ ಹೇಗೆ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು
ತಲೆ ಕೂದಲು ಉದುರುವ ಸಮಸ್ಯೆ ಮಹಿಳೆ ಹಾಗೂ ಪುರುಷ ಇಬ್ಬರಿಗೂ ಇದೆ. ಆದರೆ ಪುರುಷರು ತಲೆಗೂದಲುನ ಇಲ್ಲದ್ದನ್ನು ಸುಲಭವಾಗಿ ಒಪ್ಪಿಕೊಳ್ಳುತ್ತಾರೆ. ಆದರೆ ಮಹಿಳೆಯರು ಖಿನ್ನತೆಗೆ ಒಳಗಾಗುತ್ತಾರೆ.
ಕೂದಲು ಸಮಸ್ಯೆ ಸಾಮಾನ್ಯವಾಗಿದೆ. ಕೂದಲು ಉದುರುವುದನ್ನು ನಿಯಂತ್ರಿಸಲು ಜನರು ಮಾರುಕಟ್ಟೆಯಲ್ಲಿ ಲಭ್ಯವಿರುವ ನಾನಾ ರೀತಿಯ ತೈಲಗಳು ಹಾಗೂ ಶಾಂಪೂಗಳ ಮೊರೆಹೋಗುತ್ತಾರೆ. ಹಲವು ಸಂದರ್ಭಗಳಲ್ಲಿ ಹೆಚ್ಚು ರಾಸಾಯನಿಕ ಭರಿತ ಶಾಂಪೂಗಳನ್ನು ಕೂದಲಿಗೆ ಹಚ್ಚುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುವ ಬದಲಿಗೆ ನಿಮ್ಮ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.