Mental Health Yoga: ಜ್ಞಾಪಕ ಶಕ್ತಿ ಹೆಚ್ಚಿಸಲು ಈ ನಾಲ್ಕು ಆಸನಗಳನ್ನು ಮಾಡಿ
Yoga Asanas To Improve Memory: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಯೋಗದ ಅವಶ್ಯಕತೆ ಇದೆ. ಅದರಲ್ಲಿಯೂ ಬೆಳೆಯುತ್ತಿರುವ ಮಕ್ಕಳಿಗೆ ಅಧ್ಯಯನ ಮಾಡಲು ಮನಸ್ಸು ಬರುವುದಿಲ್ಲ. ಏಕಾಗ್ರತೆಯ ಕೊರತೆಯಿಂದಾಗಿ ಓದಿದ ಪಾಠಗಳು ಮರೆತು ಹೋಗುತ್ತವೆ. ವಯಸ್ಸು ಹೆಚ್ಚಾದಂತೆ, ಸ್ಮರಣ ಶಕ್ತಿ ದುರ್ಬಲವಾಗುತ್ತದೆ. ಹಾಗಾಗಿ ವಯಸ್ಸಾದವರಿಗೆ ಅನೇಕ ವಿಷಯಗಳು ನೆನಪಿರುವುದಿಲ್ಲ. ಅದಲ್ಲದೆ ನಿದ್ರೆಯ ಕೊರತೆ, ಆಯಾಸ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಜ್ಞಾಪಕಶಕ್ತಿ ಕುಂಠಿತಗೊಳ್ಳಬಹುದು. ಹಾಗಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ಪರಿಹಾರ ಪಡೆಯಲು ಯೋಗ ಪ್ರಯೋಜನಕಾರಿಯಾಗಿದೆ. ಯಾವ ಯೋಗಾಸನ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ? ಮನಸ್ಸಿಗೆ ಶಾಂತಿ ನೀಡುವ, ಸ್ಮರಣೆಯನ್ನು ತೀಕ್ಷ್ಣಗೊಳಿಸುವ ಮತ್ತು ಏಕಾಗ್ರತೆಯನ್ನು ಸುಧಾರಿಸುವ ಕೆಲವು ಯೋಗಾಸನಗಳ ಬಗ್ಗೆ ಮಾಹಿತಿ ಇಲ್ಲಿದೆ.
ಮನಸ್ಸಿನ ಶಾಂತಿಗಾಗಿ ಯೋಗ ಮಾಡುವುದು ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇದಕ್ಕೆ ವಯಸ್ಸಿನ ನಿರ್ಬಂಧನೆ ಇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಯೋಗದ ಅವಶ್ಯಕತೆ ಇದೆ. ಅದರಲ್ಲಿಯೂ ಬೆಳೆಯುತ್ತಿರುವ ಮಕ್ಕಳಿಗೆ ಅಧ್ಯಯನ ಮಾಡಲು ಮನಸ್ಸು ಬರುವುದಿಲ್ಲ. ಏಕಾಗ್ರತೆಯ ಕೊರತೆಯಿಂದಾಗಿ ಓದಿದ ಪಾಠಗಳು ಮರೆತು ಹೋಗುತ್ತವೆ. ವಯಸ್ಸು ಹೆಚ್ಚಾದಂತೆ, ಸ್ಮರಣ ಶಕ್ತಿ ದುರ್ಬಲವಾಗುತ್ತದೆ. ಹಾಗಾಗಿ ವಯಸ್ಸಾದವರಿಗೆ ಅನೇಕ ವಿಷಯಗಳು ನೆನಪಿರುವುದಿಲ್ಲ. ಅದಲ್ಲದೆ ನಿದ್ರೆಯ ಕೊರತೆ, ಆಯಾಸ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಜ್ಞಾಪಕಶಕ್ತಿ ಕುಂಠಿತಗೊಳ್ಳಬಹುದು. ಹಾಗಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ಪರಿಹಾರ ಪಡೆಯಲು ಯೋಗ ಪ್ರಯೋಜನಕಾರಿಯಾಗಿದೆ. ಯಾವ ಯೋಗಾಸನ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ? ಮನಸ್ಸಿಗೆ ಶಾಂತಿ ನೀಡುವ, ಸ್ಮರಣೆಯನ್ನು ತೀಕ್ಷ್ಣಗೊಳಿಸುವ ಮತ್ತು ಏಕಾಗ್ರತೆಯನ್ನು ಸುಧಾರಿಸುವ ಕೆಲವು ಯೋಗಾಸನಗಳ ಬಗ್ಗೆ ಮಾಹಿತಿ ಇಲ್ಲಿದೆ.
ಪದ್ಮಾಸನ ಯೋಗ: ಪದ್ಮಾಸನವನ್ನು ಕಮಲದ ಮುದ್ರೆ ಎಂದೂ ಕರೆಯುತ್ತಾರೆ. ಈ ಆಸನವು ಸ್ನಾಯುವಿನ ಉದ್ವೇಗವನ್ನು ಕಡಿಮೆ ಮಾಡಲು ಮತ್ತು ಮನಸ್ಸಿಗೆ ಶಾಂತಿ ನೀಡಲು ಯೋಗವು ಉತ್ತಮ ಮಾರ್ಗವಾಗಿದೆ. ಇದನ್ನು ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ ಮೆದುಳಿನ ಕಾರ್ಯ ಶಕ್ತಿ ವೇಗವಾಗಿ ಹೆಚ್ಚಾಗುತ್ತದೆ.
ಸರ್ವಾಂಗಾಸನ: ಈ ಆಸನದ ನಿಯಮಿತ ಅಭ್ಯಾಸವು ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಅಲ್ಲದೆ ಈ ಅಭ್ಯಾಸವು ಬಹಳ ಪ್ರಯೋಜನಕಾರಿಯಾಗಿದೆ. ಮನಸ್ಸನ್ನು ಆರೋಗ್ಯವಾಗಿಡಲು ಈ ಯೋಗ ಮಾಡಬಹುದು. ಅದೂ ಅಲ್ಲದೆ ಸರ್ವಾಂಗಾಸನ ವಿದ್ಯಾರ್ಥಿಗಳಿಗೆ ಉತ್ತಮ ಆಯ್ಕೆಯಾಗಿದೆ.
ಪಶ್ಚಿಮೋತ್ಥಾನಾಸನ: ಏಕಾಗ್ರತೆಯನ್ನು ಹೆಚ್ಚಿಸಲು ಪಶ್ಚಿಮೋತ್ಥಾನಾಸನ ಅತ್ಯುತ್ತಮ ಆಸನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಆಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಜ್ಞಾಪಕ ಶಕ್ತಿಯನ್ನು ಸುಧಾರಿಸುತ್ತದೆ. ಈ ಯೋಗ ನರಮಂಡಲಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ತಲೆನೋವಿನಿಂದ ಪರಿಹಾರ ಪಡೆಯಲು ಮತ್ತು ಮೆದುಳನ್ನು ಚುರುಕಾಗಿಸಲು ಪಶ್ಚಿಮೋತ್ಥಾನಾಸನವನ್ನು ಅಭ್ಯಾಸ ಮಾಡಬಹುದು.
ಹಲಾಸನ: ಈ ಆಸನವು ಒತ್ತಡವನ್ನು ಕಡಿಮೆ ಮಾಡಲು, ಮನಸ್ಸನ್ನು ಶಾಂತವಾಗಿಡಲು ಮತ್ತು ಆರೋಗ್ಯಕರ ನರಮಂಡಲವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಈ ಆಸನದ ಅಭ್ಯಾಸವು ಮೆದುಳಿನಲ್ಲಿ ರಕ್ತ ಪರಿಚಲನೆಯನ್ನು ಉತ್ತೇಜಿಸುವುದಲ್ಲದೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ