Brinjal Side Effects: ಈ ಐದು ರೋಗ ಇರುವವರು ಬದನೇಕಾಯಿ ಸೇವನೆ ಮಾಡಬಾರದು

ಬದನೇಕಾಯಿ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು ಇದರಲ್ಲಿರುವ ಪೋಷಕಾಂಶಗಳ ಸೇವನೆಯು ಕೂಡ ನಮ್ಮ ದೇಹಕ್ಕೆ ಅಗತ್ಯವಾಗಿದೆ. ಆದರೆ ಬದನೇಕಾಯಿ ತಿನ್ನುವುದು ಕೆಲವರಿಗೆ ವಿಷದಷ್ಟೇ ಹಾನಿಕಾರಕವಾಗಿದೆ. ಹೌದು. ಕೆಲವು ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಈ ತರಕಾರಿಯನ್ನು ತಿನ್ನದಿರುವುದು ಒಳ್ಳೆಯದು. ಏಕೆಂದರೆ ಇದರ ಸೇವನೆಯು ನಿಮ್ಮ ಆರೋಗ್ಯ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಹಾಗಾದರೆ ಬದನೆಯನ್ನು ಯಾವ ರೀತಿಯ ಆರೋಗ್ಯ ಸಮಸ್ಯೆಗಳಿದ್ದವರು ಸೇವನೆ ಮಾಡಬಾರದು? ತಜ್ಞರು ಹೇಳುವುದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

Brinjal Side Effects: ಈ ಐದು ರೋಗ ಇರುವವರು ಬದನೇಕಾಯಿ ಸೇವನೆ ಮಾಡಬಾರದು
ಬದನೇಕಾಯಿ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 23, 2024 | 12:43 PM

ಬದನೆಕಾಯಿ ಕೆಲವರ ನೆಚ್ಚಿನ ತರಕಾರಿ. ಸಾಮಾನ್ಯವಾಗಿ ಇದರ ರುಚಿಯನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಇದನ್ನು ಇಷ್ಟ ಪಟ್ಟು ಸೇವನೆ ಮಾಡುವವರಿದ್ದಾರೆ. ಇವುಗಳಲ್ಲಿ ಅನೇಕ ವಿಧಗಳಿದ್ದು ಒಂದಕ್ಕಿಂತ ಮತ್ತೊಂದು ರುಚಿ ಹೆಚ್ಚಿಸುತ್ತವೆ. ಇವುಗಳಿಂದ ಅನೇಕ ರೀತಿಯ ಆಹಾರ ಪದಾರ್ಥಗಳನ್ನು ತಯಾರಿಸಿ ಸೇವನೆ ಮಾಡಲಾಗುತ್ತದೆ. ಏಕೆಂದರೆ ಇದು ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು ಇದರಲ್ಲಿರುವ ಪೋಷಕಾಂಶಗಳ ಸೇವನೆಯು ಕೂಡ ನಮ್ಮ ದೇಹಕ್ಕೆ ಅಗತ್ಯವಾಗಿದೆ. ಆದರೆ ಬದನೇಕಾಯಿ ತಿನ್ನುವುದು ಕೆಲವರಿಗೆ ವಿಷದಷ್ಟೇ ಹಾನಿಕಾರಕವಾಗಿದೆ. ಹೌದು. ಕೆಲವು ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಈ ತರಕಾರಿಯನ್ನು ತಿನ್ನದಿರುವುದು ಒಳ್ಳೆಯದು. ಏಕೆಂದರೆ ಇದರ ಸೇವನೆಯು ನಿಮ್ಮ ಆರೋಗ್ಯ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಹಾಗಾದರೆ ಬದನೆಯನ್ನು ಯಾವ ರೀತಿಯ ಆರೋಗ್ಯ ಸಮಸ್ಯೆಗಳಿದ್ದವರು ಸೇವನೆ ಮಾಡಬಾರದು? ತಜ್ಞರು ಹೇಳುವುದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದವರು: ಗ್ಯಾಸ್ ಮತ್ತು ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆ ಇರುವವರು ಬದನೆಕಾಯಿ ತಿನ್ನುವುದನ್ನು ಆದಷ್ಟು ತಪ್ಪಿಸಬೇಕು. ಇಲ್ಲವಾದಲ್ಲಿ ಬದನೆಕಾಯಿ ಸೇವನೆ ಜೀರ್ಣಕಾರಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ಕಳಪೆ ಜೀರ್ಣ ಶಕ್ತಿ ಅಥವಾ ಗ್ಯಾಸ್ ಅಥವಾ ಆಮ್ಲೀಯತೆ ಇರುವವರು ಬದನೆಕಾಯಿಯನ್ನು ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ.

ರಕ್ತಹೀನತೆ: ಆರೋಗ್ಯ ತಜ್ಞರ ಪ್ರಕಾರ ರಕ್ತಹೀನತೆಯಿಂದ ಬಳಲುತ್ತಿರುವವರು ಸಹ ಬದನೆಕಾಯಿ ತಿನ್ನಬಾರದು. ಏಕೆಂದರೆ ಇದು ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುವ ಅಂಶಗಳನ್ನು ಹೊಂದಿರುತ್ತದೆ. ಈ ಕಾರಣದಿಂದಾಗಿ, ರಕ್ತದ ಕೊರತೆ ಮತ್ತಷ್ಟು ಉಲ್ಬಣಗೊಳ್ಳಬಹುದು. ಹಾಗಾಗಿ ರಕ್ತಹೀನತೆ ಸಮಸ್ಯೆ ಇರುವವರು ಬದನೆಕಾಯಿಯನ್ನು ಸೇವನೆ ಮಾಡಬೇಡಿ.

ಮೂತ್ರಪಿಂಡದ ಕಲ್ಲುಗಳು: ಆರೋಗ್ಯ ತಜ್ಞರ ಪ್ರಕಾರ, ಮೂತ್ರಪಿಂಡದ ಕಾಯಿಲೆ ಅಥವಾ ಕಲ್ಲುಗಳಿರುವವರು ಬದನೆಕಾಯಿ ಸೇವನೆ ಮಾಡುವುದನ್ನು ತಪ್ಪಿಸಬೇಕು. ಬದನೆಕಾಯಿಯಲ್ಲಿ ಆಕ್ಸಲೇಟ್ ಇರುತ್ತದೆ. ಇದು ಮೂತ್ರಪಿಂಡದ ಕಲ್ಲು ರಚನೆಗೆ ಮುಖ್ಯ ಕಾರಣವಾಗಿದೆ. ಹಾಗಾಗಿ ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆ ಇರುವವರು ತಮ್ಮ ಆಹಾರದಲ್ಲಿ ಬದನೆಕಾಯಿಯನ್ನು ಸೇರಿಸದಿರುವುದು ಉತ್ತಮ.

ಇದನ್ನೂ ಓದಿ:ನೀರು ಕುಡಿಯುವಾಗ ಈ ತಪ್ಪುಗಳನ್ನು ಮಾಡಬೇಡಿ

ಸಂಧಿವಾತ: ಇನ್ನು ಸಂಧಿವಾತದ ಸಮಸ್ಯೆ ಇರುವವರು ಕೂಡ ಬದನೆಕಾಯಿಯನ್ನು ತಿನ್ನಬಾರದು. ಆರೋಗ್ಯ ತಜ್ಞರ ಪ್ರಕಾರ, ಬದನೆಕಾಯಿಯಲ್ಲಿ ಸೋಲನಿಲ್ ಇರುತ್ತದೆ. ಈ ಕಾರಣದಿಂದ, ದೇಹದ ಊತ ಮತ್ತು ಕೀಲು ನೋವು ಹೆಚ್ಚಾಗುತ್ತದೆ.

ಅಲರ್ಜಿ: ಕೆಲವರಿಗೆ ಬದನೇಕಾಯಿ ಸೇವನೆ ಮಾಡುವುದರಿಂದ ಅಲರ್ಜಿ ಉಂಟಾಗುತ್ತದೆ. ಹಾಗಾಗಿ ಬದನೇಕಾಯಿ ತಿಂದರೆ ಆಗುವುದಿಲ್ಲ ಎನ್ನುವವರು ಈ ತರಕಾರಿ ಸೇವನೆ ಮಾಡಬೇಡಿ. ಎಲ್ಲಿಯಾದರೂ ತಪ್ಪಿ ತಿಂದರೆ ನಿಮ್ಮ ವೈದ್ಯರನ್ನು ಭೇಟಿ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ

Published On - 12:42 pm, Mon, 23 September 24