Monsoon Diet: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಣ್ಣುಗಳಿವು

ಮುಂಗಾರು ಈಗಾಗಲೇ ಅರಂಭವಾಗಿದೆ, ಈ ಮಳೆಯಾಲದಲ್ಲಿ ಆರೋಗ್ಯದ ರಕ್ಷಣೆ ಮಾಡಿಕೊಳ್ಳುವುದು ಕೂಡ ಸವಾಲಿನ ಕೆಲಸ. ಮಳೆಯನ್ನು ಚಹಾ ಹಾಗೂ ಬಿಸಿ ತಿಂಡಿಯ ಜತೆ ಆಸ್ವಾಧಿಸಲು ಬಯಸುತ್ತೇವೆ. ಮುಂಗಾರಿನಲ್ಲಿ ನಮ್ಮ ಆರೋಗ್ಯವು ತುಂಬಾ ಸೂಕ್ಷ್ಮವಾಗಿರುತ್ತದೆ, ಬಹುಬೇಗ ಯಾವುದೇ ಸೋಂಕುಗಳು ತಗುಲುತ್ತವೆ.

Monsoon Diet: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಣ್ಣುಗಳಿವು
Fruits
Updated By: ನಯನಾ ರಾಜೀವ್

Updated on: Jul 24, 2022 | 8:30 AM

ಮುಂಗಾರು ಈಗಾಗಲೇ ಅರಂಭವಾಗಿದೆ, ಈ ಮಳೆಯಾಲದಲ್ಲಿ ಆರೋಗ್ಯದ ರಕ್ಷಣೆ ಮಾಡಿಕೊಳ್ಳುವುದು ಕೂಡ ಸವಾಲಿನ ಕೆಲಸ. ಮಳೆಯನ್ನು ಚಹಾ ಹಾಗೂ ಬಿಸಿ ತಿಂಡಿಯ ಜತೆ ಆಸ್ವಾಧಿಸಲು ಬಯಸುತ್ತೇವೆ. ಮುಂಗಾರಿನಲ್ಲಿ ನಮ್ಮ ಆರೋಗ್ಯವು ತುಂಬಾ ಸೂಕ್ಷ್ಮವಾಗಿರುತ್ತದೆ, ಬಹುಬೇಗ ಯಾವುದೇ ಸೋಂಕುಗಳು ತಗುಲುತ್ತವೆ.

ನಾವು ತಿನ್ನುವ ಆಹಾರಗಳು ರೋಗ ನಿರೋಧಕ ಶಕ್ತಿಗೆ ಅಡ್ಡಿಪಡಿಸುತ್ತದೆ. ಮಳೆಗಾಲದಲ್ಲೂ ಯಾವುದೇ ರೀತಿಯ ಕಾಯಿಲೆಗಳು ನಿಮ್ಮನ್ನು ಕಾಡದಂತೆ ತಡೆಯಲು ಈ ಹಣ್ಣುಗಳ ಸೇವನೆ ಮುಖ್ಯವಾಗಿರುತ್ತದೆ.

ನೇರಳೆ ಹಣ್ಣು
ನೇರಳೆ ಹಣ್ಣಿನಲ್ಲಿ 1.41 ಮಿ.ಗ್ರಾಂ ಕಬ್ಬಿಣ, 15 ಮಿಗ್ರಾಂ ಕ್ಯಾಲ್ಸಿಯಂ ಮತ್ತು 18 ಮಿಗ್ರಾಂ ವಿಟಮಿನ್ ಸಿ ಅನ್ನು ಒಳಗೊಂಡಿದೆ. ರೋಗನಿರೋಧಕ ಶಕ್ತಿ ಮತ್ತು ಕಾಲಜನ್ ಅನ್ನು ರೂಪಿಸಿ ಚರ್ಮವು ಹೊಳೆಯುವಂತೆ ಮಾಡುತ್ತದೆ.

ಸೇಬು ಹಣ್ಣು
ನಿತ್ಯ ಒಂದು ಸೇಬು ಹಣ್ಣನ್ನು ತಿನ್ನುವುದರಿಂದ ಹಲವು ರೋಗಗಳಿಂದ ನೀವು ದೂರ ಇರಬಹುದು. ಸೇಬುಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಕ್ವೆರ್ಸೆಟಿನ್ ಎಂಬ ಫ್ಲೇವನಾಯ್ಡ್‌ಗಳು ಸಮೃದ್ಧವಾಗಿವೆ, ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ .

ದಾಳಿಂಬೆ: ಈ ಹಣ್ಣು ಅದರ ರಸಭರಿತವಾದ ಬೀಜಗಳು ಮತ್ತು ಅಸಾಮಾನ್ಯ ರುಚಿಗೆ ಹೆಸರುವಾಸಿಯಾಗಿದೆ. ಇದಲ್ಲದೆ, ಇದು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ ಅದು ಕರುಳಿನ ಆರೋಗ್ಯ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಇವುಗಳು ಕೆಲವು ಹೆಚ್ಚುವರಿ ತೂಕವನ್ನು ಕಳೆದುಕೊಳ್ಳುವಲ್ಲಿ ನಿಮಗೆ ಸಹಾಯ ಮಾಡುವ ಕೆಲವು ಅಂಶಗಳಾಗಿವೆ.

ಬಾಳೆಹಣ್ಣುಗಳು: ವಿಟಮಿನ್ ಬಿ 6 ಹೆಚ್ಚಿನ ಪ್ರಮಾಣದಲ್ಲಿರುತ್ತವೆ, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ರುಚಿಕರವಾದ ಸ್ಮೂಥಿಗಳು ಮತ್ತು ಶೇಕ್‌ಗಳನ್ನು ತಯಾರಿಸಲು ಬಾಳೆಹಣ್ಣು ಬಳಸಬಹುದು.
ಪೇರಳೆಹಣ್ಣು: ಪೇರಳೆಹಣ್ಣಿನಲ್ಲಿ ಸಾಕಷ್ಟು ಫೈಬರ್ ಮತ್ತು ಪೊಟ್ಯಾಸಿಯಮ್ ಜತೆಗೆ ವಿಟಮಿನ್ ಸಿ ಹೇರಳವಾಗಿದೆ. ಹಾಗೂ ಅವುಗಳ ಸಿಪ್ಪೆಗಳಲ್ಲಿ ಫ್ಲೇವನಾಯ್ಡ್‌ಗಳನ್ನು ಸಹ ಒಳಗೊಂಡಿರುತ್ತವೆ ಇದು ಕೂಡ ಆರೋಗ್ಯಕ್ಕೆ ತುಂಬಾ ಸಹಕಾರಿ.