Health Tips: ಹಾಡು ಕೇಳುತ್ತಾ ಮಲಗುವ ಅಭ್ಯಾಸ ಇದೆಯೇ? ಆರೋಗ್ಯಕ್ಕೆ ದುಷ್ಪರಿಣಾಮ ಹೆಚ್ಚು ಎಂಬುದು ತಿಳಿದಿರಲಿ

| Updated By: shruti hegde

Updated on: Jun 30, 2021 | 9:51 AM

ಹದಿಹರೆಯದವರು ಅಥವಾ ವಯಸ್ಕರು ತಮ್ಮ ಮನಸ್ಥಿತಿಯನ್ನು ಸುಧಾರಿಸಿಕೊಳ್ಳಲು ಮಲಗುವ ಮೊದಲು ಹಾಡುವ ಕೇಳುತ್ತಾರೆ. ದಿನಕಳೆದಂತೆ ಈ ಉತ್ಸಾಹವು ದೈನಂದಿನ ಅಭ್ಯಾಸವಾಗುತ್ತದೆ. ಇದು ನಿಮ್ಮ ನಿದ್ರೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

Health Tips: ಹಾಡು ಕೇಳುತ್ತಾ ಮಲಗುವ ಅಭ್ಯಾಸ ಇದೆಯೇ? ಆರೋಗ್ಯಕ್ಕೆ ದುಷ್ಪರಿಣಾಮ ಹೆಚ್ಚು ಎಂಬುದು ತಿಳಿದಿರಲಿ
ಸಾಂದರ್ಭಿಕ ಚಿತ್ರ
Follow us on

ಹೆಚ್ಚಿನ ಜನರು ರಾತ್ರಿ ಮಲಗುವ ವೇಳೆ ಸಂಗೀತವನ್ನು ಕೇಳಲು ಬಯಸುತ್ತಾರೆ. ಮನಸ್ಸಿಗೆ ಇಷ್ಟವಾಗುವ ಸಂಗೀತವನ್ನು ಕೇಳುತ್ತಾ ಮಲಗಿದರೆ ಮನಸ್ಸಿಗೆ ಹಿತವೆನಿಸುತ್ತದೆ ಎಂಬುದು ಅವರ ಅಭಿಪ್ರಾಯ. ಅದಾಗ್ಯೂ ಕೂಡಾ ಇತ್ತೀಚಿನ ಸಂಶೋಧನೆಯ ಪ್ರಕಾರ ಜನರು ನಿದ್ರಾಹೀನತೆಯ ಬಗ್ಗೆ ವೈದ್ಯರ ಬಳಿ ಸಮಸ್ಯೆ ಹೇಳಿಕೊಳ್ಳುತ್ತಿರುವುದು ಹೆಚ್ಚಾಗಿದೆ. ನಿದ್ರೆ ಮಾಡುವ ಸಮಯದಲ್ಲಿ ಹೆಡ್​ಫೋನ್​ ಧರಿಸಿಕೊಂಡು ಹಾಡು ಕೆಳುತ್ತಾ ಮಲಗುವವರು ಹೆಚ್ಚು ತಲ್ಲೀನರಾಗಿ ಆಲಿಸುತ್ತಿರುತ್ತಾರೆ. ಹಾಡು ನಿಂತ ಮೇಲೂ ಸಹ ಅದೇ ಭಾವನೆಯಲ್ಲಿರುವುದು ನಿದ್ರಾಹೀನತೆಗೆ ಕಾರಣವಾಗುತ್ತದೆ. ಇದರಿಂದ ಮಧ್ಯ ರಾತ್ರಿ ಎಚ್ಚರವಾಗುವ ಸಾಧ್ಯತೆ ಹೆಚ್ಚು. ಹಾಡು ಕೇಳುತ್ತಿರುವಾಗ ನೀವು ನಿದ್ರಿಸುತ್ತೀರಿ ಆದರೆ ಹಾಡು ನಿಂತ ತಕ್ಷಣವೇ ಎಚ್ಚರಗೊಳ್ಳುತ್ತೀರಿ. ಈ ಪ್ರಕ್ರಿಯೆ ನಿದ್ರಾಹೀನತೆ ಸಮಸ್ಯೆಯನ್ನು ತಂದೊಡ್ಡುತ್ತದೆ.

ಹಾಡು ಕೇಳುತ್ತಾ ಮಲಗಿದ್ದಾಗ ಹಾಗೂ ನಂತರದ ನಿದ್ರೆಯಲ್ಲಿನ ಸ್ಥಿತಿಯಲ್ಲಿ ಮನುಷ್ಯನ ಹೃದಯ ಬಡಿತ, ಉಸಿರಾಟ ಪ್ರಕ್ರಿಯೆ ಹಾಗೂ ಮೆದುಳಿನ ಕಾರ್ಯದಲ್ಲಿ ಬದಲಾವಣೆಗಳು ಕಂಡು ಬಂದಿವೆ. ಜತೆಗೆ ನಿದ್ರೆಯ ಮೊದಲು ಸಂಗೀತವನ್ನು ಕೇಳುತ್ತಿರುತ್ತೀರಿ, ನಂತರ ನಿದ್ರೆಗೆ ಜಾರುತ್ತೀರಿ ಆಗಲೂ ನಿಮಗೆ ಹಾಡು ಕೆಳುತ್ತಿದ್ದಂತೆಯೇ ಭಾಸವಾಗುತ್ತಿರುತ್ತದೆ. ಹಾಡು ನಿಂತಾಕ್ಷಣ ಒಮ್ಮೆಲೆ ಎಚ್ಚರವಾಗುತ್ತದೆ. ಇದು ಪ್ರತಿದಿನವೂ ಅಭ್ಯಾಸವಾಗಿಬಿಡುತ್ತವೆ. ಈ ಮೂಲಕ ನಿಮ್ಮ ಒಳ್ಳೆಯ ನಿದ್ರೆಯಲ್ಲಿ ಪದೇ ಪದೇ ಎಚ್ಚರವಾಗುವ ಅಭ್ಯಾಸ ರೂಢಿಯಾಗುತ್ತದೆ.

ಹದಿಹರೆಯದವರು ಅಥವಾ ವಯಸ್ಕರು ತಮ್ಮ ಮನಸ್ಥಿತಿಯನ್ನು ಸುಧಾರಿಸಿಕೊಳ್ಳಲು ಮಲಗುವ ಮೊದಲು ಹಾಡು ಕೇಳುತ್ತಾರೆ. ದಿನಕಳೆದಂತೆ ಈ ಉತ್ಸಾಹವು ದೈನಂದಿನ ಅಭ್ಯಾಸವಾಗುತ್ತದೆ. ಇದು ನಿಮ್ಮ ನಿದ್ರೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಮಲಗುವ ವೇಳೆಯಲ್ಲಿ ಒಂದು ವಾರಕ್ಕಿಂತಲೂ ಹೆಚ್ಚು ದಿನ ಹಾಡು ಕೇಳುವ ಅಭ್ಯಾಸ ಇದ್ದರೆ ಅದು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಜನರಲ್ಲಿ ನಿದ್ರಾ ಭಂಗದ ಅಪಾಯವು 6 ಪಟ್ಟು ಹೆಚ್ಚಾಗಿರುತ್ತದೆ. ಅದರಲ್ಲಿಯೂ ಭಾವಗೀತೆ ಹಾಡಿಗಿಂತ ವಾದ್ಯದ ಸಂಗೀತವು ನಿಮಗೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ.

ಇದನ್ನೂ ಓದಿ:

ಕಡಿಮೆ ನಿದ್ರೆ ಅಂದರೆ ಹಲವು ತೊಂದರೆ; ನಿದ್ರಾಹೀನತೆಯಿಂದ ಬಳಲುತ್ತಿರುವವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ನಿದ್ರೆ ಮಾತ್ರೆ ಸೇವಿಸುವುದರಿಂದ ಸಮಸ್ಯೆಗಳು ಒಂದಾ, ಎರಡಾ..?