ಹೃದಯದ ಸಮಸ್ಯೆಯು ಎಲ್ಲಾ ವಯೋಮಾನದ ಮಹಿಳೆಯರಲ್ಲೂ ಸಾಮಾನ್ಯವಾಗಿದೆ. ಮಹಿಳೆಯರು ಕೆಲಸ ಮತ್ತು ಮನೆಯಲ್ಲಿ ತಮ್ಮ ಬಹು ಜವಾಬ್ದಾರಿಗಳ ಕಾರಣದಿಂದಾಗಿ ಆಗಾಗ್ಗೆ ಒತ್ತಡಕ್ಕೆ ಇಳಗಾಗುತ್ತಾರೆ. ಇದು ಹೃದಯಕ್ಕೆ ಅಪಾಯಕಾರಿಯಾಗಿದೆ. ಇದು ಮಾತ್ರವಲ್ಲದೆ ಕೆಲವೊಂದು ಆಹಾರಪದ್ಧತಿ ಹಾಗೂ ಕಳಪೆ ಮಟ್ಟದ ಜೀವನಶೈಲಿಯೂ ಕೂಡಾ ಹೃದ್ರೋಗಕ್ಕೆ ಒಂದು ಕಾರಣವಾಗಿದೆ. ಮಹಿಳೆಯರ ಹೃದಯದ ಆರೋಗ್ಯದ ಬಗ್ಗೆ ಅನೇಕ ಮಿಥ್ಯಗಳಿಗೆ ಮತ್ತು ಇದು ಅವರಿಗೆ ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು. ಮುಂಬೈನ ಸರ್ ಹೆಚ್.ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಮಾಲೋಚಕ ಹೃದಯ ಶಸ್ತ್ರಚಿಕಿತ್ಸಕ ಡಾ. ಬಿಪೀನ್‌ಚಂದ್ರ ಭಾಮ್ರೆ ಅವರು ಮಹಿಳೆಯರ ಹೃದಯಾಘಾತದ ಕುರಿತು ಇರುವ ಸತ್ಯ ಮತ್ತು ಮಿಥ್ಯಗಳ ಕುರಿತು ಮಾತನಾಡಿದ್ದಾರೆ.
ಮಹಿಳೆಯರಲ್ಲಿ ಹೃದಯಾಘಾತ, ಹೃದಯ ವೈಫಲ್ಯ ಮತ್ತು ಪರಿಧಮನಿಯ ಕಾಯಿಲೆ ಪ್ರಕರಣಗಳು ಅಪಾಯಕಾರಿ ದರದಲ್ಲಿ ಏರುತ್ತಿವೆ. ವಯಸ್ಸಾದವರು ಮಾತ್ರವಲ್ಲದೆ ಕಿರಿಯ ವಯಸ್ಸಿನ ಮಹಿಳೆಯರು ಸಹ ಹೃದಯದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಒತ್ತಡ, ಅಧಿಕ ರಕ್ತದೊತ್ತಡ, ಅಧಿಕ ಸಕ್ಕರೆ ಮಟ್ಟ, ಕಳಪೆ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಯ ಕೊರತೆಯು ಮಹಿಳೆಯರು ಮತ್ತು ಪುರುಷರಲ್ಲಿ ಹೃದಯದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು ಎಂದು ಡಾ. ಬಿಪೀನ್‌ಚಂದ್ರ ಭಾಮ್ರೆ ಹೇಳುತ್ತಾರೆ.
ಮಿಥ್ಯ: ಹೃದ್ರೋಗ ಪುರುಷರಲ್ಲಿ ಮಾತ್ರ ಕಂಡುಬರುತ್ತದೆ.
ಸತ್ಯ: ಮಹಿಳೆಯರು ಸ್ತನ ಕ್ಯಾನ್ಸರ್ ಬಗ್ಗೆ ಮಾತ್ರ ಚಿಂತಿಸಬೇಕು ಹೊರತು ಹೃದ್ರೋಗವಲ್ಲ ಎಂದು ನಂಬಲಾಗಿದೆ. ಆದರೆ ಸತ್ಯಾಂಶ ಏನೆಂದರೆ ಮಹಿಳೆಯರಲ್ಲೂ ಹೃದ್ರೋಗ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಮಿಥ್ಯ: ಹೃದಯ ವೈಫಲ್ಯವು ಹೃದಯ ಬಡಿತವನ್ನು ನಿಲ್ಲಿಸಿದೆ ಎಂದು ಸೂಚಿಸುತ್ತದೆ.
ಸತ್ಯ: ಹೃದಯಾಘಾತ ಮತ್ತು ಹೃದಯ ಸ್ತಂಭನದ ಬಗ್ಗೆ ಗೊಂದಲವಿದೆ. ಹೃದಯ ಸ್ತಂಭನದ ಸಮಯದಲ್ಲಿ ಒಬ್ಬರ ಹೃದಯವು ರಕ್ತವನ್ನು ಪಂಪ್ ಮಾಡುವುದನ್ನು ನಿಲ್ಲಿಸುತ್ತದೆ. ಹೃದಯದ ವೈಫಲ್ಯವೆಂದರೆ ಹೃದಯವು ನಿರೀಕ್ಷಿತ ರೀತಿಯಲ್ಲಿ ಕಾರ್ಯನಿರ್ವಹಿಸಲು ವಿಫಲಗೊಳ್ಳುತ್ತದೆ.
ಇದನ್ನೂ ಓದಿ;Heart Attack Symptoms: ಕೇವಲ ಎದೆನೋವು ಮಾತ್ರವಲ್ಲ ಹೃದಯಾಘಾತದ ಈ ಲಕ್ಷಣಗಳ ಬಗ್ಗೆಯೂ ಎಚ್ಚರವಿರಲಿ
ಮಿಥ್ಯ: ಮಹಿಳೆಯು ತನ್ನ ಹೃದಯವು ವೇಗವಾಗಿ ಬಡಿಯುತ್ತಿದ್ದರೆ ಹೃದಯಾಘಾತವನ್ನು ಅನುಭವಿಸಬಹುದು.
ಸತ್ಯ: ಶ್ರಮದಾಯಕ ವ್ಯಾಯಾಮ, ಕೆಫಿನ್ ಸೇವಿಸಿದ ನಂತರವೂ ಹೃದಯದ ಬಡಿತ ಹೆಚ್ಚಾಗುತ್ತದೆ. ಇದು ಆಗಾಗ್ಗೆ ಸಂಭವಿಸುವ ಹಾಗೂ ಹೃದಯದ ಮೇಲೆ ಪರಿಣಾಮ ಬೀರದ ವಿಷಯವಾಗಿದೆ. ಪರಿಣಾಮ ಬೀರಿದರೆ ನೀವು ಹೃದ್ರೋಗ ತಜ್ಞರನ್ನು ಸಂಪರ್ಕಿಸಿ ಮತ್ತು ಸರಿಯಾದ ಚಿಕಿತ್ಸೆಯನ್ನು ಪಡೆದುಕೊಳ್ಳಿ.
ಮಿಥ್ಯ: ಕಾಲು ನೋವು ಮತ್ತು ಹೃದಯದ ಸಮಸ್ಯೆಯ ನಡುವೆ ಯಾವುದೇ ಸಂಬಂಧವಿಲ್ಲ.
ಸತ್ಯ: ಕಾಲುಗಳ ಸ್ನಾಯುಗಳಲ್ಲಿ ನೋವು ಕಂಡರೆ ಅದು ಅಪಧಮನಿಗಳಲ್ಲಿ ಪ್ಲೇಕ್ ನಿರ್ಮಾಣವಾಗಿದೆ ಎಂದು ಸೂಚಿಸುತ್ತದೆ. ಹಾಗಾಗಿ ಬಾಹ್ಯ ಅಪಧಮನಿ ಕಾಯಿಲೆ ಇರುವ ಜನರು ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯ ಹೆಚ್ಚಿರುತ್ತದೆ. ಹಾಗಾಗಿ ಕಾಲಿನ ನೋವನ್ನು ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಸಂಪರ್ಕಿಸಿ.
ಮಿಥ್ಯ: ವೈದ್ಯರು ಶಿಫಾರಸು ಮಾಡಿದ ಔಷಧಿಗಳನ್ನು ತೆಗೆದುಕೊಳ್ಳುವಾಗ ಮಧುಮೇಹವು ಹೃದಯದ ಮೇಲೆ ಪರಿಣಾಮ ಬೀರುವುದಿಲ್ಲ.
ಸತ್ಯ: ಒಬ್ಬರ ರಕ್ತದಲ್ಲಿನ ಸಕ್ಕರೆಯ ಮಟ್ಟವು ನಿಯಂತ್ರಣದಲ್ಲಿ ಇದ್ದರೂ ಸಹ ಮಧುಮೇಹ ಹೊಂದಿರುವ ಯಾರಾದರೂ ಹೃದಯ ನಾಳದ ಕಾಯಿಲೆಯನ್ನು ಹೊಂದಿರುವ ಸಾಧ್ಯತೆ ಇರುತ್ತದೆ. ನಿಮ್ಮ ಹೃದಯದ ಆರೋಗ್ಯವನ್ನು ಕಪಾಡಲು ಧೂಮಪಾನವನ್ನು ನಿಲ್ಲಿಸಿ, ದೇಹತೂಕವನ್ನು ಕಾಪಾಡಿಕೊಳ್ಳಿ, ವ್ಯಾಯಾಮ ಮಾಡಿ, ನಿಯಮಿತವಾಗಿ ಆಹಾರಗಳನ್ನು ಸೇವಿಸಿ.
ಮಿಥ್ಯ; ವಯಸ್ಸಾದ ಮಹಿಳೆಯರಲ್ಲಿ ಮಾತ್ರ ಹೃದಯದ ತೊಂದರೆಗಳು ಕಂಡುಬರುತ್ತವೆ.
ಸತ್ಯ: ಯುವತಿಯರು ಸಹ ಒತ್ತಡ, ಕಳಪೆ ಆಹಾರ ಪದ್ಧತಿ, ವ್ಯಾಯಾಮದ ಕೊರತೆ ಹಾಗೂ ಸ್ಥೂಲಕಾಯತೆಯಿಂದ ಹೃಯದ ಕಾಯಿಲೆಯನ್ನು ಹೊಂದುವ ಸಾಧ್ಯತೆ ಇರುತ್ತದೆ.
ಮಿಥ್ಯ: ಹೃದ್ರೋಗವು ಫಿಟ್ ಹಾಗೂ ಆರೋಗ್ಯಕರವಾಗಿರುವ ಮಹಿಳೆಯರ ಮೇಲೆ ಪರಿಣಾಮ ಬೀರುವುದಿಲ್ಲ.
ಸತ್ಯ: ನೀವು ಫಿಟ್ ಆಗಿದ್ದರೂ ಸಹ, ಕಳಪೆ ಆಹಾರ ಪದ್ಧತಿ, ಧೂಮಪಾನ, ಅಧಿಕ ಸಕ್ಕರೆಯ ಸೇವನೆ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಮಟ್ಟದಲ್ಲಿ ಏರಿಕೆ, ಕುಟುಂಬದಲ್ಲಿ ಹೃದಯದ ಸಮಸ್ಯೆಯ ಇತಿಹಾಸವನ್ನು ಹೊಂದಿರುವವವರು ಹೃದಯ ಸಂಬಂಧಿ ಕಾಯಿಲೆಯನ್ನು ಹೊಂದುವಂತಹ ಸಾಧ್ಯತೆ ಇರುತ್ತದೆ. ಆದ್ದರಿಂದ ವೈದ್ಯರನ್ನು ಸಂಪರ್ಕಿಸಬೇಕು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:56 pm, Tue, 21 March 23