Palak: ಪಾಲಕ್ ಪನ್ನೀರ್ ಅಥವಾ ಪಾಲಕ್ ಚನಾ ದಾಲ್ -ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ?

| Updated By: ಸಾಧು ಶ್ರೀನಾಥ್​

Updated on: Oct 05, 2022 | 3:37 PM

ಪಾಲಕ್ ಮತ್ತು ಪನೀರ್ ಆರೋಗ್ಯಕರ ಅಥವಾ ಟೇಸ್ಟಿ ಎಂಬ ವಾದವನ್ನು ನಿರಾಕರಿಸುವುದಿಲ್ಲ. ಅವೆರಡೂ ರುಚಿಕಟ್ಟು ಮತ್ತು ಆರೋಗ್ಯಕರವೇ ಸರಿ. ಆದರೆ ಇಲ್ಲಿ ಹೇಳುತ್ತಿರುವುದು ಆ ಎರಡರ ಕಾಂಬಿನೇಶನ್ ನಲ್ಲಿ ಮಾಡುವ ಗ್ರೇವಿ ಇದೆಯಲ್ಲಾ... ಅದು ಕೆಟ್ಟದ್ದು ಜೊತೆಗೆ ಅಪಾಯಕಾರಿಯಾಗುತ್ತದೆ.

Palak: ಪಾಲಕ್ ಪನ್ನೀರ್ ಅಥವಾ ಪಾಲಕ್ ಚನಾ ದಾಲ್ -ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ?
ಪಾಲಕ್ ಪನ್ನೀರ್ ಅಥವಾ ಪಾಲಕ್ ಚನಾ ದಾಲ್ -ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ?
Follow us on

ಪಾಲಕ್ ಪನ್ನೀರ್ (palak paneer) ಅಂದ್ರೆ ಎಲ್ಲರ ಬಾಯಲ್ಲೂ ನೀರೂರುತ್ತದೆ. ಆದರೆ ತಿಳಿದುಕೊಳ್ಳಿ ಆರೋಗ್ಯದ ದೃಷ್ಟಿಯಿಂದ ಈ ಪಾಲಕ್ ಮತ್ತು ಪನ್ನೀರ್ ಕೆಟ್ಟ ಸಂಯೋಜನೆಯಾಗಿದೆ. ಅದನ್ನೇ ತಿನ್ನುತ್ತಾ ಬಂದರೆ ದೇಹದಲ್ಲಿ ಕೊಬ್ಬಿನಾಂಶ ಶೇಖರಣೆಯಾಗುತ್ತಾ ಸಾಗುತ್ತದೆ! ಅದೇ ಪಾಲಕ್ ಮತ್ತು ದಾಲ್ (Palak Chana dal) ಅತ್ಯುತ್ತಮ ಸಂಯೋಜನೆಯಾಗಿದೆ. ಅದು ದೇಹ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೂ ನೆರವಾಗಲಿದೆ. ಈ ಎರಡೂ ಗ್ರೇವಿಗಳನ್ನು ಹೋಲಿಕೆ ಮಾಡಲು ಸುಮಾರು 200 ಗ್ರಾಂನಷ್ಟು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅಳತೆ ಮಾಡಿದಾಗ… ಪಾಲಾಕ್ ದಾಲ್ ಗ್ರೇವಿಯಲ್ಲಿ ಕಡಿಮೆ ಕ್ಯಾಲೋರಿಗಳು ಮತ್ತು ಕೊಬ್ಬನ್ನು ಹೊಂದಿರುತ್ತದೆ. ಮಾತ್ರವಲ್ಲದೆ ಸಮಾನ ಪ್ರಮಾಣದ ಪ್ರೋಟೀನ್ ಅನ್ನು ಸಹ ಹೊಂದಿದೆ. ಆದರೆ, ಪಾಲಕ್ ಪನ್ನೀರ್ ಕೆಟ್ಟದ್ದು ಅನ್ನಿಸಿಕೊಳ್ಳಲು ಕ್ಯಾಲೋರಿಗಳಷ್ಟೇ ಕಾರಣವಲ್ಲ (health)!

ಇದಕ್ಕೆ ಕಾರಣ ಇಲ್ಲಿದೆ – ಪಾಲಕ್ ಮತ್ತು ಪನ್ನೀರ್ (ಕಾಟೇಜ್ ಚೀಸ್) ಸಂಯೋಜನೆಯು ಅತ್ಯಂತ ಅಪಾಯಕಾರಿ ಸಂಯೋಜನೆಯಾಗಿದೆ ಏಕೆಂದರೆ ಪಾಲಕ್ ನಲ್ಲಿ ಕಂಡುಬರುವ ಕಬ್ಬಿಣದ ಅಂಶವು ರಕ್ತವಲ್ಲದ ಅಥವಾ ಹೆಮೊಗ್ಲೊಬಿನ್ ಅಲ್ಲದ ಕಬ್ಬಿಣವಾಗಿದೆ. ಇದು ಸಸ್ಯಜನ್ಯ ಕಬ್ಬಿಣವಾಗಿದೆ. ಪನ್ನೀರ್‌ನಲ್ಲಿರುವ ಕ್ಯಾಲ್ಸಿಯಂ ಅಂಶವು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ನಿರ್ಬಂಧಿಸುತ್ತದೆ. ಹಾಗಾಗಿ ಪಾಲಕ್ ಸೇವನೆಯನ್ನು ನಿಷ್ಪ್ರಯೋಜಕವಾಗಿಸುತ್ತದೆ.

ಪಾಲಕ್ ಮತ್ತು ಪನ್ನೀರ್ ಎರಡೂ ಆರೋಗ್ಯಕರ ಮತ್ತು ರುಚಿಕರ ಅಲ್ಲವಾ!?

ಇಲ್ಲ ಇಲ್ಲ, ಇಲ್ಲೇ ತಪ್ಪು ಭಾವನೆ ಮೂಡಿರುವುದು. ಪಾಲಕ್ ಮತ್ತು ಪನೀರ್ ಆರೋಗ್ಯಕರ ಅಥವಾ ಟೇಸ್ಟಿ ಎಂಬ ವಾದವನ್ನು ನಿರಾಕರಿಸುವುದಿಲ್ಲ. ಅವೆರಡೂ ರುಚಿಕಟ್ಟು ಮತ್ತು ಆರೋಗ್ಯಕರವೇ ಸರಿ. ಆದರೆ ಇಲ್ಲಿ ಹೇಳುತ್ತಿರುವುದು ಆ ಎರಡರ ಕಾಂಬಿನೇಶನ್ ನಲ್ಲಿ ಮಾಡುವ ಗ್ರೇವಿ ಇದೆಯಲ್ಲಾ… ಅದು ಕೆಟ್ಟದ್ದು ಜೊತೆಗೆ ಅಪಾಯಕಾರಿಯಾಗುತ್ತದೆ. ಹಾಗಾದರೆ ಪಾಲಕ್ ಪನ್ನೀರ್ ಗ್ರೇವಿ ಸೇವನೆಯನ್ನು ನಿಲ್ಲಿಸಿಬಿಡೋದಾ ಎಂದು ಕೇಳುವ ಮುನ್ನ… ಅದಕ್ಕೆ ಪರ್ಯಾಯ ಗ್ರೇವಿ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಅದುವೇ ಪಾಲಕ್ ಚನಾ ದಾಲ್!

ಹೌದು, ಅದುವೇ ಪಾಲಕ್ ಚನಾ ದಾಲ್! ಈಗ ನೀವು ನಿಮ್ಮ ರುಚಿಕರವಾದ ಪಾಲಾಕ್ ಪಚನಾ ದಾಲ್ ಅನ್ನು ಪೌಷ್ಟಿಕಾಂಶದ ಊಟದ ಹೆಸರಲ್ಲಿ ಸವಿಯಬಹುದು. ಮತ್ತು ಇದು ಕಾರ್ಬೋಹೈಡ್ರೇಟ್ಗಳು ಮತ್ತು ಪ್ರೋಟೀನ್ಗಳ ಪರಿಪೂರ್ಣ ಸಮತೋಲನವಾಗಿದೆ. ಮತ್ತು ವಿಶೇಷವಾಗಿ ರಕ್ತಹೀನತೆ ಅಥವಾ ಕಬ್ಬಿಣದ ಕೊರತೆಯಿರುವವರು ಇದನ್ನು ಸೇವಿಸುತ್ತಾರೆ.

ಪಾಲಾಕ್ ದಾಲ್ ಏಕೆ ಉತ್ತಮ ಸಂಯೋಜನೆಯಾಗಿದೆ?

1) ಪಾಲಕ್ ಸೊಪ್ಪು ಕಡಿಮೆ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದೆ. ಆದರೆ ಕರಗದ ಫೈಬರ್‌ ಅನ್ನು ಹೆಚ್ಚಾಗಿ ಹೊಂದಿದೆ. ಈ ರೀತಿಯ ಫೈಬರ್ ಜೀರ್ಣಕ್ರಿಯೆಗೆ ಪ್ರಯೋಜನಕಾರಿಯಾಗಿರುತ್ತದೆ.

2) ಪಾಲಕ್ ಒಂದು ಪೌಷ್ಟಿಕಾಂಶ ಭರಿತ ತರಕಾರಿಯಾಗಿದೆ. ಇದು ಹೆಚ್ಚಿನ ಪ್ರಮಾಣದ ಕ್ಯಾರೊಟಿನಾಯ್ಡ್‌, ವಿಟಮಿನ್ ಸಿ, ವಿಟಮಿನ್ ಕೆ, ಫೋಲಿಕ್ ಆಮ್ಲ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಹೊಂದಿದೆ.

3) ಪಾಲಕ್ ಬಹಳಷ್ಟು ಪ್ರಯೋಜನಗಳನ್ನು ಹೊಂದಿದೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ, ಕಣ್ಣಿನ ಆರೋಗ್ಯವನ್ನು ಉತ್ತೇಜಿಸುತ್ತದೆ, ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

4) ಪಾಲಾಕ್ ಚನಾ ದಾಲ್ ಗ್ರೇವಿಯಲ್ಲಿ ವಿಟಮಿನ್‌ಗಳು, ಖನಿಜಾಂಶಗಳು, ಪ್ರೊಟೀನ್ ಮತ್ತು ನಾರಿನಾಂಶ ಅಧಿಕವಾಗಿದೆ.

5) ಚನಾ ದಾಲ್ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಇದು ಹೃದ್ರೋಗ, ಮಧುಮೇಹ ಮತ್ತು ಕೆಲವು ಕ್ಯಾನ್ಸರ್‌ಗಳಂತಹ ದೀರ್ಘಕಾಲದ ಕಾಯಿಲೆಗಳ ಗಂಡಾಂತರವನ್ನು ಕಡಿಮೆ ಮಾಡುತ್ತದೆ. (ವಾಟ್ಸಪ್ ಸಂದೇಶ)

Published On - 3:16 pm, Wed, 5 October 22