ದೇಹದ ತೂಕ ಇಳಿಸಿಕೊಳ್ಳಲು ಇತ್ತೀಚಿನ ದಿನಗಳಲ್ಲಿ ಜನ ಏನೆಲ್ಲಾ ಮಾಡ್ತಾರೆ! ಆದರೆ ಇದನ್ನು ಮರೆಯುತ್ತಾರೆ, ಏನದು?
ನೈಜವಾಗಿ, ಕೆಲ ಪರಿಣತರ ಪ್ರಕಾರ ಈ ಅಲಂಕಾರಿಕ ಉತ್ಪನ್ನಗಳು ನಮಗೆ ಅಗತ್ಯವಿರುವಿದಿಲ್ಲ. ಈ ಎಲ್ಲಾ ರಾಸಾಯನಿಕ/ ಅಲಂಕಾರಿಕ ಉತ್ಪನ್ನಗಳಿಗಿಂತ ಅಗ್ಗವಾದ ಮತ್ತು ಎಲ್ಲೆಡೆ ಸುಲಭವಾಗಿ ಲಭ್ಯವಿರುವ ನೈಸರ್ಗಿಕವಾದ ಉತ್ಪನ್ನಗಳು ನಮ್ಮ ಕಣ್ಣಳತೆಯಲ್ಲಿಯೇ, ಕೈಗೆ ಎಟುಕುವಂತೆ ಲಭ್ಯವಿವೆ. ಆದರೆ ಅವುಗಳ ಬಗ್ಗೆ ನಮಗೇ ಅಸಡ್ಡೆ, ದಿವ್ಯ ನಿರ್ಲಕ್ಷ್ಯ
ಜನರು ತೂಕ ಇಳಿಸಿಕೊಳ್ಳಲು ಮತ್ತು ಆಕರ್ಷಕ ದೇಹಾಕಾರ ಕಾಯ್ದುಕೊಳ್ಳಲು ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ದುಬಾರಿ ಮತ್ತು ಅಲಂಕಾರಿಕ ಉತ್ಪನ್ನಗಳನ್ನು ಖರೀದಿಸುತ್ತಾರೆ. ಮತ್ತು ಅವುಗಳನ್ನು ತಮ್ಮ ಮೇಲೆ ಸ್ವಯಂ ಪ್ರಯೋಗಿಸಿಕೊಳ್ಳುತ್ತಾರೆ! ಈ ಮಾರುಕಟ್ಟೆ ಉತ್ಪನ್ನಗಳು ಕೊಬ್ಬನ್ನು ಕರಗಿಸುವ (fat-burning) ಪದಾರ್ಥಗಳಾಗಿದ್ದು, ಯಾವುದೇ ಸಮಯದಲ್ಲಿ ಜನರನ್ನು ಸ್ಲಿಮ್ (slim) ಮಾಡಬಲ್ಲದು ಎನ್ನುತ್ತವೆ ಕಂಪನಿಗಳು. ದೇಹ ತೂಕ ಕಡಿಮೆ ಮಾಡುವ ಶೇಕ್ಸ್, ಸಪ್ಲಿಮೆಂಟ್ಸ್, ಮಾತ್ರೆಗಳು ಹೀಗೆ ನೀವು ಯಾವುದನ್ನೇ ಬಯಸಿದರೂ ಮಾರುಕಟ್ಟೆಯಲ್ಲಿ ಮಾಂತ್ರಿಕ ರೀತಿಯಲ್ಲಿ ಆ ಉತ್ಪನ್ನಗಳು ನಿಮ್ಮ ಕಣ್ಣಿಗೆ ಬೀಳುತ್ತವೆ.
ಆದರೆ ನೈಜವಾಗಿ ಕೆಲ ಪರಿಣತರ ಪ್ರಕಾರ ಈ ಎಲ್ಲಾ ಅಲಂಕಾರಿಕ ಉತ್ಪನ್ನಗಳು ನಮಗೆ ಅಗತ್ಯವಿರುವಿದಿಲ್ಲ. ಈ ಎಲ್ಲಾ ರಾಸಾಯನಿಕ/ ಅಲಂಕಾರಿಕ ಉತ್ಪನ್ನಗಳಿಗಿಂತ ಅಗ್ಗವಾದ ಮತ್ತು ಎಲ್ಲೆಡೆ ಸುಲಭವಾಗಿ ಲಭ್ಯವಿರುವ ನೈಸರ್ಗಿಕವಾದ ಉತ್ಪನ್ನಗಳು ನಮ್ಮ ಕಣ್ಣಳತೆಯಲ್ಲಿಯೇ, ಕೈಗೆ ಎಟುಕುವಂತೆ ಲಭ್ಯವಿವೆ. ಆದರೆ ಅವುಗಳ ಬಗ್ಗೆ ನಮಗೇ ಅಸಡ್ಡೆ, ದಿವ್ಯ ನಿರ್ಲಕ್ಷ್ಯ ಮನೆ ಮಾಡಿರುತ್ತದೆ. ಇಲ್ಲಿ ಒಂದು ಪ್ರಕೃತ್ತಿದತ್ತ ಅಂತಹ ಪದಾರ್ಥದ ಬಗ್ಗೆ ತಿಳಿಯೋಣ. ಅದುವೇ ಪಪ್ಪಾಯ Papaya! ಹೇಳಬೇಕು ಅಂದರೆ ಇದು ಕಿತ್ತಳೆಗಿಂತ ಹೆಚ್ಚು ವಿಟಮಿನ್ ಸಿ ಹೊಂದಿದೆ. ಹೌದು. ನೀವು ಸರಿಯಾಗಿಯೇ ಓದಿಕೊಂಡಿರಿ. ಈ ಪಪ್ಪಾಯಿ ವಿಟಮಿನ್ ಸಿ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿ ತುಂಬಿದೆ.
ಈ ಪಪ್ಪಾಯಿ ದೇಶಾದ್ಯಂತ ಲಭ್ಯವಿರುವ ಅತ್ಯಂತ ಸುಲಭ ಮತ್ತು ಅಗ್ಗದ ಹಣ್ಣುಗಳಲ್ಲಿ ಒಂದಾಗಿದೆ. ಈ ದಿನಗಳಲ್ಲಿ ಇದು ಹೆಚ್ಚಾಗಿ ವರ್ಷವಿಡೀ ಲಭ್ಯವಿದೆ. ಇದು ನಂಬಲಾಗದಷ್ಟು ಆರೋಗ್ಯಕರವಾಗಿದೆ. ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಪಪ್ಪಾಯಿಯು ನಿಮ್ಮನ್ನು ಕಿರಿಯರಾಗಿ ಕಾಣುವಂತೆ ಮಾಡುವುದಲ್ಲದೆ ನಿಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
100 ಗ್ರಾಂ ಪಪ್ಪಾಯಿಯಲ್ಲಿ ಏನೆಲ್ಲಾ ಅಡಗಿದೆ ಎಂಬುದು ಇಲ್ಲಿದೆ:
ಕ್ಯಾಲೋರಿಗಳು: 59. ಕಾರ್ಬೋಹೈಡ್ರೇಟ್ಗಳು: 15 ಗ್ರಾಂ. ಫೈಬರ್: 3 ಗ್ರಾಂ. ವಿಟಮಿನ್ ಸಿ: 157 % RDI. ವಿಟಮಿನ್ A: 33 % RDI. ಫೋಲೇಟ್ (ವಿಟಮಿನ್ B9): 14 % RDI. ಪೊಟ್ಯಾಶಿಯಂ: 11 % RDI.
ಪಪ್ಪಾಯಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಇದು ನಿಮ್ಮ ಮೆಚ್ಚಿನ ಕುರುಕಲು ತಿಂಡಿಗಳಿಗಿಂತ ಉತ್ತಮ ಮತ್ತು ಅವುಗಳಿಗಿಂತ ಇದು ಸುಮಾರು 10 ಪಟ್ಟು ಹೆಚ್ಚು ಕ್ಯಾಲೊರಿಗಳನ್ನು ಹೊಂದಿರುವ ಉತ್ತಮ ಆಹಾರ ಪದಾರ್ಥವಾಗಿದೆ.
ಪಪ್ಪಾಯಿ ವಿಟಮಿನ್ ಸಿ ಯ ಅದ್ಭುತ ಮೂಲವಾಗಿದೆ ಮತ್ತು ಕಿತ್ತಳೆಗಿಂತ ಎರಡು ಪಟ್ಟು ಹೆಚ್ಚು ವಿಟಮಿನ್ ಸಿ ಹೊಂದಿದೆ.
ಪಪ್ಪಾಯಿ ವಿಟಮಿನ್ ಎ ಯ ಉತ್ತಮ ಮೂಲವಾಗಿದೆ. ಇದು ನಿಮ್ಮ ಕಣ್ಣುಗಳ ಆರೈಕೆಗೆ ಅದ್ಭುತವಾಗಿದೆ.
ಪಪ್ಪಾಯಿ ಫೋಲೇಟ್‌ನ ( Folate) ಉತ್ತಮ ಮೂಲವಾಗಿದೆ. ಇದು ಜೀರ್ಣಕ್ರಿಯೆ ಮತ್ತು ನಿಮ್ಮ ಮಾನಸಿಕ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
ಪಪ್ಪಾಯಿ ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ. ಇದು ದೆಹದಲ್ಲಿ ದ್ರವ ಸಮತೋಲನವನ್ನು ನಿಯಂತ್ರಿಸುತ್ತದೆ. ಮತ್ತು ನಿಮ್ಮ ದೇಹದಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಪಪ್ಪಾಯಿಯನ್ನು ಸೇವಿಸುವ ಇತರ ಕೆಲವು ಪ್ರಯೋಜನಗಳು ಹೀಗಿವೆ:
ಪಪ್ಪಾಯಿ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಪಪ್ಪಾಯಿ ನಿಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಪಪ್ಪಾಯಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪಪ್ಪಾಯಿ ನಿಮ್ಮನ್ನು ಚರ್ಮದ ಹಾನಿಯಿಂದ ರಕ್ಷಿಸುತ್ತದೆ.
ಗರ್ಭಿಣಿಯರು ಪಪ್ಪಾಯಿಯನ್ನು ಸೇವಿಸಬಾರದು ಎಂಬ ಮಾತು ಇದೆ. ಆದರೆ ವಾಸ್ತವ ಏನೆಂದರೆ – ಹಣ್ಣಾಗದ ಪಪ್ಪಾಯಿಯಲ್ಲಿ ಪಪೈನ್ (papain) ಎಂಬ ರಾಸಾಯನಿಕವಿದ್ದು ಗರ್ಭಿಣಿಯರಿಗೆ ಅದು ಹಾನಿಕಾರಕ ನಿಜ. ಆದರೆ ಮಾಗಿದ ಪಪ್ಪಾಯಿಯಲ್ಲಿ ಪಪೈನ್ ಎಂಬ ರಾಸಾಯನಿಕ ಇರುವುದಿಲ್ಲ. ಇದನ್ನು ಎಲ್ಲರೂ ಸೇವಿಸಬಹುದು.
ಮೇಲೆ ಹೇಳಿದಂತೆ ಪಪ್ಪಾಯಿ ಒಂದು ನಿರ್ಲಕ್ಷಿತ ಹಣ್ಣು. ಇಂದಿನ ಶರವೇಗದ ಮಾಧ್ಯಮಗಳು ನಿಮ್ಮನ್ನು ದುಬಾರಿ ಉತ್ಪನ್ನಗಳು ಮತ್ತು ರಾಸಾಯನಿಕ ಪುಡಿಗಳತ್ತ ತಳ್ಳುತ್ತಿದೆ. ದುಬಾರಿ ಮತ್ತು ಆಮದು ಮಾಡಿದ ಹಣ್ಣುಗಳನ್ನು ಖರೀದಿಸಲು ಹೇಳುತ್ತದೆ. ನಿಮಗೆ ಅದರ ಅಗತ್ಯವಿರುವುದಿಲ್ಲ. ನಮ್ಮ ಗೃಹಾಧಾರಿತ ದೇಸಿ ಆಹಾರಗಳು ಮತ್ತು ಹಣ್ಣುಗಳು ನಮ್ಮ ದೈನಂದಿನ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಪೂರೈಸಲು ಸಾಕಾದೀತು. ಅಂತಹ ಒಂದು ಶ್ರೇಷ್ಠ ಹಣ್ಣು ಪಪ್ಪಾಯಿ ಅನ್ನಬಹುದು.