Personality Test: ನಿಮ್ಮ ಪಾದಗಳ ಆಕಾರಕ್ಕೂ ವ್ಯಕ್ತಿತ್ವಕ್ಕೂ ಏನು ಸಂಬಂಧ?

| Updated By: ಶ್ರೀದೇವಿ ಕಳಸದ

Updated on: Jun 30, 2022 | 1:03 PM

Foot : ನೀವು ಚೌಕಾಕಾರದ ಪಾದ ಹೊಂದಿದ್ದೀರಾ? ಹೆಬ್ಬೆರಳು ಮತ್ತು ಎರಡನೇ ಕಾಲಬೆರಳು ಉದ್ದವಾಗಿದೆಯಾ? ಮೊದಲ ಮೂರು ಕಾಲ್ಬೆರಳುಗಳು ಒಂದೇ ಎತ್ತರವಿದೆಯಾ? ಹಾಗಿದ್ದರೆ ನಿಮ್ಮ ಪಾದದ ಆಕಾರ ನಿಮ್ಮ ವ್ಯಕ್ತಿತ್ವದ ಬಗ್ಗೆ ಏನು ಹೇಳುತ್ತದೆ? 

Personality Test: ನಿಮ್ಮ ಪಾದಗಳ ಆಕಾರಕ್ಕೂ ವ್ಯಕ್ತಿತ್ವಕ್ಕೂ ಏನು ಸಂಬಂಧ?
ಸೌಜನ್ಯ : ಅಂತರ್ಜಾಲ
Follow us on

Personality Test : ನಾವೆಲ್ಲರೂ ವಿವಿಧ ಆಕಾರ, ಗಾತ್ರದ ಪಾದ, ಕಾಲ್ಬೆರಳುಗಳನ್ನು ಹೊಂದಿದ್ದೇವೆ. ಹಾಗೆಯೇ ನಮ್ಮ ಮನಸ್ಸು, ಗುಣ ಸ್ವಭಾವಗಳೂ ಭಿನ್ನವೇ. ಪಾದದ ಆಕಾರವು ನಮ್ಮ ವ್ಯಕ್ತಿತ್ವದ ಬಗ್ಗೆ ಆಸಕ್ತಿಕರ ವಿಷಯಗಳನ್ನು ಹೊರಗೆಡಹುತ್ತದೆ ಎಂಬ ವಿಷಯ ನಿಮಗೆ ಗೊತ್ತೇ? ಇದಕ್ಕೆ ಸಂಬಂಧಿಸಿದಂತೆ ಅನೇಕ ಅಧ್ಯಯನಗಳು ನಡೆದಿವೆ. ಪಾದದ ಆಕಾರ ಮತ್ತು ಅವು ಸೂಚಿಸುವ ವ್ಯಕ್ತಿತ್ವದ ಗುಣಲಕ್ಷಣಗಳ ವಿವರವಾದ ಪಟ್ಟಿಯನ್ನೂ ಅವು ನೀಡಿವೆ. ಇಲ್ಲಿ 4 ರೀತಿಯ ವಿಧದ ಪಾದದ ಆಕಾರಗಳನ್ನು ನೀಡಲಾಗಿದೆ. ಈಜಿಪ್ಶಿಯನ್  ಪಾದದ ಆಕಾರ, ರೋಮನ್ ಪಾದದ ಆಕಾರ, ಗ್ರೀಕ್ ಪಾದದ ಆಕಾರ ಮತ್ತು ಚೌಕಾಕಾರ ಪಾದ. ಈ ಹಿಂದಿನ ವ್ಯಕ್ತಿತ್ವ ಪರೀಕ್ಷೆಗಳ ಸರಣಿಯಲ್ಲಿ, ಮೂಗಿನ ಆಕಾರ, ಕುಳಿತುಕೊಳ್ಳುವ ಭಂಗಿ, ರಕ್ತದಗುಂಪು, ಬಣ್ಣಗಳ ಮೂಲಕ ನಿಮ್ಮ ವ್ಯಕ್ತಿತ್ವವನ್ನು ಅರಿಯುವುದು ಹೇಗೆ ಎಂದು ತಿಳಿದುಕೊಂಡಿದ್ದಿರಿ. ಈಗ ಇಲ್ಲಿ ಕೊಟ್ಟಿರುವ ಚಿತ್ರಗಳಲ್ಲಿ ನಿಮ್ಮ ಪಾದ ಯಾವ ಆಕಾರವನ್ನು ಹೋಲುತ್ತದೆ ಗಮನಿಸಿ, ನಿಮ್ಮ ವ್ಯಕ್ತಿತ್ವ ಅರಿತುಕೊಳ್ಳುವ ಪ್ರಯತ್ನ ಮಾಡಿರಿ.

1. ಈಜಿಪ್ಷಿಯನ್ ಪಾದ (Egyptian Foot Shape Personality)

ನಿಮ್ಮ ಹೆಬ್ಬೆರಳು ದೊಡ್ಡದಾಗಿದ್ದು ನಂತರ ನಾಲ್ಕು ಕಾಲ್ಬೆರಳುಗಳು 45 ಡಿಗ್ರಿ ಕೋನದಲ್ಲಿ ಓರೆಯಾಗಿದ್ದರೆ ನಿಮ್ಮದು ಈಜಿಪ್ಷಿಯನ್ ಪಾದ. ನಿಮ್ಮಲ್ಲಿ ಸೌಂದರ್ಯಪ್ರಜ್ಞೆ ಅಪಾರವಾಗಿರುತ್ತದೆ. ಇತರರಿಂದ ಕಾಳಜಿ, ಪ್ರೀತಿ, ನಿರೀಕ್ಷಿಸುತ್ತೀರಿ. ನಿಮ್ಮ ಗೌಪ್ಯತೆಯನ್ನು ಯಾರೂ ಆಕ್ರಮಿಸದಂತೆ ಕಾಪಾಡಿಕೊಳ್ಳುತ್ತೀರಿ. ನಿಮ್ಮ ಜೀವನದ ಬಗೆಗಿನ ಅನೇಕ ಸಂಗತಿಗಳನ್ನು ಹೊರಪ್ರಪಂಚದಿಂದ ಸಂಪೂರ್ಣವಾಗಿ ಮರೆಮಾಚುತ್ತೀರಿ. ವಾಸ್ತವ ಸಮಸ್ಯೆಗಳಿಂದ ಹೊರಗುಳಿಯಲು ಸದಾ ನಿಮ್ಮದೇ ಆದ ಕನಸಿನ ಜಗತ್ತಿನಲ್ಲಿ ಕಳೆದುಹೋಗುತ್ತೀರಿ. ನಿಮ್ಮೊಂದಿಗೆ ನೀವು ಹೆಚ್ಚು ಸಮಯ ಕಳೆಯಲು ಇಚ್ಛಿಸುವ ನೀವು ಏಕಾಂತಪ್ರಿಯರು. ಆದರೂ ಇದ್ದಕ್ಕಿದ್ದಂತೆ ಕ್ರಾಂತಿಕಾರಿ ಆಲೋಚನೆ, ವರ್ತನೆಗಳು ಪರಿಸ್ಥಿತಿಗೆ ಅನುಗುಣವಾಗಿ ಹೊಮ್ಮುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ
Weather: Qatar Mail: ಮಧ್ಯಪ್ರಾಚ್ಯವನ್ನು ದಿಕ್ಕೆಡಿಸುತ್ತಿರುವ ಈ ಮರಳು ಬಿರುಗಾಳಿ
National Wine Day: ಒಡೆದ​ ವೈನ್ ಬಾಟಲಿ ಮತ್ತು ‘ಕೂಲ್​ ರನ್ನಿಂಗ್’ನೊಂದಿಗೆ ಮಮತಾ ಸಾಗರ್
Poetry: ಅವಿತಕವಿತೆ; ಬಾಗಿಲುಗಳು ‘ಎಡ’ಕ್ಕೆ ತೆರೆಯಲಿವೆ ಬಾಗಿಲುಗಳು ‘ಬಲ’ಕ್ಕೆ ತೆರೆಯಲಿವೆ
Booker Shortlist 2022: ಗೀತಾಂಜಲಿ ಶ್ರೀ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಬೂಕರ್ ಪ್ರಶಸ್ತಿಯ ಅಂತಿಮ ಘಟ್ಟಕ್ಕೆ

ಇದನ್ನೂ ಓದಿ : Personality Test: ನಿಮ್ಮ ಮೂಗು ನಿಮ್ಮ ಬಗ್ಗೆ ಏನು ಹೇಳುತ್ತಿದೆ?

2. ರೋಮನ್ ಪಾದ (Roman Foot Shape Personality)

ನಿಮ್ಮ ಪಾದದ ಮೊದಲ ಮೂರು ಕಾಲ್ಬೆರಳುಗಳು ಒಂದೇ ಎತ್ತರದಲ್ಲಿದ್ದು, ನಾಲ್ಕನೇ ಮತ್ತು ಐದನೇ ಕಾಲ್ಬೆರಳುಗಳು ಚಿಕ್ಕ ಆಕಾರ ಹೊಂದಿದ್ದರೆ ನೀವು ರೋಮನ್ ಪಾದವನ್ನು ಹೊಂದಿದ್ದೀರಿ ಎಂದರ್ಥ. ನೀವು ವಿಶೇಷ ವರ್ಚಸ್ಸನ್ನು ಹೊಂದಿದ್ದೀರಿ, ಧೈರ್ಯಶಾಲಿಯಾಗಿದ್ದೀರಿ. ಹೊಸ ಅನುಭವಗಳಿಗೆ ತೆರೆದುಕೊಳ್ಳುವ ಮನೋಭಾವ ನಿಮ್ಮದು. ಹಾಗಾಗಿ ಹೊಸ ಜನರನ್ನು ಭೇಟಿಯಾಗಲು ಉತ್ಸುಕರಾಗಿರುತ್ತೀರಿ. ಹೊಸ ಸಂಸ್ಕೃತಿಗಳನ್ನು ಅರಿತುಕೊಳ್ಳುವಲ್ಲಿ ಕುತೂಹಲಿಗಳಾಗಿರುತ್ತೀರಿ. ಅದನ್ನು ಆನಂದಿಸಲು ಉತ್ಸುಕರಾಗಿರುತ್ತೀರಿ.  ನಿಮಗೆ ಪ್ರಿಯರಾಗಿರುವವರೊಂದಿಗೆ ಸಮಯ ಕಳೆಯಲು ಇಷ್ಟಪಡುವ ನೀವು ನಿಷ್ಠಾವಂತ ಸಂಗಾತಿಯ ಆಯ್ಕೆ ಮಾಡಿಕೊಳ್ಳುತ್ತೀರಿ. ಅವರ ಸಂತೋಷಕ್ಕಾಗಿ ನಿಮ್ಮ ಬದುಕನ್ನು ಮೀಸಲಿಡುತ್ತೀರಿ. ಜೀವನವನ್ನು ಸಮತೋಲನದಿಂದ ನಡೆಸುವ ಕಲೆ ನಿಮಗೆ ಸಿದ್ಧಿಸಿರುತ್ತದೆ. ನಿಮ್ಮ ಶರೀರದ ಆಕಾರವನ್ನು ಕಾಪಾಡಿಕೊಳ್ಳುವಲ್ಲಿ ಗಮನಕೊಡುತ್ತೀರಿ. ಸ್ವಲ್ಪ ಸೊಕ್ಕು, ಮೊಂಡುತನ ನಿಮ್ಮಲ್ಲಿದ್ದರೂ ಇದ್ದೀತು.

ನಾಲ್ಕು ಬಗೆಯ ಪಾದದಾಕಾರಗಳು

ಇದನ್ನೂ ಓದಿ : Personality Test: ಈ 10 ಗುಣಲಕ್ಷಣಗಳಿದ್ದರೆ ನಿಮ್ಮದು ಸೃಜನಶೀಲ ವ್ಯಕ್ತಿತ್ವ

3. ಗ್ರೀಕ್ ಪಾದ (Greek Foot Shape Personality)

ನಿಮ್ಮ ಕಾಲ್ಬೆರಳಿನ ಎರಡನೇ ಬೆರಳು ಉಳಿದ ಬೆರಳುಗಳಿಂದ ಉದ್ದವಾಗಿದ್ದರೆ ನೀವು ಗ್ರೀಕ್ ಪಾದವನ್ನು ಹೊಂದಿದ್ದೀರಿ ಎಂದರ್ಥ. ಫ್ಲೇಮ್ ಅಥವಾ ಫೈರ್ ಫೂಟ್ ಆಕಾರ ಎಂದೂ ಇದನ್ನು ಕರೆಯಲಾಗುತ್ತದೆ. ನೀವು ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳಲು ಇಷ್ಟಪಡುವ ಸೃಜನಶೀಲ ವ್ಯಕ್ತಿಗಳು. ಇತರರನ್ನು ಪ್ರೋತ್ಸಾಹಿಸುವುದು ಅವರ ಕನಸುಗಳನ್ನು ನನಸು ಮಾಡಲು ಪ್ರೇರಕಶಕ್ತಿಯಾಗಿ ನಿಲ್ಲುವ ಗುಣ ನಿಮ್ಮಲ್ಲಿದೆ. ನಿಮ್ಮಲ್ಲಿ ಅದಮ್ಯ ಶಕ್ತಿ ಇದ್ದು ಸದಾ ಚಟುವಟಿಕೆಯಿಂದ ಇರಲು ಇಷ್ಟಪಡುತ್ತೀರಿ. ಸಹಜತೆಯನ್ನು ಗೌರವಿಸುವ ನಿಮ್ಮಲ್ಲಿ ಚೂರು ಮುಂಗೋಪವೂ ಅಡಗಿದೆ. ಯಾವ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಅತಿಯಾದ ಒತ್ತಡಕ್ಕೆ ಒಳಗಾಗುತ್ತೀರಿ ಅದಕ್ಕಾಗಿ ಹೆಚ್ಚಿನ ಶ್ರಮ ಹಾಕುತ್ತೀರಿ. ಹಾಗಾಗಿ ಇದು ನಿಮ್ಮನ್ನು ಹೆಚ್ಚು ಬಳಲಿಸುತ್ತದೆ. ಏನೇ ಆದರೂ ನಿಮ್ಮ ಅಭಿಪ್ರಾಯಗಳನ್ನು ನೀವು ಬದಲಿಸಲಾರಿರಿ. ನಾನು ನಡೆದದ್ದೇ ನನ್ನ ಹೆದ್ದಾರಿ ಎಂಬ ಮನೋಭಾವ ನಿಮ್ಮದು.

4. ಚೌಕಾಕಾರದ ಪಾದ (Square Foot Shape Personality)

ಹೆಬ್ಬೆರಳು ಸೇರಿದಂತೆ ನಿಮ್ಮ ಎಲ್ಲಾ ಕಾಲ್ಬೆರಳುಗಳು ಸಮನಾದ ಎತ್ತರದಲ್ಲಿದ್ದರೆ ನಿಮ್ಮದು ಚೌಕಾಕಾರದ ಪಾದ. ನೀವು ಪ್ರ್ಯಾಕ್ಟಿಕಲ್ ಮನಸ್ಥಿತಿ ಉಳ್ಳವರು. ವಿಶ್ವಾಸ, ಪ್ರಾಮಾಣಿಕ, ಸಮತೋಲಿತ ವ್ಯಕ್ತಿತ್ವ ನಿಮ್ಮದು. ಎಲ್ಲಾ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುತ್ತೀರಿ, ಜೊತೆಗೆ ನಿರ್ಧಾರಕ್ಕೆ ಸಂಬಂಧಿಸಿದ ಸಾಧಕ ಬಾಧಕಗಳನ್ನು ಹೆಚ್ಚು ಯೋಚಿಸುತ್ತೀರಿ. ನಿಮ್ಮ ನಿರ್ಧಾರಗಳು ಘನತೆಯಿಂದ, ತಾತ್ವಿಕತೆಯಿಂದ ಪ್ರಭಾವಿತಗೊಂಡಿರುತ್ತವೆ. ನೀವು ಏನೇ ಆಲೋಚಿಸಲು ಸ್ವಲ್ಪ ಹೆಚ್ಚೇ ಸಮಯ ತೆಗೆದುಕೊಳ್ಳಬಹುದು. ಆದರೆ ಒಮ್ಮೆ ನಿರ್ಧಾರ ತೆಗೆದುಕೊಂಡರೆ, ಅದರಲ್ಲಿ ಸಂಪೂರ್ಣ ಮನಸ್ಸಿನಿಂದ ತೊಡಗಿಕೊಳ್ಳುತ್ತೀರಿ. ಯಾವುದೇ ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸುವ ಸಮಚಿತ್ತ ನಿಮ್ಮದಾಗಿರುತ್ತದೆ. ಕ್ಷಣಿಕ ಪ್ರಚೋದನೆಗಳ ಪ್ರಭಾವಕ್ಕೆ ನೀವು ಸುಲಭಕ್ಕೆ ಒಳಗಾಗುವುದಿಲ್ಲ. ವಿಶ್ಲೇಷಣಾತ್ಮಕ ಮನೋಭಾವ ನಿಮ್ಮದು.

 

Published On - 12:47 pm, Thu, 30 June 22