AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pregnancy Kit: ಪ್ರೆಗ್ನೆನ್ಸಿ ಕಿಟ್ ಬಳಸುವುದು ಹೇಗೆ? ಹಂತಗಳನ್ನು ತಿಳಿಯಿರಿ

ಗರ್ಭಾವಸ್ಥೆ ಎಂಬುದು ಪ್ರತಿಯೊಂದು ಹೆಣ್ಣೂ ಸಂಭ್ರಮಿಸುವಂತಹ ಸಂದರ್ಭ. ಸ್ತ್ರೀರೋಗತಜ್ಞರು ಅಥವಾ ರಕ್ತಪರೀಕ್ಷೆಯ ಆಧಾರದ ಮೇಲೆ ಗರ್ಭಧಾರಣೆಯನ್ನು ಖಚಿತಪಡಿಸಿಕೊಳ್ಳುವ ದಿನಗಳು ಕಳೆದುಹೋಗಿವೆ.

Pregnancy Kit: ಪ್ರೆಗ್ನೆನ್ಸಿ ಕಿಟ್ ಬಳಸುವುದು ಹೇಗೆ? ಹಂತಗಳನ್ನು ತಿಳಿಯಿರಿ
Pregnancy Kit
TV9 Web
| Updated By: ನಯನಾ ರಾಜೀವ್|

Updated on: Jul 11, 2022 | 7:07 PM

Share

ಗರ್ಭಾವಸ್ಥೆ ಎಂಬುದು ಪ್ರತಿಯೊಂದು ಹೆಣ್ಣೂ ಸಂಭ್ರಮಿಸುವಂತಹ ಸಂದರ್ಭ. ಸ್ತ್ರೀರೋಗತಜ್ಞರು ಅಥವಾ ರಕ್ತಪರೀಕ್ಷೆಯ ಆಧಾರದ ಮೇಲೆ ಗರ್ಭಧಾರಣೆಯನ್ನು ಖಚಿತಪಡಿಸಿಕೊಳ್ಳುವ ದಿನಗಳು ಕಳೆದುಹೋಗಿವೆ. ಈಗ ಮನೆಯಲ್ಲೇ ಕುಳಿತು ನೀವು ಗರ್ಭಿಣಿಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ. ಸರಳ ಕಿಟ್‌ಗಳ ಸಹಾಯದಿಂದ, ಮನೆಯಲ್ಲಿ ಪರಿಶೀಲಿಸುವುದು ಸುಲಭವಾಗಿದೆ ಮತ್ತು ಸರಳ ವಿಧಾನಕ್ಕೆ ವೈದ್ಯಕೀಯ ನೆರವು ಅಗತ್ಯವಿರುವುದಿಲ್ಲ.

ಪ್ರಿಸ್ಕ್ರಿಪ್ಷನ್ ಅಗತ್ಯವಿಲ್ಲದೇ ಯಾವುದೇ ಔಷಧಾಲಯದಲ್ಲಿ ಗರ್ಭಧಾರಣೆಯ ಪರೀಕ್ಷಾ ಕಿಟ್ ಅನ್ನು ಪಡೆಯಬಹುದು.

ಗರ್ಭಧಾರಣೆಯ ಪರೀಕ್ಷಾ ಕಿಟ್ ಹೇಗೆ ಕೆಲಸ ಮಾಡುತ್ತದೆ? ಗರ್ಭಧಾರಣೆಯ ಪರೀಕ್ಷಾ ಕಿಟ್ ಮೂತ್ರದಲ್ಲಿ ಹ್ಯೂಮನ್ ಕೋರಿಯಾನಿಕ್ ಗೊನಡೋಟ್ರೋಪಿನ್ (hCG) ಪ್ರಮಾಣವನ್ನು ಪರಿಶೀಲಿಸುತ್ತದೆ. ಮನೆಯಲ್ಲಿಯೇ ಇರುವ ಕಿಟ್‌ಗಳು, ಲ್ಯಾಬ್ ಕಿಟ್‌ಗಳಿಗಿಂತ ಭಿನ್ನವಾಗಿ, ಫಲಿತಾಂಶಗಳು ಧನಾತ್ಮಕ ಅಥವಾ ಋಣಾತ್ಮಕವಾಗಿದೆಯೇ ಎಂಬುದನ್ನು ತೋರಿಸಲು ಮೂತ್ರದಲ್ಲಿನ ಹಾರ್ಮೋನ್ ಮಟ್ಟವನ್ನು ಮೌಲ್ಯಮಾಪನ ಮಾಡುತ್ತದೆ.

ದೇಹದಲ್ಲಿ hCG ಮಟ್ಟವನ್ನು ರಕ್ತ ಮತ್ತು ಮೂತ್ರದಲ್ಲಿ ಕಂಡುಹಿಡಿಯಲಾಗುತ್ತದೆ. ದೇಹದಲ್ಲಿ ಈ ಹಾರ್ಮೋನ್ ಮಟ್ಟವನ್ನು ಹೆಚ್ಚಿಸಲು ಸಮಯ ತೆಗೆದುಕೊಳ್ಳುತ್ತದೆ.

ಪರೀಕ್ಷಾ ಕಿಟ್​ನಿಂದ ಫಲಿತಾಂಶ ತಿಳಿಯುವುದು ಹೇಗೆ? ಮೂತ್ರದ ಕೆಲವು ಹನಿಗಳನ್ನು ತೆಗೆದುಕೊಂಡು ನಂತರ ಅವುಗಳನ್ನು ಪರೀಕ್ಷೆಯ ಕಿಟ್​ನ ಆರಂಭದಲ್ಲಿರುವ ದೊಡ್ಡ ರಂಧ್ರದಲ್ಲಿ ಹಾಕಬೇಕು. ಗೋಚರಿಸುವ ಗುಲಾಬಿ ರೇಖೆಗಳ ಸಂಖ್ಯೆ ಮತ್ತು ಪ್ರಕಾರವನ್ನು ಆಧರಿಸಿ, ಪರೀಕ್ಷೆಯು ಧನಾತ್ಮಕ, ಋಣಾತ್ಮಕ ಅಥವಾ ಅಮಾನ್ಯವೇ ಎಂಬುದನ್ನು ಪರೀಕ್ಷಿಸಬಹುದು.

1 ಗುಲಾಬಿ ಸಾಲು – ಋಣಾತ್ಮಕ 2 ಗುಲಾಬಿ ರೇಖೆಗಳು – ಧನಾತ್ಮಕ ಯಾವುದೇ ಗುಲಾಬಿ ಗೆರೆಗಳಿಲ್ಲ – ಕಿಟ್ ಸರಿಯಾಗಿಲ್ಲವೆಂದು ಅರ್ಥ. ಗರ್ಭಧಾರಣೆಯ ಪರೀಕ್ಷಾ ಕಿಟ್‌ನಿಂದ ನಿಖರವಾದ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲು ಸಲಹೆಗಳು -ಬೆಳಗ್ಗೆ ಮೊದಲು ವಿಸರ್ಜಿಸುವ ಮೂತ್ರವನ್ನು ತೆಗೆದುಕೊಳ್ಳಬೇಕು -ಪರೀಕ್ಷಾ ಕಿಟ್​ ಅನ್ನು ಕಿಟಕಿಗಳಿಂದ ದೂರವಿಡಬೇಕು -ಮೂತ್ರವನ್ನು ಶುಷ್ಕ ಮತ್ತು ಸ್ವಚ್ಛವಾದ ಪಾತ್ರೆಯಲ್ಲಿ ಇರಿಸಿ -ಬಳಿಕ ಪರೀಕ್ಷಾ ಕಿಟ್​ಗೆ ಹಾಕಿ ಪರೀಕ್ಷೆ ಮಾಡಬೇಕು

ಹುಡಾ ಅಧ್ಯಕ್ಷ ಸ್ಥಾನಕ್ಕೆ ಬೀದಿಗಿಳಿದ ಮುಸ್ಲಿಂ ಸಮುದಾಯ
ಹುಡಾ ಅಧ್ಯಕ್ಷ ಸ್ಥಾನಕ್ಕೆ ಬೀದಿಗಿಳಿದ ಮುಸ್ಲಿಂ ಸಮುದಾಯ
ಬಿಗ್ ಬಾಸ್​ಗೆ ಹೋಗೋಕೆ ಡಿ ಫ್ಯಾನ್ಸ್​ನ ಎದುರು ಹಾಕ್ಕೊಂಡ್ರಾ ಸೋನು ಶೆಟ್ಟಿ?
ಬಿಗ್ ಬಾಸ್​ಗೆ ಹೋಗೋಕೆ ಡಿ ಫ್ಯಾನ್ಸ್​ನ ಎದುರು ಹಾಕ್ಕೊಂಡ್ರಾ ಸೋನು ಶೆಟ್ಟಿ?
ಬಾಲ್ಯದಲ್ಲೇ ನಿಸ್ಸಾರ್ ಮನೆಯಲ್ಲಿ ಲಿಂಗ ತಂದಿಟ್ಟು ಪೂಜೆ ಮಾಡುತ್ತಿದ್ದನಂತೆ
ಬಾಲ್ಯದಲ್ಲೇ ನಿಸ್ಸಾರ್ ಮನೆಯಲ್ಲಿ ಲಿಂಗ ತಂದಿಟ್ಟು ಪೂಜೆ ಮಾಡುತ್ತಿದ್ದನಂತೆ
ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಉತ್ತರಕಾಶಿಯ ಧರಾಲಿ ಪ್ರದೇಶವಿಡೀ ಕೆಸರಾವೃತ, ಸಿಎಂ ಧಾಮಿ ವೈಮಾನಿಕ ಸಮೀಕ್ಷೆ
ಉತ್ತರಕಾಶಿಯ ಧರಾಲಿ ಪ್ರದೇಶವಿಡೀ ಕೆಸರಾವೃತ, ಸಿಎಂ ಧಾಮಿ ವೈಮಾನಿಕ ಸಮೀಕ್ಷೆ
ಕೃತಜ್ಞ ಮಗ ಸರ್ಕಾರೀ ನೌಕರ, ಕೆಎಸ್​ಅರ್​ಟಿಸಿಯಲ್ಲಿ ಚಾಲಕ!
ಕೃತಜ್ಞ ಮಗ ಸರ್ಕಾರೀ ನೌಕರ, ಕೆಎಸ್​ಅರ್​ಟಿಸಿಯಲ್ಲಿ ಚಾಲಕ!
ವಾರಾಣಸಿಯಲ್ಲಿ ಪ್ರವಾಹ; ಮನೆ, ಅಂಗಡಿ, ಆಸ್ಪತ್ರೆಗೆ ನುಗ್ಗಿದ ಗಂಗಾ ನದಿ ನೀರು
ವಾರಾಣಸಿಯಲ್ಲಿ ಪ್ರವಾಹ; ಮನೆ, ಅಂಗಡಿ, ಆಸ್ಪತ್ರೆಗೆ ನುಗ್ಗಿದ ಗಂಗಾ ನದಿ ನೀರು
ದರ್ಶನ್ ಅಭಿಮಾನಿಗಳನ್ನು ಕೊಚ್ಚೆಗೆ ಹೋಲಿಸಿದ ಮಾಡೆಲ್ ಸೋನು
ದರ್ಶನ್ ಅಭಿಮಾನಿಗಳನ್ನು ಕೊಚ್ಚೆಗೆ ಹೋಲಿಸಿದ ಮಾಡೆಲ್ ಸೋನು
ವಿಕ್ಟೋರಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರಲ್ಲ ತಣ್ಣೀರೂ ಸಿಗಲ್ಲ!
ವಿಕ್ಟೋರಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರಲ್ಲ ತಣ್ಣೀರೂ ಸಿಗಲ್ಲ!
ಕೆ.ಆರ್ ಪುರ ಮೇಟ್ರೋ ಸ್ಟೇಷನ್ ಬಳಿ ಕೆಲಕಾಲ ಆತಂಕ ಸೃಷ್ಟಿದ ಸೂಟ್​​​ಕೇಸ್​
ಕೆ.ಆರ್ ಪುರ ಮೇಟ್ರೋ ಸ್ಟೇಷನ್ ಬಳಿ ಕೆಲಕಾಲ ಆತಂಕ ಸೃಷ್ಟಿದ ಸೂಟ್​​​ಕೇಸ್​