Pregnancy Tips: ಗರ್ಭಾವಸ್ಥೆಯಲ್ಲಿ ಸ್ತನಗಳ ತುರಿಕೆ ತಡೆಯಲು ಏನು ಮಾಡಬೇಕು?
ಗರ್ಭಾವಸ್ಥೆಯ ಸಮಯದಲ್ಲಿ ಕೆಲವು ರೀತಿಯ ಬದಲಾವಣೆಗಳಾಗುವುದರಿಂದ ಗರ್ಭಿಣಿಯರು ಒಂದಿಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಅವುಗಳಲ್ಲಿ ಸ್ತನಗಳಲ್ಲಿ ತುರಿಕೆ ಬರುವುದು ಕೂಡಾ ಒಂದು. ಗರ್ಭಾವಸ್ಥೆಯಲ್ಲಿ ಸ್ತನಗಳಲ್ಲಿ ತುರಿಕೆ ಸಾಮಾನ್ಯವಾಗಿದ್ದರೂ, ಅವುಗಳ ಹಿಂದಿರುವ ಕಾರಣ ಇತ್ಯಾದಿಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಇದಕ್ಕೆ ಕಾರಣವೇನು? ನಿವಾರಣೆ ಹೇಗೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.
ಗರ್ಭಿಣಿಯರ 9 ತಿಂಗಳ ಪಯಣ ಬಹಳ ಸುಂದರವಾದದ್ದು. ಆದರೆ ಆ ಸಮಯದಲ್ಲಿ ಕೆಲವು ರೀತಿಯ ಬದಲಾವಣೆಗಳಾಗುವುದರಿಂದ ಒಂದಿಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಅವುಗಳಲ್ಲಿ ಸ್ತನಗಳಲ್ಲಿ ತುರಿಕೆ ಬರುವುದು ಕೂಡಾ ಒಂದು. ಗರ್ಭಾವಸ್ಥೆಯಲ್ಲಿ ಸ್ತನಗಳಲ್ಲಿ ತುರಿಕೆ ಸಾಮಾನ್ಯವಾಗಿದ್ದರೂ, ಅವುಗಳ ಹಿಂದಿರುವ ಕಾರಣ ಇತ್ಯಾದಿಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಇದಕ್ಕೆ ಕಾರಣವೇನು? ನಿವಾರಣೆ ಹೇಗೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.
ಗರ್ಭಾವಸ್ಥೆಯಲ್ಲಿ ಸ್ತನಗಳ ತುರಿಕೆಗೆ ಕಾರಣಗಳೇನು?
ಹಾರ್ಮೋನುಗಳ ಬದಲಾವಣೆಗಳು:
ಗರ್ಭಾವಸ್ಥೆಯಲ್ಲಿ ಸ್ತನಗಳ ತುರಿಕೆಯ ಹಿಂದಿನ ಪ್ರಾಥಮಿಕ ಕಾರಣವೆಂದರೆ ಹಾರ್ಮೋನುಗಳ ಏರಿಳಿತಗಳು, ವಿಶೇಷವಾಗಿ ಈಸ್ಟ್ರೊಜೆನ್ ಮಟ್ಟ ಹೆಚ್ಚಾಗುವುದು.
ಸ್ತನಗಳ ಬೆಳವಣಿಗೆ:
ಈ ಸಮಯದಲ್ಲಿ ಸ್ತನಗಳು ವೇಗವಾಗಿ ಹಿಗ್ಗಬಹುದು, ಇದರಿಂದಾಗಿ ಚರ್ಮವು ಹಿಗ್ಗುತ್ತದೆ ಇದರಿಂದ ತುರಿಕೆಯಾಗುತ್ತದೆ. ಒಣ ಚರ್ಮ: ಗರ್ಭಧಾರಣೆಯು ನಿಮ್ಮ ಸ್ತನಗಳ ಮೇಲಿನ ಚರ್ಮ ಸೇರಿದಂತೆ ಒಟ್ಟಾರೆ ಚರ್ಮದ ಶುಷ್ಕತೆಗೆ ಕಾರಣವಾಗಬಹುದು. ಈ ಶುಷ್ಕತೆಯು ತುರಿಕೆ ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು.
ಅಲರ್ಜಿ:
ಕೆಲವರಲ್ಲಿ ಅಲರ್ಜಿಯಿಂದಾಗಿ ಸ್ತನಗಳಲ್ಲಿ ತುರಿಕೆ ಕಾಣಬಹುದು.
ಯಾವ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ?
ಗರ್ಭಾವಸ್ಥೆಯಲ್ಲಿ ಸ್ತನಗಳ ತುರಿಕೆ ವಿವಿಧ ಹಂತಗಳಲ್ಲಿ ಕಂಡುಬರುತ್ತದೆ, ಆದರೆ ಇದು ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಆದರೆ ಕೆಲವರಿಗೆ ಗರ್ಭಧಾರಣೆಯ ಆರಂಭದಲ್ಲಿ ಅನುಭವಕ್ಕೆ ಬರಬಹುದು.
ಇದನ್ನೂ ಓದಿ: ಬೇಗ ಕೋಪ ಬರುತ್ತಾ? ಈ ಎಲ್ಲಾ ಕಾಯಿಲೆಯೂ ಬರುತ್ತೆ ಎಚ್ಚರ
ನಿವಾರಣೆ ಹೇಗೆ ಮಾಡಬೇಕು?
ಮಾಯಿಶ್ಚರೈಸರ್ ಬಳಸಿ:
ನಿಮ್ಮ ಸ್ತನವನ್ನು ಹೈಡ್ರೇಟ್ ಆಗಿಡಲು ಸುಗಂಧ ಮುಕ್ತ, ಹೈಪೋಅಲರ್ಜೆನಿಕ್ ಮಾಯಿಶ್ಚರೈಸರ್ ಬಳಸಿ. ಸ್ನಾನದ ನಂತರ ಇದನ್ನು ಹಚ್ಚಿಕೊಳ್ಳಿ.
ಆರಾಮದಾಯಕವಾದ ಬ್ರಾಗಳನ್ನು ಧರಿಸಿ:
ತುಂಬಾ ಬಿಗಿಯಾಗದೆ ಸರಿಯಾಗಿರುವ, ಹೆಚ್ಚು ಆರಾಮ ನೀಡುವ ಬ್ರಾಗಳನ್ನು ಆರಿಸಿಕೊಳ್ಳಿ. ಹತ್ತಿ ಬ್ರಾಗಳು ಒಳ್ಳೆಯದು ಜೊತೆಗೆ ಇದು ನಿಮ್ಮ ಚರ್ಮವನ್ನು ಕಿರಿಕಿರಿಗೊಳಿಸುವುದಿಲ್ಲ.
ಬಿಸಿ ನೀರನ್ನು ತಪ್ಪಿಸಿ:
ಬಿಸಿನೀರು ನಿಮ್ಮ ಚರ್ಮವನ್ನು ಮತ್ತಷ್ಟು ಒಣಗಿಸುತ್ತದೆ. ಹಾಗಾಗಿ ಸ್ನಾನ ಮಾಡುವಾಗ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.
ಕಿರಿಕಿರಿಗಳನ್ನು ತಪ್ಪಿಸಿ:
ಕಿರಿಕಿರಿ ಮಾಡುವ ಡಿಟರ್ಜೆಂಟ್ ಮತ್ತು ಲೋಷನ್ ಗಳ ಬಗ್ಗೆ ಜಾಗರೂಕರಾಗಿರಿ. ಸೌಮ್ಯ, ಹೈಪೋಅಲರ್ಜೆನಿಕ್ ಉತ್ಪನ್ನಗಳನ್ನು ಬಳಸಿ.
ಇದಕ್ಕೆ ವೈದ್ಯರನ್ನು ಸಂಪರ್ಕಿಸಬೇಕೇ?
ಗರ್ಭಾವಸ್ಥೆಯಲ್ಲಿ ಸೌಮ್ಯ ತುರಿಕೆ ಸಾಮಾನ್ಯವಾಗಿದ್ದರೂ, ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ಸ್ತನದ ಬಳಿ ದದ್ದು, ಕೆಂಪಾಗುವುದು ಅಥವಾ ಇನ್ನಿತರ ಬದಲಾವಣೆಗಳು ಕಂಡುಬಂದರೆ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ