ಕೊವಿಡ್​ನಿಂದ ಗುಣಮುಖರಾಗಿದ್ದೀರಾ? ಯಾವಾಗ ವರ್ಕೌಟ್​ ಪ್ರಾರಂಭಿಸಬೇಕೆಂಬ ಯೋಚನೆಯೇ? ಇಲ್ಲಿದೆ ಮಾಹಿತಿ

ಕೊವಿಡ್​ ಲಕ್ಷಣಗಳಿಂದ ಹೊರಬಂದ ನಂತರ ನೀವು ನಿರಾಳರಾಗಿರಬಹುದು. ಆದರೆ ದೇದದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ನೀವು ತೊಡಗಿಕೊಳ್ಳಲೇ ಬೇಕು. ಹಾಗಿದ್ದಾಗ ಪೌಷ್ಠಿಕ ಹಣ್ಣುಗಳು, ತರಕಾರಿಗಳ ಜತೆ ಪೌಷ್ಠಿಕಾಂಶಯುಕ್ತ ಪಾನೀಯಗಳನ್ನು ಸೇವಿಸಿ.

ಕೊವಿಡ್​ನಿಂದ ಗುಣಮುಖರಾಗಿದ್ದೀರಾ? ಯಾವಾಗ ವರ್ಕೌಟ್​ ಪ್ರಾರಂಭಿಸಬೇಕೆಂಬ ಯೋಚನೆಯೇ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Jul 04, 2021 | 1:41 PM

ಕೊವಿಡ್​19 ಸೋಂಕಿನಿಂದ ಗುಣಮುಖರಾದರೂ ಸಹ ನಿಮ್ಮಲ್ಲಿ ನಿಶ್ಯಕ್ತತೆ ಕಾಣಿಸಿಕೊಳ್ಳುತ್ತಿರಬಹುದು. ಹಾಗಿದ್ದಾಗ ತುಂಬಾ ಜನರಿಗೆ ತಾವು ಮನೆ ಕೆಲಸದಲ್ಲಿ ಯಾವಾಗಾ ತೊಡಗಿಕೊಳ್ಳುವುದು? ನಮ್ಮ ದಿನನಿತ್ಯದ ವರ್ಕೌಟ್​ಅನ್ನು ಪ್ರಾರಂಭಿಸಬಹುದೇ? ಎಂಬೆಲ್ಲಾ ಚಿಂತೆ ಕಾಡುತ್ತಿದೆ. ಕೊವಿಡ್​19 ಸಕಾರಾತ್ಮಕ ಪರಿಣಾಮದಿಂದ ಗುಣಮುಖರಾಗಲು ಕೆಲವರಿಗೆ ಬಹಳ ಸಮಯ ಬೇಕಾಯಿತು. ಬಳಿಕವೂ ಸಹ ದೀರ್ಘಕಾಲಿಕ ಕೊವಿಡ್​ ಸಮಸ್ಯೆ ಕಾಣಿಸಿಕೊಂಡಿರಬಹುದು. ಈ ಬಳಿಕ ನಿಧಾನವಾಗಿ ನೀವು ವ್ಯಾಯಾಮದಲ್ಲಿ ತೊಡಗಿಕೊಳ್ಳಿ.

ಕೊವಿಡ್​ ಬಳಿಕ ನೀವು ನಿಧಾನವಾಗಿ ನಿಮ್ಮ ಫಿಟ್​ನೆಸ್​ ವರ್ಕೌಟ್​ ಅಭ್ಯಾಸದಲ್ಲಿ ತೊಡಗಿಕೊಳ್ಳಿ. ಆದರೆ ಕೊವಿಡ್​ ಲಕ್ಷಣಗಳು ಇನ್ನೂ ನಿಮ್ಮಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ದೇಹಕ್ಕೆ ಹೆಚ್ಚು ಸುಸ್ತು ಮತ್ತು ಒತ್ತಡಕ್ಕೆ ಸಿಲುಕುವ ಯಾವುದೇ ವ್ಯಾಯಾಮವನ್ನು ಮಾಡಬೇಡಿ. ನಿಧಾನವಾಗಿ ಮಾಡುವ ಜತೆಗೆ ಉಸಿರಾಟಕ್ಕೆ ಸಂಬಂಧಿಸಿದ ಕೆಲವು ಯೋಗ ಭಂಗಿಗಳನ್ನು ಮಾಡಬಹುದಾಗಿದೆ. ಕೊವಿಡ್​ 19 ಬಳಿಕ ವರ್ಕೌಟ್​ನಲ್ಲಿ ತೊಡಗಿಕೊಳ್ಳುವ ಕುರಿತಾಗಿ ವೈದ್ಯರು ಸಲಹೆ ನೀಡಿದ್ದಾರೆ. ಈ ಕುರಿತಂತೆ ಇಂಡಿಯಾ ಟು ಡೇ ವರದಿ ಮಾಡಿದೆ.

ವ್ಯಾಯಾಮ ನಿಧಾನವಾಗಿರಲಿ ಕೊವಿಡ್​19 ವೈರಸ್​ ವಿರುದ್ಧ ಹೋರಾಡಿರುವುದರಿಂದ ದೇಹವು ಹೆಚ್ಚು ದಣಿದಿರುತ್ತದೆ. ಜತೆಗೆ ನಿಶ್ಯಕ್ತಿಯಾಗಿರುತ್ತದೆ. ಇದರಿಂದಾಗಿ ನೀವು ಹೆಚ್ಚು ಮನೆಕೆಲಸದಲ್ಲಿ ತೊಡಗಿಕೊಳ್ಳುವುದನ್ನು ಕಡಿಮೆ ಮಾಡಿ. ದೇಹಕ್ಕೆ ಸುಸ್ತಾಗುವ ಕೆಲಸಗಳು ಮತ್ತು ಭಾರದ ವಸ್ತುಗಳನ್ನು ಎತ್ತುವುದು ನಿಮ್ಮ ದೇಹಕ್ಕೆ ಇನ್ನಷ್ಟು ಆಯಾಸವನ್ನು ತಂದೊಡ್ಡುತ್ತದೆ. ಜತೆಗೆ ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮದಲ್ಲಿ ನಿಧಾನವಾಗಿ ತೊಡಗಿಕೊಳ್ಳಿ. ಇದು ನಿಮ್ಮ ಉಸಿರಾಟ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಜತೆಗೆ ಶ್ವಾಸಕೋಶವನ್ನು ಬಲಿಷ್ಠಗೊಳಿಸುತ್ತದೆ.

ಆದರೆ ನಿಮ್ಮ ಆರೋಗ್ಯದ ಕುರಿತಾಗಿ ಹೆಚ್ಚಿನ ಕಾಳಜಿ ಇರಲೇಬೇಕು. ದೇಹಕ್ಕೆ ಹೆಚ್ಚು ಸುಸ್ತಾಗುವಷ್ಟು ವ್ಯಾಯಾಮದಲ್ಲಿ ತೊಡಗಿಕೊಳ್ಳಬೇಡಿ ಎಂದು ವೈದ್ಯರು ಹೇಳಿದ್ದಾರೆ. ಕೊವಿಡ್​ನಿಂದ ಗುಣಮುಖರಾದ ಒಂದು ತಿಂಗಳ ಬಳಿಕ ನೀವು ಸ್ನಾಯುಗಳನ್ನು ಬಲಿಷ್ಠಗೊಳಿಸುವ ವರ್ಕೌಟ್ಸ್​ಗಳನ್ನು ಪ್ರಾರಂಭಿಸಬಹುದು ಎಂದು ಸಲಹೆ ನೀಡಿದ್ದಾರೆ.

ವರ್ಕೌಟ್​ ದಿನಚರಿ ದೇಹಕ್ಕೆ ಯಾವುದೇ ರೀತಿಯಲ್ಲಿ ಹೆಚ್ಚು ಆಯಾಸವಾಗದಿರುವ ವರ್ಕೌಟ್​ನಲ್ಲಿ ನೀವು ತೊಡಗಿಕೊಳ್ಳಬಹುದು. ಅದರಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ ಅಥವಾ ಪ್ರಾಣಾಯಾಮ ಆರೋಗ್ಯವನ್ನು ಬಹುಬೇಗ ಸುಧಾರಿಸವಂತೆ ಮಾಡುತ್ತದೆ. ಮನೆಯಂಗಳದಲ್ಲಿಯೇ 15-30 ನಿಮಿಷಗಳ ಕಾಲ ಪ್ರತಿನಿತ್ಯ ವಾಕಿಂಗ್​ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ ಕೊವಿಡ್​ ಲಕ್ಷಣಗಳಿಂದ ಹೊರಬಂದ ನಂತರ ನೀವು ನಿರಾಳರಾಗಿರಬಹುದು. ಆದರೆ ದೇದದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ನೀವು ತೊಡಗಿಕೊಳ್ಳಲೇ ಬೇಕು. ಹಾಗಿದ್ದಾಗ ಪೌಷ್ಠಿಕ ಹಣ್ಣುಗಳು, ತರಕಾರಿಗಳ ಜತೆ ಪೌಷ್ಠಿಕಾಂಶಯುಕ್ತ ಪಾನೀಯಗಳನ್ನು ಸೇವಿಸಿ. ಇದು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಜತೆಗೆ ವೈರಸ್​ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಜತೆಗೆ ಬಿಸಿ ನೀರಿನಲ್ಲಿ ಸ್ಟೀಮ್​ ತೆಗೆದುಕೊಳ್ಳುವ ಅಭ್ಯಾಸ ಒಳ್ಳೆಯದು. ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶ ಪಡಿಸಲು ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ:

Post Covid: ದೀರ್ಘಕಾಲಿಕ ಕೊವಿಡ್​ ಬಳಿಕ ಅನುಸರಿಸಬಹುದಾದ ವ್ಯಾಯಾಮ ಭಂಗಿಗಳು

ದೀರ್ಘಕಾಲಿಕ ಕೊವಿಡ್​ ಚೇತರಿಕೆ ಬಳಿಕ ದೇಹದ ಫಿಟ್ನೆಸ್​ಗಾಗಿ ವ್ಯಾಯಾಮ​ ದಿನಚರಿಗೆ ಮರಳಿದ ಕತ್ರಿನಾ ಕೈಫ್​

ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ: ರಾಜಣ್ಣ
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ