Breast Cancer: ಸ್ತನ ಕ್ಯಾನ್ಸರ್ ಲಕ್ಷಣಗಳೇನು? ಯಾವೆಲ್ಲಾ ಕಾರಣಕ್ಕೆ ಸ್ತನ ಕ್ಯಾನ್ಸರ್ ಉಂಟಾಗುತ್ತದೆ

ಕೆಲವೊಮ್ಮೆ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಲಕ್ಷ್ಯ ಕೊಡದೆ ಅಥವಾ ಯಾವುದೋ ಬೇರೆ ಕಾರಣಕ್ಕೆ ಹೀಗಾಗುತ್ತಿದೆ ಎಂದು ನಿರ್ಲಕ್ಷ್ಯ ವಹಿಸಿದರೆ ಸಮಸ್ಯೆ ಉಲ್ಬಣವಾಗುತ್ತದೆ. ಹೀಗಾಗಿ ಮಹಿಳೆಯರು ತಮ್ಮ ದೇಹದಲ್ಲಿನ ರೋಗ ಲಕ್ಷಣಗಳ ಬಗ್ಗೆ ಸದಾ ಗಮನಹರಿಸುವುದು ಸೂಕ್ತ.

Breast Cancer: ಸ್ತನ ಕ್ಯಾನ್ಸರ್ ಲಕ್ಷಣಗಳೇನು? ಯಾವೆಲ್ಲಾ ಕಾರಣಕ್ಕೆ ಸ್ತನ ಕ್ಯಾನ್ಸರ್ ಉಂಟಾಗುತ್ತದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on:Jul 04, 2021 | 8:30 AM

ಐಸಿಎಂಆರ್ 2020 ರಾಷ್ಟ್ರೀಯ ಕ್ಯಾನ್ಸರ್ ನೋಂದಾವಣಿ ಕಾರ್ಯಕ್ರಮದ ವರದಿಯ ಪ್ರಕಾರ ಭಾರತದಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿದೆ. ಅದರಲ್ಲೂ 30 ರಿಂದ 40 ವರ್ಷದ ಮಹಿಳೆಯರೇ ಈ ಸ್ತನ ಕ್ಯಾನ್ಸರ್ ಕಾಯಿಲೆಗೆ ಹೆಚ್ಚಾಗಿ ತುತ್ತಾಗುತ್ತಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಇದಕ್ಕೆ ಪ್ರಮುಖ ಕಾರಣ ಈ ಕ್ಯಾನ್ಸರ್ ಬಗ್ಗೆ ಮಹಿಳೆಯರಲ್ಲಿ ಅರಿವಿನ ಕೊರತೆ ಇರುವುದಾಗಿದೆ. ಬ್ರೆಸ್ಟ್ ಕ್ಯಾನ್ಸರ್ ಅಥವಾ ಸ್ತನ ಕ್ಯಾನ್ಸರ್​ನ ಆರಂಭಿಕ ಹಂತದಲ್ಲಿಯೇ ಇದನ್ನು ಗುರುತಿಸಿ ಚಿಕಿತ್ಸೆ ಪಡೆಯುವುದು ಸೂಕ್ತ. ಆದರೆ ಕೆಲವೊಮ್ಮೆ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಲಕ್ಷ್ಯ ಕೊಡದೆ ಅಥವಾ ಯಾವುದೋ ಬೇರೆ ಕಾರಣಕ್ಕೆ ಹೀಗಾಗುತ್ತಿದೆ ಎಂದು ನಿರ್ಲಕ್ಷ್ಯ ವಹಿಸಿದರೆ ಸಮಸ್ಯೆ ಉಲ್ಬಣವಾಗುತ್ತದೆ. ಹೀಗಾಗಿ ಮಹಿಳೆಯರು ತಮ್ಮ ದೇಹದಲ್ಲಿನ ರೋಗ ಲಕ್ಷಣಗಳ ಬಗ್ಗೆ ಸದಾ ಗಮನಹರಿಸುವುದು ಸೂಕ್ತ.

ಸ್ತನ ಕ್ಯಾನ್ಸರ್​ನ ರೋಗಲಕ್ಷಣಗಳ ಬಗ್ಗೆ ಗಮನಹರಿಸಿ ಸ್ತನ ಕ್ಯಾನ್ಸರ್ ಪ್ರಾರಂಭವಾದರೆ ಸ್ತನಗಳ ಮೇಲಿನ ಚರ್ಮದ ಕೋಶಗಳಲ್ಲಿ ಬದಲಾವಣೆಗಳಾಗುತ್ತದೆ. ಇದು ಎದೆ ನೋವು ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು. ಈ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಈ ಸಂದರ್ಭದಲ್ಲಿ ಮೊಲೆತೊಟ್ಟುಗಳ ಸುತ್ತಲಿನ ಚರ್ಮವು ಚಪ್ಪಟೆಯಾಗಿರುತ್ತದೆ. ಎದೆಯ ಮೇಲಿನ ಚರ್ಮವು ಬಣ್ಣವನ್ನು ಬದಲಾಯಿಸುತ್ತದೆ. ದೇಹದ ಇತರ ಭಾಗಗಳಲ್ಲಿನ ಚರ್ಮಕ್ಕಿಂತ ಸ್ತನದ ಮೇಲಿನ ಚರ್ಮದ ಬಣ್ಣ ಭಿನ್ನವಾಗಿರುತ್ತದೆ. ಹೀಗಾಗಿ ಈ ಬಗ್ಗೆ ಗಮನಿಸಬೇಕು. ಮೊಲೆತೊಟ್ಟುಗಳು ಮುದುಡಿದಂತಾಗುವುದು, ಗಾತ್ರದಲ್ಲಿ ಬದಲಾವಣೆಯಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಮೊಲೆತೊಟ್ಟುಗಳಿಂದ ಬಿಳಿ, ಹಳದಿ ಅಥವಾ ಕೆಂಪು ದ್ರವಗಳು ಹೊರ ಬಂದಂತಾದರೆ ಇದು ಸ್ತನ ಕ್ಯಾನ್ಸರ್​ನ ಲಕ್ಷಣವಾಗಿರುತ್ತದೆ. ಸ್ತನದಲ್ಲಿ ಉರಿಯೂತ ಕಾಣಿಸಿಕೊಂಡರೆ, ಸ್ತನದಲ್ಲಿ ಗೆಡ್ಡೆ ರೀತಿ ಭಾಸವಾದರೆ ವೈದ್ಯರನ್ನು ಕಾಣುವುದು ಉತ್ತಮ. ಸ್ತನಗಳ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳುವುದು ಮತ್ತು ಕಿತ್ತಳೆ ಬಣ್ಣಕ್ಕೆ ತಿರುಗಿದಂತಹ ಅನುಭವವಾದರೆ ವೈದ್ಯರನ್ನು ಸಂಪರ್ಕಿಸಿ.

ಸ್ತನ ಕ್ಯಾನ್ಸರ್​ಗೆ ಕಾರಣಗಳು ಪರಿಸರದಲ್ಲಿನ ಬದಲಾವಣೆಗಳಿಂದ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ವಯಸ್ಸಾದಂತೆ ಜೀನ್‌ಗಳು ಬದಲಾಗುತ್ತವೆ, ಆಗ ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗುತ್ತದೆ. 30 ನೇ ವಯಸ್ಸಿನಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಕೇವಲ 0.6 ಪ್ರತಿಶತ ಮಾತ್ರ. ಆದರೆ 70 ರ ಹೊತ್ತಿಗೆ ಅದೇ ಶೇಕಡಾ 3.84 ಕ್ಕೆ ಹೆಚ್ಚಾಗುತ್ತದೆ. ಕೆಲವು ಜನರಿಗೆ ಸ್ತನದಲ್ಲಿ ಗೆಡ್ಡೆಗಳಿರುತ್ತದೆ. ಇಂತಹವರಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಕ್ಯಾನ್ಸರ್ ಗೆಡ್ಡೆಗಳು ಇಲ್ಲದಿದ್ದರೂ ಭವಿಷ್ಯದಲ್ಲಿ ಅವು ಬರಬಹುದು. ಮುಟ್ಟಿನ ಮತ್ತು ಇನ್ನಿತರ ಋತು ಸಂಬಂಧ ಕಾಯಿಲೆಗಳು ನಂತರದ ದಿನಗಳಲ್ಲಿ ಸ್ತನ ಕ್ಯಾನ್ಸರ್‌ಗೆ ಕಾರಣವಾಗಬಹುದು. ಯಾರಿಗೆ ಈಸ್ಟ್ರೊಜೆನ್ ಹೆಚ್ಚಾಗಿ ಬಿಡುಗಡೆಯಾಗುತ್ತದೆ, ಅಂತವರಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಇನ್ನು ಅಧಿಕ ತೂಕ ಹೊಂದಿರುವವರಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಆಲ್ಕೊಹಾಲ್ ಹೆಚ್ಚಾಗಿ ತೆಗೆದುಕೊಳ್ಳುವವರಿಗೂ ಕೂಡ ಈ ಅಪಾಯವಿದೆ.

ಇದನ್ನೂ ಓದಿ: Health Benefits: ದೇಹದಿಂದ ಹೊರ ಬರುವ ಬೆವರು ಆರೋಗ್ಯಕರ ಲಕ್ಷಣವನ್ನು ಹೊಂದಿದೆ

Benefits of crying: ಅಳುವುದು ಉತ್ತಮ ಅಭ್ಯಾಸ; ಕಣ್ಣೀರು ಹೊರ ಹಾಕುವುದರಿಂದ ಆಗುವ ಆರೋಗ್ಯಕರ ಬದಲಾವಣೆಗಳ ಬಗ್ಗೆ ತಿಳಿಯಿರಿ

Published On - 8:27 am, Sun, 4 July 21

ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು
ಪಿಡಿಓಗಳು ಕುಬೇರರು ಅನ್ನೋದನ್ನು ಸಾಬೀತು ಮಾಡಿರುವ ಹಿರೇಮಠ
ಪಿಡಿಓಗಳು ಕುಬೇರರು ಅನ್ನೋದನ್ನು ಸಾಬೀತು ಮಾಡಿರುವ ಹಿರೇಮಠ
ಸಂಸತ್ತಿನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ
ಸಂಸತ್ತಿನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ದಾವಣಗೆರೆಯ ಈಜುಪಟು
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ದಾವಣಗೆರೆಯ ಈಜುಪಟು
Budget Session 2025: ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಮಾತು
Budget Session 2025: ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಮಾತು
ನಮ್ಮ ಮನೆಯಲ್ಲಿ ನಾನು ಆಸ್ತಿಕ ಅದರೆ ನಮ್ಮ ತಂದೆ ನಾಸ್ತಿಕ: ಯತೀಂದ್ರ
ನಮ್ಮ ಮನೆಯಲ್ಲಿ ನಾನು ಆಸ್ತಿಕ ಅದರೆ ನಮ್ಮ ತಂದೆ ನಾಸ್ತಿಕ: ಯತೀಂದ್ರ
ಮನೆಯೊಡತಿ ಸಾವಿನ ಸುದ್ದಿ ತಿಳಿದು ಸಾಕು ನಾಯಿಯ ಮೂಕರೋಧನೆ
ಮನೆಯೊಡತಿ ಸಾವಿನ ಸುದ್ದಿ ತಿಳಿದು ಸಾಕು ನಾಯಿಯ ಮೂಕರೋಧನೆ