Wart Removal: ನರಹುಲಿಯನ್ನು ಯಾವುದೇ ನೋವಿಲ್ಲದೇ ತೆಗೆದುಹಾಕಲು ಸುಲಭ ವಿಧಾನ ಇಲ್ಲಿದೆ

ನಿಮ್ಮ ನರಹುಲಿ ಸಮಸ್ಯೆ ಚಿಕ್ಕದಾಗಿದ್ದು ಪ್ರಾರಂಭದ ಹಂತದಲ್ಲಿದ್ದರೇ ಮಾತ್ರ ಈ ಟ್ರಿಕ್ಸ್ ಪ್ರಯತ್ನಿಸಿ. ಈ ಸಮಸ್ಯೆ ಅಧಿಕವಾಗಿದ್ದರೇ ನಿಮ್ಮ ಹತ್ತಿರದ ಚರ್ಮರೋಗ ತಜ್ಞರನ್ನು ಭೇಟಿ ಮಾಡಿ.

Wart Removal: ನರಹುಲಿಯನ್ನು ಯಾವುದೇ ನೋವಿಲ್ಲದೇ ತೆಗೆದುಹಾಕಲು ಸುಲಭ ವಿಧಾನ ಇಲ್ಲಿದೆ
Remove Small wart easily without any pain kannada newsImage Credit source: Cleveland Clinic
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on: Nov 29, 2022 | 2:25 PM

ನರಹುಲಿ(Wart) ಹೆಚ್ಚಾಗಿ ಕೈ ಮತ್ತು ಕಾಲುಗಳ ಮೇಲೆ ಕಾಣಿಸಿಕೊಳ್ಳುತ್ತದೆ. ಇದು ನಿಮ್ಮನ್ನು ಸಾಕಷ್ಟು ಮುಜುಗರಕ್ಕೀಡು ಮಾಡುತ್ತಿದ್ದರೆ ಮಾಡುತ್ತಿದ್ದರೆ ಇಲ್ಲಿದೆ ಸುಲಭ ಉಪಾಯ. ಮನೆಯಲ್ಲಿಯೇ ಸುಲಭವಾಗಿ ಯಾವುದೇ ನೋವಿಲ್ಲದೇ ನರಹುಲಿಯನ್ನು ತೆಗೆಯಬಹುದು. ಹ್ಯೂಮನ್ ಪಾಪಿಲೋಮೋ ವೈರಸ್​​​ನಿಂದ ನರಹುಲಿ ಸಮಸ್ಯೆ ಕಾಡುತ್ತದೆ. ಇದು ಚರ್ಮದ ಮೇಲಿನ ಬಿರುಕಿನ ಮೂಲಕ ದೇಹದೊಳಗೆ ಪ್ರವೇಶಿಸುತ್ತದೆ. ಚರ್ಮದ ಮೇಲೆ ಸಣ್ಣ ಬೀಜಗಳಂತೆ ಕಾಣುತ್ತದೆ.

ನಿಮ್ಮ ನರಹುಲಿ ಸಮಸ್ಯೆ ಚಿಕ್ಕದಾಗಿದ್ದು ಪ್ರಾರಂಭದ ಹಂತದಲ್ಲಿದ್ದರೇ ಮಾತ್ರ ಈ ಟ್ರಿಕ್ಸ್ ಪ್ರಯತ್ನಿಸಿ. ಈ ಸಮಸ್ಯೆ ಅಧಿಕವಾಗಿದ್ದರೇ ನಿಮ್ಮ ಹತ್ತಿರದ ಚರ್ಮರೋಗ ತಜ್ಞರನ್ನು ಭೇಟಿ ಮಾಡಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.

ಆದ್ದರಿಂದ ಸುಲಭವಾಗಿ ನರಹುಲಿಯನ್ನು ತೆಗೆಯಲು ಇಲ್ಲಿದೆ ಸಣ್ಣ ಟ್ರಿಕ್. ಇದು ಪ್ರಾರಂಭದ ಹಂತದಲ್ಲಿರುವವರು ಮಾತ್ರ ಪ್ರಯತ್ನಿಸಹುದು. ಅಂದರೆ ಕೈ, ಕಾಲುಗಳಲ್ಲಿ ಒಂದೊಂದು ನರಹುಲಿಗಳನ್ನು ಹೊಂದಿದ್ದವರು ಇದನ್ನು ಪ್ರಯತ್ನಿಸಬಹುದು. ಇದಕ್ಕಾಗಿ ನಿಮಗೆ ಬೇಕಾಗಿರುವುದು ಡಕ್ಟ್ ಟೇಪ್(Duct tape) ಸಣ್ಣ ತುಂಡು, ಸ್ವಲ್ಪ ನೀರು ಮತ್ತು ಪ್ಯೂಮಿಸ್ ಸ್ಟೋನ್(Pumice stone). ಮೊದಲಿಗೆ ಸಣ್ಣ ತುಂಡು ಟೇಪ್ ತೆಗೆದುಕೊಂಡು ನರಹುಲಿಗಳ ಮೇಲೆ ಅಂಟಿಸಿ. ನಂತರ ಡಕ್ಟ್ ಟೇಪ್ ಮುಟ್ಟದೆ ಆರು ದಿನಗಳವರೆಗೆ ಹಾಗೆಯೇ ಬಿಡಬೇಕು. ಆರು ದಿನಗಳ ನಂತರ, ನೀವು ಟೇಪ್ ನಿಧಾನವಾಗಿ ತೆಗೆಯಬೇಕು.

ಇದನ್ನು ಓದಿ: ಕೈ-ಕಾಲು ಚರ್ಮದ ಸಿಪ್ಪೆ ಸುಲಿಯುತ್ತಿದೆಯೇ? ಕಾರಣಗಳೇನು, ಕಡಿಮೆ ಮಾಡುವುದು ಹೇಗೆ?

ನಂತರ ಬೆಚ್ಚಗಿನ ನೀರು ತೆಗೆದುಕೊಂಡು ನರಹುಲಿಯ ಜಾಗವನ್ನು ಸ್ವಲ್ಪ ಹೊತ್ತು ಹಾಗೆಯೇ ನೆನೆಸಿಡಿ. ಉದಾಹರಣೆಗೆ ಕೈಯಲ್ಲಿ ಆಗಿದ್ದರೆ, ಸ್ವಲ್ಪ ಹೊತ್ತು ಕೈಯನ್ನು ನೀರಿನಲ್ಲಿಡಿ. ನಂತರ ಪ್ಯೂಮಿಸ್ ಅಥವಾ ಮೃದುವಾದ ಸ್ಕ್ರಬರ್ ಬಳಸಿ, ಸ್ವಲ್ಪ ಹೊತ್ತು ನರಹುಲಿಯ ಮೇಲೆ ನಿಧಾನವಾಗಿ ಉಜ್ಜಿ. ಈಗಾಗಲೇ ಸ್ವಲ್ಪ ಬಿಸಿ ನೀರಿನಲ್ಲಿ ಚರ್ಮವನ್ನು ನೆನೆಸಿರುವುದರಿಂದ, ನರಹುಲಿಯನ್ನು ನೋಯಿಸದೆ ನೀವು ಸುಲಭವಾಗಿ ತೆಗೆಯಬಹುದು.

(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ