ಒತ್ತಡದ ಜೀವನಶೈಲಿ ನಡುವೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲೇ ಸರಿ. ನಿಮ್ಮ ಮಾನಸಿಕ ಸ್ಥಿತಿ ಮತ್ತು ದೈಹಿಕ ಆರೋಗ್ಯ ಸುಧಾರಣೆಗೆ ನೀವು ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯ ಜೊತೆಗೆ ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳು ಅಗತ್ಯ.ಹಾಗೆಯೇ ವಿಟಮಿನ್ ಇ ಇರುವ ಆಹಾರವನ್ನು ಸೇವಿಸಿದರೆ ಸ್ನಾಯು ಹಾಗೂ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
ದೇಹದ ಫಿಟ್ನೆಸ್ಗಾಗಿ ಜೀವಸತ್ವಗಳು ಮತ್ತು ಖನಿಜಗಳು ಅವಶ್ಯಕ. ಹಾಗಿರುವಾಗ ನಿಮ್ಮ ಆರೋಗ್ಯ ಸುಧಾರಣೆಗೆ ವಿಟಮಿನ್ ಇ ಬಹಳ ಮುಖ್ಯ. ವಿಟಮಿನ್ ಇ ಚರ್ಮದ ಆರೋಗ್ಯ ಮತ್ತು ಕೂದಲಿನ ಆರೋಗ್ಯಕ್ಕೆ ಸಹಾಯಕವಾಗಿದೆ.
ನಿಮ್ಮ ಆಹಾರದಲ್ಲಿ ಈ ಕೆಲವು ಆಹಾರ ಪದಾರ್ಥಗಳನ್ನು ಸೇರಿಸುವ ಮೂಲಕ ಅರೋಗ್ಯ ಸುಧಾರಣೆ ಮಾಡಿಕೊಳ್ಳಬಹುದಾಗಿದೆ. ವಿಟಮಿನ್ ಇ ಕೊರತೆಯು ದೇಹದ ಸ್ನಾಯುಗಳಲ್ಲಿ ನೋವು ಮತ್ತು ದೌರ್ಬಲ್ಯವನ್ನು ಉಂಟು ಮಾಡುತ್ತದೆ.
ವಿಟಮಿನ್ ಇ ಸಮೃದ್ಧ ಆಹಾರ ಪದಾರ್ಥಗಳು ಯಾವುವು:
ಆಲಿವ್ ಎಣ್ಣೆ ಆಲಿವ್ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿರುತ್ತದೆ. ನಿಮ್ಮ ಆಹಾರದಲ್ಲಿ ಆಲಿವ್ ಎಣ್ಣೆ ಸೇರಿಸುವ ಮೂಲಕ ನೀವು ವಿಟಮಿನ್ ಇ ಕೊರತೆ ನಿವಾರಣೆ ಮಾಡಿಕೊಳ್ಳಬಹುದಾಗಿದೆ.
ಪಪ್ಪಾಯಿ ತೂಕ ನಷ್ಟಕ್ಕೆ ಪಪ್ಪಾಯಿ ಒಳ್ಳೆಯದು. ಪಪ್ಪಾಯಿಯು ವಿಟಮಿನ್ ಇ ಅಂಶವನ್ನು ಹೊಂದಿದೆ. ಇದು ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಕಡಲೆಕಾಯಿ ಕಡಲೆಕಾಯಿಯು ವಿಟಮಿನ್ ಇ ಅಂಶದ ಉತ್ತಮ ಮೂಲವಾಗಿದೆ. ನಿಮ್ಮ ಆಹಾರದಲ್ಲಿ ಕಡಲೆಕಾಯಿಯನ್ನು ಸೇವಿಸುವುದರಿಂದ ನೀವು ಆರೋಗ್ಯಕರ ಮತ್ತು ಫಿಟ್ ಆಗಿರಲು ಸಹಾಯವಾಗುತ್ತದೆ. ನಿಮ್ಮ ಆಹಾರ ವ್ಯವಸ್ಥೆಯಲ್ಲಿ ಈ ಕೆಲವು ಆಹಾರ ಪದಾರ್ಥಗಳನ್ನು ಸೇರಿಸುವ ಮೂಲಕ ನೀವು ಆರೋಗ್ಯಕರವಾಗಿರಲು ಸಹಾಯಕ.
ಅವಕಾಡೊ ಆವಕಾಡೊಗಳು ಪೋಷಕಾಂಶ ಸಮೃದ್ಧ ಮೂಲವಾಗಿದೆ. ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿರುತ್ತದೆ. ಆವಕಾಡೊವನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು. ನಿಮ್ಮ ಚರ್ಮ ಮತ್ತು ದೇಹವು ಆರೋಗ್ಯಕರವಾಗಿರಲು ಇದು ಸಹಾಯ ಮಾಡುತ್ತದೆ.
-ತ್ವಚೆ ಸಂರಕ್ಷಣೆ: ವಿಟಮಿನ್ ಇ ಇರುವ ಆಹಾರಗಳಲ್ಲಿ anti oxidant ಪ್ರಮಾಣ ಹೆಚ್ಚಾಗಿ ಇರುವುದರಿಂದ ತ್ವಚೆ ಸಂಬಂಧಿ ಕಾಯಿಲೆಗಳು ಬರದಂತೆ ತಡೆಯುತ್ತದೆ. ಅಲ್ಲದೆ ತ್ವಚೆ ಹೊಳಪನ್ನು ಹೆಚ್ಚಿಸುವುದು.
-ಕೆಂಪು ರಕ್ತ ಕಣಗಳನ್ನು ಹೆಚ್ಚು ಮಾಡುತ್ತದೆ: ಇದು ದೇಹದಲ್ಲಿ ರಕ್ತ ಸಂಚಲನ ಸರಿಯಾಗಿ ಪ್ರಕ್ರಿಯೆ ಸರಿಯಾಗಿ ನಡೆಯಲು ಸಹಾಯ ಮಾಡುತ್ತದೆ. ವಿಟಮಿನ್ ಇ ಕೊರತೆ ಉಂಟಾದರೆ ಕೂಡಲೆ ಚಿಕಿತ್ಸೆಯನ್ನು ಪಡೆಯಬೇಕು. ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯ ಉಂಟಾಗಬಹುದು.
-ರಕ್ತ ಹೆಪ್ಪುಗಟ್ಟುವ ಸಮಸ್ಯೆಯನ್ನು ತಡೆಯುತ್ತದೆ: ವಿಟಮಿನ್ ಇ ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ ಮತ್ತು ತ್ವಚೆ ಸಮಸ್ಯೆಯನ್ನು ನಿವಾರಿಸುತ್ತದೆ, ಮುಖದಲ್ಲಿ ಬೇಗನೆ ನೆರಿಗೆ ಉಂಟಾಗುವುದಿಲ್ಲ. ಅಲ್ಲದೆ ಇದು ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಮಳೆಗಾಲದಲ್ಲಿ ಆರೋಗ್ಯ ಕಾಪಾಡಲು ಪಾಲಿಸಿ ಈ ಸರಳ ಆಯುರ್ವೇದ ಟಿಪ್ಸ್
-ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ರೆಟಿನಾದ ಸಾಮರ್ಥ್ಯ ಹೆಚ್ಚಿಸುತ್ತದೆ.
-ಇತರ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ: ಮುಟ್ಟುವಿನಲ್ಲಿ ಅಧಿಕ ನೋವು ಕಾಣಿಸಿಕೊಳ್ಳುವುದು, ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು, ಕಣ್ಣಿನಲ್ಲಿ ಉರಿ, ಅಲ್ಜೈಮರ್ಸ್, ಅಸ್ತಮಾ ಈ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಲು ವಿಟಮಿನ್ ಇ ಅಂಶ ದೇಹದಲ್ಲಿ ಅವಶ್ಯಕ.
ಇದು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿದ ಸುದ್ದಿಯಾಗಿರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:27 pm, Thu, 19 May 22