Retinoblastoma Eye Cancer: ರೆಟಿನೊಬ್ಲಾಸ್ಟೊಮಾ ಕಣ್ಣಿನ ಕ್ಯಾನ್ಸರ್ಗೆ ಕಾರಣ, ಲಕ್ಷಣಗಳೇನು?
ನಿಮ್ಮ ರೆಟಿನಾವು ನರ ಅಂಗಾಂಶದಿಂದ ಮಾಡಲ್ಪಟ್ಟಿದೆ, ಅದು ನಿಮ್ಮ ಕಣ್ಣಿನ ಮುಂಭಾಗದ ಮೂಲಕ ಬೆಳಕನ್ನು ಗ್ರಹಿಸುತ್ತದೆ. ರೆಟಿನಾವು ನಿಮ್ಮ ಆಪ್ಟಿಕ್ ನರಗಳ ಮೂಲಕ ನಿಮ್ಮ ಮೆದುಳಿಗೆ ಸಂಕೇತಗಳನ್ನು ಕಳುಹಿಸುತ್ತದೆ. ಅಲ್ಲಿ ಈ ಸಂಕೇತಗಳನ್ನು ಚಿತ್ರಗಳಾಗಿ ಅರ್ಥೈಸಲಾಗುತ್ತದೆ. ಕಣ್ಣಿನ ಕ್ಯಾನ್ಸರ್ನ ಅಪರೂಪದ ರೂಪವಾದ ರೆಟಿನೋಬ್ಲಾಸ್ಟೊಮಾ ಮಕ್ಕಳಲ್ಲಿ ಕಣ್ಣಿನ ಮೇಲೆ ಪರಿಣಾಮ ಬೀರುವ ಕ್ಯಾನ್ಸರ್ನ ಸಾಮಾನ್ಯ ರೂಪವಾಗಿದೆ. ರೆಟಿನೊಬ್ಲಾಸ್ಟೊಮಾ ಒಂದು ಅಥವಾ ಎರಡೂ ಕಣ್ಣುಗಳಲ್ಲಿ ಕೂಡ ಸಂಭವಿಸಬಹುದು.
ರೆಟಿನೊಬ್ಲಾಸ್ಟೊಮಾ (Retinoblastoma) ಎಂಬುದು ಕಣ್ಣಿನ ಕ್ಯಾನ್ಸರ್ ಆಗಿದ್ದು, ಅದು ರೆಟಿನಾದಲ್ಲಿ ಪ್ರಾರಂಭವಾಗುತ್ತದೆ. ರೆಟಿನಾ (Retina) ಎಂಬುದು ನಿಮ್ಮ ಕಣ್ಣಿನ ಒಳಭಾಗದಲ್ಲಿರುವ ಸೂಕ್ಷ್ಮ ಲೈನಿಂಗ್. ರೆಟಿನೊಬ್ಲಾಸ್ಟೊಮಾ ಸಾಮಾನ್ಯವಾಗಿ ಚಿಕ್ಕ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ವಯಸ್ಸಾದವರಲ್ಲಿ ಕೂಡ ವಿರಳವಾಗಿ ಕಂಡುಬರುತ್ತದೆ. ರೆಟಿನೊಬ್ಲಾಸ್ಟೊಮಾ ಹೆಚ್ಚಾಗಿ ಶಿಶುಗಳು ಮತ್ತು ಚಿಕ್ಕ ಮಕ್ಕಳ ಮೇಲೆ ಪರಿಣಾಮ ಬೀರುವುದರಿಂದ, ಇದರ ರೋಗಲಕ್ಷಣಗಳು ಸಾಮಾನ್ಯವಾಗಿ ಕಂಡುಬರುವುದಿಲ್ಲ. ಆದರೂ ನೀವು ಗಮನಿಸಬೇಕಾದ ಲಕ್ಷಣಗಳು ಹೀಗಿವೆ.
ಕಣ್ಣಿನಲ್ಲಿ ಬೆಳಕು ಮೂಡಿದಾಗ ಕಣ್ಣಿನ ಮಧ್ಯದ ವೃತ್ತದಲ್ಲಿ ಬಿಳಿ ಬಣ್ಣ ಮೂಡಿದಾಗ, ಯಾರೋ ಮಗುವಿನ ಫ್ಲ್ಯಾಷ್ ಫೋಟೋ ತೆಗೆದಾಗ, ವಿವಿಧ ದಿಕ್ಕುಗಳಲ್ಲಿ ನೋಡುತ್ತಿರುವಂತೆ ಕಾಣುವ ಕಣ್ಣುಗಳು, ಕಳಪೆ ದೃಷ್ಟಿ, ಕಣ್ಣು ಕೆಂಪಾಗುವುದು, ಕಣ್ಣಿನ ಊತ ಇವು ಮಕ್ಕಳಲ್ಲಿ ಕಣ್ಣಿನ ಕ್ಯಾನ್ಸರ್ನ ಲಕ್ಷಣಗಳಾಗಿವೆ. ಮಕ್ಕಳಿಗೆ ಈ ಲಕ್ಷಣಗಳು ಅರ್ಥವಾಗದ ಹಿನ್ನೆಲೆಯಲ್ಲಿ ಪೋಷಕರು ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.
ನಿಮ್ಮ ಮಗುವಿನ ಕಣ್ಣುಗಳಲ್ಲಿ ಈ ಯಾವುದೇ ಬದಲಾವಣೆಗಳನ್ನು ನೀವು ಗಮನಿಸಿದರೆ ನಿಮ್ಮ ಮಕ್ಕಳ ವೈದ್ಯರೊಂದಿಗೆ ಈ ಬಗ್ಗೆ ಮಾತನಾಡಿ, ಅನುಮಾನ ಬಗೆಹರಿಸಿಕೊಳ್ಳುವುದು ಅಗತ್ಯ. ರೆಟಿನೊಬ್ಲಾಸ್ಟೊಮಾ ಅಪರೂಪದ ಕ್ಯಾನ್ಸರ್ ಆಗಿದೆ. ನೀವು ರೆಟಿನೊಬ್ಲಾಸ್ಟೊಮಾದ ಕುಟುಂಬದ ಇತಿಹಾಸವನ್ನು ಹೊಂದಿದ್ದರೆ, ನೀವು ಮಕ್ಕಳನ್ನು ಮಾಡಿಕೊಳ್ಳುವ ಅಥವಾ ಗರ್ಭ ಧರಿಸುವ ಬಗ್ಗೆ ಯೋಚಿಸುತ್ತಿದ್ದರೆ ಅದಕ್ಕೂ ಮೊದಲು ನಿಮ್ಮ ವೈದ್ಯರೊಂದಿಗೆ ಚರ್ಚಿಸಿ. ಇದು ವಂಶವಾಹಿನಿಯಾಗಿಯೂ ಬರಬಹುದು.
ಇದನ್ನೂ ಓದಿ: Mouth Cancer: ಧೂಮಪಾನ ಮಾಡದವರಿಗೂ ಬಾಯಿಯ ಕ್ಯಾನ್ಸರ್ ಬರಲು ಕಾರಣ ಇಲ್ಲಿದೆ
ರೆಟಿನಾದಲ್ಲಿನ ನರ ಕೋಶಗಳು ಆನುವಂಶಿಕ ರೂಪಾಂತರಗಳನ್ನು ಅಭಿವೃದ್ಧಿಪಡಿಸಿದಾಗ ರೆಟಿನೊಬ್ಲಾಸ್ಟೊಮಾ ಉಂಟಾಗುತ್ತದೆ. ಈ ರೂಪಾಂತರಗಳು ಜೀವಕೋಶಗಳು ಬೆಳೆಯುವುದನ್ನು ಮುಂದುವರೆಸುತ್ತವೆ. ರೆಟಿನೊಬ್ಲಾಸ್ಟೊಮಾ ಮೆದುಳು ಮತ್ತು ಬೆನ್ನುಮೂಳೆ ಸೇರಿದಂತೆ ದೇಹದ ಇತರ ಪ್ರದೇಶಗಳಿಗೆ ಹರಡಬಹುದು. ರೆಟಿನೊಬ್ಲಾಸ್ಟೊಮಾ ಕ್ಯಾನ್ಸರ್ಗೆ ಕಾರಣವಾಗುವ ಆನುವಂಶಿಕ ರೂಪಾಂತರಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.
ರೆಟಿನೊಬ್ಲಾಸ್ಟೊಮಾ ಮತ್ತು ಇತರ ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸುವ ಜೀನ್ ರೂಪಾಂತರಗಳು ಪೋಷಕರಿಂದ ಮಕ್ಕಳಿಗೆ ಹರಡಬಹುದು. ಅನುವಂಶಿಕ ರೆಟಿನೋಬ್ಲಾಸ್ಟೊಮಾವನ್ನು ಪೋಷಕರಿಂದ ಮಕ್ಕಳಿಗೆ ಆಟೋಸೋಮಲ್ ಪ್ರಾಬಲ್ಯದ ಮಾದರಿಯಲ್ಲಿ ರವಾನಿಸಲಾಗುತ್ತದೆ. ಮಗುವಿನ ಒಬ್ಬ ಪೋಷಕರು ರೂಪಾಂತರಗೊಂಡ ಜೀನ್ ಅನ್ನು ಹೊಂದಿದ್ದರೆ ಮಗು ಕೂಡ ಆ ಜೀನ್ ಅನ್ನು ಅನುವಂಶಿಕವಾಗಿ ಪಡೆಯುವ ಶೇ. 50ರಷ್ಟು ಅವಕಾಶವಿದೆ.
ಇದನ್ನೂ ಓದಿ: Breast Cancer: ತಲೆನೋವಿಗೂ ಸ್ತನ ಕ್ಯಾನ್ಸರ್ಗೂ ಇದೆ ಸಂಬಂಧ; ಈ ಬಗ್ಗೆ ಎಚ್ಚರವಿರಲಿ
ರೆಟಿನೊಬ್ಲಾಸ್ಟೊಮಾದ ಆನುವಂಶಿಕ ರೂಪವನ್ನು ಹೊಂದಿರುವ ಮಕ್ಕಳು ಬಾಲ್ಯದಲ್ಲಿ ಈ ರೋಗವನ್ನು ಹೊಂದುತ್ತಾರೆ. ಅನುವಂಶಿಕ ರೆಟಿನೊಬ್ಲಾಸ್ಟೊಮಾವು ಕೇವಲ ಒಂದು ಕಣ್ಣಿಗೆ ಮಾತ್ರವಲ್ಲ ಎರಡೂ ಕಣ್ಣುಗಳಲ್ಲಿ ಕಂಡುಬರುತ್ತದೆ. ರೆಟಿನೊಬ್ಲಾಸ್ಟೊಮಾಗೆ ಚಿಕಿತ್ಸೆ ಪಡೆದ ಮಕ್ಕಳು ಚಿಕಿತ್ಸೆ ಪಡೆದ ಕಣ್ಣಿನಲ್ಲಿ ಮತ್ತು ಅದರ ಸುತ್ತಲೂ ಕ್ಯಾನ್ಸರ್ ಮರಳುವ ಅಪಾಯವನ್ನು ಹೊಂದಿರುತ್ತಾರೆ. ಇಷ್ಟೇ ಅಲ್ಲ, ರೆಟಿನೊಬ್ಲಾಸ್ಟೊಮಾದ ಆನುವಂಶಿಕ ರೂಪವನ್ನು ಹೊಂದಿರುವ ಮಕ್ಕಳು ಚಿಕಿತ್ಸೆಯ ನಂತರದ ವರ್ಷಗಳಲ್ಲಿ ದೇಹದ ಯಾವುದೇ ಭಾಗದಲ್ಲಿ ಇತರ ರೀತಿಯ ಕ್ಯಾನ್ಸರ್‌ಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೊಂದಿರುತ್ತಾರೆ. ವಿಶೇಷವಾಗಿ ಅಂತಹ ಮಕ್ಕಳ ಮೆದುಳಿನಲ್ಲಿ ಗೆಡ್ಡೆ ಬೆಳೆಯುವ ಸಾಧ್ಯತೆ ಇರುತ್ತದೆ.
ಈ ರೆಟಿನೊಬ್ಲಾಸ್ಟೊಮಾ ಅಪರೂಪ. 20 ವರ್ಷಕ್ಕಿಂತ ಕಡಿಮೆ ವಯಸ್ಸಿನ 1 ಮಿಲಿಯನ್ ಜನರಿಗೆ ಸುಮಾರು 3.3 ಪ್ರಕರಣಗಳು ದಾಖಲಾಗಿವೆ. ಈ ರೋಗ ಸಾಮಾನ್ಯವಾಗಿ 3 ವರ್ಷಕ್ಕಿಂತ ಮುಂಚೆಯೇ ರೋಗನಿರ್ಣಯ ಮಾಡಲ್ಪಟ್ಟಿರುವುದರಿಂದ, ಮಕ್ಕಳು ಸಾಮಾನ್ಯವಾಗಿ ತಮ್ಮ ರೋಗಲಕ್ಷಣಗಳನ್ನು ಅನುಭವಿಸಲು ಸಾಧ್ಯವಿಲ್ಲ. ಪೋಷಕರೇ ಅದನ್ನು ಗಮನಿಸಬೇಕು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:15 pm, Thu, 29 February 24