ಲಿವರ್ ಡಿಟಾಕ್ಸ್ ಆಗಬೇಕು ಅಂದ್ರೆ ಈ ಒಂದು ತರಕಾರಿಯನ್ನು ವಾರಕ್ಕೊಮ್ಮೆ ಸೇವನೆ ಮಾಡಿ

ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ ರೋಗಗಳು ಬರುವ ಅಪಾಯ ಹೆಚ್ಚಾಗಿರುತ್ತದೆ. ಅದರ ಜೊತೆಗೆ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಗಳು ದೇಹದ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತವೆ. ಅದಕ್ಕಾಗಿಯೇ ಆರೋಗ್ಯ ತಜ್ಞರು, ಋತುಮಾನದ ಕಾಯಿಲೆಗಳನ್ನು ತಡೆಗಟ್ಟಲು ತರಕಾರಿ ತಿನ್ನಲು ತಜ್ಞರು ಶಿಫಾರಸು ಮಾಡುತ್ತಾರೆ. ಇದಕ್ಕೆ ಪೂರಕವೆಂಬಂತೆ ಹೀರೆಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾದರೆ ಇದರಿಂದ ಸಿಗುವ ಪ್ರಯೋಜನಗಳೇನು? ಆರೋಗ್ಯಕ್ಕೆ ಯಾವ ರೀತಿಯಲ್ಲಿ ಉಪಯೋಗಕಾರಿಯಾಗಬಹುದು ಎಂಬುದನ್ನು ತಿಳಿದುಕೊಳ್ಳಿ.

ಲಿವರ್ ಡಿಟಾಕ್ಸ್ ಆಗಬೇಕು ಅಂದ್ರೆ ಈ ಒಂದು ತರಕಾರಿಯನ್ನು ವಾರಕ್ಕೊಮ್ಮೆ ಸೇವನೆ ಮಾಡಿ
Ridge Gourd Benefits

Updated on: Aug 24, 2025 | 5:48 PM

ಮಾನ್ಸೂನ್ (Monsoon) ಹವಾಮಾನ ಯಾವಾಗಲೂ ಬಹಳ ಆಹ್ಲಾದಕರವಾಗಿರುತ್ತದೆ. ಆದರೆ ಆರ್ದ್ರ ವಾತಾವರಣದಲ್ಲಿ ಕಾಯಿಲೆಗಳು ಹರಡುತ್ತವೆ ಎಂಬುದನ್ನು ಎಂದಿಗೂ ಮರೆಯಬಾರದು. ಕೆಮ್ಮು, ಶೀತ ಮತ್ತು ಗಂಟಲಿನಲ್ಲಿ ಕಫ ಇತ್ಯಾದಿ ಋತುಮಾನಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ಬರುವುದು ಸಾಮಾನ್ಯ. ಈ ರೀತಿ ಋತುಮಾನದಲ್ಲಿ ಬರುವಂತಹ ಕಾಯಿಲೆಗಳನ್ನು ತಡೆಗಟ್ಟಲು ತಜ್ಞರು ತರಕಾರಿ ತಿನ್ನಲು ಶಿಫಾರಸು ಮಾಡುತ್ತಾರೆ. ಆದರೆ ಎಲ್ಲಾ ತರಕಾರಿ ಎಲ್ಲರಿಗೂ ಇಷ್ಟವಾಗುವುದಿಲ್ಲ. ಆದರೆ ಈ ಒಂದು ತರಕಾರಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸೋಂಕುಗಳಿಂದ ನಮ್ಮನ್ನು ರಕ್ಷಿಸುತ್ತದೆ ಮಾತ್ರವಲ್ಲ, ಎಲ್ಲಾ ರೀತಿಯ ತರಕಾರಿಗಳಿಂದ ಸಿಗುವ ಪೋಷಕಾಂಶಗಳನ್ನು ನೀಡುತ್ತದೆ. ಆ ತರಕಾರಿ ಬೇರಾವುದು ಅಲ್ಲ ಅದು ಹೀರೆಕಾಯಿ (Ridge Gourd). ಈ ತರಕಾರಿಯಲ್ಲಿ ಅಷ್ಟೆಲ್ಲಾ ಪ್ರಯೋಜನಕಾರಿ ಗುಣಗಳಿರುತ್ತವೆ ಎಂದು ನಿಮಗೆ ಆಶ್ಚರ್ಯವಾಗಬಹುದು! ಆದರೆ ಇದು ಸತ್ಯ. ಹಾಗಾದರೆ ಇದರಿಂದ ಸಿಗುವ ಪ್ರಯೋಜನಗಳೇನು? ಆರೋಗ್ಯಕ್ಕೆ ಯಾವ ರೀತಿಯಲ್ಲಿ ಉಪಯೋಗಕಾರಿಯಾಗಬಹುದು ಎಂಬುದನ್ನು ತಿಳಿದುಕೊಳ್ಳಿ.

ಸಾಮಾನ್ಯವಾಗಿ ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ ರೋಗಗಳು ಬರುವ ಅಪಾಯ ಹೆಚ್ಚಾಗಿರುತ್ತದೆ. ಅದರ ಜೊತೆಗೆ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಗಳು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತವೆ. ಪರಿಣಾಮವಾಗಿ, ಕಾಲೋಚಿತ ಕಾಯಿಲೆಗಳ ಬರಿವ ಅಪಾಯ ಹೆಚ್ಚಾಗುತ್ತದೆ. ಆದರೆ ಮಳೆಗಾಲದಲ್ಲಿ ಹೀರೆಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವುದಲ್ಲದೆ ಅನೇಕ ರೀತಿಯಲ್ಲಿ ಪ್ರಯೋಜನಗಳನ್ನು ಕೂಡ ನೀಡುತ್ತದೆ.

ಹೀರೆಕಾಯಿಯನ್ನು ಯಾಕೆ ಸೇವನೆ ಮಾಡಬೇಕು?

ಹೀರೆಕಾಯಿ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಇದು ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಸಿಯಮ್ ಮತ್ತು ಫೋಲೇಟ್ ನಂತಹ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಹೆಚ್ಚುವರಿಯಾಗಿ, ಹೀರೆಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶವಿದ್ದು ಕ್ಯಾಲೊರಿಗಳು ಕಡಿಮೆ ಇದೆ. ಆದ್ದರಿಂದ, ಇದು ಮಳೆಗಾಲದಲ್ಲಿ ದೇಹವನ್ನು ಹಗುರವಾಗಿ ಮತ್ತು ನಿರ್ವಿಷಗೊಳಿಸುತ್ತದೆ. ಮಳೆಗಾಲದಲ್ಲಿ ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

ಇದನ್ನೂ ಓದಿ
ಖಾಲಿ ಹೊಟ್ಟೆಯಲ್ಲಿ ನಿಂಬೆ ಜ್ಯೂಸ್ ಕುಡಿಯುವ ಅಭ್ಯಾಸ ನಿಮಗೂ ಇದ್ಯಾ?
ಪ್ರತಿನಿತ್ಯ ಬ್ಲಾಕ್ ಕಾಫಿ ಸೇವನೆ ಮಾಡುವವರು ಈ ಸ್ಟೋರಿ ಓದಲೇಬೇಕು
ಈ ಒಂದು ಸಣ್ಣ ಅಭ್ಯಾಸ ರೂಡಿಸಿಕೊಂಡ್ರೆ ಮಲಬದ್ಧತೆ ಸಮಸ್ಯೆನೇ ಬರಲ್ಲ
ವಿಟಮಿನ್ ಡಿ ಕೊರತೆ ಆದ್ರೆ ನಿಮ್ಮ ಮುಖದಲ್ಲಿ ಈ ಲಕ್ಷಣಗಳು ಕಂಡು ಬರುತ್ತೆ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಮಳೆಗಾಲದಲ್ಲಿ ಸೋಂಕುಗಳು ಮತ್ತು ವೈರಲ್ ರೋಗಗಳ ಅಪಾಯ ಹೆಚ್ಚಾಗಿ ಕಂಡುಬರುತ್ತದೆ. ಇಂತಹ ಪರಿಸ್ಥಿತಿಗಳಲ್ಲಿ, ಹೀರೆಕಾಯಿಯಂತಹ ಹಸಿರು ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿರುತ್ತದೆ. ಹೀರೆಕಾಯಿಯಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅವು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ ಮತ್ತು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಂದ ದೇಹವನ್ನು ರಕ್ಷಿಸುತ್ತವೆ. ಪರಿಣಾಮವಾಗಿ, ರೋಗಗಳ ಅಪಾಯ ಕಡಿಮೆಯಾಗುತ್ತದೆ.

ಜೀರ್ಣಕ್ರಿಯೆಗೆ ಒಳ್ಳೆಯದು

ಮಳೆಗಾಲದಲ್ಲಿ ಜೀರ್ಣಶಕ್ತಿ ದುರ್ಬಲಗೊಳ್ಳುವುದು ಸಾಮಾನ್ಯ. ಆದರೆ, ಹೀರೆಕಾಯಿ ತಿನ್ನುವುದರಿಂದ ಜೀರ್ಣಕ್ರಿಯೆ ಬಲಗೊಳ್ಳುತ್ತದೆ. ಪರಿಣಾಮವಾಗಿ, ಹೊಟ್ಟೆಯಲ್ಲಿ ಭಾರವಿರುವುದಿಲ್ಲ. ಇದರಲ್ಲಿರುವ ನಾರು ಮಲಬದ್ಧತೆ, ಗ್ಯಾಸ್ ಮತ್ತು ವಾಯು ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ.

ತೂಕ ಕಡಿಮೆ ಮಾಡಿಕೊಳ್ಳಲು ಸಹಕಾರಿ

ಇತ್ತೀಚಿನ ದಿನಗಳಲ್ಲಿ ಅನೇಕರು ಬೊಜ್ಜಿನಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದನ್ನು ಯಾವುದೇ ರೀತಿಯ ಕಷ್ಟವಿಲ್ಲದೆ ಕಡಿಮೆ ಮಾಡಲು ಹೀರೆಕಾಯಿ ಸೇವನೆ ಮಾಡಬೇಕು. ಇದು ಕಡಿಮೆ ಕ್ಯಾಲೋರಿಮತ್ತು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದ್ದು ಜೀರ್ಣಕ್ರಿಯೆಗೆ ನೆರವಾಗುತ್ತದೆ. ಈ ಕಾರಣದಿಂದಾಗಿ, ಇದು ತೂಕ ಇಳಿಸಿಕೊಳ್ಳಲು ಪ್ರಯೋಜನಕಾರಿಯಾಗಿದೆ. ಇದನ್ನು ತಿನ್ನುವುದರಿಂದ ದೀರ್ಘಕಾಲದ ವರೆಗೆ ಹಸಿವಾಗುವುದಿಲ್ಲ ಇದರಿಂದ ಅತಿಯಾಗಿ ತಿನ್ನುವ ಅಭ್ಯಾಸ ಕೂಡ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಈ ಆರೋಗ್ಯ ಸಮಸ್ಯೆ ಇರುವವರು ಸೋರೆಕಾಯಿಯಿಂದ ದೂರವಿದ್ದಷ್ಟೂ ಒಳ್ಳೆಯದು? ಯಾಕೆ ಗೊತ್ತಾ?

ಮಧುಮೇಹೀಗಳಿಗೆ ಒಳ್ಳೆಯದು

ಹೀರೆಕಾಯಿ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದ್ದು ಪರಿಣಾಮವಾಗಿ, ಹೀರೆಕಾಯಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಹಾಗಾಗಿ ಮಧುಮೇಹ ರೋಗಿಗಳಿಗೆ ಈ ತರಕಾರಿ ಸೇವನೆ ಬಹಳ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಹೆಚ್ಚಿನ ಫೈಬರ್ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಲಿವರ್ ಡಿಟಾಕ್ಸ್

ಯಕೃತ್ತು ನಮ್ಮ ದೇಹದ ಎರಡನೇ ಅತಿದೊಡ್ಡ ಅಂಗವಾಗಿದ್ದು ಈ ತರಕಾರಿ ಲಿವರ್ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಹೀರೆಕಾಯಿಯು ಯಕೃತ್ತನ್ನು ನಿರ್ವಿಷಗೊಳಿಸುವ ಮೂಲಕ ಅದರಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ