ಸೌತೆಕಾಯಿಯಿಂದ ಸಾಲ್ಮೊನೆಲ್ಲಾ ಸೋಂಕು, ಅಮೆರಿಕದಲ್ಲಿ ಕಟ್ಟೆಚ್ಚರ, ಸೌತೆ ಸೇವಿಸಿದಂತೆ ಸೂಚನೆ

ಅಮೆರಿಕದಲ್ಲಿ ಸಾಲ್ಮೊನೆಲ್ಲಾ ಸೋಂಕು ಹರಡುತ್ತಿದೆ. ಇದು ಸೌತೆಕಾಯಿದ ಹರಡುತ್ತಿದೆ ಎಂದು ಹೇಳಲಾಗಿದೆ, ಈ ಕಾರಣಕ್ಕೆ ದೇಶದಲ್ಲಿ ಸೌತೆಕಾಯಿಯನ್ನು ಮಾರಾಟ ಹಾಗೂ ಸೇವನೆಯನ್ನು ನಿಷೇಧ ಮಾಡಿದೆ, ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳು ಕಲುಷಿತ ಆಹಾರವನ್ನು ಸೇವಿಸಿದ 12 ರಿಂದ 72 ಗಂಟೆಗಳ ಒಳಗೆ ಅನಾರೋಗ್ಯಕ್ಕೆ ಕಾರಣವಾಗಬಹುದು ಎಂದು ಯುಎಸ್ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ತಿಳಿಸಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

ಸೌತೆಕಾಯಿಯಿಂದ ಸಾಲ್ಮೊನೆಲ್ಲಾ ಸೋಂಕು, ಅಮೆರಿಕದಲ್ಲಿ ಕಟ್ಟೆಚ್ಚರ, ಸೌತೆ ಸೇವಿಸಿದಂತೆ ಸೂಚನೆ
ಸೌತೆಕಾಯಿ

Updated on: May 25, 2025 | 4:43 PM

ಸೌತೆಕಾಯಿ (cucumbers) ಆರೋಗ್ಯವಂತ ತರಕಾರಿ ಎಂದು ಹೇಳಲಾಗುತ್ತದೆ. ಇದು ದೇಹವನ್ನು ತಂಪಾಗಿರಿಸುತ್ತದೆ. ಆದರೆ ಅಮೆರಿಕದಲ್ಲಿ ಈ ಸೌತೆಕಾಯಿ ತಿಂದ ಅನೇಕರು ಅಸ್ವಸ್ಥರಾಗಿದ್ದಾರೆ. ಅಮೆರಿಕದಲ್ಲಿ ಸಾಲ್ಮೊನೆಲ್ಲಾ ಸೋಂಕು (Salmonella) ಹರಡುತ್ತಿದೆ. ಇದು ಸೌತೆಕಾಯಿಯಿಂದ ಹರಡುತ್ತಿದೆ ಎಂದು ಹೇಳಲಾಗಿದೆ, ಈ ಕಾರಣಕ್ಕೆ ದೇಶದಲ್ಲಿ ಸೌತೆಕಾಯಿಯನ್ನು ಮಾರಾಟ ಹಾಗೂ ಸೇವನೆಯನ್ನು ನಿಷೇಧ ಮಾಡಿದೆ, ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳು ಕಲುಷಿತ ಆಹಾರವನ್ನು ಸೇವಿಸಿದ 12 ರಿಂದ 72 ಗಂಟೆಗಳ ಒಳಗೆ ಅನಾರೋಗ್ಯಕ್ಕೆ ಕಾರಣವಾಗಬಹುದು ಎಂದು ಯುಎಸ್ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ತಿಳಿಸಿದೆ. ಸೋಂಕು ಅತಿಸಾರ, ಜ್ವರ ಮತ್ತು ಹೊಟ್ಟೆಯ ಸೆಳೆತಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ. ಬಾಧಿತ ಸೌತೆಕಾಯಿಗಳನ್ನು ಏಪ್ರಿಲ್ 29 ಮತ್ತು ಮೇ 19 ಹೆಚ್ಚು ಮಾರಾಟವಾಗಿದೆ ಎಂದು ಹೇಳಲಾಗಿದೆ. ಇದರಿಂದಲ್ಲೇ ಈ ಸೋಂಕು ಹರಡಿದೆ ಎಂದು ಹೇಳಲಾಗಿದೆ.

ಅಮೆರಿಕದಲ್ಲಿ ಇಲ್ಲಿಯವರೆಗೆ 15 ರಾಜ್ಯಗಳಲ್ಲಿ ಏಕಾಏಕಿ 26 ಜನರು ಅಸ್ವಸ್ಥರಾಗಿದ್ದಾರೆ. ಒಂಬತ್ತು ಜನರಿಗೆ ಆಸ್ಪತ್ರೆಗೆ ದಾಖಲಾಗಿದೆ. ಈ ಬಗ್ಗೆ ತನಿಖೆ ಮಾಡಲಾಗಿದ್ದು, ಇದರಲ್ಲಿ 13 ಜನರಲ್ಲಿ 11 ಜನರು ಸೌತೆಕಾಯಿಗಳನ್ನು ತಿಂದಿದ್ದಾರೆ, ಫ್ಲೋರಿಡಾದಲ್ಲಿ ಬೆಡ್ನರ್ ಗ್ರೋವರ್ಸ್​​ಗಳಲ್ಲಿ ಬೆಳೆದ ಸೌತೆಕಾಯಿಗಳನ್ನು ಫ್ರೆಶ್ ಸ್ಟಾರ್ಟ್ ಪ್ರೊಡ್ಯೂಸ್ ಸೇಲ್ಸ್, ಚಿಲ್ಲರೆ ಅಂಗಡಿಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ಮಳಿಗೆಗಳಿಗೆ ಮಾರಾಟ ಮಾಡಲಾಗಿದೆ. ಹಲವಾರು ಜನರು ಸೌತೆಕಾಯಿಗಳನ್ನು ತಿಂದಿದ್ದಾರೆ ಎಂದು ಸಿಡಿಸಿ ಹೇಳಿದೆ. ಎಫ್‌ಡಿಎ ಪ್ರಕಾರ, ಅಲಬಾಮಾ, ಓಹಿಯೋ ಮತ್ತು ಪೆನ್ಸಿಲ್ವೇನಿಯಾ ಸೇರಿದಂತೆ ಇತರ ಪೀಡಿತ ರಾಜ್ಯಗಳಿವೆ ಎಂದು ಹೇಳಿದೆ.

ಕಳೆದ ತಿಂಗಳು ಸೌತೆಕಾಯಿ ತೋಟದಲ್ಲಿ ಈ ಬಗ್ಗೆ ತಪಾಸಣೆ ಮಾಡಲಾಗಿದೆ. ಈ ಸಮಯದಲ್ಲಿ ಸಾಲ್ಮೊನೆಲ್ಲಾ ಪತ್ತೆಯಾಗಿದೆ ಎಂದು FDA ತಿಳಿಸಿದೆ. ತನಿಖಾಧಿಕಾರಿಗಳು ಬೆಡ್ನರ್ ಗ್ರೋವರ್ಸ್, ಇಂಕ್ ನಿಂದ ಪರಿಸರ ಮಾದರಿಯನ್ನು ಸಂಗ್ರಹಿಸಿದ್ದರು. ಇದರ ಜತೆಗೆ ಸೋಂಕಿತ ವ್ಯಕ್ತಿಗಳಿಂದ ಕೂಡ ಮಾದರಿಯನ್ನು ಸಂಗ್ರಹ ಮಾಡಲಾಗಿದೆ. ಇನ್ನು ಈ ಸೋಂಕುಗಳು ಹೇಗೆ ಬರುತ್ತದೆ ಎಂಬುದನ್ನು ತಿಳಿಸಿದೆ. ಜನರು ಕಲುಷಿತ ಆಹಾರ ಅಥವಾ ನೀರಿನ ಮೂಲಕ ಅಥವಾ ಪ್ರಾಣಿಗಳ ಸಂಪರ್ಕ, ಅವುಗಳ ಮಲ ಅಥವಾ ಅವುಗಳ ವಾಸಸ್ಥಳದ ಮೂಲಕ ಸಾಲ್ಮೊನೆಲ್ಲಾ ಸೋಂಕಿಗೆ ಒಳಗಾಗಬಹುದು. ಭಾರತದಲ್ಲಿ ಈ ಸೋಂಕು ಬರುವ ಬಗ್ಗೆ ಯಾವುದೇ ವರದಿ ಬಂದಿಲ್ಲ, ಆದರೆ ಮುನ್ನಚ್ಚರಿಕೆ ವಹಿಸುವುದು ಸೂಕ್ತ ಎಂದು ಹೇಳಲಾಗಿದೆ.

ಇದನ್ನೂ ಓದಿ: ಸಂಜೆ ಸಮಯದಲ್ಲಿ ಕಾಲಿನಲ್ಲಿ ಕಂಡು ಬರುವ ಈ ಲಕ್ಷಣವನ್ನು ನಿರ್ಲಕ್ಷಿಸಬೇಡಿ, ಇದು ಕಿಡ್ನಿ ಡ್ಯಾಮೇಜ್ ಆಗಿರುವ ಸೂಚನೆ

ಸೌತೆಕಾಯಿ ಖರೀದಿಸುವಾಗ ಈ ವಿಚಾರಗಳು ತಿಳಿದಿರಲಿ:

ಸೌತೆಕಾಯಿ ತೆಗೆದುಕೊಂಡ ನಂತರ ಅದನ್ನು ಚೆನ್ನಾಗಿ ತೊಳೆದು ತಿನ್ನಿ.

ಅದು ಸ್ಪಲ್ಪ ಹಾಳಾಗಿದ್ದರೆ ಅದನ್ನು ತಿನ್ನಬೇಡಿ.

ಸೌತೆಕಾಯಿಯನ್ನು ಬಿಸಿನೀರಿನಿಂದ ತೊಳೆದು ತಿನ್ನಿ.

ಒಂದು ವೇಳೆ ಈ ಸೌತೆಕಾಯಿಯಿಂದ ಈ ಸೋಂಕು ಬಂದರೆ ತಕ್ಷಣ ವೈದ್ಯರನ್ನು ತಕ್ಷಣ ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ