Scorpion Venom : ಚೇಳಿನ ವಿಷಕ್ಕೆ ಭಾರಿ ಬೇಡಿಕೆ, 1 ಲೀಟರ್​ಗೆ ಬರೋಬ್ಬರಿ 80 ಕೋಟಿ ರೂ.

ಚೇಳು ವಿಷಕಾರಿ ಪ್ರಾಣಿಗಳಲ್ಲಿ ಒಂದು, ಇವುಗಳಲ್ಲಿ 2000 ಜಾತಿಗಳಿವೆ, ಚೇಳು ನಿಮಗೆ ಕಚ್ಚಿದರೆ, ನೀವು ಸಾಮಾನ್ಯವಾಗಿ ಸಾಯುವುದಿಲ್ಲ, ಆದರೆ ನೀವು ನೋವಿನಿಂದ ಬಳಲುತ್ತೀರಿ.

Scorpion Venom : ಚೇಳಿನ ವಿಷಕ್ಕೆ ಭಾರಿ ಬೇಡಿಕೆ, 1 ಲೀಟರ್​ಗೆ ಬರೋಬ್ಬರಿ 80 ಕೋಟಿ ರೂ.
Scorpion
Follow us
TV9 Web
| Updated By: ನಯನಾ ರಾಜೀವ್

Updated on: Aug 19, 2022 | 10:52 AM

ಚೇಳು ವಿಷಕಾರಿ ಪ್ರಾಣಿಗಳಲ್ಲಿ ಒಂದು, ಇವುಗಳಲ್ಲಿ 2000 ಜಾತಿಗಳಿವೆ, ಚೇಳು ನಿಮಗೆ ಕಚ್ಚಿದರೆ, ನೀವು ಸಾಮಾನ್ಯವಾಗಿ ಸಾಯುವುದಿಲ್ಲ, ಆದರೆ ನೀವು ನೋವಿನಿಂದ ಬಳಲುತ್ತೀರಿ. ಯಾವುದೇ ವಾತಾವರಣದಲ್ಲಿ ಬದುಕುವ ಚೇಳು, ವರ್ಷಕ್ಕೊಮ್ಮೆ ತಿಂದು ಬದುಕುತ್ತದೆ. ಆಹಾರ ಸಿಗದಿದ್ದರೆ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಆಕಾರ ಮಾತ್ರ ವಿಚಿತ್ರವಲ್ಲ.. ಬದುಕಿನ ದಾರಿಯೂ ವಿಚಿತ್ರ. ಆದರೆ ಈ ಚೇಳಿನ ವಿಷವು ವಿಶ್ವದ ಅತ್ಯಂತ ದುಬಾರಿ ವಿಷಗಳಲ್ಲಿ ಒಂದಾಗಿದೆ.

ಔಷಧಗಳನ್ನು ಚೇಳಿನ ವಿಷದಿಂದ ತಯಾರಿಸಲಾಗುತ್ತದೆ. ಚೇಳಿನ ವಿಷವು ನಮ್ಮ ಕೆಲವು ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ. ಹಾಗಾಗಿಯೇ ಚೇಳಿನ ವಿಷಕ್ಕೆ ಹೆಚ್ಚಿನ ಬೇಡಿಕೆಯಿದೆ. ಸದ್ಯ ಒಂದು ಗ್ರಾಂ ಚೇಳಿನ ವಿಷ 80 ಸಾವಿರದವರೆಗೆ ಮಾರಾಟವಾಗುತ್ತಿದೆ.

ಅಂದರೆ ಲೀಟರ್ ಚೇಳಿನ ವಿಷದ ಬೆಲೆ ರೂ. 80 ಕೋಟಿ. ಇದು ವಿಶ್ವದ ಅತ್ಯಂತ ದುಬಾರಿ ವಿಷ ಎಂಬ ಮನ್ನಣೆಯನ್ನು ಗಳಿಸಿದೆ. ಇದರಿಂದಾಗಿ ಟರ್ಕಿಯ ಲ್ಯಾಬ್‌ಗಳಲ್ಲಿ ಚೇಳುಗಳನ್ನು ಸಾಕಲಾಗುತ್ತಿದೆ.

ಟರ್ಕಿಯ ಪ್ರಯೋಗಾಲಯವು ದಿನಕ್ಕೆ 2 ಗ್ರಾಂ ವಿಷವನ್ನು ಚೇಳುಗಳಿಂದ ಸಂಗ್ರಹಿಸುತ್ತದೆ. ಚೇಳುಗಳನ್ನು ಪೆಟ್ಟಿಗೆಗಳಿಂದ ಹೊರತೆಗೆಯಲಾಗುತ್ತದೆ ಮತ್ತು ವಿಷವನ್ನು ವಿಶೇಷ ವಿಧಾನಗಳಲ್ಲಿ ಸಂಗ್ರಹಿಸಲಾಗುತ್ತದೆ.

ನಂತರ ವಿಷವನ್ನು ಫ್ರೀಜ್ ಮಾಡಿ ಪುಡಿ ಮಾಡಿ ಮಾರಾಟ ಮಾಡಲಾಗುತ್ತದೆ. ಚೇಳುಗಳಿಂದ ವಿಷವನ್ನು ಹೊರತೆಗೆಯುವ ಪ್ರಕ್ರಿಯೆಯನ್ನು ಚೇಳು ತಳಿಯ ಮಾಲೀಕರಾದ ಮೆಟಿನ್ ಒರಿನ್ಲರ್ ವಿವರಿಸಿದ್ದಾರೆ.

ಚೇಳುಗಳಿಂದ ಸಂಗ್ರಹಿಸಿದ ವಿಷವನ್ನು ಮೊದಲು ಘನೀಕರಿಸಲಾಗುತ್ತದೆ , ಹೆಪ್ಪುಗಟ್ಟಿದ ವಿಷವನ್ನು ಪುಡಿಯಾಗಿ ಪರಿವರ್ತಿಸಿ ಮಾರಾಟ ಮಾಡುತ್ತಾರೆ ಎನ್ನಲಾಗಿದೆ.

ಈ ಚೇಳಿನ ವಿಷವನ್ನು ಪ್ರತಿಜೀವಕಗಳು, ಸೌಂದರ್ಯವರ್ಧಕಗಳು, ನೋವು ನಿವಾರಕಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಒಂದು ಚೇಳು 2 ಮಿಲಿಗ್ರಾಂ ವಿಷವನ್ನು ಹೊಂದಿರುತ್ತದೆ. “ಸಾಮಾನ್ಯವಾಗಿ ನಾವು 300-400 ಚೇಳುಗಳಿಂದ ಒಂದು ಗ್ರಾಂ ವಿಷವನ್ನು ಸಂಗ್ರಹಿಸುತ್ತೇವೆ ಎಂದು ಮೆಟಿನ್ ಹೇಳುತ್ತಾರೆ.

ಚೇಳಿನ ವಿಷವು ಘಟಕಗಳನ್ನು ಒಳಗೊಂಡಿದೆ. ಇದರಿಂದ ಅಡ್ಡ ಪರಿಣಾಮಗಳಿಲ್ಲದೆ ಸಂಧಿವಾತವನ್ನು ಕಡಿಮೆ ಮಾಡಬಹುದು ಎಂದು ಅಮೆರಿಕದ ಬೇಲರ್ ಕಾಲೇಜ್ ಆಫ್ ಮೆಡಿಸಿನ್ ನಡೆಸಿದ ಸಂಶೋಧನೆಯಲ್ಲಿ ಗೊತ್ತಾಗಿದೆ. ಸಂಧಿವಾತ (ರುಮಟಾಯ್ಡ್ ಸಂಧಿವಾತ) ಮತ್ತು ವೃದ್ಧಾಪ್ಯದಲ್ಲಿ ಕೀಲು ನೋವು ಕಡಿಮೆಯಾಗುತ್ತದೆ.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ