Breast Cancer: ಯುವತಿಯರಲ್ಲಿ ಕಂಡುಬರುವ ಸ್ತನ ಕ್ಯಾನ್ಸರ್​ನ ಗುಣಲಕ್ಷಣ, ತಡೆಗಟ್ಟುವಿಕೆ ಕ್ರಮ ಏನು? ಇಲ್ಲಿದೆ ತಜ್ಞರ ಸಲಹೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 06, 2023 | 3:09 PM

ಹೆಚ್ಚಿನ ಯುವತಿಯರು ತಮಗೆ ಸ್ತನ ಕ್ಯಾನ್ಸರ್ ಅಪಾಯವಿಲ್ಲ ಎಂದು ಭಾವಿಸುತ್ತಾರೆ. ಆದರೂ ಸ್ತನ ಕ್ಯಾನ್ಸರ್ ಯಾವುದೇ ವಯಸ್ಸಿನಲ್ಲಿ ಯಾವುದೇ ಮಹಿಳೆಗೂ ಬರಬಹುದು. ಮತ್ತು ಅದರ ರೋಗಲಕ್ಷಣವನ್ನು ಪರೀಕ್ಷಿಸುವುದು ಮತ್ತು ಆ ಕಾಯಿಲೆಯ ತಡೆಗಟ್ಟುವಿಕೆಯ ಬಗ್ಗೆ ತಿಳಿದುಕೊಳ್ಳುವುದು ಯಾವಾಗಲೂ ಒಳ್ಳೆಯದು.

Breast Cancer: ಯುವತಿಯರಲ್ಲಿ ಕಂಡುಬರುವ ಸ್ತನ ಕ್ಯಾನ್ಸರ್​ನ ಗುಣಲಕ್ಷಣ, ತಡೆಗಟ್ಟುವಿಕೆ ಕ್ರಮ ಏನು? ಇಲ್ಲಿದೆ ತಜ್ಞರ ಸಲಹೆ
ಸಾಂದರ್ಭಿಕ ಚಿತ್ರ
Follow us on

ಸ್ತನ ಕ್ಯಾನ್ಸರ್ (Breast Cancer) ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಇದರ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಇದರ ರೋಗ ನಿರ್ಣಯವು ಸಾಕಷ್ಟು ಸವಾಲಿನ ಸಂಗತಿಯಾಗಿದೆ. ಮುಖ್ಯವಾಗಿ ಕಿರಿಯ ವಯಸ್ಸಿನ ಮಹಿಳೆಯರು ಸಾಮಾನ್ಯವಾಗಿ ವಯಸ್ಸಾದ ಮಹಿಳೆಯರಿಗಿಂತ ದಟ್ಟವಾದ ಸ್ತನ ಅಂಗಾಂಶವನ್ನು ಹೊಂದಿರುತ್ತಾರೆ. ವಾಸ್ತವವಾಗಿ, 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವತಿ ತನ್ನ ಸ್ತನದಲ್ಲಿ ಗಡ್ಡೆಯನ್ನು ಹೊಂದಿದರೆ ಅದು ಸ್ತನ ಕ್ಯಾನ್ಸರ್‌ಗೂ ಕೂಡಾ ಕಾರಣವಾಗಬಹುದು. ಹೆಚ್ಚಿನ ಯುವತಿಯರು ತಮಗೆ ಸ್ತನ ಕ್ಯಾನ್ಸರ್‌ನ ಅಪಾಯವಿಲ್ಲ ಎಂದು ಭಾವಿಸುತ್ತಾರೆ. ಆದರೂ ಸ್ತನ ಕ್ಯಾನ್ಸರ್ ಯಾವ ವಯಸ್ಸಿನ ಮಹಿಳೆಗೂ ಬರಬಹುದು. ಸ್ತನ ಕ್ಯಾನ್ಸರ್‌ನ ಅಪಾಯಕಾರಿ ಅಂಶಗಳ ಬಗ್ಗೆ ಪ್ರತಿಯೊಬ್ಬ ಮಹಿಳೆಯು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ಸ್ತನ ಕ್ಯಾನ್ಸರ್‌ನ ಅಪಾಯಕಾರಿ ಅಂಶಗಳು

ಮಹಿಳೆಯಲ್ಲಿ ಸ್ತನ ಕ್ಯಾನ್ಸರ್ ಅಥವಾ ಇತರ ಕ್ಯಾನ್ಸರ್ ಅಲ್ಲದ ಸ್ತನ ಕಾಯಿಲೆಯ ಹಿನ್ನಲೆ ಇದ್ದರೂ, ನಂತರದಲ್ಲಿ ಸ್ತನ ಕ್ಯಾನ್ಸರ್ ಬರಬಹುದು. ತಾಯಿ, ಮಗಳು, ಸಹೋದರಿ ಹೀಗೆ ಸಂಬಂಧದಲ್ಲಿ ಸ್ತನ ಕ್ಯಾನ್ಸರ್ ಹಿನ್ನಲೆ ಹೊಂದಿದ್ದರೆ, ಆ ಕುಟುಂಬದ ಇನ್ನೊಂದು ಮಹಿಳೆಗೂ ಸ್ತನ ಕ್ಯಾನ್ಸರ್ ಉಂಟಾಗಬಹುದು.

40ವರ್ಷಕ್ಕಿಂತ ಮೊದಲು ಎದೆಯ ವಿಕಿರಣ ಚಿಕಿತ್ಸೆಯ ಹಿನ್ನಲೆ ಹೊಂದಿದ್ದರೆ, ಅಂತಹ ಮಹಿಳೆಗೂ ಕ್ಯಾನ್ಸರ್ ಬರಬಹುದು.
BRCA1 ಅಥವಾ BRCA2 ರೂಪಾಂತರದಂತಹ ನಿರ್ದಿಷ್ಟ ಅನುವಂಶಿಕ ಕಾಯಿಲೆಯಿಂದ ಪ್ರಭಾವಿತರಾಗಿದ್ದರು, ಈ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಸ್ತನ ಕ್ಯಾನ್ಸರ್ ಅಪಾಯಕಾರಿ ಕಾಯಿಲೆಯಾಗಿದೆ ಮತ್ತು ಕಿರಿಯ ವಯಸ್ಸಿನ ಮಹಿಳೆಯರಲ್ಲಿ ಈ ಕಾಯಿಲೆ ಕಂಡು ಬಂದರೆ ಅದು ಚಿಕಿತ್ಸೆಗೆ ಪ್ರತಿಕ್ರಿಯಿಸುವ ಸಾಧ್ಯತೆ ಕಡಿಮೆ ಇರುತ್ತದೆ. ಸ್ತನ ಕ್ಯಾನ್ಸರ್‌ನ ತಡವಾದ ರೋಗನಿರ್ಣಯವು ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು. ಅನೇಕ ಕಿರಿಯ ವಯಸ್ಸಿನ ಮಹಿಳೆಯರು ಸ್ತನಕ್ಯಾನ್ಸರ್ ಎಚ್ಚರಿಕೆಯ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಏಕೆಂದರೆ ಅವರು ನಾವು ಚಿಕ್ಕ ವಯಸ್ಸಿನವರು ನಮಗೆ ಆ ಕಾಯಿಲೆ ಬರಲು ಸಾಧ್ಯವಿಲ್ಲ ಎಂದು ಭಾವಿಸುತ್ತಾರೆ.

ಯುವತಿಯರಲ್ಲಿ ಸ್ತನ ಕ್ಯಾನ್ಸರ್ ಪರೀಕ್ಷೆ

ಡಿಆರ್‌ಎವಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಆಫ್ ಪರ್ಸನಲ್‌ನೈಸ್ಡ್ ಕ್ಯಾನ್ಸರ್ ಥೆರಪಿ ಹಾಗೂ ರಿಸರ್ಚ್ ಮಾಲಿಕ್ಯುಲರ್ ಆಕೊಲಾಜಿಸ್ಟ್ ಡಾ. ಅಮಿತ್ ವರ್ಮಾ ಅವರು ಸ್ತನ ಕ್ಯಾನ್ಸರ್‌ನ ತಪಾಸಣೆ ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.

20 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಕನಿಷ್ಟ ಮೂರು ವರ್ಷಗಳಿಗೊಮ್ಮೆ ವೈದ್ಯರ ಬಳಿ ಹೋಗಿ ಸ್ತನ ಪರೀಕ್ಷೆ ಮಾಡಿಸಿಕೊಳ್ಳಬೇಕು. 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ ನಿಯಮಿತ ಮ್ಯಾಮೊಗ್ರಾಮ್‌ಗಳನ್ನು ಸಾಮಾನ್ಯವಾಗಿ ಸಲಹೆ ಮಾಡುವುದಿಲ್ಲ. ಏಕೆಂದರೆ ಸ್ತನ ಅಂಗಾಂಶವು ದಪ್ಪವಾಗಿರುತ್ತದೆ ಮತ್ತು ಮ್ಯಾಮೊಗ್ರಫಿಯು ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ.

ಡಿಜಿಟಲ್ ಮ್ಯಾಮೊಗ್ರಫಿ ಚಿಕ್ಕ ವಯಸ್ಸಿನ ಮಹಿಳೆಯರಿಗೆ ಸಾಂಪ್ರದಾಯಿಕ ಮ್ಯಾಮೊಗ್ರಾಮ್‌ಗೆ ಪರ್ಯಾಯಾವಾಗಬಹುದು. ದಟ್ಟವಾದ ಸ್ತನ ಅಂಗಾಂಶದೊಂದಿಗೆ ಡಿಜಿಟಲ್ ಮ್ಯಾಮೊಗ್ರಫಿಯು ಅಸಹಜತೆಗಳನ್ನು ಪತ್ತೆಹಚ್ಚಲು ಉತ್ತಮವಾಗಿ ಸಾಧ್ಯವಾಗುತ್ತದೆ.

ಯುವತಿಯರಲ್ಲಿ ಸ್ತನ ಕ್ಯಾನ್ಸರ್ ಚಿಕಿತ್ಸೆ

ಸ್ತನ ಕ್ಯಾನ್ಸರ್‌ಗೆ ಉತ್ತಮ ಚಿಕಿತ್ಸಾ ಕ್ರಮಗಳನ್ನು ನಿರ್ಧರಿಸುವಾಗ ಕ್ಯಾನ್ಸರ್ ಹರಡುವಿಕೆಯ ಪ್ರಮಾಣ, ಮಹಿಳೆಯ ಸಾಮಾನ್ಯ ಆರೋಗ್ಯ ಮತ್ತು ಆಕೆಯ ವೈಯಕ್ತಿಕ ಸಂದರ್ಭಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಚಿಕಿತ್ಸೆಯ ಆಯ್ಕೆಗಳು:

ಶಸ್ತ್ರ ಚಿಕಿತ್ಸೆ: ಇದು ಸ್ತನಛೇದನವನ್ನು ಒಳಗೊಂಡಿರುತ್ತದೆ. ಇದು ಸ್ತನವನ್ನು ತೆಗೆಯುವುದು ಅಥವಾ ಲುಂಪೆಕ್ಟಮಿ ಕ್ರಿಯೆ ಆಗಿದೆ. ಇದು ಸ್ತನದ ಗಡ್ಡೆ ಮತ್ತು ಕೆಲವು ಸುತ್ತಮುತ್ತಲಿನ ಅಂಗಾಂಶಗಳನ್ನು ತೆಗೆದುಹಾಕುವುದನ್ನು ಒಳಗೊಂಡಿರುತ್ತದೆ.

ಲಂಪೆಕ್ಟಮಿಯನ್ನು ಅನುಸರಿಸಿ, ವಿಕಿರಣವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ ಮತ್ತು ಹಾರ್ಮೋನ್ ಚಿಕಿತ್ಸೆ ಮತ್ತು ಕೀಮೋಥೆರಪಿಯನ್ನು ಇನ್ನೂ ಅಸ್ತಿತ್ವದಲ್ಲಿರುವ ಯಾವುದೇ ಕ್ಯಾನ್ಸರ್ ಕೋಶಗಳನ್ನು ನಿರ್ಮೂಲನೆ ಮಾಡಲು ಮತ್ತು ಮರುಕಳಿಸುವಿಕೆಯನ್ನು ತಡೆಯಲು ಸಹಾಯ ಮಾಡಲು ಸಲಹೆ ನೀಡುತ್ತದೆ.

ಸ್ತನ ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ಮಹಿಳೆಯ ಲೈಂಗಿಕತೆ, ಫಲವತ್ತತೆ ಮತ್ತು ಗರ್ಭಧಾರಣೆಯ ಮೇಲೆ ಪರಿಣಾಮ ಬೀರಬಹುದು. ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು, ನೀವು ಮಕ್ಕಳು ಮಾಡಿಕೊಳ್ಳಲು ಬಯಸಿದರೆ ನಿಮ್ಮ ವೈದ್ಯರೊಂದಿಗೆ ಚರ್ಚಿಸಿ.

ಇದನ್ನೂ ಓದಿ: Breast Cancer: ಸ್ತನ ಕ್ಯಾನ್ಸರ್ ಚಿಕಿತ್ಸೆ ನಂತರದ ಆರೋಗ್ಯಕರ ಜೀವನಕ್ಕೆ ಇಲ್ಲಿದೆ ಸಲಹೆಗಳು

ಯುವತಿಯರಲ್ಲಿ ಸ್ತನ ಕ್ಯಾನ್ಸರ್ ತಡೆಗಟ್ಟುವಿಕೆ

ಎಲ್ಲಾ ಮಹಿಳೆಯರು ಈ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು.

1. ಆರೋಗ್ಯಕರ ತೂಕವನ್ನು ಹೊಂದುವುದು ಮತ್ತು ಅದೇ ತೂಕವನ್ನು ಕಾಪಾಡಿಕೊಳ್ಳುವುದು.

2. ಆಲ್ಕೋಹಾಲ್ ಸೇವನೆಯನ್ನು ನಿರ್ಬಂಧಿಸುವುದು

3. ನಿಯಮಿತ ವ್ಯಾಯಾಮಗಳನ್ನು ಮಾಡುವುದು

4. ಸ್ತನ್ಯಪಾನ

Published On - 2:54 pm, Thu, 6 April 23