Sign In

By signing in or creating an account, you agree with Associated Broadcasting Company's Terms & Conditions and Privacy Policy.

Side Effects of Milk: ನೀವು ಕುಡಿಯುವ ಹಾಲು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು

ನೀವು ಕುಡಿಯುವ ಹಾಲು ಶೀತ, ಆಯಾಸ, ಉರಿಯೂತ ಮತ್ತು ಟೈಪ್ 2 ಮಧುಮೇಹದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರಾದ ಅಂಜಲಿ ಮುಖರ್ಜಿ ಹೇಳುತ್ತಾರೆ.

Side Effects of Milk: ನೀವು ಕುಡಿಯುವ ಹಾಲು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು
ಸಾಂದರ್ಭಿಕ ಚಿತ್ರ
Follow us
ಅಕ್ಷತಾ ವರ್ಕಾಡಿ
|

Updated on:Jan 26, 2023 | 10:36 AM

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಹಾಗೆ ಹಾಲು(Milk) ಆರೋಗ್ಯಕ್ಕೆ ಉತ್ತಮ. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ನಿಮ್ಮ ಮೂಳೆಗಳನ್ನು ಬಲಗೊಳಿಸುತ್ತದೆ. ಆದರೆ ನೀವು ಹಾಲು ಕುಡಿಯುವುದರಿಂದ ಅನಾರೋಗ್ಯಕ್ಕೂ ಕಾರಣವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ನೀವು ಕುಡಿಯುವ ಹಾಲು ಶೀತ, ಆಯಾಸ, ಉರಿಯೂತ ಮತ್ತು ಟೈಪ್ 2 ಮಧುಮೇಹದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.ಅನೇಕ ಅಧ್ಯಯನಗಳು ಹಾಲು ತೂಕನಷ್ಟಕ್ಕೆ ಸಹಾಯಕವಾಗಿದೆ ಮತ್ತು ದೃಢವಾದ ಮೂಳೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿವೆ.

ನೀವು ಕುಡಿಯುವ ಹಾಲು ಶೀತ, ಆಯಾಸ, ಉರಿಯೂತ ಮತ್ತು ಟೈಪ್ 2 ಮಧುಮೇಹದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರಾದ ಅಂಜಲಿ ಮುಖರ್ಜಿ ಹೇಳುತ್ತಾರೆ. ಹಾಲಿನಿಂದ ಯಾವ ರೀತಿ ದೇಹದ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂಜಲಿಯವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಮಾಹಿತಿ ಇಲ್ಲಿದೆ.

ಅಂಜಲಿಯವರ ಪ್ರಕಾರ ಸಾಮಾನ್ಯ ಹಸುವಿನ ಹಾಲಿನಲ್ಲಿ ಕಂಡುಬರುವ A1-ಬೀಟಾ-ಕೇಸಿನ್ ಎಂಬ ಪ್ರೋಟೀನ್​​ನಿಂದ ಕೆಲವು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಈ ಪ್ರೋಟೀನ್​​ಗಳು ಶೀತ, ಕಫ, ಸೈನಸ್, ಆಯಾಸ, ಉರಿಯೂತ, ದೇಹದ ಬಿಗಿತ, ಟೈಪ್ 2 ಮಧುಮೇಹ ಮತ್ತು ಇತರ ನರವೈಜ್ಞಾನಿಕ ಸಮಸ್ಯೆಗಳಂತಹ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ದೇಹದಲ್ಲಿ ವಿಟಮಿನ್ ಎ ಹೆಚ್ಚಿಸಲು ಈ ಆಹಾರ ಸೇವಿಸಿ

ಸಾಮಾನ್ಯ ಹಸುವಿನ ಹಾಲು ಎರಡು ರೀತಿಯ ಎ1 ಮತ್ತು ಎ2 ಬೀಟಾ-ಕೇಸೀನ್ ಹೊಂದಿರುತ್ತದೆ. ಇತ್ತೀಚೆಗೆ, ಮಾರಾಟವಾದ ಎ2 ಹಾಲು ಎ2 ಬೀಟಾ-ಕೇಸೀನ್ ಮಾತ್ರ ಹೊಂದಿರುತ್ತದೆ. ಆರೋಗ್ಯಕರ ಹಾಲಿನ ವೈಜ್ಞಾನಿಕ ಚರ್ಚೆಯು ಎ2 ಕ್ಯಾಸೀನ್‌ಗಿಂತ ಎ1 ಬೀಟಾ-ಕೇಸೀನ್ ಹೆಚ್ಚು ಹಾನಿಕಾರಕವಾಗಿದೆಯೇ ಎಂದು ತಿಳಿದು ಬಂದಿದೆ. 2019-ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ (NCBI) ವಿಮರ್ಶೆಯ ಪ್ರಕಾರ , ಅಕ್ಟೋಬರ್ 2017 ರ ಮೊದಲು ಪ್ರಕಟವಾದ ಕ್ಲಿನಿಕಲ್ ಪ್ರಯೋಗಗಳು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದ ಅಧ್ಯಯನಗಳಿಂದ ಮಾನವ-ಆಧಾರಿತ ಪುರಾವೆಗಳು ಎ2 ಬೀಟಾ-ಕೇಸಿನ್‌ಗೆ ಹೋಲಿಸಿದರೆ ಎ1 ಬೀಟಾ-ಕೇಸಿನ್‌ನ ಪ್ರತಿಕೂಲ ಜೀರ್ಣಕಾರಿ ಆರೋಗ್ಯ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ತಿಳಿದು ಬಂದಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 10:35 am, Thu, 26 January 23