ಮುಷ್ಕರ: ಬೆಂಗಳೂರಿನಲ್ಲಿ ಕೆಎಂಎಫ್ ನಂದಿನಿ ಹಾಲು ಪೂರೈಕೆಯಲ್ಲಿ ವ್ಯತ್ಯಯ
ಹಾಲು ಪೂರೈಕೆದಾರರಿಗೆ ಹೆಚ್ಚಿನ ಹಣ ನಿಗಧಿ ಮಾಡುವಂತೆ ಒತ್ತಾಯಿಸಿ ನಂದಿನಿ ಹಾಲು ಪೂರೈಕೆ ಮಾಡುವ ಲಾರಿ ಮಾಲೀಕರು ಹಾಗೂ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಂಗಳೂರು: ಕೆಎಂಎಫ್ನ ಬಮೂಲ್ ಹಾಲು(KMF Bamul Milk Supply) ಪೂರೈಕೆದಾರರಿಂದ ಮುಷ್ಕರ ಹಿನ್ನೆಲೆ ನಗರದಾದ್ಯಂತ ಕೆಎಂಎಫ್ ನಂದಿನಿ ಹಾಲು(Nandini MIlk) ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದಿದೆ. ಹಾಲು ಪೂರೈಕೆದಾರರಿಗೆ ಹೆಚ್ಚಿನ ಹಣ ನಿಗಧಿ ಮಾಡುವಂತೆ ಒತ್ತಾಯಿಸಿ ನಂದಿನಿ ಹಾಲು ಪೂರೈಕೆ ಮಾಡುವ ಲಾರಿ ಮಾಲೀಕರು ಹಾಗೂ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ನಿನ್ನೆ(ಜ.20) ಮಧ್ಯಾಹ್ನದಿಂದ ಡಿಸ್ಟಿಬ್ಯೂಟರ್ಸ್ ನಂದಿನಿ ಹಾಲು ಸಪ್ಲೈ ಸ್ಟಾಪ್ ಮಾಡಿದ್ದಾರೆ. ಅಲ್ಲದೆ ಕೆಎಂಎಫ್ ಮುಂದೆ ಹಾಲಿನ ಲಾರಿಗಳನ್ನ ನಿಲ್ಲಿಸಿ ಪ್ರತಿಭಟನೆ ನಡೆಸಲಾಗಿದೆ. 250 ಕ್ಕೂ ಹೆಚ್ಚು ಲಾರಿ ಮಾಲೀಕರು ಹಾಗೂ ಚಾಲಕರು ಸಪ್ಲೈ ಬಂದ್ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಒಂದು ಟ್ರಿಪ್ಗೆ ಬಮೂಲ್ 1000-1200 ರೂಪಾಯಿ ಪಾವತಿ ಮಾಡುತ್ತಿದೆ. ಆದ್ರೆ ಕಿಲೋಮೀಟರ್ ಆಧಾರದ ಮೇಲೆ ಪಾವತಿ ಹಣವನ್ನ ಹೆಚ್ಚಿಗೆ ಮಾಡುವಂತೆ ಒತ್ತಾಯಿಸಲಾಗಿದೆ. ಈ ಸಂಬಂಧ ಪೂರೈಕೆದಾರರು ಆರು ತಿಂಗಳಿಂದ ಬಮೂಲ್ ಗೆ ಪತ್ರದ ಮೂಲಕ ಮನವಿ ಮಾಡುತ್ತಿದ್ದಾರೆ. ಆದ್ರೂ ಕೆಎಂಎಫ್ ಟ್ರಿಪ್ ಹಣ ಹೆಚ್ಚಿಗೆ ಮಾಡಿಲ್ಲ.
ಇದನ್ನೂ ಓದಿ: ಅಮುಲ್ ಜತೆ ನಂದಿನಿ ವಿಲೀನ ಎನ್ನುವ ಅಮಿತ್ ಶಾ ಹೇಳಿಕೆ ಸುದ್ದಿಗೆ ಸ್ಪಷ್ಟನೆ ನೀಡಿದ ಸಿಎಂ ಬೊಮ್ಮಾಯಿ
ಕಳೆದ ಕೆಲ ದಿನಗಳಿಂದ ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿದ್ದು, ಅಗತ್ಯ ವಸ್ತುಗಳ ಬೆಲೆ ಕೂಡ ಹೆಚ್ಚಾಗಿದೆ. ಒಂದು ಟ್ರಿಪ್ಗೆ ಲಾರಿಗಳು ಸರಾಸರಿ 40 ಕಿಲೋಮೀಟರ್ ಸಂಚಾರ ಮಾಡುತ್ತವೆ. ಒಂದು ಲಾರಿನಲ್ಲಿ 450 ಕ್ರೇಟ್ ಇರಲಿದ್ದು, ಒಂದು ಕ್ರೇಟ್ ನಲ್ಲಿ 12 ಲೀಟರ್ ನಂದಿನಿ ಹಾಲಿನ ಸಾಗಾಟವಾಗುತ್ತೆ. ಸದ್ಯ ಹಲವು ಬೇಡಿಕೆಗೆ ಒತ್ತಾಯಿಸಿ ಲಾರಿ ಮಾಲೀಕರು ಬಮೂಲ್ ಹಾಲು ಸಪ್ಲೈ ನಿಲ್ಲಿಸಿದ್ದಾರೆ.
ಇನ್ನು ಎರಡು ದಿನಗಳ ಕಾಲ ಮುಷ್ಕರ ಮುಂದುವರಿಯಲಿದೆ. ಈ ಹಿನ್ನೆಲೆ ನಂದಿನಿ ಹಾಲಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಗ್ರಾಹಕರು ಸಹಕರಿಸಬೇಕು. ಈ ವ್ಯತ್ಯಯವು ಬೆಂಗಳೂರಿನಲ್ಲಿ ಹೆಚ್ಚಾಗಿದೆ’ ಎಂದು ನಂದಿನಿ ಹಾಲು ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.
ಲಾರಿ ಮಾಲೀಕರ ಬೇಡಿಕೆಗಳೇನು?
-ತೈಲ ಬೆಲೆ ಏರಿಕೆಗೆ ವಿರೋಧ -ಜಿಎಸ್‌ಟಿ ದರ ಏರಿಕೆ ವಿರೋಧ -ಸರಕು ಸಾಗಾಣಿಕೆ ವಾಹನಗಳಲ್ಲಿ ಎಸಿ ಅಳವಡಿಕೆಗೆ ವಿರೋಧ -ಪ್ರವಾಸಿ ವಾಹನಗಳಿಗೆ ನ್ಯಾಷನಲ್ ಪರವಾನಿಗೆ ನೀಡುವುದಕ್ಕೆ ವಿರೋಧ -ಇನ್ಶೂರೆನ್ಸ್ ಕಂಪನಿಗಳ ಥರ್ಡ್ ಪಾರ್ಟಿ ಪ್ರೀಮಿಯಂ ಏರಿಕೆಗೆ ವಿರೋಧ -15 ವರ್ಷದ ಹಳೆಯ ವಾಹನಗಳ ತಡೆಗೆ ಬ್ರೇಕ್ ನೀಡಬೇಕು -ಸಮರ್ಪಕ ಮರಳು ನೀತಿ ಜಾರಿಯಾಗಬೇಕು -ಸಾರಿಗೆ ಶುಲ್ಕ ಹೆಚ್ಚಳಕ್ಕೆ ವಿರೋಧ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:44 am, Sat, 21 January 23