ಬೆಂಗಳೂರಿಗರೇ ಎಚ್ಚರಾ! ಗುಂಡಿ ಗಂಡಾಂತರ ಮುಂದುವರೆದಿದೆ, ಇಟ್ಟುಮಡು ಮುಖ್ಯರಸ್ತೆಯಲ್ಲಿ ರಸ್ತೆ ಧಡಾರನೆ ಕುಸಿದುಬಿಟ್ಟಿದೆ
ಬೆಂಗಳೂರು ನಗರದಲ್ಲಿ ಗುಂಡಿಗಳ ಅವಾಂತರ ಮುಂದುವರೆದಿದೆ. ಮಾರುತಿನಗರದ ಇಟ್ಟುಮಡು ಮುಖ್ಯರಸ್ತೆಯಲ್ಲಿ BWSSB ಡ್ರೈನೇಜ್ ಚೇಂಬರ್ ಪಕ್ಕದಲ್ಲೇ ಶುಕ್ರವಾರ ರಾತ್ರಿ ಏಕಾಏಕಿ ರಸ್ತೆ ಕುಸಿದಿದೆ.
ಬೆಂಗಳೂರು: ಲಕ್ಷಾಂತರ ಮಂದಿಗೆ ಬದುಕು ಕಟ್ಟಿಕೊಟ್ಟ ಬೆಂಗಳೂರು ನಗರದಲ್ಲೀಗ ವಾಹನ ಸವಾರರಿಗೆ ಜೀವ ಭಯ ಕಾಡುತ್ತಿದೆ. ನಗರದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ಅವಘಡಗಳು ಸಂಭವಿಸುತ್ತಿವೆ. ಮೆಟ್ರೋ ಪಿಲ್ಲರ್ ದುರಂತದಿಂದ ತಾಯಿ ಮಗು ಸಾವನ್ನಪ್ಪಿದ್ದರು. ಬಳಿಕ ಮಹಾಲಕ್ಷ್ಮೀ ಲೇಔಟ್ ಮುಖ್ಯರಸ್ತೆಯಲ್ಲಿ ಬಿಬಿಎಂಪಿ ಕಳಪೆ ಕಾಮಗಾರಿಯಿಂದ ಏಕಾಏಕಿ ರಸ್ತೆ ಕುಸಿದಿತ್ತು. ಇದೀಗ ಅದೇ ರೀತಿ ಮತ್ತೊಂದು ಘಟನೆ ನಡೆದಿದೆ. ಮಾರುತಿನಗರದ ಇಟ್ಟುಮಡು ಮುಖ್ಯರಸ್ತೆಯಲ್ಲಿ BWSSB ಡ್ರೈನೇಜ್ ಚೇಂಬರ್ ಪಕ್ಕದಲ್ಲೇ ರಸ್ತೆ ಕುಸಿದಿದೆ. ಇದರಿಂದ ವಾಹನ ಸವಾರರು ಯಾವಾಗ ಏನು ಆಗುತ್ತೋ ಎಂಬ ಭಯದಲ್ಲೇ ಪ್ರಾಣ ಕೈಯಲ್ಲಿಡಿದು ವಾಹನ ಚಲಾಯಿಸುವಂತಾಗಿದೆ.
ಬೆಂಗಳೂರು ನಗರದಲ್ಲಿ ಗುಂಡಿಗಳ ಅವಾಂತರ ಮುಂದುವರೆದಿದೆ. ಮಾರುತಿನಗರದ ಇಟ್ಟುಮಡು ಮುಖ್ಯರಸ್ತೆಯಲ್ಲಿ BWSSB ಡ್ರೈನೇಜ್ ಚೇಂಬರ್ ಪಕ್ಕದಲ್ಲೇ ಶುಕ್ರವಾರ ರಾತ್ರಿ ಏಕಾಏಕಿ ರಸ್ತೆ ಕುಸಿದಿದೆ. ರಸ್ತೆ ಮಧ್ಯೆ ಗುಂಡಿ ಬಿದ್ದ ಪರಿಣಾಮ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿದೆ. ಬೆಂಗಳೂರಿನಲ್ಲಿ ಈ ತಿಂಗಳು ವರದಿಯಾದ ಮೂರನೇ ಪ್ರಕರಣ ಇದಾಗಿದೆ. ಸದ್ಯ ವಿಷಯ ತಿಳಿಯುತ್ತಿದ್ದಂತೆಯೇ BWSSB ಹಾಗೂ BBMP ಸಿಬ್ಬಂದಿ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಕಾರ್ಯ ಆರಂಭಿಸಿದ್ದಾರೆ.
ಇದನ್ನೂ ಓದಿ: ಮಹಾಲಕ್ಷ್ಮೀ ಲೇಔಟ್ ಮುಖ್ಯರಸ್ತೆಯಲ್ಲಿ ಏಕಾಏಕಿ ಕುಸಿದ ರಸ್ತೆ; ಜೀವ ಭಯದಲ್ಲಿ ವಾಹನ ಸವಾರರು
2 ದಿನಗಳ ಹಿಂದೆ ಬಿಬಿಎಂಪಿ ರಸ್ತೆಗೆ ಟಾರ್ ಹಾಕಿದ್ದು ಮಹಾಲಕ್ಷ್ಮಿ ಲೇಔಟ್ ಮುಖ್ಯ ರಸ್ತೆ ಸಪ್ತಗಿರಿ ಕಲ್ಯಾಣ ಮಂಟಪದ ಬಳಿ ಪೈಪ್ಲೈನ್ ಹಾದು ಹೋಗಿರುವ ಜಾಗದಲ್ಲೇ ರಸ್ತೆ ಕುಸಿದು ಬಿದ್ದಿತ್ತು. ಕೇವಲ ಎರಡು ದಿನದಲ್ಲೇ ರಸ್ತೆ ಕುಸಿದು ಬಿದ್ದಿದನ್ನು ನೋಡಿದ ಸಾರ್ವಜನಿಕರು ಬಿಬಿಎಂಪಿಯ ಕಳಪೆ ಕಾಮಗಾರಿ ಬಗ್ಗೆ ಟೀಕೆ ಮಾಡಿದ್ದರು. ಆದ್ರೆ ಈಗ ಮತ್ತೆ ಅದೇ ರೀತಿಯ ಘಟನೆ ಮರು ಕಳಿಸಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:22 pm, Sat, 21 January 23