ಕಾನೂನು ಶಾಲೆಯಲ್ಲಿ ಕನ್ನಡಿಗರಿಗೆ ಸಿಗದ ಶೇ 25 ಮೀಸಲಾತಿ, NLSIU ಮುಂದೆ ಹೋರಾಟ, ನ್ಯಾಯಕ್ಕಾಗಿ ಮನವಿ ಸಲ್ಲಿಕೆ

NLSIUನಲ್ಲಿ ಕನ್ನಡಿಗರಿಗೆ ಶೇ 25ರಷ್ಟು ಮೀಸಲಾತಿ ನೀಡುವಂತೆ ಆಗ್ರಹಿಸಿ ಯೂನಿವರ್ಸಿಟಿ ಮುಂದೆ ಧರಣಿ ನಡೆಸಿ ಸಿಗಬೇಕಾದ ನ್ಯಾಯಯುತ ಮೀಸಲಾತಿ ನೀಡುವಂತೆ ಮನವಿ ಸಲ್ಲಿಸಲಾಯಿತು.

ಕಾನೂನು ಶಾಲೆಯಲ್ಲಿ ಕನ್ನಡಿಗರಿಗೆ ಸಿಗದ ಶೇ 25 ಮೀಸಲಾತಿ, NLSIU ಮುಂದೆ ಹೋರಾಟ, ನ್ಯಾಯಕ್ಕಾಗಿ ಮನವಿ ಸಲ್ಲಿಕೆ
ಕನ್ನಡಿಗರಿಗೆ ಸಿಗದ ಶೇ 25 ಮೀಸಲಾತಿ ನೀಡುವಂತೆ NLSIU ಮುಂದೆ ನಡೆದ ಪ್ರತಿಭಟನೆ
Follow us
TV9 Web
| Updated By: Rakesh Nayak Manchi

Updated on:Jan 21, 2023 | 4:12 PM

ಬೆಂಗಳೂರು: ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU)ಯಲ್ಲಿ ಕನ್ನಡಿಗರಿಗೆ ಶೇ 25 ಮೀಸಲಾತಿ ನೀಡದೆ ಅನ್ಯಾಯ ಎಸಗಲಾಗಿದೆ ಎಂದು ಆರೋಪಿಸಿ ಇಂದು ನಗರದಲ್ಲಿರವ ಎನ್​ಎಲ್​ಎಸ್​ಐಯು ಮುಂದೆ ಧರಣಿ ನಡೆಸಿ ವಿಶ್ವವಿದ್ಯಾಲಯದ ಉಪ ಕುಲಪತಿಗೆ ಮನವಿ ಸಲ್ಲಿಸಲಾಯಿತು. ವಕೀಲರ ಸಂಘದ ಮಾಜಿ ಅದ್ಯಕ್ಷ ರಂಗನಾಥ್ ಎ.ಪಿ, ಕನ್ನಡ ಪರ ಸಂಘಟನೆಗಳು ಮತ್ತು ವಕೀಲರು ಧರಣಿಯಲ್ಲಿ ಪಾಲ್ಗೊಂಡರು. ಅಲ್ಲದೆ ಮುಂದಿನ‌ ದಿನಗಳಲ್ಲಿ ಕನ್ನಡಿಗರಿಗೆ ಸಿಗಬೇಕಾದ ನ್ಯಾಯ ಸಿಗದೇ ಹೋದರೆ ಉಗ್ರ ಹೋರಾಟ ಮಾಡುವುದಾಗಿ‌ ಎಚ್ಚರಿಕೆ ನೀಡಲಾಗಿದೆ.

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ (NLSIU)ಯು ಕರ್ನಾಟಕ ರಾಜ್ಯ ಶಾಸಕಾಂಗದ ಒಂದು ರಚನೆಯಾಗಿದ್ದು, ಇದರಲ್ಲಿ ಇತರೆ ವಿಷಯಗಳ ಜೊತೆ, 5 ವರ್ಷಗಳ ಬಿಎ ಎಲ್​ಎಲ್​ಬಿ ಪದವಿ ಸಹ ಒಳಗಂಡಿದೆ. ಸುಪ್ರೀಂ ಕೋರ್ಟ್ 2017ರ ಜೂನ್ 7ರಂದು ಹೊರಡಿಸಿದ ತೀರ್ಪಿನಲ್ಲಿ ಸ್ಥಳೀಯ ನಿವಾಸಿ ವಿದ್ಯಾರ್ಥಿಗಳಿಗೆ ಪದವಿ ವ್ಯಾಸಾಂಗದ ವಿಷಯಗಳಿಗೆ ಶೇ 50ರಷ್ಟು ಮೀಸಲಾತಿ ನೀಡುವುದನ್ನು ಅನುಮತಿಸಿದೆ.

2020ರಲ್ಲಿ NLSIU ನಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಾತಿಯನ್ನು ನೀಡಿರಲಿಲ್ಲ. ಬಳಿಕ ಅದೇ ವರ್ಷ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಕಾಯ್ದೆ 1986 (ಕರ್ನಾಟಕ ಕಾಯ್ದೆ ಸಂಖ್ಯಾ-13, 2020)ಕ್ಕೆ ತಿದ್ದುಪಡಿ ತಂದು ಶೇ 25ರಷ್ಟು ಮೀಸಲಾತಿಯನ್ನು ಕರ್ನಾಟಕದ ವಿದ್ಯಾರ್ಥಿಗಳಿಗೆ ನೀಡಲಾಯಿತು. ಕರ್ನಾಟಕ ಹೈಕೋರ್ಟ್​ ಸ್ಥಳೀಯ ಮೀಸಲಾತಿ ಕುರಿತು ಸಲ್ಲಿಸಲಾದ ವಿವಿಧ ರಿಟ್​ ಅರ್ಜಿಗಳನ್ನು ಪರಿಗಣಿಸಿ 2020ರ ಸೆ.29ರಂದು ಹೊರಡಿಸಿದ ತೀರ್ಪಿನಲ್ಲಿ ಎನ್​ಎಲ್​ಎಸ್​ಐಯು ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಇದಕ್ಕೆ ಸೇರುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಮೀಸಲಾತಿಯನ್ನು ಕಾನೂನು ಶಾಲೆಯ ಕಾರ್ಯಕಾರಿ ಮಂಡಳಿಯು ಒದಗಿಸುತ್ತದೆ ಎಂದು ಸೂಚಿಸಿತು.

ಇದನ್ನೂ ಓದಿ: ವಸತಿ ಮೀಸಲಾತಿ ಕುರಿತು NLSIUಗೆ ಪತ್ರ ಬರೆದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ

ಇದರ ಅನ್ವಯ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರನ್ನೊಳಗೊಂಡ ಕಾರ್ಯಕಾರಿ ಮಂಡಳಿಯು ಶೇ 25ರಷ್ಟು ಮೀಸಲಾತಿಯನ್ನು ಸ್ಥಳೀಯ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ 2021-22ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಒದಗಿಸತಕ್ಕದ್ದು ಎಂದು ತೀರ್ಮಾನಿಸಿತು. ಆದರೆ 2021-22 ಮತ್ತು 2022-23ನೇ ಶೈಕ್ಷಣಿಕ ಸಾಲಿನ NLSIU ಪದವಿಯ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ 25 ರಷ್ಟು ಮೀಸಲಾತಿ ಜಾರಿ ಮಾಡಿರುವುದಿಲ್ಲ. ಬದಲಾಗಿ ವಿಭಾಗೀಯ ಸಮತಲ ಮೀಸಲಾತಿಯನ್ನು ಜಾರಿಗೊಳಿಸಲಾಗಿರುತ್ತದೆ ಎಂದು ಆರೋಪಿಸಲಾಗಿದೆ.

NALSAR ಹೈದರಾಬಾದ್ ಶೇ.25 ರಷ್ಟು ಮೀಸಲಾತಿಯನ್ನು ತೆಲಂಗಾಣ ರಾಜ್ಯದ ವಿದ್ಯಾ ರ್ಥಿಗಳಗೆ ವಿವಿಧ ವರ್ಗಗಳ ಅಡಿಯಲ್ಲಿ ಹಂಚಿಕೆ ಮಾಡಲಾಗಿದೆ. WBNUJS ಕೊಲ್ಕತ್ತಾವು ಸಾಮಾನ್ಯ ವರ್ಗದಲ್ಲಿ 73 ಸೀಟುಗಳ ಪೈಕಿ 23 ಸೀಟುಗಳನ್ನು ಪಶ್ಚಿಮ ಬಂಗಾಳ ರಾಜ್ಯದ ಸಾಮಾನ್ಯ ವರ್ಗದ ಸ್ಥಳೀಯ ವಿದ್ಯಾರ್ಥಿಗಳಿಗೆ ಮೀಸಲಿರಿಸಿದೆ. DSNLU ವಿಶಾಖಪಟ್ಟಣ ಶೇ.50 ರಷ್ಟು ಸೀಟುಗಳನ್ನು ಆಂಧ್ರಪ್ರದೇಶದ ವಿವಿಧ ವರ್ಗಗಳ ವಿದ್ಯಾರ್ಥಿಗಳಿಗೆ ಹಾಗೂ HNLU ರಾಯಪುರ ಸಾಮಾನ್ಯ ವರ್ಗದ 87 ಸೀಟುಗಳ ಪೈಕಿ 36 ಸೀಟುಗಳನ್ನು ಛತ್ತೀಸಘಡ ರಾಜ್ಯದ ಸ್ಥಳೀಯ ವಿದ್ಯಾರ್ಥಿಗಳಿಗೆ ಮೀಸಲಿರಿಸಿದೆ. ಆದರೆ NLSIU ಶೇ.25 ರಷ್ಟು ಮೀಸಲಾತಿಯನ್ನು ಕರ್ನಾಟಕದ ಸ್ಥಳೀಯ ವಿದ್ಯಾರ್ಥಿಗಳಿಗೆ ನೀಡದೆ ಅದರ ವಿರುದ್ಧವಾಗಿ ವಿಭಿನ್ನವಾದ ಪದ್ಧತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಲಾಗಿದೆ.

NLSIU 2022ನೇ ಸಾಲಿನ 5 ವರ್ಷಗಳ ಬಿಎ ಎಲ್​ಎಲ್​ಬಿ ಪದವಿಗೆ 180 ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡಿದ್ದು, ಇದರಲ್ಲಿ 45 ವಿದ್ಯಾರ್ಥಿಗಳು ಕರ್ನಾಟಕದವರಾಗಿದ್ದಾರೆ. ಇದರಲ್ಲಿ 13 ವಿದ್ಯಾ ರ್ಥಿಗಳು (9-ಸಾಮಾನ್ಯ ವರ್ಗ, 1- ಸಾಮಾನ್ಯ ಅಂಗವಿಕಲ ಹಾಗೂ 3-ಪರಿಶಿಷ್ಟ ಜಾತಿ) ಅಖಿಲ ಭಾರತ ನಿಯಮಿತ ವರ್ಗದಲ್ಲಿ (Regular Merit) ತಮಗೆ ಮೀಸಲಿರುವ ವರ್ಗದಲ್ಲಿ ಪ್ರವೇಶಾತಿಯನ್ನು ಪಡೆಯಲು ಅರ್ಹರಿರುತ್ತಾರೆ. ಅಂದರೆ, 180 ವಿದ್ಯಾರ್ಥಿಗಳ ಪೈಕಿ ಕೇವಲ 32 ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ನಿವಾಸಿ ವಿದ್ಯಾರ್ಥಿಗಳಿಗೆ ನೀಡುವ ಮೀಸಲಾತಿ ಅಡಿಯಲ್ಲಿ ಪ್ರವೇಶವನ್ನು ಪಡೆದಿದ್ದಾರೆ.

ಆದರೆ ಅಖಿಲ ಭಾರತ ನಿಯಮಿತ ವರ್ಗದಲ್ಲಿ ಪ್ರವೇಶವನ್ನು ಪಡೆಯಬಹುದಾಗಿದ್ದ 13 ವಿದ್ಯಾರ್ಥಿಗಳನ್ನು ಸಹ ಸ್ಥಳೀಯ ವಿದ್ಯಾರ್ಥಿಗಳ ಮೀಸಲಾತಿ ಅಡಿಯಲ್ಲಿ ದಾಖಲಿಸಿರುವುದರಿಂದ 2022ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ 13 ವಿದ್ಯಾರ್ಥಿಗಳು ಎನ್​ಎಲ್​ಎಸ್​ಐ ಪ್ರವೇಶದಿಂದ ವಂಚಿತರಾಗಿದ್ದಾರೆ. ಪ್ರಸ್ತುತ 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕೂಡ NLSIU ತನ್ನ ಹಿಂದಿನ ಪದ್ದತಿಯನ್ನೇ ಅನುಸರಿಸಿದೆ. CLAT 2023ರ ಪ್ರವೇಶ ಪರೀಕ್ಷೆ ಡಿಸೆಂಬರ್ 18ರಂದು ನಡೆಯಸಲಾಗಿದ್ದು, ಜನವರಿ 18ರಂದು CLAT ಒಕ್ಕೂಟವು ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕದ ರಾಜ್ಯದ 19 ವಿದ್ಯಾರ್ಥಿಗಳು ಎನ್​ಎಲ್​ಎಸ್​ಐಯು ಪ್ರವೇಶ ಪಡೆಯುವಲ್ಲಿ ವಂಚಿತರಾಗಿದ್ದಾರೆ ಎಂದು ಆರೋಪಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:11 pm, Sat, 21 January 23

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ