ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ವಿವಾದ; ಹಿಂದೂಪರ ಸಂಘಟನೆಗಳಿಂದ ಸಭೆ
ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ವಿವಾದ ಕುರಿತು ಇಂದು(ಜ.22) ಹಿಂದೂಪರ ಸಂಘಟನೆಗಳು ಮತ್ತು ಚಾಮರಾಜಪೇಟೆ ನಾಗರೀಕ ಒಕ್ಕೂಟದಿಂದ ಸಭೆ ನಡೆಯಲಿದೆ.
ಬೆಂಗಳೂರು: ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ವಿವಾದ ಕುರಿತು ಇಂದು(22) ಹಿಂದೂಪರ ಸಂಘಟನೆಗಳು ಮತ್ತು ಚಾಮರಾಜಪೇಟೆ ನಾಗರೀಕ ಒಕ್ಕೂಟದಿಂದ ಜ. 26ರಂದು ಯಾವ ರೀತಿ ಧ್ವಜಾರೋಹಣ ಮಾಡಬೇಕು ಎಂಬುದರ ಕುರಿತು ಇಂದು ಸಭೆ ನಡೆಯಲಿದೆ. ಸರ್ಕಾರಕ್ಕೆ ತನ್ನ ತೀರ್ಮಾನ ತಿಳಿಸಲು ಜ.21ರವರೆಗೆ ಒಕ್ಕೂಟ ಡೆಡ್ ಲೈನ್ ನೀಡಿತ್ತು. ಸರ್ಕಾರಕ್ಕೆ ನೀಡಿದ್ದ ಗಡುವು ನಿನ್ನೆಗೆ ಮುಕ್ತಾಯವಾಗಿದ್ದು, ಜಿಲ್ಲಾಡಳಿತ ಹಾಗೂ ಸರ್ಕಾರ ಈವರೆಗೆ ತಟಸ್ಥ ನಿಲುವನ್ನ ಹೊಂದಿದೆ. ಹೀಗಾಗಿ ಇಂದು ಬೆಳಗ್ಗೆ 11ಗಂಟೆಗೆ ಚಾಮರಾಜಪೇಟೆಯಲ್ಲಿ ಮಹತ್ವದ ಮೀಟಿಂಗ್ ನಡೆಯಲಿದ್ದು, ಹಿಂದೂ ಸಂಘಟನೆಗಳು ಹಾಗೂ ನಾಗರೀಕ ಒಕ್ಕೂಟದಿಂದ ಧ್ವಜಾರೋಹಣ ಮಾಡಲು ತೀರ್ಮಾನ ಕೈಗೊಳ್ಳಲಾಗುವುದು. ಈಗಾಗಲೇ ಒಕ್ಕೂಟ, ಸರ್ಕಾರಕ್ಕೆ ಸೆಡ್ಡು ಹೊಡೆದು ಗಣರಾಜ್ಯೋತ್ಸವಕ್ಕೆ ಮುಂದಾಗಿದೆ.
ಜ.26ರಂದು ಈದ್ಗಾ ಮೈದಾನದಲ್ಲಿ ಸರ್ಕಾರ ಧ್ವಜಾರೋಹಣ ಮಾಡದಿದ್ದರೆ, ನಾವೇ ಮೈದಾನಕ್ಕೆ ನುಗ್ಗಿ ಧ್ವಜಾರೋಹಣ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವಕ್ಕೆ ಅವಕಾಶ ಇದೆ. ಆದರೆ ಸರ್ಕಾರ ಈ ವಿಚಾರದಲ್ಲಿ ಮೌನವಾಗಿರೋದು ಒಕ್ಕೂಟದ ಆಕ್ರೋಶಕ್ಕೆ ಕಾರಣವಾಗಿದೆ. ಹಲವು ಹಿಂದೂಪರ ಸಂಘಟನೆಗಳು ಜ.26 ರ ಗಣರಾಜ್ಯೋತ್ಸವವನ್ನ ಈದ್ಗಾ ಮೈದಾನದಲ್ಲಿ ಆಚರಣೆ ಮಾಡಲು ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಕೋರಿದ್ದರು. ಇದೀಗ ಕೊಟ್ಟ ಅವಧಿ ಮುಕ್ತಾಯವಾಗಿದ್ದು, ಅದರ ಕುರಿತು ಇಂದು ಸಭೆ ನಡೆಯಲಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:49 am, Sun, 22 January 23