ಮಹಾಲಕ್ಷ್ಮೀ ಲೇಔಟ್ ಮುಖ್ಯರಸ್ತೆಯಲ್ಲಿ ಏಕಾಏಕಿ ಕುಸಿದ ರಸ್ತೆ; ಜೀವ ಭಯದಲ್ಲಿ ವಾಹನ ಸವಾರರು

ಬೆಂಗಳೂರಿನ ಹೆಣ್ಣೂರು-ಕೊತ್ತನೂರು ಮುಖ್ಯ ರಸ್ತೆಯಲ್ಲಿ ಸಂಪೂರ್ಣವಾಗಿ ರಸ್ತೆಗೆ ವಿದ್ಯುತ್ ಕಂಬ ವಾಲಿದೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಜೀವ ಭಯದಲ್ಲೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

ಮಹಾಲಕ್ಷ್ಮೀ ಲೇಔಟ್ ಮುಖ್ಯರಸ್ತೆಯಲ್ಲಿ ಏಕಾಏಕಿ ಕುಸಿದ ರಸ್ತೆ; ಜೀವ ಭಯದಲ್ಲಿ ವಾಹನ ಸವಾರರು
ವಾಹನ ಸವಾರರಿಗೆ ಬೆಂಗಳೂರು ಎಷ್ಟು ಸೇಫ್; ಕುಸಿಯುತ್ತಿವೆ ರಸ್ತೆಗಳು, ವಾಲುತ್ತಿವೆ ವಿದ್ಯುತ್ ಕಂಬ
Follow us
| Updated By: Digi Tech Desk

Updated on:Jan 17, 2023 | 3:58 PM

ಬೆಂಗಳೂರು: ಸಿಲಿಕಾನ್ ಸಿಟಿ ಸಮಸ್ಯೆಗಳ ಆಗರವಾಗುತ್ತಿದೆ. ಜನ ಜೀವದ ಭಯದಲ್ಲೇ ವಾಹನ ಓಡಿಸುವಂತಾಗಿದೆ. ಕಳೆದ ಕೆಲ ದಿನಗಳ ಹಿಂದೆ ಹೆಣ್ಣೂರು ಕ್ರಾಸ್ ಬಳಿ ಮೆಟ್ರೋ ಪಿಲ್ಲರ್ ದುರಂತ ಸಂಭವಿಸಿ ತಾಯಿ-ಮಗ ಮೃತಪಟ್ಟಿದ್ದರು. ಈ ಘಟನೆ ನಡೆದು ಕೇವಲ ಒಂದು ವಾರವಷ್ಟೇ ಆಗಿದೆ. ಈಗ ನಗರದಲ್ಲಿ ಮತ್ತೆ ಇಂತಹ ದುರ್ಘಟನೆಗಳು ಸಂಭವಿಸುವ ಭೀತಿ ಹೆಚ್ಚಿದೆ. ಬೆಂಗಳೂರಿನ ಹೆಣ್ಣೂರು-ಕೊತ್ತನೂರು ಮುಖ್ಯ ರಸ್ತೆಯಲ್ಲಿ ಸಂಪೂರ್ಣವಾಗಿ ರಸ್ತೆಗೆ ವಿದ್ಯುತ್ ಕಂಬ ವಾಲಿದೆ. ಇದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಜೀವ ಭಯದಲ್ಲೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಮಹಾಲಕ್ಷ್ಮೀ ಲೇಔಟ್ ಮುಖ್ಯರಸ್ತೆಯಲ್ಲಿ ಬಿಬಿಎಂಪಿ ಕಳಪೆ ಕಾಮಗಾರಿಯಿಂದ ಏಕಾಏಕಿ ರಸ್ತೆ ಕುಸಿದಿದೆ.

ಮೆಟ್ರೋ ಪಿಲ್ಲರ್ ದುರಂತ ಬಳಿಕ‌ ಈಗ ಬೆಸ್ಕಾಂ‌ ಸರದಿ. ರಸ್ತೆಯಲ್ಲಿ ವಿದ್ಯುತ್ ಕಂಬ ಸಂಪೂರ್ಣವಾಗಿ ವಾಲಿದ್ರು ಬೆಸ್ಕಾಂ‌ ನಿರ್ಲಕ್ಷ್ಯ ವಹಿಸಿದೆ. ವಿದ್ಯುತ್ ಕಂಬ ಸಂಪೂರ್ಣವಾಗಿ ರಸ್ತೆಗೆ ವಾಲಿದೆ. ವಾಲಿರುವ ಕಂಬದ ನಡುವೆಯೇ ವಾಹನ ಸಂಚಾರವಾಗುತ್ತಿದೆ. ಬೆಸ್ಕಾಂ‌ ನಿರ್ಲಕ್ಷ್ಯ ದಿಂದ ವಾಹನ ಸವಾರರಿಗೆ ಜೀವ ಭಯ ಶುರುವಾಗಿದೆ. ಬೆಸ್ಕಾಂ ನಿರ್ಲಕ್ಷ್ಯಕ್ಕೆ ಸ್ಥಳೀಯರು, ವಾಹನ ಸವಾರರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಮೆಟ್ರೋ ಪಿಲ್ಲರ್ ರಾಡ್​ಗಳು ಬಿದ್ದು ತಾಯಿ ಮಗನ ಸಾವು ಪ್ರಕರಣ; ಮುಖ್ಯ ಎಂಜಿನಿಯರ್ ಮೊರೆ ಹೋದ ಖಾಕಿ

ಬಿಬಿಎಂಪಿ ಕಳಪೆ ಕಾಮಗಾರಿಯಿಂದ ಏಕಾಏಕಿ ಕುಸಿದ ರಸ್ತೆ

ಒಂದು ಕಡೆ ರಸ್ತೆಗೆ ವಿದ್ಯುತ್ ಕಂಬ ವಾಲಿದ್ರೆ ಮತ್ತೊಂದು ಕಡೆ ರಸ್ತೆಗಳೇ ಕುಸಿಯುತ್ತಿವೆ. ಕರ್ನಾಟಕ ಚುನಾವಣೆ ಹೊಸ್ತಿಲಲ್ಲಿದೆ ಎಂದು ಸರ್ಕಾರ ಕಾಮಗಾರಿ ಚುರುಕುಗೊಳಿಸಿದೆ. ಆದ್ರೆ ಅವುಗಳ ಕಳಪೆ ಕಾಮಗಾರಿ ಕೂಡ ಅಷ್ಟೇ ಬೇಗವಾಗಿ ಬಯಲಾಗುತ್ತಿದೆ. ನಗರದ ಮಹಾಲಕ್ಷ್ಮೀ ಲೇಔಟ್ ಮುಖ್ಯರಸ್ತೆಯಲ್ಲಿ ಬಿಬಿಎಂಪಿ ಕಳಪೆ ಕಾಮಗಾರಿಯಿಂದ ಏಕಾಏಕಿ ರಸ್ತೆ ಕುಸಿದಿದೆ. ಆದ್ರೆ ಗುಂಡಿ ಬಿದ್ದ ಸ್ಥಳದಲ್ಲಿ ಬಿಬಿಎಂಪಿ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ಕಳೆದ 2 ದಿನಗಳ ಹಿಂದೆ ಬಿಬಿಎಂಪಿ ರಸ್ತೆಗೆ ಟಾರ್ ಹಾಕಿತ್ತು. ಕೇವಲ ಎರಡು ದಿನದಲ್ಲೇ ರಸ್ತೆ ಕುಸಿದು ಬಿದ್ದಿದೆ. ಮಹಾಲಕ್ಷ್ಮಿ ಲೇಔಟ್ ಮುಖ್ಯ ರಸ್ತೆ ಸಪ್ತಗಿರಿ ಕಲ್ಯಾಣ ಮಂಟಪದ ಬಳಿ ಪೈಪ್​ಲೈನ್ ಹಾದು ಹೋಗಿರುವ ಜಾಗದಲ್ಲೇ ಘಟನೆ ಸಂಭವಿಸಿದೆ. ಇಂದು ಬೆಳಗ್ಗೆ 7.30ಕ್ಕೆ ದೊಡ್ಡಗಾತ್ರದ ವಾಹನ ಸಂಚಾರಿಸಿದ್ದು ಮೂರೂವರೆ ಅಡಿ ಆಳಕ್ಕೆ ರಸ್ತೆ ಕುಸಿದಿದೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ಇನ್ನು ರಸ್ತೆ ಕುಸಿದ ಪರಿಣಾಮ ಜಲಮಂಡಳಿಯ ಪೈಪ್ ಕಟ್ ಆಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:05 pm, Tue, 17 January 23

Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ