Bengaluru Metro Pillar Collapse: ಅವಘಡಕ್ಕೆ ಇಂಜಿನಿಯರ್ ಹಾಗೂ ಗುತ್ತಿಗೆದಾರರೇ ಕಾರಣ- ಐಐಎಸ್ಸಿ ತಜ್ಞರ ವರದಿಯಲ್ಲಿ ಉಲ್ಲೇಖ
ಜನವರಿ 10 ರಂದು ಬೆಂಗಳೂರು ಮೆಟ್ರೋ ಪಿಲ್ಲರ್ ಬಿದ್ದು ತಾಯಿ, ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಜ.21) ಐಐಎಸ್ಸಿ ತಜ್ಞರ ತಂಡ BMRCL ಎಂಡಿ ಅಂಜುಂ ಪರ್ವೇಜ್ ಅವರಿಗೆ ತನಿಕಾ ವರದಿ ಸಲ್ಲಿಸಲಿದೆ.
ಬೆಂಗಳೂರು: ಜನವರಿ 10 ರಂದು ನಿರ್ಮಾಣಹಂತದ ಮೆಟ್ರೋ ಪಿಲ್ಲರ್ ಬಿದ್ದು (Bengaluru Metro Pillar Collapse) ತಾಯಿ, ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಜ.21) ಐಐಎಸ್ಸಿ ತಜ್ಞರ ತಂಡ BMRCL ಎಂಡಿ ಅಂಜುಂ ಪರ್ವೇಜ್ ಅವರಿಗೆ ತನಿಕಾ ವರದಿ ಸಲ್ಲಿಸಲಿದೆ. ಕಿಶೋರ್ ಚಂದ್ರ ನೇತೃತ್ವದ ತಂಡ ಮಧ್ಯಾಹ್ನದ ನಂತರ ವರದಿ ಸಲ್ಲಿಸಲಿದ್ದು, ವರದಿಯಲ್ಲಿ ತಾಯಿ, ಮಗು ಸಾವಿಗೆ ಇಂಜಿನಿಯರ್, ಗುತ್ತಿಗೆದಾರರೇ ಕಾರಣ ಎಂದು ಉಲ್ಲೇಖಿಸಲಾಗಿದೆ.
IISC ಸಿದ್ದಪಡಿಸಿರುವ ವರದಿಯಲ್ಲಿ ಏನಿದೆ? IISC ಏನೆಲ್ಲ ತನಿಖೆ ಮಾಡಿದೆ
IISC ತಂಡ ತನಿಖೆಯನ್ನು ಪ್ರಾರಂಭಿಸುವಾಗ, ಕಾಮಗಾರಿಗೆ ಬಳಸಿದ್ದ ಕಂಬಿ, ಮರಳು, ಸಿಮೆಂಟ್ಗಳ ಕ್ವಾಲಟಿ ರಿಪೋರ್ಟ್ ಪಡೆದಿತ್ತು. ಇದರ ಜೊತೆಗೆ ಜಲ್ಲಿ, ಮಣ್ಣು, ಸಿಮೆಂಟ್ಗಳ ಟೆಸ್ಟಿಂಗ್ ರಿಪೋರ್ಟ್ ಪಡೆದಿದೆ. ಈ ಪಿಲ್ಲರ್ ನಿರ್ಮಾಣದ ವೇಳೆ BMRCL 18 ಮೀಟರ್ ಎತ್ತರದ ಕಂಬಿ ಕಟ್ಟಿತ್ತು. ಈ ಎತ್ತರದಲ್ಲಿ 6 ಅಂತಸ್ಥಿನ ಮನೆ ಕಟ್ಟಬಹುದು, ಅಷ್ಟು ಉದ್ದದ ಕಂಬಿ ಪಿಲ್ಲರ್ ಯಾಕೆ ಕಟ್ಟಿದರು.? ಇಷ್ಟು ಎತ್ತರದ ಪಿಲ್ಲರ್ ಕಟ್ಟಿದಾಗ, ಮುಂಜಾಗ್ರತಾ ಕ್ರಮವಾಗಿ ಕಂಬಿಯ ಪಿಲ್ಲರ್ಗೆ ಸರಿಯಾದ ಸಪೋರ್ಟ್ ನೀಡಬೇಕಿತ್ತು. ಸಪೋರ್ಟ್ ನೀಡದಿದ್ದದ್ದೆ ಈ ಅನಾಹುತಕ್ಕೆ ಕಾರಣವಾಗಿದೆ ಎಂಬುವುದು ತನಿಖೆಯಲ್ಲಿ ಗೊತ್ತಾಗಿದೆ.
ಇದನ್ನೂ ಓದಿ: ಹೈದರಾಬಾದ್‌ನ ಐಐಟಿ ತಜ್ಞರ ತಂಡದ ವರದಿಯಲ್ಲಿ ದುರಂತದ ಕಾರಣ ಬಹಿರಂಗ
ಕೆಲಸಗಾಗರು ಕಂಬಿಯ ಪಿಲ್ಲರ್ನ್ನು ನೇರವಾಗಿ ನಿಲ್ಲಿಸಲು ಸುತ್ತಲು ಸಪೋರ್ಟ್ ನೀಡಬೇಕಿತ್ತು. ಅದು ಕೆಲಸಗಾರರಿಗೆ ಗೊತ್ತಾಗಲ್ಲ, ಗುತ್ತಿಗೆದಾರರೇ ಹಾಗೂ ಇಂಜಿನಿಯರ್ಗಳೇ ಅದನ್ನು ನೋಡಿಕೊಳ್ಳಬೇಕು. ಸದ್ಯಕ್ಕೆ ಗುತ್ತಿಗೆದಾರರೇ ಹಾಗೂ ಇಂಜಿನಿಯರ್ಗಳೇ ಅನಾಹುತಕ್ಕೆ ನೇರ ಹೊಣೆ. ಕಂಟ್ರ್ಯಾಕ್ಟರ್ ಹಾಗೂ ಇಂಜಿನಿಯರ್ಗಳನ್ನೆ ತಪ್ಪಿತಸ್ಥರೆಂದು ವರದಿಯಲ್ಲಿ ಉಲ್ಲೇಖವಾಗಿದೆ.
ಘಟನೆ ಹಿನ್ನೆಲೆ
ಜನವರಿ 10 ರಂದು ಬೆಂಗಳೂರಿನ ನಾಗವಾರ ರಿಂಗ್ ರೋಡ್‍ನ ಎಚ್‍ಬಿಆರ್ ಲೇಔಟ್ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕಂಬಿ ಬಿದ್ದು ತಾಯಿ ಹಾಗೂ ಮಗು ಮೃತಪಟ್ಟಿದ್ದರು. ಮೃತ ತೇಜಸ್ವಿನಿ ಹಾಗೂ ಅವರ ಪತಿ ತಮ್ಮಿಬ್ಬರು ಅವಳಿ ಮಕ್ಕಳ ಜೊತೆಯಲ್ಲಿ ಬೈಕ್‌ನಲ್ಲಿ ಹೊರಟಿದ್ದರು. ಈ ವೇಳೆ ಪಿಲ್ಲರ್ ಅವರ ಬೈಕ್ ಮೇಲೆ ಬಿದ್ದಿತ್ತು. ಅವರ ಕುಟುಂಬದ ನಾಲ್ವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ನೆರೆದಿದ್ದ ಜನರು ಗಾಯಗೊಂಡಿದ್ದ ತಾಯಿ ಮತ್ತು ಮಗುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೇಜಸ್ವಿನಿ ಹಾಗೂ ಮಗು ವಿಹಾನ್ ಮೃತಟ್ಟಿದ್ದಾರೆ. ಒಂದು ವರ್ಷದ ಮಗು ಮತ್ತು ಲೋಹಿತ್ ಕುಮಾರ್ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:43 am, Sat, 21 January 23