ದೇಹದ ಈ ಭಾಗಗಳಲ್ಲಿ ಕಾಣಿಸಿಕೊಳ್ಳುವ ನರಹುಲಿಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ

|

Updated on: Nov 22, 2023 | 1:48 PM

ಕಂದು ಬಣ್ಣದ ಮೊಡವೆಗಳಂತಹ ನರಹುಲಿಗಳು ಕುತ್ತಿಗೆ ಅಥವಾ ತೋಳುಗಳ ಸುತ್ತಲೂ ಕಾಣಿಸಿಕೊಂಡರೆ, ಅವುಗಳನ್ನು ತೆಗೆದುಹಾಕುವ ಮೊದಲು ಮೂಲ ಕಾರಣವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ, ವೈದ್ಯರಿಂದ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.

ದೇಹದ ಈ ಭಾಗಗಳಲ್ಲಿ ಕಾಣಿಸಿಕೊಳ್ಳುವ ನರಹುಲಿಗಳನ್ನು ಎಂದಿಗೂ  ನಿರ್ಲಕ್ಷಿಸಬೇಡಿ
Follow us on

ದೇಹದ ಮೇಲೆ ನರಹುಲಿಗಳ ಕಾಣಿಸಿಕೊಂಡರೆ ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಕೆಲವೊಮ್ಮೆ ದೇಹದಲ್ಲಿ ನರಹುಲಿಗಳು ಹುಟ್ಟಿಕೊಳ್ಳಲು ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಕಾರಣವಾಗಬಹುದು. ಕೆಲವೊಂದು ರೋಗಗಳ ಲಕ್ಷಣಗಳು ಆರಂಭದಲ್ಲಿ ಸೌಮ್ಯವಾಗಿರುತ್ತದೆ. ಆದ್ದರಿಂದ ಪ್ರಾರಂಭದಲ್ಲೇ ರೋಗಲಕ್ಷಣಗಳನ್ನು ಪತ್ತೆ ಹಚ್ಚಿ ಸರಿಯಾಗಿ ಚಿಕಿತ್ಸೆ ನೀಡುವುದು ಅಗತ್ಯವಾಗಿದೆ. ನಿಮ್ಮ ಕುತ್ತಿಗೆ ಅಥವಾ ತೋಳುಗಳ ಮೇಲೆ ನರಹುಲಿಗಳು ಹುಟ್ಟಿಕೊಂಡಿದ್ದರೆ ನಿರ್ಲಕ್ಷಿಸಬಾರದು. ಅನೇಕ ಬಾರಿ ನರಹುಲಿಗಳನ್ನು ತೆಗೆದುಹಾಕಲು ಮುಲಾಮುಗಳು, ಕ್ರೀಮ್ಗಳು ಮತ್ತು ಮನೆಮದ್ದುಗಳನ್ನು ಬಳಸುವುದುಂಟು. ಇದರಿಂದ ಇದು ಮತ್ತೆ ಹುಟ್ಟಿಕೊಳ್ಳಬಹುದು ಹಾಗೂ ಚರ್ಮದ ಮೇಲೆ ಗಂಭೀರ ಹಾನಿಯನ್ನುಂಟುಮಾಡಬಹುದು. ಕಂದು ಬಣ್ಣದ ಮೊಡವೆಗಳಂತಹ ನರಹುಲಿಗಳು ಕುತ್ತಿಗೆ ಅಥವಾ ತೋಳುಗಳ ಸುತ್ತಲೂ ಕಾಣಿಸಿಕೊಂಡರೆ, ಅವುಗಳನ್ನು ತೆಗೆದುಹಾಕುವ ಮೊದಲು ಮೂಲ ಕಾರಣವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ, ವೈದ್ಯರಿಂದ ಚಿಕಿತ್ಸೆಯನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.

ನರಹುಲಿಗಳು ಕಾಣಿಸಿಕೊಳ್ಳಲು ಕಾರಣ:

ಪ್ಯಾಪಿಲೋಮಾ ವೈರಸ್:

ಮುಖದ ಮೇಲೆ ನರಹುಲಿಗಳು ಕಾಣಿಸಿಕೊಂಡರೆ, ಅದಕ್ಕೆ ಪ್ಯಾಪಿಲೋಮಾ ವೈರಸ್ ಕಾರಣವಾಗಬಹುದು. ಮಾನವನ ದೇಹಕ್ಕೆ ಪ್ಯಾಪಿಲೋಮಾ ವೈರಸ್ ಪ್ರವೇಶಿಸುವುದರಿಂದ ನರಹುಲಿಗಳು ಕಾಣಿಸಿಕೊಳ್ಳುತ್ತದೆ. ಚರ್ಮದಲ್ಲಿ ಏನಾದರೂ ಗಾಯಗಳಾದಾಗ ಪ್ಯಾಪಿಲೋಮಾ ವೈರಸ್ ದೇಹವನ್ನು ಪ್ರವೇಶಿಸಬಹುದು, ಆದ್ದರಿಂದ ಗಾಯದ ಸಂದರ್ಭದಲ್ಲಿ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು ಎಂದು ಡಾ.ಭಾವುಕ್ ಧೀರ್ ಸಲಹೆ ನೀಡುತ್ತಾರೆ.

ಇನ್ಸುಲಿನ್ ಮಟ್ಟ ಅಸಮತೋಲನ:

ದೇಹದಲ್ಲಿನ ಇನ್ಸುಲಿನ್ ಮಟ್ಟಗಳ ಅಸಮತೋಲನದಿಂದಾಗಿ ಚರ್ಮದ ಮೇಲೆ ನರಹುಲಿಗಳು ಅಸಹಜವಾಗಿ ಕಾಣಿಸಿಕೊಳ್ಳಬಹುದು. ಆದ್ದರಿಂದ, ನರಹುಲಿಯನ್ನು ತೆಗೆದುಹಾಕುವ ಮೊದಲು, ವೈದ್ಯರನ್ನು ಭೇಟಿಯಾಗುವುದು ಅಗತ್ಯ. ಇದಲ್ಲದೇ ನಿಮ್ಮ ಆಹಾರ ಕ್ರಮಗಳ ಮೂಲಕ ಇನ್ಸುಲಿನ್ ಮಟ್ಟ ಅಸಮತೋಲನ ನಿವಾರಿಸಬಹುದು. ಆಹಾರದಿಂದ ಹೆಚ್ಚುವರಿ ಸಕ್ಕರೆ ಸೇವನೆ ಕಡಿಮೆ ಮಾಡಿ. ನಿಮ್ಮ ಆಹಾರದಲ್ಲಿ ಫೈಬರ್ ಭರಿತ ಆಹಾರಗಳನ್ನು ಸೇರಿಸುವುದು ಮುಖ್ಯ.

ಇದನ್ನೂ ಓದಿ: ಮಕ್ಕಳಾಗುತ್ತಿಲ್ಲವೆಂಬ ಚಿಂತೆಯೇ?; ಪುರುಷರ ವೀರ್ಯದ ಆರೋಗ್ಯ ಸುಧಾರಿಸುವುದು ಹೇಗೆ?

ಸೋಂಕಿನ ಭೀತಿ:

ಪ್ಯಾಪಿಲೋಮಾ ವೈರಸ್‌ನಿಂದ ಉಂಟಾಗುವ ಸೋಂಕಿನಿಂದ ದೇಹದ ಮೇಲೆ ನರಹುಲಿಗಳು ಕಾಣಿಸಿಕೊಂಡರೆ, ಸೋಂಕಿತ ವ್ಯಕ್ತಿಯ ಟವೆಲ್, ಸೋಪ್, ಶೇವಿಂಗ್ ಕಿಟ್ ಇತ್ಯಾದಿಗಳನ್ನು ಬೇರೆಯವರು ಬಳಸಬಾರದು. ಅಲ್ಲದೆ, ನೀವು ನರಹುಲಿಯನ್ನು ಸ್ಪರ್ಶಿಸಿದರೂ, ನೈರ್ಮಲ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ, ಏಕೆಂದರೆ ಇದರಿಂದ ಸೋಂಕು ತಗಲುವ ಸಾಧ್ಯತೆ ಇದೆ.

ಕ್ಯಾನ್ಸರ್ ಅಪಾಯ:

ಚರ್ಮದ ಮೇಲೆ ತೇಪೆಗಳ ರಚನೆ, ನರಹುಲಿಗಳು ಹಠಾತ್ ಕಾಣಿಸಿಕೊಳ್ಳುವುದು ಮತ್ತು ಅವುಗಳ ಗಾತ್ರದಲ್ಲಿ ಹೆಚ್ಚಳ ಮತ್ತು ಅವುಗಳಿಂದ ರಕ್ತಸ್ರಾವದ ಸಮಸ್ಯೆಯಂತಹ ಚಿಹ್ನೆಗಳನ್ನು ನಿರ್ಲಕ್ಷಿಸಬಾರದು, ಇವುಗಳು ಚರ್ಮದ ಕ್ಯಾನ್ಸರ್‌ನ ಲಕ್ಷಣಗಳಾಗಿರಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 1:48 pm, Wed, 22 November 23