ಗೊರಕೆ ಹೊಡೆಯುವುದು ಕೂಡ ಒಂದು ರೋಗ; ಇದರಿಂದಾಗುವ ತೊಂದರೆಗಳೇನು?

2,000 ವಯಸ್ಕರ ಮೇಲೆ ನಡೆಸಿದ ಹೊಸ ಅಧ್ಯಯನವು ತಮ್ಮ ಬಾಯಿಯ ಮೂಲಕ ಉಸಿರಾಡುವ ಜನರು ಮೂಗಿನ ದಟ್ಟಣೆಯನ್ನು ಅನುಭವಿಸುವ ಸಾಧ್ಯತೆ ಬೇರೆಯವರಿಗಿಂತಲೂ 2 ಪಟ್ಟು ಹೆಚ್ಚು ಎಂದು ಕಂಡುಹಿಡಿದಿದೆ. ಹಾಗಾದರೆ, ಬಾಯಿಯ ಮೂಲಕ ಉಸಿರಾಡುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು?

ಗೊರಕೆ ಹೊಡೆಯುವುದು ಕೂಡ ಒಂದು ರೋಗ; ಇದರಿಂದಾಗುವ ತೊಂದರೆಗಳೇನು?
Follow us
ಸುಷ್ಮಾ ಚಕ್ರೆ
|

Updated on: Jan 18, 2024 | 6:25 PM

ನೀವು ರಾತ್ರಿ ಗೊರಕೆ ಹೊಡೆಯುತ್ತಾ ಮಲಗುತ್ತೀರಾ? ಮೂಗಿನ ಬದಲು ಬಾಯಿಯಲ್ಲಿ ಉಸಿರಾಡುತ್ತೀರಾ? ಅದರಿಂದ ಆರೋಗ್ಯಕ್ಕೆ ತೊಂದರೆಗಳು ಉಂಟಾಗಬಹುದು. ಈ ಬಗ್ಗೆ 2,000 ವಯಸ್ಕರ ಮೇಲೆ ನಡೆಸಿದ ಹೊಸ ಅಧ್ಯಯನವು ತಮ್ಮ ಬಾಯಿಯ ಮೂಲಕ ಉಸಿರಾಡುವ ಜನರು ಮೂಗಿನ ದಟ್ಟಣೆಯನ್ನು ಅನುಭವಿಸುವ ಸಾಧ್ಯತೆ ಬೇರೆಯವರಿಗಿಂತಲೂ 2 ಪಟ್ಟು ಹೆಚ್ಚು ಎಂದು ಕಂಡುಹಿಡಿದಿದೆ. ಇದು ಹಲವಾರು ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಶೇ.13ರಷ್ಟು ಜನರು ಸಾಮಾನ್ಯವಾಗಿ ತಮ್ಮ ಬಾಯಿಯ ಮೂಲಕ ಉಸಿರಾಡುತ್ತಾರೆ. ಆದರೆ, ಮಲಗುವಾಗ ಶೇ. 18ರಷ್ಟು ಜನರು ಬಾಯಿಯ ಮೂಲಕ ಉಸಿರಾಡುತ್ತಾರೆ ಎಂದು ಅಧ್ಯಯನವು ಕಂಡುಹಿಡಿದಿದೆ. ಹೀಗೆ ರಾತ್ರಿ ಗೊರಕೆ ಹೊಡೆಯುವವರ ಪೈಕಿ ಮೂವರಲ್ಲಿ ಒಬ್ಬರು (31%) ಸಾಮಾನ್ಯವಾಗಿ ಮೂಗಿನ ದಟ್ಟಣೆಯನ್ನು ಅನುಭವಿಸುತ್ತಾರೆ ಎಂದು ಪತ್ತೆಹಚ್ಚಲಾಗಿದೆ.

ಇದನ್ನೂ ಓದಿ: ಬಿಸಿ ಹಾಲು ಕುಡಿದರೆ ನಿಜಕ್ಕೂ ಚೆನ್ನಾಗಿ ನಿದ್ರೆ ಬರುತ್ತಾ?

ಮತ್ತೊಂದೆಡೆ, ತಮ್ಮ ಮೂಗಿನ ಮೂಲಕ ಉಸಿರಾಡುವ ಜನರು ಮೂಗಿನ ದಟ್ಟಣೆಯ ಅರ್ಧಕ್ಕಿಂತ ಕಡಿಮೆ ಪ್ರಮಾಣವನ್ನು ಅನುಭವಿಸುತ್ತಾರೆ. ಮೂಗಿನ ದಟ್ಟಣೆಯನ್ನು ಅನುಭವಿಸುತ್ತಿರುವವರಲ್ಲಿ ಶೇ. 38ರಷ್ಟು ಜನರು ಸರಿಯಾಗಿ ನಿದ್ರೆ ಮಾಡುವುದಿಲ್ಲ.

ಈ ರೀತಿ ಮೂಗಿನ ಬದಲು ಬಾಯಿಯಲ್ಲಿ ಉಸಿರಾಡುವ ಮೂವರಲ್ಲಿ ಒಬ್ಬರು ಮೂಗು ಸೋರುವಿಕೆಯ ಸಮಸ್ಯೆಯನ್ನು ಹೊಂದಿದ್ದಾರೆ. ಶೇ. 31ರಷ್ಟು ಜನರು ಸೈನಸ್ ಒತ್ತಡ ಮತ್ತು ನೋವಿನಿಂದ ಬಳಲುತ್ತಿದ್ದಾರೆ. ಶೇ. 31ರಷ್ಟು ಜನರು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಬಾಯಿಯ ಉಸಿರಾಟವು ದೇಹಕ್ಕೆ ಕಡಿಮೆ ಆಮ್ಲಜನಕವನ್ನು ತಲುಪಿಸಲು ಕಾರಣವಾಗಬಹುದು. ಇದರಿಂದ ನಿದ್ರೆಯಲ್ಲಿ ತೊಂದರೆ, ಹಗಲಿನ ವೇಳೆ ಹೆಚ್ಚಿನ ಆಯಾಸ ಉಂಟಾಗಬಹುದು. ಇದು ಬಾಯಿ ಒಣಗಲು ಕಾರಣವಾಗುತ್ತದೆ. ಇದರಿಂದ ಹಲ್ಲು ಕೊಳೆತ ಮತ್ತು ವಸಡಿನ ಕಾಯಿಲೆಯ ಅಪಾಯ ಹೆಚ್ಚುತ್ತದೆ.

ಇದನ್ನೂ ಓದಿ: ಹಲ್ಲುಗಳನ್ನು ಹೊಳೆಯುವಂತೆ ಮಾಡಲು ಮನೆಯಲ್ಲೇ ಇದೆ 8 ಸುಲಭ ಮಾರ್ಗ

ಬಾಯಿಯ ಉಸಿರಾಟ ಮತ್ತು ಮೂಗಿನ ದಟ್ಟಣೆಯನ್ನು ಕಡಿಮೆ ಮಾಡಲು ಸಲೈನ್ ಸ್ಪ್ರೇ ಅಥವಾ ಮೂಗಿನ ಡಿಕೊಂಜೆಸ್ಟೆಂಟ್ ಅನ್ನು ಬಳಸಿ. ಮಲಗುವಾಗ ನಿಮ್ಮ ತಲೆಯನ್ನು ಎತ್ತರದಲ್ಲಿಡಿ. ಅಂದರೆ, 2 ದಿಂಬುಗಳನ್ನು ಇಟ್ಟುಕೊಂಡು ಮಲಗಿ. ನಿಮಗೆ ಅಲರ್ಜಿ ಆಗುವ ವಸ್ತುಗಳಿಂದ ದೂರವಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ