ಹೊಟ್ಟೆಯ ಸುತ್ತಲಿನ ಕೊಬ್ಬು ಕರಗಿಸಲು ಕಾಮಕಸ್ತೂರಿ ಬೀಜ ಸಹಕಾರಿಯೇ ತಿಳಿದುಕೊಳ್ಳಿ!

ಕಾಮಕಸ್ತೂರಿ ಬೀಜಗಳನ್ನು ನೀರಿನಲ್ಲಿ ನೆನೆಸಿ ಸೇವಿಸುವುದು ಆರೋಗ್ಯಕರ ಆಹಾರದ ಒಂದು ಭಾಗ. ಇವುಗಳಲ್ಲಿ ಫೈಬರ್ ಇರುವುದರಿಂದ ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಈ ಅಂಶ ತೂಕ ನಿಯಂತ್ರಣಕ್ಕೆ ಸಹಕಾರಿಯಾಗಬಹುದು. ಹಾಗಾದರೆ ಸಬ್ಜಾ ಬೀಜ ಅಥವಾ ಕಾಮಕಸ್ತೂರಿ ಬೀಜಗಳಗಳನ್ನು ಯಾವ ಪ್ರಮಾಣದಲ್ಲಿ ಮತ್ತು ಹೇಗೆ ಸೇವಿಸಬೇಕು, ಇದು ಎಲ್ಲರಿಗೂ ಒಳ್ಳೆಯದೇ ಎಂಬುದರ ಬಗ್ಗೆ ಮಾಹಿತಿಯನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೊಟ್ಟೆಯ ಸುತ್ತಲಿನ ಕೊಬ್ಬು ಕರಗಿಸಲು ಕಾಮಕಸ್ತೂರಿ ಬೀಜ ಸಹಕಾರಿಯೇ ತಿಳಿದುಕೊಳ್ಳಿ!
Sabja Seeds For Weight Loss
Image Credit source: Getty Images

Updated on: Oct 01, 2026 | 9:38 PM

ಕಾಮಕಸ್ತೂರಿ ಬೀಜಗಳ (Basil Seeds) ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇದು ಹೊಟ್ಟೆಯ ಸುತ್ತಲಿನ ಕೊಬ್ಬು ಕರಗಿಸಲು ಸಹಕಾರಿಯಾಗಿದ್ದು ನಿಯಮಿತವಾಗಿ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಫೈಬರ್ ಸೇರಿದಂತೆ ಕೆಲವು ಪೋಷಕಾಂಶಗಳನ್ನು ಒದಗಿಸಬಹುದು. ಇವು ಹೊಟ್ಟೆ ತುಂಬಿದ ಅನುಭವ ನೀಡುವ ಮೂಲಕ ಒಟ್ಟಾರೆ ಕ್ಯಾಲೊರಿ ಸೇವನೆಯನ್ನು ನಿಯಂತ್ರಿಸಲು ಸಹಾಯ ಮಾಡಬಹುದು. ಹಾಗಾದರೆ ಸಬ್ಜಾ ಬೀಜ ಅಥವಾ ಕಾಮಕಸ್ತೂರಿ ಬೀಜಗಳಗಳನ್ನು ಯಾವ ಪ್ರಮಾಣದಲ್ಲಿ ಮತ್ತು ಹೇಗೆ ಸೇವಿಸಬೇಕು, ಇದು ಎಲ್ಲರಿಗೂ ಒಳ್ಳೆಯದೇ ಎಂಬುದರ ಬಗ್ಗೆ ಮಾಹಿತಿಯನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಾಮಕಸ್ತೂರಿ ಅಥವಾ ಸಬ್ಜಾಬೀಜ ಎಂದರೇನು?

ಸಬ್ಜಾಬೀಜಗಳನ್ನು ತುಳಸಿ ಬೀಜಗಳು ಎಂದೂ ಕೂಡ ಕರೆಯಲಾಗುತ್ತದೆ. ಇವುಗಳನ್ನು ಸಾಮಾನ್ಯವಾಗಿ ನೀರಿನಲ್ಲಿ ನೆನೆಸಿ ಪಾನೀಯ ಅಥವಾ ಆಹಾರಗಳಲ್ಲಿ ಬಳಸುತ್ತಾರೆ. ನೀರಿನಲ್ಲಿ ಹಾಕಿದಾಗ ಬೀಜಗಳ ಸುತ್ತ ಜೆಲ್‌ನಂತಹ ಪದರ ರೂಪುಗೊಳ್ಳುತ್ತದೆ. ಇದರಲ್ಲಿ ಆಹಾರದ ಫೈಬರ್ ಇರುವುದರಿಂದ ಜೀರ್ಣಕ್ರಿಯೆ ಮತ್ತು ಹೊಟ್ಟೆ ತುಂಬಿದ ಅನುಭವಕ್ಕೆ ನೆರವಾಗಬಹುದು.

ತೂಕ ನಿಯಂತ್ರಣಕ್ಕೆ ಹೇಗೆ ಸಹಾಯ ಮಾಡಬಹುದು?

ಸಬ್ಜಾಬೀಜ ಫೈಬರ್ ನೀರನ್ನು ಹೀರಿಕೊಂಡು ಹೊಟ್ಟೆ ಹೆಚ್ಚು ಸಮಯದವರೆಗೆ ತುಂಬಿದ ಅನುಭವ ನೀಡಬಹುದು. ಇದರಿಂದ ಪದೇಪದೇ ತಿನ್ನುವ ಅಭ್ಯಾಸ ಅಥವಾ ಅನಗತ್ಯ ಸ್ನ್ಯಾಕಿಂಗ್ ಕಡಿಮೆಯಾಗಲು ಸಹಾಯವಾಗಬಹುದು. ಆದರೆ ಸಬ್ಜಾಬೀಜಗಳನ್ನು ತಿನ್ನುವುದರಿಂದಲೇ ದೇಹದ ಕೊಬ್ಬು ಕೆಲವೇ ದಿನಗಳಲ್ಲಿ ಕರಗುತ್ತದೆ ಎಂಬುದಕ್ಕೆ ಸಾಕಷ್ಟು ವೈಜ್ಞಾನಿಕ ಸಾಕ್ಷ್ಯವಿಲ್ಲ. ಹೊಟ್ಟೆಯ ಸುತ್ತಲಿನ ಕೊಬ್ಬು ಕಡಿಮೆಯಾಗಲು ಒಟ್ಟಾರೆ ದೇಹದ ತೂಕ ಮತ್ತು ದೇಹದ ಕೊಬ್ಬು ಕಡಿಮೆಯಾಗುವುದು ಮುಖ್ಯವಾಗುತ್ತದೆ. ಇದಕ್ಕಾಗಿ ಎಲ್ಲದರ ಜೊತೆಗೆ ಸಮತೋಲಿತ ಆಹಾರ, ಸಾಕಷ್ಟು ಪ್ರೋಟೀನ್ ಮತ್ತು ಫೈಬರ್, ನಿಯಮಿತ ವ್ಯಾಯಾಮ, ಉತ್ತಮ ನಿದ್ರೆ ಹಾಗೂ ಅಗತ್ಯವಿದ್ದರೆ ಕ್ಯಾಲೊರಿ ನಿಯಂತ್ರಣ ಮುಖ್ಯವಾಗುತ್ತದೆ.

ಸಬ್ಜಾಬೀಜಗಳನ್ನು ಹೇಗೆ ಸೇವಿಸಬೇಕು?

ಒಂದು ಸಣ್ಣ ಪ್ರಮಾಣದಲ್ಲಿ ಈ ಸಬ್ಜಾಬೀಜಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನೆಸಿ ನಂತರ ಸೇವಿಸಬಹುದು. ಇದನ್ನು ನೇರವಾಗಿ ಅಂದರೆ ನೆನಸದೆಯೇ ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದನ್ನು ತಪ್ಪಿಸುವುದು ಉತ್ತಮ. ಇದರ ಜೊತೆಗೆ ನೀರನ್ನು ಕೂಡ ಸಾಕಷ್ಟು ಪ್ರಮಾಣದಲ್ಲಿ ಕುಡಿಯುವುದು ಮುಖ್ಯ, ಏಕೆಂದರೆ ಫೈಬರ್ ಸೇವನೆ ಹೆಚ್ಚಾದಾಗ ದೇಹಕ್ಕೆ ಸಾಕಷ್ಟು ದ್ರವ ಅಗತ್ಯವಾಗುತ್ತದೆ.

ಎಲ್ಲರೂ ಸೇವಿಸಬಹುದೇ?

ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಸೇವಿಸುವ ಅಭ್ಯಾಸವಿಲ್ಲದವರಿಗೆ ಆರಂಭದಲ್ಲಿ ಹೊಟ್ಟೆ ಉಬ್ಬರ ಅಥವಾ ಗ್ಯಾಸ್ ಉಂಟಾಗಬಹುದು. ಯಾವುದೇ ನಿರ್ದಿಷ್ಟ ಆರೋಗ್ಯ ಸಮಸ್ಯೆ, ಔಷಧಿ ಸೇವನೆ ಅಥವಾ ವಿಶೇಷ ಆಹಾರ ನಿರ್ಬಂಧಗಳಿದ್ದರೆ ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯುವುದು ಉತ್ತಮ. ಸಬ್ಜಾಬೀಜ ಆರೋಗ್ಯಕರ ಆಹಾರದ ಒಂದು ಭಾಗವಾಗಬಹುದು. ಆದರೆ ಇವು ಯಾವುದೇ ಫ್ಯಾಟ್ ಬರ್ನರ್ ಅಥವಾ ತೂಕ ಇಳಿಸುವ ಔಷಧಿಯಲ್ಲ. ಹೊಟ್ಟೆಯ ಕೊಬ್ಬು ಕಡಿಮೆಯಾಗಲು ದೀರ್ಘಕಾಲಿಕ ಆರೋಗ್ಯಕರ ಜೀವನಶೈಲಿಯೇ ಮುಖ್ಯವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Loading...
Unable to load recommendations.
Follow Us