SARS-CoV-2: ಬೆಕ್ಕುಗಳು ಕೋವಿಡ್-19 ಸೋಂಕನ್ನು ಹರಡಬಹುದು! ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 05, 2023 | 12:09 PM

ಕೋವಿಡ್ -19ಗೆ ಕಾರಣವಾಗುವ ಸಾರ್ಸ್​ ಕೋವ್​ 2 (SARS-CoV-2) ವೈರಸ್ ಬೆಕ್ಕುಗಳಿಂದ ಹರಡಬಹುದು ಪರಿಸರವೂ ಕಲುಷಿತ ಗೊಳ್ಳಬಹುದು ಎಂದು ಹೊಸ ಅಧ್ಯಯನವೊಂದರಲ್ಲಿ ತಿಳಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

SARS-CoV-2: ಬೆಕ್ಕುಗಳು ಕೋವಿಡ್-19 ಸೋಂಕನ್ನು ಹರಡಬಹುದು! ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಕೋವಿಡ್-19ಗೆ ಕಾರಣವಾಗುವ ಸಾರ್ಸ್​ ಕೋವ್​ 2 (SARS-CoV-2) ವೈರಸ್ ಹರಡುವಲ್ಲಿ ಬೆಕ್ಕುಗಳು ಪ್ರಮುಖ ಪಾತ್ರ ವಹಿಸಬಹುದು ಜೊತೆಗೆ ಪರಿಸರವೂ ಕಲುಷಿತ ಗೊಳ್ಳಬಹುದು ಎಂದು ಹೊಸ ಅಧ್ಯಯನವೊಂದರಲ್ಲಿ ತಿಳಿಸಿದೆ. ವಾಗೆನಿಂಗನ್ ವಿಶ್ವವಿದ್ಯಾಲಯ ಮತ್ತು ನೆದರ್ಲ್ಯಾಂಡ್ಸ್​​ನ ಸಂಶೋಧಕರು ಸೋಂಕಿತ ವ್ಯಕ್ತಿಯೊಬ್ಬನಲ್ಲಿದ್ದ ಸಾರ್ಸ್​ ಕೋವ್ ವೈರಸ್​ ಸೋಂಕುಗಳು ಬೆಕ್ಕುಗಳಲ್ಲಿ ಪರೋಕ್ಷವಾಗಿ ಕಂಡು ಬಂದಿದ್ದು, 16 ಬೆಕ್ಕುಗಳೊಂದಿಗೆ ಈ ಅಧ್ಯಯನ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ವೈರಸ್​​ಗೆ ನೇರವಾಗಿ ಒಡ್ಡಿಕೊಂಡ ಬೆಕ್ಕುಗಳನ್ನು ಮೂರು ವಾರಗಳ ಕಾಲ ಪರೀಕ್ಷಿಸಲಾಗಿದ್ದು. ಮೂಗಿನ ದ್ರವ ಪರೀಕ್ಷೆ(ನಾಸಾಲ್​ ಮಾದರಿ) ಮತ್ತು ಓರೊಫಾರ್ಂಜಿಯಲ್​ ಮಾದರಿಗಳನ್ನು ಮೂರು ಬಾರಿ ತೆಗೆದುಕೊಳ್ಳಲಾಗಿದೆ. ಅಧ್ಯಯನದ ಸಮಯದಲ್ಲಿ ಬಾಯಿ ಮತ್ತು ಗುದನಾಳ ಮಾದರಿಗಳನ್ನು ದಿನಕ್ಕೆ 15 ಬಾರಿ ಪರೀಕ್ಷಿಸಲಾಗಿದೆ. ಬೆಕ್ಕುಗಳ ನಡುವೆ ನೇರ ಮತ್ತು ಪರೋಕ್ಷ ಸಂಪರ್ಕದ ಮೂಲಕ ಸಾರ್ಸ್-ಕೋವ್-2 ​ ಪ್ರಸರಣವನ್ನು ಮೌಲ್ಯಮಾಪನ ಮಾಡಲಾಗಿದೆ. ಬೆಕ್ಕುಗಳು ಸಾರ್ಸ್​ ಕೊವ್ 2 ಸೋಂಕಿಗೆ ಒಳಗಾಗುತ್ತವೆ. ಅವು ಇತರೆ ಬೆಕ್ಕುಗಳಿಗೆ ಸೋಂಕು ಹರಡುತ್ತವೆ. ಈ ಮೂಲಕ ಪರಿಸರಕ್ಕೂ ತಗುಲುತ್ತದೆ ಎಂದು ಜರ್ನಲ್​ ಆಫ್​​​ ಅಮೆರಿಕನ್​ ಸೊಸೈಟಿ ಫಾರ್​ ಮೈಕ್ರೊಬಯಾಲಾಜಿಯಲ್ಲಿ ಪ್ರಕಟಿಸಿದೆ. ಜೊತೆಗೆ ಬೆಕ್ಕುಗಳು ಸಾರ್ಸ್​ ಕೋವ್ ಸೋಂಕು ಪ್ರಸರಣವನ್ನು ಸಮರ್ಥವಾಗಿ ಪ್ರಸರಣ ಮಾಡುತ್ತದೆ ಎಂದು ವಾನ್​ ಡೆರ್​ ಪೊಯೆಲ್​ ತಿಳಿಸಿದ್ದಾರೆ.

ಇದನ್ನೂ ಓದಿ:ಕೋವಿಡ್-19 ಇನ್ನು ಮುಂದೆ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಅಲ್ಲ; ವಿಶ್ವ ಆರೋಗ್ಯ ಸಂಸ್ಥೆ

ಬೆಕ್ಕಿನ ಸೋಂಕುಗಳು ಸಾರ್ಸ್​​ ಕೋವ್​ ಮೂಲಕ ಕಲುಷಿತ ವಾತಾವರಣಕ್ಕೆ ಹರಡುತ್ತದೆ. ಇದರ ಪ್ರಯೋಗಾಲಯಕ್ಕೆ ಮನೆಯಲ್ಲಿನ ಬೆಕ್ಕುಗಳನ್ನು ಸಾರ್ಸ್​ ಕೋವ್​ ಸೋಂಕಿಗೆ ಒಳಪಡಿಸಿ, ಅದು ಕುಟುಂಬದಲ್ಲಿ ಹೇಗೆ ಪ್ರಸರ ಮಾಡುತ್ತದೆ ಎಂಬುದನ್ನು ನೋಡಲಾಗಿದೆ. ಇದಕ್ಕೆ ಸಾಕ್ಷಿಯಾಗಿ 2022ರ ಜೂನ್​ನಲ್ಲಿ ಥಾಯ್ಲೆಂಡ್‌ನ ಪ್ರಿನ್ಸ್​ ಆಫ್​​​ ಸೊನಗ್ಕಲ ವಿಶ್ವವಿದ್ಯಾಲಯ ಸಂಶೋಧಕರು, ಮೊದಲ ಬಾರಿಗೆ ಬೆಕ್ಕುಗಳಿಂದ ಮಾನವರಿಗೆ ವೈರಸ್​ ಪ್ರಸರಣ ಬಗ್ಗೆ ತಿಳಿಸಿದರು. ಕೋವಿಡ್​ ಸೋಂಕಿತ ಬೆಕ್ಕು ಸೀನಿದ್ದರಿಂದ 32 ವರ್ಷದ ಆರೋಗ್ಯಯುತ ಮಹಿಳೆ ಆಗಸ್ಟ್​ 2021ರಲ್ಲಿ ಸೋಂಕಿಗೆ ತುತ್ತಾಗಿದ್ದರು ಜೊತೆಗೆ ಅದನ್ನು ಪರೀಕ್ಷಿಸಿದ್ದ ಪಶು ವೈದ್ಯರಿಗೂ ಈ ಸೋಂಕು ಹರಡಿತ್ತು ಎನ್ನಲಾಗಿದೆ. ಜೊತೆಗೆ ವಂಶವಾಹಿ ಅಧ್ಯಯನ ಕೂಡ ಸಾರ್ಸ್​ ಕೋವ್​ ವೈರಸ್​ ಅನ್ನು ಬೆಕ್ಕು ತನ್ನ ಮಾಲಕರಿಗೆ ಪ್ರಸರಣ ಮಾಡುತ್ತದೆ ಎಂಬ ಹೇಳಿಕೆಯನ್ನು ಬೆಂಬಲಿಸುತ್ತದೆ. ಈ ಸಂಬಂಧ ಎಮರ್ಜಿಂಗ್​ ಇನ್​ಫೆಕ್ಷನ್​ ಡಿಸೀಸ್​ ಜರ್ನಲ್​ನಲ್ಲಿ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ.

2021ರಲ್ಲಿ ಮೊದಲ ಬಾರಿಗೆ ಬ್ರಿಟನ್​ ವಿಜ್ಞಾನಿಗಳು ಮನೆಯಲ್ಲಿ ಸಾಕಿದ ಬೆಕ್ಕಿಗಳು ಕೋವಿಡ್​ ಸೋಂಕಿಗೆ ಒಳಗಾಗಿರುವುದನ್ನು ವರದಿ ಮಾಡಿವೆ. ನಾಯಿ ಮತ್ತು ಬೆಕ್ಕುಗಳಲ್ಲಿ ಸಾರ್ಸ್​ ಕೋವ್​ ಅಲ್ಫಾ ವೆರಿಯಂಟ್​ ಪತ್ತೆಯಾಗಿದೆ. ಎರಡು ಬೆಕ್ಕುಗಳು ಮತ್ತು ಒಂದು ನಾಯಿಗಳನ್ನು ಪಿಸಿಆರ್​ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ ಎಂದು ವೆಟರ್ನರಿ ರೆಕಾರ್ಡ್​ ಜರ್ನಲ್​ನಲ್ಲಿ ತಿಳಿಸಲಾಗಿದೆ. ಆದರೆ ಎರಡು ಬೆಕ್ಕುಗಳು ಮತ್ತು ಒಂದು ನಾಯಿ ಹೃದಯ ಕಾಯಿಲೆಯ ಚಿಹ್ನೆಗಳನ್ನು ಅಭಿವೃದ್ಧಿಪಡಿಸಿದ ಬಳಿಕ ಎರಡರಿಂದ ಆರು ವಾರಗಳ ನಂತರ ಈ ಪ್ರತಿಕಾಯ ಪತ್ತೆಯಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:09 pm, Mon, 5 June 23