AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವಾಗಲೂ ಸಿಹಿ ತಿನ್ನಬೇಕು ಅನಿಸುತ್ತಿದೆಯೇ? ಬಾಯಿಗೆ ಇದನ್ನು ಹಾಕಿಕೊಂಡರೆ ಸಾಕು

Diabetes: ಸಿಹಿ ಪದಾರ್ಥ ತಿನ್ನುವುದನ್ನು ನಿಯಂತ್ರಣದಲ್ಲಿಡಲು ಕೆಲವು ನಿಯಮಗಳನ್ನು ಅನುಸರಿಸಬೇಕು. ನಿಮಗೆ ಸಿಹಿ ತಿನ್ನಬೇಕು ಅನಿಸಿದಾಗಲೆಲ್ಲಾ ನೀರು ಕುಡಿಯಿರಿ. ಒಂದು ಲೋಟ ನೀರು ಕುಡಿದರೆ ಬಾಯಾರಿಕೆ ನೀಗುತ್ತದೆ. ಸಿಹಿ ತಿನ್ನುವ ಆಸೆ ದೂರವಾಗುತ್ತದೆ.

ಯಾವಾಗಲೂ ಸಿಹಿ ತಿನ್ನಬೇಕು ಅನಿಸುತ್ತಿದೆಯೇ? ಬಾಯಿಗೆ ಇದನ್ನು ಹಾಕಿಕೊಂಡರೆ ಸಾಕು
ಯಾವಾಗಲೂ ಸಿಹಿ ತಿನ್ನಬೇಕು ಅನಿಸುತ್ತಿದೆಯೇ? ಬಾಯಿಗೆ ಇದನ್ನು ಹಾಕಿಕೊಂಡರೆ ಸಾಕು
ಸಾಧು ಶ್ರೀನಾಥ್​
|

Updated on: Jan 03, 2024 | 12:25 PM

Share

ಇಂದಿನ ಕಾಲದಲ್ಲಿ ಮಧುಮೇಹದ ಸಮಸ್ಯೆ ಪ್ರತಿ ಮನೆಯಲ್ಲೂ ಇದೆ. ಜಗತ್ತಿನಾದ್ಯಂತ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ದಿನೆದಿನೇ ಹೆಚ್ಚುತ್ತಿದೆ. ಒಮ್ಮೆ ಮಧುಮೇಹ ಬಂದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ, ಆದರೆ ಅದನ್ನು ನಿಯಂತ್ರಿಸಬಹುದು. ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಹಾರ್ಮೋನ್ ಸ್ರವಿಸುತ್ತದೆ. ಈ ಇನ್ಸುಲಿನ್ ಸ್ರವಿಸದಿದ್ದರೆ ಅಥವಾ ಅಗತ್ಯಕ್ಕಿಂತ ಕಡಿಮೆ ಇದ್ದರೆ, ಅನೇಕ ಸಮಸ್ಯೆಗಳು ಉದ್ಭವಿಸಬಹುದು. ಆಗ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುತ್ತದೆ. ಅಧಿಕ ತೂಕ ಇರುವವರಿಗೂ ಈ ಮಧುಮೇಹ ಬರುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತದೆ.

ಅಂತಹವರು ಕಡಿಮೆ ಸಕ್ಕರೆಯನ್ನು ಸೇವಿಸಬೇಕು. ಅದನ್ನು ತಿನ್ನದಿರುವುದೇ ಉತ್ತಮ. ಒಂದು ದಿನದಲ್ಲಿ 25 ಗ್ರಾಂ ಸಕ್ಕರೆಗಿಂತ ಹೆಚ್ಚು ತಿನ್ನಬೇಡಿ. ಆದರೆ ಸಕ್ಕರೆ ತಿನ್ನುವ ಬಯಕೆಯನ್ನು ನಿಯಂತ್ರಿಸಲಾಗುವುದಿಲ್ಲ. ಅದಕ್ಕಾಗಿಯೇ ಸಿಹಿ ಪದಾರ್ಥ ತಿನ್ನುವುದನ್ನು ನಿಯಂತ್ರಣದಲ್ಲಿಡಲು ಕೆಲವು ನಿಯಮಗಳನ್ನು ಅನುಸರಿಸಬೇಕು. ನಿಮಗೆ ಸಿಹಿ ತಿನ್ನಬೇಕು ಅನಿಸಿದಾಗಲೆಲ್ಲಾ ನೀರು ಕುಡಿಯಿರಿ. ಒಂದು ಲೋಟ ನೀರು ಕುಡಿದರೆ ಬಾಯಾರಿಕೆ ನೀಗುತ್ತದೆ. ಸಿಹಿ ತಿನ್ನುವ ಆಸೆ ದೂರವಾಗುತ್ತದೆ.

ಸಮಯಕ್ಕೆ ಸರಿಯಾಗಿ ಊಟ ಮಾಡಿ. ಸಮತೋಲಿತ ಊಟವನ್ನು ತೆಗೆದುಕೊಳ್ಳಿ. ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಮತ್ತು ಫೈಬರ್ ಇರುವಂತೆ ನೋಡಿಕೊಳ್ಳಬೇಕು. ಕಾಳುಗಳು, ಧಾನ್ಯಗಳು, ತರಕಾರಿಗಳು ಮತ್ತು ಹಣ್ಣುಗಳನ್ನು ಸಾಕಷ್ಟು ಸೇವಿಸಿ. ಇದು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವುದಿಲ್ಲ. ಅದಕ್ಕಾಗಿಯೇ ನೀವು ಸರಿಯಾದ ಸಮಯಕ್ಕೆ ತಿನ್ನಬೇಕು.

Also Read: ಕಾಲುಗಳು ಮತ್ತು ಕೈ ತೋಳುಗಳಲ್ಲಿ ಈ ಲಕ್ಷಣಗಳು ಇವೆಯೇ? ನಿಮಗೆ ರಕ್ತಹೀನತೆ ಇರಬಹುದು

ಊಟ ಮಾಡುವಾಗ ಸಂತೃಪ್ತಿಯಿಂದ ತಿನ್ನಿ. ಟಿವಿ, ಫೋನ್ ನೋಡುತ್ತಾ ಊಟ ಮಾಡಿದರೆ ಅತಿಯಾಗಿ ತಿನ್ನುವ ಸಾಧ್ಯತೆ ಇರುತ್ತದೆ. ಕಾರ್ಬೋಹೈಡ್ರೇಟ್ಗಳು ಮತ್ತು ಸಿಹಿತಿಂಡಿಗಳ ಹೆಚ್ಚು ಆಕರ್ಷಣೆಯಿಂಧ ಹೆಚ್ಚು ಹೆಚ್ಚು ಹೊಟ್ಟೆ ಸೇರುತ್ತದೆ. ಅದರ ಬದಲಾಗಿ, ನಿಧಾನವಾಗಿ ಶಾಂತರಾಗಿ ತಿನ್ನಿ.

ಸಾಕಷ್ಟು ನಿದ್ರೆ ಮಾಡಬೇಕು. ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಕೇಕ್, ಸಿಹಿತಿಂಡಿಗಳು ಮತ್ತು ಪೇಸ್ಟ್ರಿಗಳನ್ನು ಮನೆಗೆ ತೆಗೆದುಕೊಂಡು ಹೋಗಬೇಡಿ. ಕಡಿಮೆ ಮಾತ್ರ ತಿನ್ನಿ. ಕೃತಕ ಸಿಹಿಕಾರಕಗಳನ್ನು ತಪ್ಪಿಸಿ. ಕೋಕಾ ಕೋಲಾ, ಥಮ್ಸ್​ಅಪ್ ಮುಂತಾದ ತಂಪು ಪಾನೀಯಗಳನ್ನು ಕುಡಿಯಬೇಡಿ. ಹಣ್ಣಿನ ರಸ ಮತ್ತು ಕ್ಯಾನ್ ನೀರನ್ನು ಕುಡಿಯಿರಿ. ಪ್ರತಿದಿನ ವಾಕಿಂಗ್​ ಮಾಡಿ. ಹೀಗೆ ಮಾಡುವುದರಿಂದ ತಿನ್ನುವುದರಲ್ಲಿ ಹೆಚ್ಚು ಆಸಕ್ತಿ ಇರುವುದಿಲ್ಲ. ನೀವು ಬಾಯಿಯಲ್ಲಿ ಗಮ್ ಅನ್ನು ಜಗಿಯುತ್ತಿದರೆ ನಿಮಗೆ ಹೆಚ್ಚು ಸಿಹಿ ತಿನ್ನುವ ಬಯಕೆ ಆಗುವುದಿಲ್ಲ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ