AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

????? ??????: ಸಿಹಿ ವಿಷ -ಸಕ್ಕರೆ ಸಕ್ಕರೆಯೇ… ಅದು ಯಾವುದೇ ಸ್ವರೂಪದಲ್ಲಿ ಇರಲಿ, ಹಾಗಾಗಿ ಎಚ್ಚರಾ! ವಿವರ ಇಲ್ಲಿದೆ

ಹೆಚ್ಚುವರಿ ಸಕ್ಕರೆ ಸೇವನೆಯು ಕ್ಯಾನ್ಸರ್ ಅಪಾಯಕ್ಕೆ ಎಡೆ ಮಾಡಿಕೊಡುತ್ತದೆ. ಹೃದಯದ ಆರೋಗ್ಯ ಕ್ಷೀಣಿಸುವುದು, ಸೆಲ್ಯುಲಾರ್ ವಯಸ್ಸಾಗುವಿಕೆ ಹೆಚ್ಚಳ ಮತ್ತು ಚರ್ಮದ ವಯಸ್ಸಾಗುವಿಕೆ ಪ್ರಕ್ರಿಯೆ ತೀವ್ರಗೊಳ್ಳುತ್ತದೆ.

????? ??????: ಸಿಹಿ ವಿಷ -ಸಕ್ಕರೆ ಸಕ್ಕರೆಯೇ... ಅದು ಯಾವುದೇ ಸ್ವರೂಪದಲ್ಲಿ ಇರಲಿ, ಹಾಗಾಗಿ ಎಚ್ಚರಾ! ವಿವರ ಇಲ್ಲಿದೆ
ಸಿಹಿ ವಿಷ -ಸಕ್ಕರೆ ಸಕ್ಕರೆಯೇ... ಅದು ಯಾವುದೇ ಸ್ವರೂಪದಲ್ಲಿ ಇರಲಿ, ಹಾಗಾಗಿ ಎಚ್ಚರಾ! ವಿವರ ಇಲ್ಲಿದೆ
TV9 Web
| Updated By: ಸಾಧು ಶ್ರೀನಾಥ್​|

Updated on: Oct 06, 2022 | 6:06 AM

Share

ಕಂದು ಸಕ್ಕರೆ (ಬ್ರೌನ್ ಶುಗರ್) ಆರೋಗ್ಯಕರ, ಜೇನು ಸಾವಯವ ಎಂಬ ಘೋಷ ವಾಕ್ಯಗಳನ್ನು ಅಂಗಡಿಗಳಲ್ಲಿ ನಾವು ಅಲ್ಲಲ್ಲಿ ನೋಡುತ್ತಿರುತ್ತೇವೆ. ಬೆಲ್ಲವು ಸಾಂಪ್ರದಾಯಿಕ ಸಿಹಿಕಾರಕವಾಗಿದೆ ಮತ್ತು ಸಂಪ್ರದಾಯಗಳನ್ನು ಉಳಿಸಿ ಬೆಳೆಸಬೇಕು ಎಂಬಂತಹ ಮಾತುಗಳು ಆಗಾಗ್ಗೆ ನಮ್ಮ ಕಿವಿಗೆ ಅಪ್ಪಳಿಸುತ್ತಿರುತ್ತದೆ. ಹೌದು ಸಾಮಾನ್ಯ ದಿನಗಳಲ್ಲಿ… ಸಕ್ಕರೆ ಕುರಿತಾದ ಈ ಮಾತುಗಳು ಸಿಹಿ ಸಿಹಿಯೇ ಸರಿ. ಆದರೆ ಗಮನದಲ್ಲಿಟ್ಟುಕೊಳ್ಳಿ ಸಕ್ಕರೆ ಸಕ್ಕರೆಯೇ… ಅದು ಯಾವುದೇ ಸ್ವರೂಪದಲ್ಲಿ ಇರಲಿ, ಹಾಗಾಗಿ ಎಚ್ಚರವಿರಲಿ. ಜಸ್ಟ್​ ಯಾವುದೇ ಉತ್ಪನ್ನದ ರೂಪವನ್ನು ಬದಲಾಯಿಸುವ ಮೂಲಕ, ಸೇವಿಸಲು ಅದು ಆರೋಗ್ಯಕರ ಎಂದು ಹೇಳಲುಬರುವುದಿಲ್ಲ. ಏಕೆಂದ್ರೆ ಅದರ ಮೂಲ ಗುಣ ಇದ್ದೇ ಇರುತ್ತದೆ ಎಂಬುದನ್ನು ಮರೆಯುವಂತಿಲ್ಲ.

ಬೆಲ್ಲ, ಜೇನುತುಪ್ಪ, ಬ್ರೌನ್ ಶುಗರ್, ಚಾಕೊಲೇಟ್, ಸಿಹಿ ಪದಾರ್ಥಗಳಲ್ಲಿ ಸಕ್ಕರೆ ಅಂಶ ಇದ್ದೇ ಇರುತ್ತದೆ. ಅದು ಮೂಲ ಸಂಸ್ಕರಿಸಿದ ಬಿಳಿ ಸಕ್ಕರೆಯ ಅಂಶ ಹೊಂದಿರುತ್ತದೆ. ಹಾಗಾಗಿಯೇ ಈ ಸಕ್ಕರೆಯ ಅಂಶವನ್ನು ಬಿಳಿ ವಿಷ ಎಂದು ಸರಿಯಾಗಿ ಹೇಳಲಾಗಿದೆ. ಅದೂ ಮಧುಮೇಹ (diabetic) ಇರುವವರಿಗಂತೂ ಅದು ಪಾಷಾಣವೇ ಸರಿ. ಏಕೆಂದರೆ ಅವೆಲ್ಲವೂ ಗ್ಲೈಸೆಮಿಕ್ ಇಂಡೆಕ್ಸ್‌ನಲ್ಲಿ (glycemic index ದೇಹದ ಇನ್ಸುಲಿನ್ ಮಟ್ಟದಲ್ಲಿ ಏರಿಳಿತವನ್ನು ಉಂಟುಮಾಡುತ್ತದೆ) ಹೆಚ್ಚಿನ ಸ್ಥಾನದಲ್ಲಿದೆ.

ಇನ್ನು ಇದರ ಜೊತೆಗೆ, ಅಧಿಕ ತೂಕದಿಂದ ಬಳಲುತ್ತಿರುವ ಜನರು ಇಂತಹ ಸಕ್ಕರೆಯನ್ನು ಸೇವಿಸುವುದು ಆರೋಗ್ಯಕರವಲ್ಲ. ಏಕೆಂದರೆ ಇದು ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ, ಇದು ದೇಹದಲ್ಲಿನ ಕೊಬ್ಬಿನ ನಿಕ್ಷೇಪಕ್ಕೆ ನೇರವಾಗಿ ಅನುಪಾತದಲ್ಲಿರುತ್ತದೆ.

ಅಷ್ಟೇ ಅಲ್ಲ, ಹೆಚ್ಚುವರಿ ಸಕ್ಕರೆ ಸೇವನೆಯು ಕ್ಯಾನ್ಸರ್ ಅಪಾಯಕ್ಕೆ ಎಡೆ ಮಾಡಿಕೊಡುತ್ತದೆ. ಹೃದಯದ ಆರೋಗ್ಯ ಕಳಪೆಯಾಗುವುದು, ಸೆಲ್ಯುಲಾರ್ ವಯಸ್ಸಾಗುವಿಕೆ ಹೆಚ್ಚಳ ಮತ್ತು ಚರ್ಮದ ವಯಸ್ಸಾಗುವಿಕೆ ಪ್ರಕ್ರಿಯೆ ತೀವ್ರಗೊಳ್ಳುತ್ತದೆ. ಆರೋಗ್ಯಕರ ಜೀವನವನ್ನು ನಡೆಸಲು, ಸಕ್ಕರೆ ಮತ್ತು ಅದರ ಪ್ರಕಾರಗಳಾದ ಜೇನುತುಪ್ಪ, ಬೆಲ್ಲ ಮತ್ತು ಕಂದು ಸಕ್ಕರೆಯನ್ನು ತ್ಯಜಿಸುವುದು ಮತ್ತು ಉತ್ತಮ ಪರ್ಯಾಯ ಮಾರ್ಗಗಳಿಗೆ ಬದಲಾಯಿಸಿಕೊಳ್ಳುವುದು ಉತ್ತಮವಾಗಿದೆ.

ಹಾಗಾದರೆ ಮುಂದಿನ ಪ್ರಶ್ನೆ… ಸಕ್ಕರೆಗೆ ಆರೋಗ್ಯಕರ ಪರ್ಯಾಯ ಲಭ್ಯವಿದೆಯೇ? ಇದಕ್ಕೆ ಉತ್ತರ, ಖಂಡಿತ ಇದೆ ಅನ್ನಬಹುದು.

ಸಂಸ್ಕರಿಸಿದ ಸಕ್ಕರೆಗೆ ಹತ್ತಿರವಾದ ಸ್ಟೀವಿಯಾವನ್ನು (Stevia) ಆರೋಗ್ಯಕರ ಪರ್ಯಾಯವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದನ್ನು ಸ್ಟೀವಿಯಾ (ಹಿಮಾಚಲದಲ್ಲಿ ‘ಮೀಠಿ ತುಳಸಿ’ ಎಂದೂ ಕರೆಯುತ್ತಾರೆ) ಎಂಬ ಸಸ್ಯದಿಂದ ತಯಾರಿಸಲಾಗುತ್ತದೆ. ಇದು ಸಾಮಾನ್ಯ ಸಕ್ಕರೆಗಿಂತ 6 ಪಟ್ಟು ಸಿಹಿಯಾಗಿರುತ್ತದೆ. ಸ್ಟೀವಿಯಾ ಸಕ್ಕರೆಗಿಂತ ಭಿನ್ನವಾಗಿ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇದು 1 ಗ್ರಾಂನಲ್ಲಿ ನಾಲ್ಕು ಕ್ಯಾಲೊರಿಗಳನ್ನು ಹೊಂದಿರುತ್ತದೆ.

ಸ್ಟೀವಿಯಾ ಎಂಬ ಸಸ್ಯವನ್ನು ಸ್ಟೀವಿಯಾ ರೆಬಜುಡಿಯಾನಾ ಎಂದೂ ಕರೆಯುತ್ತಾರೆ. ಸ್ಟೀವಿಯಾ ಎಂಬ ಸಕ್ಕರೆ ಅಂಶವನ್ನು ಸ್ಟೀವಿಯಾ ಗಿಡದ ಎಲೆಗಳಿಂದ ತಯಾರಿಸುತ್ತಾರೆ. ಇದು ಟೇಬಲ್ ಶುಗರ್​ ಗಿಂತ ಸಿಹಿಯಲ್ಲಿ ಪ್ರಖರವಾಗಿರುತ್ತದೆ. ಆದರೆ ಇದರಲ್ಲಿ ಕಾರ್ಬೊಹೈಡ್ರೇಟ್ಸ್​, ಕ್ಯಾಲೊರಿ ಮತ್ತು ಕೃತಕ ಪದಾರ್ಥಗಳು ಇರುವುದಿಲ್ಲ. ಇದನ್ನು ಬಹಳಷ್ಟು ಜನ ಇಷ್ಟಪಡುವುದಿಲ್ಲ. ಅದು ಕಹಿ ಸ್ವಾದದಲ್ಲಿ ಇರುತ್ತದೆ ಎಂಬ ತಕರಾರು ಇದೆ. ಇನ್ನು ಕೆಲವರಿಗೆ ಅದು ಪುದೀನಾದಂತೆ ರುಚಿಯಾಗಿರುತ್ತದೆ. ಒಮ್ಮೆ ನೀವೂ ಪ್ರಯತ್ನಿಸಿ ನೋಡಿ.

ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್