Summer Fruits: ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಲು ಬೇಸಿಗೆಯಲ್ಲಿ ಈ ಹಣ್ಣು ತಿನ್ನಿ

|

Updated on: Apr 29, 2024 | 6:06 PM

ಬೇಸಿಗೆಯಲ್ಲಿ ಸೆಖೆ ಹೆಚ್ಚಾಗಿರುವುದರಿಂದ ನಮ್ಮ ದೇಹಕ್ಕೆ ನೀರಿನಂಶ ಹೆಚ್ಚಾಗಿ ಬೇಕಾಗುತ್ತದೆ. ಬೆವರಿನ ಮೂಲಕ ನಮ್ಮ ನೀರಿನಂಶ ಹೊರಹೋಗುವುದರಿಂದಾಗಿ ನಾವು ಆ ಪೌಷ್ಟಿಕಾಂಶಗಳನ್ನು ಮತ್ತು ತೇವಾಂಶವನ್ನು ನಮ್ಮ ಆಹಾರದ ಮೂಲಕ ಮತ್ತೆ ತುಂಬಬೇಕಾಗುತ್ತದೆ. ಈ ಬೇಸಿಗೆಯಲ್ಲಿ ನೀವು ಸೇವಿಸಬೇಕಾದ ಹಣ್ಣುಗಳು ಯಾವುವು?

Summer Fruits: ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಲು ಬೇಸಿಗೆಯಲ್ಲಿ ಈ ಹಣ್ಣು ತಿನ್ನಿ
ಕಲ್ಲಂಗಡಿ
Image Credit source: istock
Follow us on

ನಮ್ಮ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ (Good Cholesterol) ಮತ್ತು ಕೆಟ್ಟ ಕೊಲೆಸ್ಟ್ರಾಲ್ (Bad Cholesterol) ಎಂಬ ಎರಡು ರೀತಿಯ ಕೊಬ್ಬಿನಂಶವಿರುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ನಮ್ಮ ದೇಹದ ತೂಕ ಹೆಚ್ಚಾಗಲು ಹಾಗೂ ಹೃದ್ರೋಗ, ಅಧಿಕ ರಕ್ತದೊತ್ತಡ, ಮಧುಮೇಹ (Diabetes) ಮುಂತಾದ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಆದರೆ, ಉತ್ತಮ ಕೊಲೆಸ್ಟ್ರಾಲ್ ನಮ್ಮ ಆರೋಗ್ಯಕ್ಕೆ ಅತ್ಯವಶ್ಯವಾಗಿದೆ. ಬೇಸಿಗೆಯಲ್ಲಿ ನಮ್ಮ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಅಥವಾ ಹೆಚ್​ಡಿಎಲ್ ಹೆಚ್ಚಿಸುವ ಹಣ್ಣುಗಳು ಯಾವುವು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಬೆರಿ:

ಬೆರಿ ಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿದ್ದು, ಅದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ನೈಸರ್ಗಿಕವಾಗಿ HDL ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕಲ್ಲಂಗಡಿ:

ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಕಲ್ಲಂಗಡಿಯನ್ನು ಸಕ್ಕರೆ ಅಂಶವಿರುವ ತಿಂಡಿ, ಆಹಾರಗಳ ಬದಲಾಗಿ ಬಳಸಬಹುದು.

ಇದನ್ನೂ ಓದಿ: ಬೇಸಿಗೆಯಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ 8 ಹಣ್ಣುಗಳಿವು

ಕಿವಿ ಹಣ್ಣು:

ಕಿವಿ ಹಣ್ಣು ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಬಹುದು. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ.

ಅವಕಾಡೊ:

ಆವಕಾಡೊಗಳು ಹೃದಯಕ್ಕೆ ಆರೋಗ್ಯಕರ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕಿತ್ತಳೆ:

ಕಿತ್ತಳೆ ಹಣ್ಣಿನ ನಿಯಮಿತ ಸೇವನೆಯು HDL ಕೊಲೆಸ್ಟ್ರಾಲ್ ಅನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಅನೇಕ ಸಂಶೋಧನಾ ಅಧ್ಯಯನಗಳು ತೋರಿಸಿವೆ.

ಇದನ್ನೂ ಓದಿ: ಮದ್ಯಪಾನ ಮಾಡುವಾಗ  ಈ ಆಹಾರಗಳನ್ನು ಸೇವಿಸಬೇಡಿ

ಪಪ್ಪಾಯಿ:

ಪಪ್ಪಾಯಿ ಬೇಸಿಗೆಯಲ್ಲಿ ಹೆಚ್ಚಾಗಿ ಲಭ್ಯವಿರುವ ಹಣ್ಣಾಗಿದ್ದು, ಇದು ಅಗತ್ಯವಾದ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪೀಚ್:

ಪೀಚ್‌ ಹಣ್ಣುಗಳು ಬೇಸಿಗೆಯ ಹಣ್ಣಾಗಿದ್ದು, ಇದು ಎಚ್‌ಡಿಎಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುವ ಪೋಷಕಾಂಶಗಳ ಉತ್ತಮ ಮೂಲವಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ