Summer Health Tips: ಬೇಸಿಗೆಯಲ್ಲಿ ಅರಿಶಿನ ಹಾಲು ಕುಡಿಯುವುದು ಸುರಕ್ಷಿತವೇ? ಈ ಬಗ್ಗೆ ತಜ್ಞರ ಅಭಿಪ್ರಾಯವೇನು? ಇಲ್ಲಿದೆ ಮಾಹಿತಿ

| Updated By: ಅಕ್ಷತಾ ವರ್ಕಾಡಿ

Updated on: May 14, 2023 | 10:06 AM

ಬೇಸಿಗೆಯಲ್ಲಿ ಅರಿಶಿನ ಹಾಲು ಕುಡಿಯುವುದು ಒಳ್ಳೆಯದಲ್ಲ ಎಂಬ ಮಾತನ್ನು ನೀವು ಕೇಳಿರಬಹುದು ಆದರೆ ಅದು ಸತ್ಯವೋ ಸುಳ್ಳೋ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Summer Health Tips: ಬೇಸಿಗೆಯಲ್ಲಿ ಅರಿಶಿನ ಹಾಲು ಕುಡಿಯುವುದು ಸುರಕ್ಷಿತವೇ? ಈ ಬಗ್ಗೆ ತಜ್ಞರ ಅಭಿಪ್ರಾಯವೇನು? ಇಲ್ಲಿದೆ ಮಾಹಿತಿ
Turmeric milk in summer
Image Credit source: NDTV
Follow us on

ಮನೆಮದ್ದುಗಳ ವಿಷಯಕ್ಕೆ ಬಂದಾಗ, ಅರಿಶಿನ ಹಾಲು ನಿಸ್ಸಂದೇಹವಾಗಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುತ್ತದೆ. ಇದು ಅನಾದಿ ಕಾಲದಿಂದಲೂ ಪ್ರತಿ ಭಾರತೀಯ ಮನೆಯಲ್ಲಿಯೂ ಒಂದು ಭಾಗವಾಗಿದೆ. ಇದನ್ನು ಕೆಲವು ಮನೆಗಳಲ್ಲಿ ಚಿನ್ನದ ಹಾಲು ಅಥವಾ ಚಿನ್ನದಿಂದ ಮಾಡಿದ ಹಾಲು ಎಂದು ಕರೆಯುತ್ತಾರೆ. ಈ ಅರಿಶಿನ ಹಾಲನ್ನು ರಾತ್ರಿಯಲ್ಲಿ ಕುಡಿಯುವ ಸಂಪ್ರದಾಯವು ತಲೆಮಾರುಗಳಿಂದ ಬಂದಿದೆ. ಕೆಮ್ಮು, ನೆಗಡಿ, ಚರ್ಮದ ಸಮಸ್ಯೆ ಅಥವಾ ಗಾಯಕ್ಕೆ, ಒಂದು ಲೋಟ ಅರಿಶಿನ ಹಾಲನ್ನು ಕುಡಿದರೆ ಎಲ್ಲದಕ್ಕೂ ಪರಿಹಾರವೆಂದು ಪರಿಗಣಿಸಲಾಗಿದೆ. ಏಕೆ? ಎಂಬ ಪ್ರಶ್ನೆ ಉದ್ಭವ ವಾಗಬಹುದು ಅದ್ಕಕೆ ಕಾರಣ ಅರಿಶಿನವು ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಗುಣಲಕ್ಷಣಗಳಿಂದ ತುಂಬಿದೆ. ಡಿಕೆ ಪಬ್ಲಿಷಿಂಗ್ ಹೌಸ್ನ ‘ಹೀಲಿಂಗ್ ಫುಡ್ಸ್’ ಪುಸ್ತಕದ ಪ್ರಕಾರ, ಅರಿಶಿನವು ಕರ್ಕ್ಯುಮಿನ್ ಎಂಬ ಸಂಯುಕ್ತವನ್ನು ಹೊಂದಿದೆ. ಜೊತೆಯಲ್ಲಿ ಪ್ರಬಲ ಉತ್ಕರ್ಷಣ ನಿರೋಧಕ, ದೇಹದಲ್ಲಿ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಅಜೀರ್ಣ, ಕರುಳಿನ ಸಮಸ್ಯೆಗಳು, ಕೆಮ್ಮು, ಶೀತ ಮತ್ತು ಜ್ವರ ಸೇರಿದಂತೆ ವಿವಿಧ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ.

ಅರಿಶಿನ ಹಾಲಿನ ಪ್ರಯೋಜನಗಳು ಮತ್ತು ಅದನ್ನು ತಯಾರಿಸುವ ವಿವಿಧ ವಿಧಾನಗಳ ಬಗ್ಗೆ ನಿಮಗೆ ಅನೇಕ ಮಾಹಿತಿ ಸಿಗಬಹುದು ಆದರೆ ಈ ಎಲ್ಲಾ ಮಾಹಿತಿಯ ನಡುವೆ, ಅರಿಶಿನವು ದೇಹದ ಶಾಖವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಇದು ಸಾಕಷ್ಟು ಗೊಂದಲ ಗೊಳಿಸಬಹುದು, ಆದರೆ ಇದರ ಸತ್ಯಾಸತ್ಯತೆ ತಿಳಿಯಲು, ಕಾಲ್ಪನಿಕತೆಯಿಂದ ಬೇರ್ಪಡಿಸಲು, ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿದೆ ಮಾಹಿತಿ.

ಅರಿಶಿನ ಹಾಲಿನಿಂದಾಗುವ ಪ್ರಯೋಜನಗಳೇನು?

1. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ:

ಅರಿಶಿನವು ಪಿತ್ತರಸವನ್ನು ಉತ್ಪಾದಿಸಲು ಪಿತ್ತಕೋಶಕ್ಕೆ ಸಹಾಯ ಮಾಡುತ್ತದೆ. ಅಲ್ಲದೆ ಇದು ಜೀರ್ಣಕ್ರಿಯೆ ಮತ್ತು ಒಟ್ಟಾರೆ ಕರುಳಿನ ಆರೋಗ್ಯವನ್ನು ಉತ್ತೇಜಿಸಲು ಮತ್ತಷ್ಟು ಸಹಾಯ ಮಾಡುತ್ತದೆ.

2. ಗಾಯಗಳನ್ನು ಗುಣಪಡಿಸುತ್ತದೆ:

ಅರಿಶಿನ ಪಾನೀಯದಲ್ಲಿನ ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಲಕ್ಷಣಗಳು ಉರಿಯೂತವನ್ನು ಶಮನಗೊಳಿಸಲು ಮತ್ತು ಗಾಯಗಳನ್ನು ವೇಗವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ.

3. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ಪಾನೀಯದಲ್ಲಿರುವ ಹಾಲು ಮತ್ತು ಅರಿಶಿನ ಎರಡೂ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸೇರಿದಂತೆ ಆರೋಗ್ಯಕರ ಪದಾರ್ಥಗಳನ್ನು ಹೊಂದಿರುತ್ತವೆ. ಈ ಎಲ್ಲಾ ಪೋಷಕಾಂಶಗಳು ನಮ್ಮನ್ನು ಒಳಗಿನಿಂದ ಪೋಷಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

4. ಕೀಲು ನೋವು ಮತ್ತು ದೇಹದ ನೋವನ್ನು ಕಡಿಮೆ ಮಾಡುತ್ತದೆ:

ಹಾಲಿನಲ್ಲಿರುವ ಕ್ಯಾಲ್ಸಿಯಂ ಮತ್ತು ಅರಿಶಿನದಲ್ಲಿರುವ ಉರಿಯೂತ ಶಮನಕಾರಿ ಗುಣಗಳು ದೇಹದಲ್ಲಿನ ಯಾವುದೇ ರೀತಿಯ ನೋವಿನ ವಿರುದ್ಧ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿಯೇ ಕಠಿಣ ಜಿಮ್ ಅಥವಾ ತೂಕ ತರಬೇತಿ ಅವಧಿಯ ಬಳಿಕ ಜನರು ಹಲ್ದಿ ದೂಧ್ ಕುಡಿಯುವುದನ್ನು ನೀವು ಹೆಚ್ಚಾಗಿ ಕಾಣಬಹುದು.

5. ಕೆಮ್ಮು ಮತ್ತು ಶೀತವನ್ನು ತಡೆಗಟ್ಟುತ್ತದೆ:

ಈ ಪಾನೀಯವು ದೇಹವು ಉತ್ತಮವಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಪ್ರತಿಯೊಂದು ಅಗತ್ಯ ಪೋಷಕಾಂಶಗಳ ಭಂಡಾರವಾಗಿದೆ. ಇದು ಸಾಮಾನ್ಯ ಶೀತ ಮತ್ತು ಜ್ವರ ಸೇರಿದಂತೆ ಕಾಲೋಚಿತ ರೋಗಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಇದನ್ನೂಓದಿ: ಹೆಚ್ಚಿನ ಸಕ್ಕರೆ ಸೇವನೆ ವೇಗವರ್ಧಿತ ವಯಸ್ಸಾಗುವಿಕೆಗೆ ಕಾರಣವಾಗುತ್ತದೆ

ಅರಶಿನ ಹಾಲು ದೇಹದ ಶಾಖವನ್ನು ಹೆಚ್ಚಿಸುತ್ತದೆಯೇ?

ಆಯುರ್ವೇದದ ಪ್ರಕಾರ, ಅರಿಶಿನವು ತಾಪನ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ, ಹಾಗಾಗಿ ದೇಹದ ಶಾಖವನ್ನು ಹೆಚ್ಚಿಸುವುದಿಲ್ಲ. ಅಲ್ಲದೆ ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ಜ್ವರ, ಶೀತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದನ್ನು ‘ತ್ರಿದೋಶಿಕ್’ ಎಂದು ಪರಿಗಣಿಸಲಾಗುತ್ತದೆ, ಅಂದರೆ ಅರಿಶಿನವು ವಾತ, ಪಿತ್ತ ಮತ್ತು ಕಫ ಎಂಬ ಮೂರು ದೋಷಗಳ ನಡುವೆ ಸಮತೋಲನವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಆದರೆ ತಜ್ಞರು ಹೇಳುವ ಪ್ರಕಾರ ಅರಿಶಿನ ಮಿತಿಮೀರಿ ಹೋಗುವುದರಿಂದ ಸಮತೋಲನ ಭಂಗವಾಗಲುಬಹುದು ಮತ್ತು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳುತ್ತಾರೆ.

ಬೇಸಿಗೆಯಲ್ಲಿ ಅರಶಿನ ಹಾಲು ಕುಡಿಯುವುದು ಸುರಕ್ಷಿತವೇ?

ಪೌಷ್ಟಿಕ ತಜ್ಞೆ ರೂಪಾಲಿ ದತ್ತಾ ಹೇಳುವ ಪ್ರಕಾರ “ವರ್ಷವಿಡೀ ಅರಿಶಿನ ಹಾಲು (ಹಲ್ದಿ ದೂಧ್) ಕುಡಿಯಬಹುದು. ಆದರೆ ನೀವು ಮಾಡಬೇಕಾಗಿರುವುದು ನೀವು ಎಷ್ಟು ಅರಿಶಿನ (ಹಲ್ದಿ) ತೆಗೆದುಕೊಳ್ಳುತ್ತಿದ್ದೀರಿ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಇದನ್ನು ಅತಿಯಾಗಿ ಸೇವಿಸುವುದರಿಂದ ಹೊಟ್ಟೆ ನೋವು, ವಾಕರಿಕೆ, ತಲೆತಿರುಗುವಿಕೆ ಮತ್ತು ದೇಹದಲ್ಲಿ ನೋವು ಉಂಟಾಗಬಹುದು” ಎಂದಿದ್ದಾರೆ. ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಬೇಸಿಗೆಯಲ್ಲಿಯೂ ಸಹ ಮಧ್ಯಮ ಪ್ರಮಾಣದಲ್ಲಿ ಅರಿಶಿನ ದೂಧ್ ತೆಗೆದುಕೊಳ್ಳಬಹುದು ಎಂದು ಅವರು ಶಿಫಾರಸು ಮಾಡುತ್ತಾರೆ.

ಒಂದು ದಿನದಲ್ಲಿ ನೀವು ಎಷ್ಟು ಪ್ರಮಾಣದಲ್ಲಿ ಅರಿಶಿನ ತೆಗೆದುಕೊಳ್ಳಬೇಕು?

ಪಾನೀಯದಲ್ಲಿ ಸುಮಾರು ನಾಲ್ಕನೇ ಒಂದು ಟೀ ಸ್ಪೂನ್ ಅರಿಶಿನ ಮತ್ತು ದಿನವಿಡೀ ಸುಮಾರು ಒಂದು ಟೀ ಸ್ಪೂನ್ ಸೇವಿಸಲು ಸಾಮಾನ್ಯವಾಗಿ ರೂಪಾಲಿ ದತ್ತಾ ಶಿಫಾರಸು ಮಾಡುತ್ತಾರೆ. ಅತಿಯಾದ ಸೇವನೆ ಬೇಸಿಗೆಯಲ್ಲಿ ಒಳ್ಳೆಯದಲ್ಲ.

ಅರಶಿನ ಹಾಲು ಕುಡಿಯಲು ಉತ್ತಮ ಸಮಯ ಯಾವುದು?

ಅರಿಶಿನದ ಪ್ರಯೋಜನಗಳನ್ನು ಸಂಪೂರ್ಣವಾಗಿ ಆನಂದಿಸಲು ಆರೋಗ್ಯ ತಜ್ಞರು ರಾತ್ರಿಯಲ್ಲಿ, ಮಲಗುವ ಮೊದಲು, ಒಂದು ಲೋಟ ಅರಿಶಿನದ ಹಾಲು ಕುಡಿಯಲು ಸೂಚಿಸುತ್ತಾರೆ. ಇದು ನೋವನ್ನು ಶಮನಗೊಳಿಸುತ್ತದೆ ಮತ್ತು ಉತ್ತಮ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಅದಲ್ಲದೆ ಅರಿಶಿನದ ಹಾಲನ್ನು ವರ್ಷವಿಡೀ ಸೇವಿಸಬಹುದು ಜೊತೆಗೆ ಯಾವುದೇ ಚಿಂತೆಯಿಲ್ಲದೆ ನಿಮ್ಮ ಬೇಸಿಗೆಯ ಆಹಾರದಲ್ಲಿ ಸೇರಿಸಿ ಎಂದು ತಜ್ಞರೂ ಹೇಳುತ್ತಾರೆ. ಆದರೆ ನಿಮ್ಮ ಒಟ್ಟಾರೆ ಆಹಾರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಮೊದಲು ತಜ್ಞರನ್ನು ಸಂಪರ್ಕಿಸುವುದು ಉತ್ತಮವಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 10:05 am, Sun, 14 May 23