Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಲಾರಸದ ಆಶ್ಚರ್ಯಕರ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ? ನಾಯಿ ಸೇರಿದಂತೆ ಅನೇಕ ಪ್ರಾಣಿಗಳು ಗಾಯಗೊಂಡಾಗ ಅದನ್ನು ನೆಕ್ಕುತ್ತದೆ! ಏಕೆ ಗೊತ್ತಾ?

Health Benefits Saliva: ಇಂತಹ ಅನೇಕ ಸರಳ ಉಪಾಯಗಳನ್ನು ನಮ್ಮ ಹಿರಿಯರು ನಮಗೆ ನೀಡಿದ್ದಾರೆ. ಆದರೆ ಮುಂದಿನ ಪೀಳಿಗೆಗೆ ಈ ಜ್ಞಾನವನ್ನು ರವಾನಿಸದೆ ಇರುವುದರಿಂದ ಅದರ ಬಗ್ಗೆ ತಿಳಿವಳಿಕೆ ಇಲ್ಲದೆ ಅದನ್ನು ಬಳಸಲು ಹಿಂದೆಮುಂದೆ ನೋಡುತ್ತೇವೆ.

ಲಾಲಾರಸದ ಆಶ್ಚರ್ಯಕರ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ? ನಾಯಿ ಸೇರಿದಂತೆ ಅನೇಕ ಪ್ರಾಣಿಗಳು ಗಾಯಗೊಂಡಾಗ ಅದನ್ನು ನೆಕ್ಕುತ್ತದೆ! ಏಕೆ ಗೊತ್ತಾ?
ಲಾಲಾರಸದ ಆಶ್ಚರ್ಯಕರ ಪ್ರಯೋಜನಗಳು
Follow us
ಸಾಧು ಶ್ರೀನಾಥ್​
|

Updated on:Jun 10, 2023 | 3:17 PM

ಲಾಲಾರಸವು ದೇವರು ತನ್ನ ಸೃಷ್ಟಿಯಲ್ಲಿ ನೀಡಿದ ದೊಡ್ಡ ವರವಾಗಿದೆ. ಇದು ಮನುಷ್ಯರಲ್ಲಿ ಮಾತ್ರವಲ್ಲದೆ ಪ್ರಾಣಿಗಳಲ್ಲಿಯೂ ಉತ್ಪತ್ತಿಯಾಗುವ ಪವಾಡ ಔಷಧಿಯಾಗಿದೆ (Benefits of Saliva). ಪ್ರಾಣಿಗಳು ಗಾಯಗೊಂಡರೆ ವೈದ್ಯರ ಬಳಿಗೆ ಹೋಗುವುದಿಲ್ಲ. ಅವು ತಮ್ಮ ಗಾಯಗಳನ್ನು ನೆಕ್ಕುತ್ತವೆ. ಅವುಗಳಿಗೆ ಅದರಿಂದಲೇ ಗಾಯಗಳು ವಾಸಿಯಾಗುತ್ತವೆ. ಮನುಷ್ಯರ ವಿಷಯದಲ್ಲೂ ಅದೇ ಅನ್ವಯಿಸುತ್ತದೆ. ಗಾಯವಾದ ಜಾಗಕ್ಕೆ ಲಾಲಾರಸವನ್ನು ಹಚ್ಚಬೇಕು. ಅದು ಸ್ವಲ್ಪ ಸಮಯದಲ್ಲೇ ವಾಸಿಯಾಗುತ್ತದೆ (Health Benefits).

ದೇವರು ನಮ್ಮ ಬಾಯಲ್ಲಿಯೇ ಎಲ್ಲ ರೋಗಗಳಿಗೂ ಮದ್ದು ಇಟ್ಟಿದ್ದಾನೆ. ಲಾಲಾರಸವನ್ನು ಚಿಕಿತ್ಸೆಗಾಗಿ ಬಳಸುವ ಈ ಕಲ್ಪನೆಗೆ ಹಲವರು ನಗಬಹುದು. ಅನೇಕರು ಈ ಕಲ್ಪನೆಯ ಬಗ್ಗೆ ಅಸಹ್ಯಪಡಬಹುದು. ಆದರೆ ಇದು ದೇವರು ನಮಗೆಲ್ಲರಿಗೂ ಅನುಗ್ರಹಿಸಿರುವ ಅತ್ಯುತ್ತಮ ನೈಸರ್ಗಿಕ ಚಿಕಿತ್ಸೆಯಾಗಿದೆ. ತುಂಬಾ ಗಂಭೀರವಾದ ಕಣ್ಣಿನ ಸಮಸ್ಯೆಗಳನ್ನು ಲಾಲಾರಸದಿಂದ ಗುಣಪಡಿಸುವುದನ್ನು ನೋಡಿದ್ದೇವೆ.

ಇಂತಹ ಅನೇಕ ಸರಳ ಉಪಾಯಗಳನ್ನು ನಮ್ಮ ಹಿರಿಯರು ನಮಗೆ ನೀಡಿದ್ದಾರೆ. ಆದರೆ ಮುಂದಿನ ಪೀಳಿಗೆಗೆ ಈ ಜ್ಞಾನವನ್ನು ರವಾನಿಸದೆ ಇರುವುದರಿಂದ ಅದರ ಬಗ್ಗೆ ತಿಳಿವಳಿಕೆ ಇಲ್ಲದೆ ಅದನ್ನು ಬಳಸಲು ಹಿಂದೆಮುಂದೆ ನೋಡುತ್ತೇವೆ.

ಇನ್ನು ನಮ್ಮ ಹಲ್ಲು ಮತ್ತು ವಸಡು ಗಟ್ಟಿಮುಟ್ಟಿಯಾಗಿದೆ ಅಂದರೆ ಅದಕ್ಕೆ ಕಾರಣ ಸದಾ ಬಾಯಲ್ಲಿರುವ ಲಾಲಾರಸ ಕಾರಣವಾಗಿದೆ. ಅದು ನೈಸರ್ಗಿಕವಾಗಿ ಹಲ್ಲು-ವಸಡನ್ನು ಸದೃಢವಾಗಿಟ್ಟಿರುತ್ತದೆ. ನಮಗೆ ತಿಳಿಯದೇ ಲಾಲಾರಸ ತನ್ನ ಕೆಲಸ ಮಾಡುತ್ತಿರುತ್ತದೆ.

ಬರ್ಗರ್​​, ಪಾಸ್ಟಾ ಮತ್ತು ಬ್ರೆಡ್‌ನಂತಹ ಆಹಾರಗಳಲ್ಲಿನ ಪಿಷ್ಟವು ಸಕ್ಕರೆಯ ಮತ್ತೊಂದು ರೂಪವಾಗಿದೆ. ಇದು ತಿನ್ನುವ ನಂತರ ಬಾಯಿಯಲ್ಲಿ ಉಳಿದುಬಿಟ್ಟರೆ ಹಲ್ಲಿನ ಕುಳಿಗಳ ಬೆಳವಣಿಗೆಗೆ ಕಾರಣೀಭೂತವಾಗುತ್ತದೆ. ನಿಮ್ಮ ಹಲ್ಲುಗಳ ಆರೋಗ್ಯಕ್ಕೆ ಕಾಪಾಡುವ ನಿಟ್ಟಿನಲ್ಲಿ ಈ ಅಪಾಯಕಾರಿ ಪದಾರ್ಥಗಳನ್ನು ಸಕ್ರಿಯವಾಗಿ ವಿಭಜಿಸಲು ಲಾಲಾರಸವು ಕಾರ್ಯನಿರ್ವಹಿಸುತ್ತದೆ. ಸರಳ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳನ್ನು ವಿಭಜಿಸುವ ಮೂಲಕ, ಲಾಲಾರಸವು ನಿಮ್ಮ ಹಲ್ಲುಗಳು ಮತ್ತು ಒಸಡುಗಳಿಗೆ ಅವು ಅಂಟಿಕೊಂಡಿರುವುದರ ಬದಲು ಆ ವಸ್ತುಗಳನ್ನು ಹೊರಹಾಕಲು ಬಾಯಿಗೆ ಸುಲಭವಾಗುತ್ತದೆ, ಥ್ಯಾಂಕ್ಸ್ ಟು ಲಾಲಾರಸ.

ನೀವು ಮಧ್ಯಾಹ್ನ ಮತ್ತು ರಾತ್ರಿಯ ಊಟದಂತಹ ಭಾರೀ ಭೋಜನ ಸೇವಿಸಿದಾಗ, ಬಾಯಿಯು ಹೆಚ್ಚಿನ ಮಟ್ಟದ ಲಾಲಾರಸವನ್ನು ಸೃಷ್ಟಿಸುತ್ತದೆ! ಈ ಆಹಾರವನ್ನು ನುಂಗಲು ಮತ್ತು ಹೊಟ್ಟೆಗೆ ಹೋದ ಮೇಲೆ ನೀವು ತಿನ್ನುವ ಆಹಾರವನ್ನು ಜೀರ್ಣಿಸಿಕೊಳ್ಳಲು ಲಾಲಾರಸ ಕಾರಣವಾಗುತ್ತದೆ. ಹೆಚ್ಚಿದ ಲಾಲಾರಸದ ಹರಿವು ನಿಮ್ಮ ಹಲ್ಲುಗಳಿಗೆ ಒಂದು ರೀತಿಯ ಕಾರ್ ವಾಶ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದು ನಿಮ್ಮ ಬಾಯಿಯನ್ನು ಹೆಚ್ಚು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:   Star Fruit Benefits: ಸ್ಟಾರ್ ಫ್ರೂಟ್ ತಿನ್ನುವುದರಿಂದ ಎಷ್ಟೋ ಪ್ರಯೋಜನಗಳಿವೆ, ತಿಳಿದರೆ ಖಂಡಿತಾ ನೀವೂ ತಿನ್ನುತ್ತೀರಿ

ಕಾಂಜಂಕ್ಟಿವಿಟಿಸ್ ಕಣ್ಣಿನ ನೋವಿನ ಕಾಯಿಲೆಯಾಗಿದ್ದು, ಇದು ಅಸಹನೀಯ ಸುಡುವ ಸಂವೇದನೆಯೊಂದಿಗೆ ತೀವ್ರವಾದ ಕೆಂಪಾಗುವಿಕೆಗೆ ಕಾರಣವಾಗುತ್ತದೆ. ಕಣ್ಣಿನ ಸುತ್ತ ಲಾಲಾರಸವನ್ನು ಹಚ್ಚುವುದರಿಂದ ಕೆಂಪಾಗುವಿಕೆ ಮತ್ತು ಸುಡುವ ಸಂವೇದನೆ ಕಡಿಮೆಯಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳು ಕಣ್ಣಿಗೆ ಕನ್ನಡಕ ಹಾಕಿಕೊಳ್ಳುವುದು ಸಾಮಾನ್ಯವಾಗಿದೆ. ಮೂರು ತಿಂಗಳ ಕಾಲ ಮಗುವಿನ ಲಾಲಾರಸವನ್ನು ಅದರ ಕಣ್ಣಿನ ಸುತ್ತ ನಿಯಮಿತವಾಗಿ ಹಚ್ಚುವುದರಿಂದ ಕಣ್ಣಿನ ಕನ್ನಡಕವನ್ನು ಧರಿಸುವ ಹೊರೆಯಿಂದ ಮಗುವನ್ನು ಮುಕ್ತಗೊಳಿಸಬಹುದು. ಚರ್ಮದ ಮೇಲೆ ಲಾಲಾರಸವನ್ನು ಹಚ್ಚುವ ಮೂಲಕ ಕೆಲವು ದೀರ್ಘಕಾಲದ ಚರ್ಮದ ಸಮಸ್ಯೆಗಳನ್ನು ಸಹ ಗುಣಪಡಿಸಲಾಗಿದೆ ಎಂದು ಗಮನಿಸಲಾಗಿದೆ. ಸೋರಿಯಾಸಿಸ್ ಈ ರೀತಿ ಗುಣವಾಗುತ್ತದೆ.

Published On - 3:14 pm, Sat, 10 June 23

ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ನಟ್ಟು ಬೋಲ್ಟು ಸರಿಮಾಡುವ ಸ್ಪ್ಯಾನರ್ ಜನರ ಬಳಿ ಇರುತ್ತದೆ: ನಿಖಿಲ್
ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ಮತ್ತೆ ಹಳ್ಳಿ ಹುಡುಗಿ ಅವತಾರದಲ್ಲಿ ಸಪ್ತಮಿ ಗೌಡ; ಅನುಭವ ಹಂಚಿಕೊಂಡ ನಟಿ
ಕದಿಯಲು ಆಕೆಯದ್ದೇ ಬ್ಯಾಗ್​ ಬೇಕಿತ್ತಾ, ಯಾಕಾದ್ರೂ ಕದ್ನೋ ಅನ್ನೋ ಸ್ಥಿತಿ
ಕದಿಯಲು ಆಕೆಯದ್ದೇ ಬ್ಯಾಗ್​ ಬೇಕಿತ್ತಾ, ಯಾಕಾದ್ರೂ ಕದ್ನೋ ಅನ್ನೋ ಸ್ಥಿತಿ