ಪಾದಗಳಲ್ಲಿ ಊತ ಕಂಡು ಬರುವುದು ಈ ಕೆಲವು ರೋಗಗಳ ಲಕ್ಷಣಗಳಾಗಿರಬಹುದು ಎಚ್ಚರ!

| Updated By: ಆಯೇಷಾ ಬಾನು

Updated on: Aug 20, 2021 | 9:15 AM

ಪಾದಗಳ ಊತವನ್ನು ಹೆಚ್ಚು ನಿರ್ಲಕ್ಷ್ಯಿಸಬೇಡಿ. ಕಾಲುಗಳ ಪಾದಗಳಲ್ಲಿ ಊತ ಕಂಡು ಬರುವುದು ಇನ್ನಿತರ ಅನಾರೋಗ್ಯ ಸಮಸ್ಯೆಯನ್ನು ಸೂಚಿಸುವ ಲಕ್ಷಣಗಳೂ ಆಗಿರಬಹುದು.

ಪಾದಗಳಲ್ಲಿ ಊತ ಕಂಡು ಬರುವುದು ಈ ಕೆಲವು ರೋಗಗಳ ಲಕ್ಷಣಗಳಾಗಿರಬಹುದು ಎಚ್ಚರ!
ಸಾಂದರ್ಭಿಕ ಚಿತ್ರ
Follow us on

ಸಾಮಾನ್ಯವಾಗಿ ವಯಸ್ಸಾದಂತೆಯೇ ಪಾದಗಳು ಊದಿಕೊಳ್ಳುವ ಸಮಸ್ಯೆ ಕಾಡುತ್ತಲೇ ಇರುತ್ತದೆ. ನಿರಂತರವಾಗಿ ಖುರ್ಚಿಯಲ್ಲಿ ಕುಳಿತು ಕಾಲುಗಳನ್ನು ಇಳಿಬಿಟ್ಟು ಕುಳಿತು ಕೆಲಸ ಮಾಡುವ ಜನರಿಗೆ ಹೆಚ್ಚು ಪಾದಗಳ ಊತ ಸಮಸ್ಯೆ ಕಾಡತೊಡಗುತ್ತದೆ. ಪಾದಗಳ ಊತವನ್ನು ಹೆಚ್ಚು ನಿರ್ಲಕ್ಷ್ಯಿಸಬೇಡಿ. ಕಾಲುಗಳ ಪಾದಗಳಲ್ಲಿ ಊತ ಕಂಡು ಬರುವುದು ಇನ್ನಿತರ ಅನಾರೋಗ್ಯ ಸಮಸ್ಯೆಯನ್ನು ಸೂಚಿಸುವ ಲಕ್ಷಣಗಳೂ ಆಗಿರಬಹುದು. ಉಸಿರಾಟದ ತೊಂದರೆ ಅಥವಾ ಎದೆ ನೋವಿನೊಂದಿಗೆ ಕಾಲುಗಳ ಪಾದಗಳಲ್ಲಿ ಊತದ ಸಮಸ್ಯೆ ಕಾಡುತ್ತಿದ್ದರೆ ತಕ್ಷಣವೇ ವೈದ್ಯರಲ್ಲಿ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಿ.

ಮೂತ್ರ ಪಿಂಡದ ಸಮಸ್ಯೆ
ಪಾದಗಳಲ್ಲಿ ಊತ ಕಂಡು ಬರುತ್ತಿದ್ದರೆ ಅದು ಮೂತ್ರಪಿಂಡದ ಸಮಸ್ಯೆಯನ್ನು ಸೂಚಿಸುವ ಲಕ್ಷಣಗಳಲ್ಲಿ ಒಂದಾಗಿದೆ. ಮೂತ್ರಪಿಂಡ ಸರಿಯಾಗಿ ಕಾರ್ಯ ನಿರ್ವಹಿಸದ ಜನರಲ್ಲಿ ಪಾದಗಳ ಊತ ಸಮಸ್ಯೆ ಕಾಡುತ್ತದೆ. ಮೂತ್ರಪಿಂಡದ ಸಮಸ್ಯೆ ಕಾಡುತ್ತಿದ್ದರೆ ಉಸಿರಾಟದ ತೊಂದರೆ, ಕಾಲುಗಳಲ್ಲಿ ಊತ, ಕಡಿಮೆ ಮೂತ್ರ, ಆಯಾಸ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಹೃದಯ ಖಾಯಿಲೆಯ ಅಪಾಯ
ಕೆಲವೊಮ್ಮೆ ಹೃದಯ ಸರಿಯಾಗಿ ಕೆಲಸ ಮಾಡದಿದ್ದರೆ, ಹೃದಯಕ್ಕೆ ಸರಿಯಾಗಿ ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಕಾಲುಗಳ ಪಾದಗಳಲ್ಲಿ ಊತದ ಸಮಸ್ಯೆ ಕಾಡತೊಡಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರ ಜತೆಗೆ ತ್ವರಿತವಾದ ಹೃದಯ ಬಡಿತ, ಉಸಿರಾಟ ತೊಂದರೆ, ದೌರ್ಬಲ್ಯ, ಆಯಾಸ, ಹಸಿವು ಕಡಿಮೆಯಾಗುವ ಸಮಸ್ಯೆಗಳಂತಹ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಯಕೃತ್ತಿನ ಸಮಸ್ಯೆಗಳು
ಅಲ್ಬುಮಿನ್ ಎಂಬ ಪ್ರೋಟೀನ್ ನಿಮ್ಮ ರಕ್ತನಾಳಗಳಿಂದ ರಕ್ತ ಸೋರುವುದನ್ನು ತಡೆಗಟ್ಟುತ್ತದೆ. ಕೆಲವೊಮ್ಮೆ ಯಕೃತ್ತು ಅಲ್ಬುಮಿನ್ ಮಾಡುವುದನ್ನು ನಿಲ್ಲಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದೇಹದಲ್ಲಿ ಪ್ರೋಟೀನ್ ಕೊರತೆ ಕಂಡು ಬರುತ್ತದೆ. ಹಾಗಾಗಿ ಪಾದಗಳಲ್ಲಿ ಊತ ಕಂಡು ಬರುವ ಸಾಧ್ಯತೆಗಳು ಹೆಚ್ಚಾಗಿವೆ. ಜತೆಗೆ ಕಾಮಾಲೆ, ಮೂತ್ರ ಬಣ್ಣ ಬದಲಾವಣೆ, ಆಯಾಸದಂತಹ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಇದನ್ನೂ ಓದಿ:

Health Tips: ಕಣ್ಣಿನ ಮೇಲೆ ಬಿಳಿ ಕಲೆ ಇದೆಯೇ? ಇದು ಈ ಕಾಯಿಲೆಯ ಮುನ್ಸೂಚನೆ ಎಚ್ಚರ ಇರಲಿ

Health Tips: ದೇಹ ತೂಕ ಕಡಿಮೆ ಮಾಡಲು ರಾತ್ರಿ ಈ ಆಹಾರಗಳನ್ನು ಸೇವಿಸಿ

(Swelling in feet 3 serious disease dont ignore)