Jackfruit Seeds: ಹಲಸಿನ ಬೀಜವನ್ನು ಬಿಸಾಡುವವರೇ ಹೆಚ್ಚು; ಆರೋಗ್ಯ ಪ್ರಯೋಜನ ಎಷ್ಟಿದೆ ತಿಳಿದು ಸೇವಿಸುವ ಅಭ್ಯಾಸ ಒಳ್ಳೆಯದು

ಹಲಸಿನ ಹಣ್ಣಿನಲ್ಲಿರುವ ಬೀಜವನ್ನು ತೆಗೆದು ಬಿಸಾಡುವವರೇ ಹೆಚ್ಚು. ಆದರೆ ಆ ಬೀಜದಲ್ಲಿ ಎಷ್ಟೆಲ್ಲಾ ಪೌಷ್ಟಿಕ ಗುಣಗಳಿರುತ್ತದೆ ಎಂಬುದನ್ನು ತಿಳಿಯಿರಿ.

Jackfruit Seeds: ಹಲಸಿನ ಬೀಜವನ್ನು ಬಿಸಾಡುವವರೇ ಹೆಚ್ಚು; ಆರೋಗ್ಯ ಪ್ರಯೋಜನ ಎಷ್ಟಿದೆ ತಿಳಿದು ಸೇವಿಸುವ ಅಭ್ಯಾಸ ಒಳ್ಳೆಯದು
ಹಲಸಿನ ಬೀಜ
Follow us
TV9 Web
| Updated By: preethi shettigar

Updated on: Aug 21, 2021 | 8:24 AM

ಹಣ್ಣುಗಳೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಅದರಲ್ಲಿಯೂ ಹಳ್ಳಿಗಳಲ್ಲಿ ರಾಶಿ ರಾಶಿ ಬಿಡುವ ಹಲಸಿನ ಹಣ್ಣಿಗೆ ಬೇಡಿಕೆ ಕೂಡಾ ಇದೆ. ಹಣ್ಣಿನ ಕಡುಬು, ಪಾಯಸ, ಹಲ್ವ, ಹಪ್ಪಳ ಹೀಗೆ ನಾನಾ ವಿಧದ ಖಾದ್ಯ ಮಾಡಿ ಸವಿಯುವುದುಂಟು ಆದರೆ ಹಲಸಿನ ಹಣ್ಣಿನಲ್ಲಿರುವ ಬೀಜವನ್ನು ತೆಗೆದು ಬಿಸಾಡುವವರೇ ಹೆಚ್ಚು. ಆದರೆ ಆ ಬೀಜದಲ್ಲಿ ಎಷ್ಟೆಲ್ಲಾ ಪೌಷ್ಟಿಕ ಗುಣಗಳಿರುತ್ತದೆ ಎಂಬುದನ್ನು ತಿಳಿಯಿರಿ.

ಹಲವರು ಹಲಸಿನ ಬೀಜಗಳನ್ನು ಬೇಯಿಸಿ ತಿನ್ನುತ್ತಾರೆ. ಇನ್ನು ಕೆಲವರು ಬೆಂಕಿಯಲ್ಲಿ ಸುಟ್ಟು ಮೇಲಿನ ಸಿಪ್ಪೆಯನ್ನು ಬಿಡಿಸಿ ತಿನ್ನುತ್ತಾರೆ. ಸವಿಯಲು ತುಂಬಾ ರುಚಿಕರವಾಗಿರುತ್ತದೆ. ಆದರೆ ಹೆಚ್ಚಿನ ಮಂದಿ ಹಲಸಿನ ಬೀಜವನ್ನು ಬಿಸಾಡುತ್ತಾರೆ. ಹಲಸಿನ ಬೀಜದಲ್ಲಿ ಎಷ್ಟು ಪೌಷ್ಟಿಕ ಗುಣಗಳಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಹಲಸಿನ ಹಣ್ಣಿನ ಬೀಜಗಳಲ್ಲಿ ಪ್ರೋಟೀನ್, ವಿಟಮಿನ್ ಬಿ, ಐರನ್, ಕ್ಯಾಲ್ಸಿಯಂ, ಕಾಪರ್, ಪೊಟ್ಯಾಷಿಯಂ, ಮೆಗ್ನೀಶಿಯಂ ಮತ್ತು ಸತುವು ಇರುತ್ತದೆ. 10 ಗ್ರಾಂ ಹಲಸಿನ ಬೀಜದಲ್ಲಿ ಸುಮಾರು 4 ಗ್ರಾಂ ಪ್ರೋಟೀನ್ ಮತ್ತು ಸತುವು ಕಂಡು ಬರುತ್ತದೆ.

ಹಲಸಿನ ಬೀಜ ಸೇವನೆಯ ಆರೋಗ್ಯ ಪ್ರಯೋಜನಗಳು ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ ದೇಹದ ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ಹಲಸಿನ ಬೀಜದಲ್ಲಿರುವ ಪ್ರೋಟೀನ್ ಸಹಾಯ ಮಾಡುತ್ತದೆ. ಹಲಸಿನ ಬೀಜಗಳಲ್ಲಿ ಅಧಿಕ ಮಟ್ಟದ ಪ್ರೋಟೀನ್ ಇರುತ್ತದೆ. ಇದು ದೇಹದಲ್ಲಿ ಸ್ನಾಯುಗಳ ಬಲಿಷ್ಠತೆಗೆ ಸಹಾಯಕವಾಗಿದೆ. ಜತೆಗೆ ಕಬ್ಬಿಣದ ಅಂಶ ಇರುವುದರಿಂದ ರಕ್ತ ಹೀನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಅಧಿಕ ಫೈಬರ್ ಹಲಸಿನ ಬೀಜಗಳು ಕರಗುವ ಮತ್ತು ಕರಗದ ಫೈಬರ್​ಅನ್ನು ಹೊಂದಿದ್ದು ಎಲ್​ಡಿಎಲ್​ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆ ಸರಿಯಾದ ರೀತಿಯಲ್ಲಿ ಆಗುವಂತೆ ನೋಡಿಕೊಳ್ಳುತ್ತದೆ.

ಜೀರ್ಣಕ್ರಿಯೆಗೆ ಸಹಾಯಕ ಇದರಲ್ಲಿ ಹೆಚ್ಚಿನ ಫೈಬರ್ ಅಂಶವಿರುವುದರಿಂದ ಜೀರ್ಣಕ್ರಿಯೆ ಸಹಾಯ ಮಾಡುತ್ತದೆ. ಜತೆಗೆ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.

ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ ವಿಟಮಿನ್ ಎ ಅಂಶವನ್ನು ಹಲಸಿನ ಬಿಜಗಳು ಹೊಂದಿರುವುದರಿಂದ ಇದು ಕಣ್ಣಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಉತ್ಕರ್ಷಣ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ ದೇಹದಲ್ಲಿನ ಸುಕ್ಕು ನಿವಾರಣೆಗೆ ಹಲಸಿನ ಬೀಜಗಳ ಸೇವನೆ ಸಹಾಯಕ. ಲಿಗ್ನನ್ಸ್, ಸಪೋನಿನ್ಸ್, ಐಸೋಫ್ಲಾವೊನಿನ್ಸ್ ಮತ್ತು ಫೈಟೋನ್ಯೂಟ್ರಿಯೆಂಟ್​ಗಳು ವಯಸ್ಸಾದ ವಿರೋಧಿ ಗುಣಗಳನ್ನು ಹೊಂದಿದ್ದು ತ್ವಚೆಯ ಅಕಾಲಿಕ ವಯಸ್ಸನ್ನು ಉಂಟು ಮಾಡುವ ಸ್ವಂತ್ರ ರಾಡಿಕಲ್ಸ್ ಹಾನಿಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:

ಹಲಸಿನ ಬೀಜದ ಉಪಯೋಗ ತಿಳಿದರೆ ಒಂದು ಬೀಜವನ್ನೂ ಹಾಳು ಮಾಡಲಾರಿರಿ; ಇಲ್ಲಿದೆ ವಿವರ

Milkshake: ಹಲಸಿನ ಹಣ್ಣಿನ ಬೀಜದಲ್ಲಿ ಕೂಡ ಮಿಲ್ಕ್ ಶೇಕ್ ಮಾಡಬಹುದು

(Know About Jackfruit seeds health benefits check in kannada)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್