Health Care Tips in Kannada : ಅಡುಗೆಯ ರುಚಿಯನ್ನು ಹೆಚ್ಚಿಸುವ ಹುಣಸೆ ಹಣ್ಣು ಗಾಯಕ್ಕೆ ಹೇಗೆ ಪ್ರಯೋಜನಕಾರಿ?
ಭಾರತೀಯ ಅಡುಗೆ ಪದ್ಧತಿಯಲ್ಲಿ ಹುಣಸೆ ಹಣ್ಣಿಗೆ ವಿಶೇಷ ಸ್ಥಾನವಿದೆ. ಹೀಗಾಗಿ ಈ ಹುಣಸೆಹಣ್ಣು ಅಡುಗೆಯ ರುಚಿಯಷ್ಟೇ ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಪೋಷಕಾಂಶಗಳು ಹೇರಳವಾಗಿದ್ದು ಹೃದಯದ ಆರೋಗ್ಯದಿಂದ ಹಿಡಿದು ಗಾಯವನ್ನು ಗುಣಪಡಿಸಲು ಸಹಾಯಕವಾಗಿದೆ. ಈ ಹುಣಸೆಯು ಅಡುಗೆಗೆ ಮಾತ್ರ ಉಪಯುಕ್ತವಾಗಿರದೇ, ಆರೋಗ್ಯದ ಭಾಗವಾಗಿದೆ.
ಅಡುಗೆಯು ಸಂಪೂರ್ಣವಾಗಿರಬೇಕಾದರೆ ಉಪ್ಪು, ಹುಳಿ, ಖಾರ ಈ ಮೂರು ಅಂಶಗಳು ಸಮಪ್ರಮಾಣದಲ್ಲಿ ಸೇರಿರಲೇಬೇಕು. ಹೀಗಾಗಿ ಈ ಹುಳಿ ಹಾಗೂ ಸಿಹಿ ಮಿಶ್ರಿತ ಹುಣಸೆ ಹಣ್ಣನ್ನು ಅಡುಗೆಯ ರುಚಿ ಹೆಚ್ಚಿಸಲು ಬಳಸಲಾಗುತ್ತದೆ. ಈ ಹುಣಸೆಯಲ್ಲಿ ವಿಶೇಷವಾಗಿ ವಿಟಮಿನ್ ಸಿ, ಫ್ಲೇವನಾಯ್ಡ್, ಕ್ಯಾರೋಟಿನ್, ವಿಟಮಿನ್ ಬಿ ಕಾಂಪ್ಲೆಕ್ಸ್ ಹೇರಳವಾಗಿದ್ದು, ಇದರ ಸೇವನೆಯು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
- ಹುಣಸೆ ಹಣ್ಣಿನ ರಸವು ಸಂಧಿನೋವು, ಮೊಣಕಾಲು ನೋವು ಸೇರಿದಂತೆ ನೋವುಗಳನ್ನು ನಿವಾರಿಸುತ್ತದೆ.
- ಹುಣಸೆ ಹಣ್ಣು ಗಂಟಲು ನೋವು ಅಥವಾ ಗಂಟಲು ಹುಣ್ಣನ್ನು ಕಡಿಮೆ ಮಾಡುತ್ತದೆ.
- ಆಂಟಿವೈರಲ್ ಏಜೆಂಟ್, ಆ್ಯಂಟಿ ಫಂಗಲ್, ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದೆ. ಹೀಗಾಗಿ ಗಾಯಕ್ಕೆ ಹುಣಸೆ ಹಣ್ಣನ್ನು ಲೇಪಿಸುವುದರಿಂದ ಬಹುಬೇಗ ಗುಣಮುಖವಾಗುತ್ತದೆ.
- ಹುಣಸೆ ಹಣ್ಣಿನಲ್ಲಿ ಫೈಬರ್ ಅಂಶವು ಹೇರಳವಾಗಿದ್ದು, ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಹುಣಸೆ ಹಣ್ಣು ರಕ್ತ ಕಣಗಳ ಉತ್ಪಾದನೆ ಹೆಚ್ಚಿಸಿ ರಕ್ತಹೀನತೆ ಸಮಸ್ಯೆಯನ್ನು ಗುಣ ಪಡಿಸುತ್ತದೆ.
- ಹುಣಸೆ ಹಣ್ಣಿನ ಬೀಜದಲ್ಲಿ ಉರಿಯೂತದ ಗುಣಲಕ್ಷಣಗಳಿದ್ದು, ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆಗೊಳಿಸಿ ಮಧುಮೇಹವನ್ನು ನಿಯಂತ್ರಿಸುತ್ತದೆ.
- ಹುಣಸೆಹಣ್ಣು ಚರ್ಮದ ಸೋಂಕು ಹಾಗೂ ಯುವಿ ಕಿರಣಗಳಿಂದ ಉಂಟಾಗುವ ಹಾನಿಯನ್ನು ತಡೆದು ಚರ್ಮವನ್ನು ರಕ್ಷಿಸುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ