ಬೀಟ್ರೂಟ್ ಜ್ಯೂಸ್
ಆರೋಗ್ಯವಾಗಿರಲು ಒಳ್ಳೆಯ ಆಹಾರ ಸೇವನೆ ಮಾಡುವುದು ಬಹಳ ಮುಖ್ಯ. ಸಾಮಾನ್ಯವಾಗಿ ಇದು ಎಲ್ಲರಿಗೂ ತಿಳಿದಿರುವಂತಹ ವಿಷಯ. ಇಷ್ಟೆಲ್ಲಾ ತಿಳಿದಿದ್ದರೂ ಕೂಡ ಖರೀದ ಮತ್ತು ಹೊರಗಿನ ಆಹಾರಗಳನ್ನು ತಿನ್ನುವುದನ್ನು ಕೂಡ ತಪ್ಪಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ತರಕಾರಿ, ಹಣ್ಣುಗಳ ಸೇವನೆಯನ್ನು ಹೆಚ್ಚಿಸಿ ಜಂಕ್ ಫುಡ್ ಗಳನ್ನು ತಿನ್ನುವುದನ್ನು ಆದಷ್ಟು ಕಡಿಮೆ ಮಾಡಬೇಕು. ಈ ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಬೀಟ್ರೂಟ್ ಜ್ಯೂಸ್ (Beetroot Juice) ಕೂಡ ಒಂದು. ಇದು ಕುಡಿಯುವುದಕ್ಕೂ ರುಚಿಯಾಗಿದ್ದು ಆರೋಗ್ಯವನ್ನು ನಾನಾ ರೀತಿಯಲ್ಲಿ ಕಾಪಾಡುವಂತಹ ಶಕ್ತಿಯನ್ನು ಹೊಂದಿದೆ. ಕೇವಲ ಈ ಒಂದು ತರಕಾರಿಯಲ್ಲಿ ಸಾವಿರಾರು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ. ಹಾಗಾಗಿ ನಿಮ್ಮ ಮನೆಯಲ್ಲಿಯೂ ಬೀಟ್ರೂಟ್ (Beetroot) ಸೇವನೆ ಮಾಡಲು ಹಿಂಜರಿಯುವವರಿದ್ದರೆ ಈ ಒಂದು ಜ್ಯೂಸ್ ಮಾಡಿಕೊಡಿ. ಮಾತ್ರವಲ್ಲ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಂಡು ಆರೋಗ್ಯ ಸಮಸ್ಯೆಗಳಿಂದ ದೂರವಿರಿ.
ಬೀಟ್ರೂಟ್ ಜ್ಯೂಸ್ ನ ಪ್ರಯೋಜನಗಳು:
- ಸಾಮಾನ್ಯವಾಗಿ ಬೀಟ್ರೂಟ್ ಜ್ಯೂಸ್ ಗರ್ಭಾವಸ್ಥೆಯಲ್ಲಿ ಕಂಡುಬರುವ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಅಧಿಕ ರಕ್ತದೊತ್ತಡ ಇರುವ ಗರ್ಭಿಣಿಯರು ದಿನಕ್ಕೆ ಎರಡು ಬಾರಿ 100 ಮಿಲಿ ಜ್ಯೂಸ್ ತೆಗೆದುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಮಕ್ಕಳು ಕೂಡ ಆರೋಗ್ಯವಾಗಿ ಹುಟ್ಟುತ್ತಾರೆ.
- ಈ ಜ್ಯೂಸ್ ರಕ್ತದ ಹರಿವು ಮತ್ತು ಸಂಚಾರಕ್ಕೆ ಬಹಳ ಒಳ್ಳೆಯದು ಆದ್ದರಿಂದ ಕ್ರೀಡಾಪಟುಗಳು ಇದನ್ನು ತಪ್ಪದೆ ಸೇವನೆ ಮಾಡುವುದು ಒಳ್ಳೆಯದು.
- ಇದು ಲಿವರ್ ಅನ್ನು ಸ್ವಚ್ಛಗೊಳಿಸುತ್ತದೆ ಮತ್ತು ಯಕೃತ್ತಿನ ಅಥವಾ ಲಿವರ್ ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಯಾವಾಗ ಲಿವರ್ ಓವರ್ ಲೋಡ್ ಆಗುತ್ತದೆಯೋ ಆಗ ದೇಹ ಅಥವಾ ಬಾಯಿಯಿಂದ ದುರ್ವಾಸನೆ ಕಂಡುಬರುತ್ತದೆ. ಇಂತವರು ಒಂದು ತಿಂಗಳು ತಪ್ಪದೆ ಬೀಟ್ರೂಟ್ ಜ್ಯೂಸ್ ಕುಡಿಯುವುದು ಒಳ್ಳೆಯದು.
- ಒಂದು ವಾರ ತಪ್ಪದೆ ಬೀಟ್ರೂಟ್ ಜ್ಯೂಸ್ ಕುಡಿದರೆ ಸಂಧಿವಾತ, ವಾತ, ಕೀಲು ನೋವುಗಳಿಂದ ಮುಕ್ತಿ ಪಡೆಯಬಹುದು.
- ದೀರ್ಘಕಾಲದಿಂದ ಮಲಬದ್ಧತೆಯ ಸಮಸ್ಯೆ ಅಥವಾ ಅಜೀರ್ಣ ಇರುವವರಿಗೆ ಈ ಬೀಟ್ರೂಟ್ ಜ್ಯೂಸ್ ಬಹಳ ಒಳ್ಳೆಯದು. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
- ಬೀಟ್ರೂಟ್ ಜ್ಯೂಸ್ ಒಂದು ವಾರ ತಪ್ಪದೆ ತೆಗೆದುಕೊಂಡರೆ ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಮಾತ್ರವಲ್ಲ ಹೃದಯ ಸಂಬಂಧಿ ಕಾಯಿಲೆ ಬರುವ ಅಪಾಯವೂ ಕಡಿಮೆಯಾಗುತ್ತದೆ.
- ಬೀಟ್ರೂಟ್ ಜ್ಯೂಸ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ, ಸತು, ಕಬ್ಬಿಣ ಮತ್ತು ಫೋಲೇಟ್ ಅಂಶವಿದ್ದು ಆರೋಗ್ಯಕ್ಕೆ ಬಹಳ ಒಳ್ಳೆಯದು.
- ಬೀಟ್ರೂಟ್ ಜ್ಯೂಸ್ ರಕ್ತಹೀನತೆ ಸಮಸ್ಯೆಗೆ ಪರಿಹಾರ ನೀಡುತ್ತದೆ. ಮಾತ್ರವಲ್ಲ ನಿಯಮಿತವಾಗಿ ಸೇವನೆ ಮಾಡುವುದರಿಂದ ತ್ವಚೆಯ ಹೊಳಪು ಕೂಡ ಹೆಚ್ಚುತ್ತದೆ.
ಇದನ್ನೂ ಓದಿ: ಈ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು ಆದ್ರೆ ಈ ಸಮಸ್ಯೆ ಇರುವವರು ಎಷ್ಟು ದೂರ ಇರುತ್ತಾರೋ ಅಷ್ಟು ಒಳ್ಳೆಯದು!
ಬೀಟ್ರೂಟ್ ಜ್ಯೂಸ್ ತಯಾರಿಸುವುದು ಹೇಗೆ?
ಮೊದಲು ಬೀಟ್ರೂಟ್ ಅನ್ನು ಸಿಪ್ಪೆ ತೆಗೆದು ತೊಳೆಯಿರಿ, ಬಳಿಕ ಅದಕ್ಕೆ ಕ್ಯಾರೆಟ್ ಅಥವಾ ಕಿತ್ತಳೆ ಯನ್ನು ಸೇರಿಸಿ ನಂತರ ಬೇಕಾದಲ್ಲಿ ಜೇನುತುಪ್ಪವನ್ನು ಸೇರಿಸಿ ಮಿಕ್ಸಿಯಲ್ಲಿ ಹಾಕಿ ಜ್ಯೂಸ್ ತಯಾರಿಸಿಕೊಳ್ಳಿ. ಪದೇ ಪದೇ ಕುಡಿಯಬೇಕು ಅನಿಸಿದರೆ ಆ ಮಿಶ್ರಣವನ್ನು ಫ್ರಿಡ್ಜ್ ನಲ್ಲಿ ಇರಿಸಿಕೊಳ್ಳಿ. ಬೇಕಾದಾಗ ಸೇವನೆ ಮಾಡಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ