AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರಿಶಿನ ಹಾಲು Vs ಅರಿಶಿನ ನೀರು: ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್ ತಿಳಿದುಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕಾಗಿಯೇ ಆರೋಗ್ಯ ಕಾಪಾಡಿಕೊಳ್ಳಲು ಮಕ್ಕಳಿಯಿಂದ ಹಿರಿಯರ ವರೆಗೆ ಬಹಳ ಮಂದಿ ಅರಿಶಿನ ಹಾಲು ಕುಡಿಯುವುದನ್ನು ನೀವು ಗಮನಿಸಿರಬಹುದು ಆದರೆ ಇತ್ತೀಚಿಗೆ ಬೆಳಿಗ್ಗೆ ಎದ್ದ ತಕ್ಷಣ ಅರಿಶಿನದ ನೀರು ಕುಡಿಯುವುದೂ ಕೂಡ ಒಂದು ಟ್ರೆಂಡ್ ಆಗುತ್ತಿದೆ. ಹಾಗಾದರೆ ಅರಿಶಿನ ಹಾಲು ಅಥವಾ ಅರಿಶಿನ ನೀರು ಈ ಎರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ? ಇವುಗಳಿಂದ ಸಿಗುವ ಪ್ರಯೋಜನಗಳೇನು? ಹೀಗೆ ಈ ಬಗೆಗಿನ ಮತ್ತಷ್ಟು ಮಾಹಿತಿಯನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಅರಿಶಿನ ಹಾಲು Vs ಅರಿಶಿನ ನೀರು: ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್ ತಿಳಿದುಕೊಳ್ಳಿ
ಅರಿಶಿನ ಹಾಲು Vs ಅರಿಶಿನ ನೀರು
ಪ್ರೀತಿ ಭಟ್​, ಗುಣವಂತೆ
|

Updated on: Oct 13, 2025 | 6:40 PM

Share

ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರ ಸೇವನೆ ಮಾಡುವುದು ಬಹಳ ಮುಖ್ಯ. ಅದಕ್ಕಾಗಿಯೇ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಂಡು ಅನಾರೋಗ್ಯದಿಂದ ದೂರವಿರಲು ದಿನನಿತ್ಯ ಹಲವಾರು ರೀತಿಯ ಆಹಾರಗಳನ್ನು ಸೇವನೆ ಮಾಡುತ್ತೇವೆ. ಅವುಗಳಲ್ಲಿ ಅರಿಶಿನವು (Turmeric) ಒಂದು. ಇದನ್ನು ವ್ಯಾಪಕವಾಗಿ ಆಹಾರದಲ್ಲಿ ಬಳಕೆ ಮಾಡಲಾಗುತ್ತದೆ. ಇದರಲ್ಲಿರುವ ಕರ್ಕ್ಯುಮಿನ್ (curcumin) ಅಂಶ ಅನೇಕ ರೀತಿಯ ರೋಗಗಳನ್ನು ಗುಣಪಡಿಸುತ್ತದೆ, ಅದಕ್ಕಾಗಿಯೇ ಇದನ್ನು ಚಿನ್ನದ ತೂಕವಿರುವ ಮಸಾಲೆ ಎನ್ನಲಾಗುತ್ತದೆ. ಆದರೆ ಕೆಲವರಿಗೆ ಈ ಅರಿಶಿನವನ್ನು ಯಾವ ರೀತಿ ಸೇವನೆ ಮಾಡಬೇಕು ಎಂಬುದೇ ತಿಳಿದಿರುವುದಿಲ್ಲ. ಕೆಲವರು ಅರಿಶಿನವನ್ನು ಹಾಲಿನೊಂದಿಗೆ, ಇನ್ನು ಕೆಲವರು ನೀರಿನೊಂದಿಗೆ ಬೆರೆಸಿ ಕುಡಿಯುತ್ತಾರೆ. ಆದರೆ ಯಾವುದು ಹೆಚ್ಚು ಒಳ್ಳೆಯದು, ಇವುಗಳಿಂದ ಸಿಗುವ ಪ್ರಯೋಜನ, ಹೀಗೆ ಈ ಬಗೆಗಿನ ಮತ್ತಷ್ಟು ಮಾಹಿತಿ ಈ ಸ್ಟೋರಿಯಲ್ಲಿದೆ.

ಅರಿಶಿನದಲ್ಲಿ ಕರ್ಕ್ಯುಮಿನ್‌ನ ಶಕ್ತಿ:

ಆರೋಗ್ಯ ತಜ್ಞರು ಹೇಳುವಂತೆ ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಅರಿಶಿನದಲ್ಲಿ ಹಲವಾರು ರೀತಿಯ ಆರೋಗ್ಯಕರ ಗುಣಗಳಿದ್ದು ಅನಾರೋಗ್ಯದಿಂದ ನಮ್ಮನ್ನು ದೂರವಿಡಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಅರಿಶಿನದಲ್ಲಿರುವ ಸಕ್ರಿಯ ಸಂಯುಕ್ತವಾದ ಕರ್ಕ್ಯುಮಿನ್ ಹೃದಯವನ್ನು ಆರೋಗ್ಯಕರವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಯಸ್ಸಾಗುವಿಕೆ ಮತ್ತು ಬೊಜ್ಜುತನಕ್ಕೆ ಸಂಬಂಧಿಸಿದ ಹೃದ್ರೋಗಗಳ ಅಪಾಯವನ್ನು ಕೂಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಅನೇಕ ಅಧ್ಯಯನಗಳಿಂದಲೂ ಸಾಬೀತಾಗಿದೆ. ಹೆಚ್ಚುವರಿಯಾಗಿ, ಕರ್ಕ್ಯುಮಿನ್ ಮೆದುಳಿನ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಜೊತೆಗೆ ಉರಿಯೂತವನ್ನು ತಡೆಯುವುದಲ್ಲದೆ, ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ರಕ್ಷಣೆ ನೀಡುತ್ತದೆ. ಅಲ್ಲದೆ ರುಮಟಾಯ್ಡ್ ಸಂಧಿವಾತದ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.

ಆರೋಗ್ಯ ತಜ್ಞರ ಪ್ರಕಾರ ತೂಕ ಇಳಿಸಿಕೊಳ್ಳಲು ಬಯುಸುವವರಿಗೆ ಅರಿಶಿನ ಹಾಲು ಮತ್ತು ಅರಿಶಿನದ ನೀರು ಎರಡೂ ಕೂಡ ಪ್ರಯೋಜನಕಾರಿಯಾಗಿದೆ. ಆದರೆ ಅವುಗಳಿಂದ ಸಿಗುವ ಫಲಿತಾಂಶ ಮಾತ್ರ ವಿಭಿನ್ನವಾಗಿರುತ್ತದೆ.

ಅರಿಶಿನ ನೀರು: ನೀವು ತೂಕ ಇಳಿಸಿಕೊಳ್ಳಲು ಅಥವಾ ದೇಹದಿಂದ ವಿಷ ಹೊರಹಾಕಿ ನಿರ್ವಿಷಗೊಳಿಸಲು ಬಯಸಿದರೆ, ಅರಿಶಿನ ನೀರನ್ನು ಸೇವಿಸುವುದು ಉತ್ತಮ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರಿಶಿನ ನೀರನ್ನು ಕುಡಿಯುವುದು ದೇಹಕ್ಕೆ ಬಹಳ ಒಳ್ಳೆಯದು. ತಾಜಾ ಅರಿಶಿನವನ್ನು ನೀರಿಗೆ ಸೇರಿಸಿ, ಚೆನ್ನಾಗಿ ಕುದಿಸಿ, ನೀರು ಸ್ವಲ್ಪ ಬೆಚ್ಚಗಾದ ಮೇಲೆ ಕುಡಿಯಬಹುದು ಅಥವಾ ತಾಜಾ ಅರಿಶಿನ ತುಂಡುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಆ ನೀರನ್ನು ಕೂಡ ಸೇವಿಸಬಹುದು.

ಅರಿಶಿನ ಹಾಲು: ಹಾಲಿನೊಂದಿಗೆ ಅರಿಶಿನ ಬೆರೆಸಿ ಸೇವಿಸಿದಾಗ, ಅದು ದೇಹಕ್ಕೆ ಬೇಗನೆ ಹೀರಿಕೊಳ್ಳುತ್ತದೆ. ಅದರಲ್ಲಿಯೂ ಹಾಲು ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಬಿ 12 ನಂತಹ ಪೋಷಕಾಂಶಗಳನ್ನು ಇರುವುದರಿಂದ ಇದನ್ನು ಅರಿಶಿನದೊಂದಿಗೆ ಸೇರಿಸಿದಾಗ, ಹಾಲು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಶೀತ ಮತ್ತು ಕೆಮ್ಮಿನಿಂದ ಪರಿಹಾರ ನೀಡುತ್ತದೆ. ಇದಲ್ಲದೆ, ರಾತ್ರಿ ಸಮಯದಲ್ಲಿ ಹಾಲಿಗೆ ಅರಿಶಿನ ಹಾಕಿ ಕುಡಿಯುವುದು ಬಹಳ ಒಳ್ಳೆಯ ಆರೋಗ್ಯಕರ ಅಭ್ಯಾಸ. ಏಕೆಂದರೆ ಇದು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ, ಜೊತೆಗೆ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮೂಳೆ ಮತ್ತು ಸ್ನಾಯುಗಳ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇನ್ನು ಹಾಲಿನಲ್ಲಿರುವ ವಿಟಮಿನ್ ಬಿ 12 ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಕೂಡ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮಖಾನಾ vs ಶೇಂಗಾ: ಇವೆರಡರಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಯಾವುದು ಉತ್ತಮ ಎಂಬುದನ್ನು ಸ್ಟೋರಿ ಮೂಲಕ ತಿಳಿಯಿರಿ

ಅರಿಶಿನ ಹಾಲು Vs ಅರಿಶಿನ ನೀರು ಯಾವುದು ಒಳ್ಳೆಯದು?

ಹಾಲು ಅಥವಾ ನೀರಿನಲ್ಲಿ ಬಳಸುವ ಅರಿಶಿನವು ಶುದ್ಧವಾಗಿರುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ, ಮಾರುಕಟ್ಟೆಯಲ್ಲಿ ಲಭ್ಯವಿರುವ ಅರಿಶಿನವು ಹೆಚ್ಚುವರಿ ಬಣ್ಣಗಳನ್ನು ಹೊಂದಿರುತ್ತದೆ, ಇದು ಪ್ರಯೋಜನಕಾರಿಯಾಗುವ ಬದಲು ದೇಹಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ, ಅರಿಶಿನವನ್ನು ಮನೆಯಲ್ಲಿ ಪುಡಿಮಾಡಬೇಕು ಅಥವಾ ವಿಶ್ವಾಸಾರ್ಹ, ಪ್ರತಿಷ್ಠಿತ ಬ್ರ್ಯಾಂಡ್‌ನಿಂದ ಖರೀದಿಸಬೇಕು. ನಿಮ್ಮ ಆರೋಗ್ಯಕ್ಕೆ ಅನುಗುಣವಾಗಿ ನೀವು ಹಾಲು ಅಥವಾ ನೀರಿನೊಂದಿಗೆ ಅರಿಶಿನವನ್ನು ಸೇವಿಸಬಹುದು. ತೂಕ ಇಳಿಸಿಕೊಳ್ಳಲು ಬಯಸುವವರಿಗೆ, ಬೆಳಿಗ್ಗೆ ಅರಿಶಿನ ನೀರು ಸೂಕ್ತವಾಗಿದೆ, ಆದರೆ ಉತ್ತಮ ನಿದ್ರೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ರಾತ್ರಿ ಸಮಯದಲ್ಲಿ ಅರಿಶಿನದ ಹಾಲು ಅತ್ಯುತ್ತಮ ಆಯ್ಕೆಯಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನನ್ನ ತಂದೆ ಈಗ ಮೊದಲಿನಂತೆ ಇಲ್ಲ; ಅರ್ಜುನ್ ಸರ್ಜಾ ಬಗ್ಗೆ ಮಗಳು ಐಶ್ವರ್ಯಾ
ನನ್ನ ತಂದೆ ಈಗ ಮೊದಲಿನಂತೆ ಇಲ್ಲ; ಅರ್ಜುನ್ ಸರ್ಜಾ ಬಗ್ಗೆ ಮಗಳು ಐಶ್ವರ್ಯಾ
ವಿರೋಧ ಪಕ್ಷದ ನಾಯಕನಿಂದ ಇಂಥಾ ವರ್ತನೆ ನಿರೀಕ್ಷಿಸಿರಲಿಲ್ಲ ಎಂದ ಬಿಜೆಪಿ
ವಿರೋಧ ಪಕ್ಷದ ನಾಯಕನಿಂದ ಇಂಥಾ ವರ್ತನೆ ನಿರೀಕ್ಷಿಸಿರಲಿಲ್ಲ ಎಂದ ಬಿಜೆಪಿ
ಬಂಧನ ಭೀತಿ ಬೆನ್ನಲ್ಲೇ ಭೈರತಿ ಬಸವರಾಜ್​​​ ದುಬೈಗೆ ಪರಾರಿ
ಬಂಧನ ಭೀತಿ ಬೆನ್ನಲ್ಲೇ ಭೈರತಿ ಬಸವರಾಜ್​​​ ದುಬೈಗೆ ಪರಾರಿ
ಮೈಸೂರಿನಲ್ಲಿ ಪುಟ್ಟ ಬಾಲಕಿಯ ಬ್ಯಾಗಿನೊಳಗೆ ನಾಗರ ಹಾವು ಪ್ರತ್ಯಕ್ಷ!
ಮೈಸೂರಿನಲ್ಲಿ ಪುಟ್ಟ ಬಾಲಕಿಯ ಬ್ಯಾಗಿನೊಳಗೆ ನಾಗರ ಹಾವು ಪ್ರತ್ಯಕ್ಷ!
ಈ ಕಾರಣಕ್ಕೆ ಪುಟ್ಟ ಮಕ್ಕಳಿಗೆ ಕಾಲ್ಗೆಜ್ಜೆ ಹಾಕಲೇಬೇಕು
ಈ ಕಾರಣಕ್ಕೆ ಪುಟ್ಟ ಮಕ್ಕಳಿಗೆ ಕಾಲ್ಗೆಜ್ಜೆ ಹಾಕಲೇಬೇಕು
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದ್ದು, ಎಲ್ಲ ಕಾರ್ಯಗಳಲ್ಲಿ ಜಯ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದ್ದು, ಎಲ್ಲ ಕಾರ್ಯಗಳಲ್ಲಿ ಜಯ
ಯುವಕನಿಗೆ ಡ್ರಗ್ಸ್ ನೀಡಿ ಬಲವಂತವಾಗಿ ಮದುವೆ ಮಾಡಿದ ವಿಡಿಯೋ ವೈರಲ್
ಯುವಕನಿಗೆ ಡ್ರಗ್ಸ್ ನೀಡಿ ಬಲವಂತವಾಗಿ ಮದುವೆ ಮಾಡಿದ ವಿಡಿಯೋ ವೈರಲ್
ಅಪ್ಪ ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ನಟಿಸಿದ ಬಗ್ಗೆ ಐಶ್ವರ್ಯಾ ಹೇಳಿದ್ದೇನು
ಅಪ್ಪ ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ನಟಿಸಿದ ಬಗ್ಗೆ ಐಶ್ವರ್ಯಾ ಹೇಳಿದ್ದೇನು
ಮುಸ್ಲಿಂ ಯುವಕನೊಂದಿಗೆ ಹೋದ ಮಗಳ ನೆನೆದು ಕಣ್ಣೀರಿಟ್ಟ ಹೆತ್ತ ಕರುಳು
ಮುಸ್ಲಿಂ ಯುವಕನೊಂದಿಗೆ ಹೋದ ಮಗಳ ನೆನೆದು ಕಣ್ಣೀರಿಟ್ಟ ಹೆತ್ತ ಕರುಳು
93 ವರ್ಷದ ಸಂಭ್ರಮಾಚರಣೆ ಬೇಡ ಎನ್ನಲು ಯಾರಿಗೂ ಅಧಿಕಾರವಿಲ್ಲ: ಜಯಮಾಲ
93 ವರ್ಷದ ಸಂಭ್ರಮಾಚರಣೆ ಬೇಡ ಎನ್ನಲು ಯಾರಿಗೂ ಅಧಿಕಾರವಿಲ್ಲ: ಜಯಮಾಲ