AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಖಾನಾ vs ಶೇಂಗಾ: ಇವೆರಡರಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಯಾವುದು ಉತ್ತಮ ಎಂಬುದನ್ನು ಸ್ಟೋರಿ ಮೂಲಕ ತಿಳಿಯಿರಿ

ಮಖಾನಾ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದು ತಿಳಿದ ವಿಚಾರ. ಆದರೆ ಇದು ಸ್ವಲ್ಪ ದುಬಾರಿಯಾಗಿರುವುದರಿಂದ, ಕೆಲವರು ಇದರ ಬದಲಾಗಿ ಶೇಂಗಾ ಕಾಳುಗಳ ಸೇವನೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಮಖಾನಾ ಮತ್ತು ಶೇಂಗಾ ಇವೆರಡು ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಬಹಳ ಪ್ರಯೋಜನಕಾರಿ. ಆದರೆ ಆರೋಗ್ಯ ಕಾಪಾಡಿಕೊಳ್ಳುವ ಮತ್ತು ತೂಕ ಇಳಿಸಿಕೊಳ್ಳುವ ವಿಚಾರಕ್ಕೆ ಬಂದರೆ ಇವೆರಡರಲ್ಲಿ ಯಾವುದು ಒಳ್ಳೆಯದು ಎಂಬ ಗೊಂದಲ ಆರಂಭವಾಗುತ್ತದೆ. ಹಾಗಾದರೆ ಪೌಷ್ಟಿಕಾಂಶ ತಜ್ಞರು ಈ ವಿಷಯದ ಕುರಿತು ಏನು ಹೇಳುತ್ತಾರೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಖಾನಾ vs ಶೇಂಗಾ: ಇವೆರಡರಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಯಾವುದು ಉತ್ತಮ ಎಂಬುದನ್ನು ಸ್ಟೋರಿ ಮೂಲಕ ತಿಳಿಯಿರಿ
Makhana Vs Peanuts
ಪ್ರೀತಿ ಭಟ್​, ಗುಣವಂತೆ
|

Updated on:Oct 01, 2025 | 10:12 AM

Share

ಮಖಾನ (Makhana) ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅದೇ ರೀತಿ ಶೇಂಗಾ (Peanuts) ಕಾಳುಗಳು ಸಹ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ತೂಕ ಇಳಿಸಿಕೊಳ್ಳಲು ಹೆಣಗಾಡುತ್ತಿರುವವರಿಗೆ ಇದು ಬಹಳ ಪ್ರಯೋಜನಕಾರಿಯಾಗಿದ್ದು ಇವೆರಡನ್ನು ಯಥೇಚ್ಛವಾಗಿ ಸೇವನೆ ಮಾಡಲಾಗುತ್ತದೆ. ಆದರೆ ಕೆಲವರಿಗೆ ಇವೆರಡರಲ್ಲಿ ಯಾವುದು ಉತ್ತಮ? ಆರೋಗ್ಯದ ದೃಷ್ಟಿಯಿಂದ ಯಾವುದು ಬಹಳ ಪ್ರಯೋಜನಕಾರಿ ಎಂಬುದೇ ಗೊಂದಲ ಉಂಟುಮಾಡುತ್ತದೆ. ಹಾಗಾದರೆ ಪೌಷ್ಟಿಕಾಂಶ ತಜ್ಞರು ಈ ವಿಷಯದ ಕುರಿತು ಏನು ಹೇಳುತ್ತಾರೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಶೇಂಗಾ ಕಾಳುಗಳಿಗೆ ಹೋಲಿಸಿದರೆ ಮಖಾನವು ಆರೋಗ್ಯಕ್ಕೆ ಹಲವು ಪಟ್ಟು ಹೆಚ್ಚು ಪ್ರಯೋಜನಕಾರಿ ಎಂದು ಪೌಷ್ಟಿಕಾಂಶ ತಜ್ಞರು ಹೇಳುತ್ತಾರೆ. ಮಖಾನವು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮಾತ್ರವಲ್ಲ ಇದು ಅನೇಕ ರೀತಿಯ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಸೇವನೆ ಮಾಡುವುದರಿಂದ ಹಲವು ರೀತಿಯ ಆರೋಗ್ಯಕರ ಲಾಭಗಳನ್ನು ಪಡೆಯಬಹುದಾಗಿದೆ. ಮಖಾನಾ ತಿನ್ನುವುದರಿಂದ ತಕ್ಷಣ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದು ಅತಿಯಾಗಿ ತಿನ್ನುವ ಪ್ರವೃತ್ತಿಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ತೂಕ ಇಳಿಸಿಕೊಳ್ಳಲು ಬಯಸುವವರು ಇದನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.

ಇದನ್ನೂ ಓದಿ: ನಿಮ್ಮ ಮಕ್ಕಳಿಗೆ ಡೈಪರ್ ಹಾಕಿದಾಗ ಚರ್ಮ ಕೆಂಪಗಾಗುತ್ತಾ? ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿದೆ ಟಿಪ್ಸ್

ಮಖಾನಾ vs ಶೇಂಗಾ

ಇದಲ್ಲದೆ, ಮಖಾನಾದಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇರುತ್ತದೆ. ಇದು ಹೊಟ್ಟೆಯನ್ನು ಬೇಗನೆ ತುಂಬಿದ ಅನುಭವವನ್ನು ನೀಡುತ್ತದೆ. ಮಾತ್ರವಲ್ಲ ಈ ಅಭ್ಯಾಸದಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೂ ಕೂಡ ಅನೇಕರು ಮಖಾನಾ ಬದಲಿಗೆ ಶೇಂಗಾ ಸೇವನೆ ಮಾಡುತ್ತಾರೆ. ಈ ರೀತಿಯಾದಾಗ ಅಂದರೆ ಮಖಾನ ಪ್ರಯೋಜನಕಾರಿಯೇ ಅಥವಾ ಕಡಲೆಕಾಯಿ ಅಥವಾ ಶೇಂಗಾ ಒಳ್ಳೆಯದೋ ಎಂಬ ಪ್ರಶ್ನೆ ಉದ್ಭವಿಸಿದಾಗ, ಆರೋಗ್ಯ ತಜ್ಞರು ಮಖಾನವು ಶೇಂಗಕ್ಕಿಂತಲೂ ಆರೋಗ್ಯಕ್ಕೆ ದುಪ್ಪಟ್ಟು ಪ್ರಯೋಜನಕಾರಿ ಎಂದು ಹೇಳುತ್ತಾರೆ. ಇದಕ್ಕೆ ಕಾರಣ ಇದರಲ್ಲಿರುವ ಪೋಷಕಾಂಶಗಳಾಗಿವೆ. ಇನ್ನು ಅತಿಯಾಗಿ ಶೇಂಗಾ ಸೇವನೆ ಮಾಡುವುದರಿಂದ ತೂಕ ಹೆಚ್ಚಾಗುತ್ತದೆ. ಆದರೆ ಮಖಾನ ಸೇವನೆ ಮಾಡುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ನೆನಪಿರಲಿ, ಮಖಾನವನ್ನು ಸೇವನೆ ಮಾಡುವ ಮೊದಲು ಹುರಿಯಬೇಕು. ಈ ಮಖಾನ ಆರೋಗ್ಯಕರವಾಗಿದ್ದು ಜೀರ್ಣಿಸಿಕೊಳ್ಳಲು ಸುಲಭ. ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಎಲ್ಲರ ಆರೋಗ್ಯಕ್ಕೂ ಇದು ಪ್ರಯೋಜನಕಾರಿಯಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:18 pm, Tue, 30 September 25