
ಪ್ರತಿನಿತ್ಯ ಹಸುವಿನ ಹಾಲು (Milk) ಮತ್ತು ಎಮ್ಮೆ ಹಾಲು ಕುಡಿಯುವುದು ಸಹಜ ಆದರೆ ಎಂದಾದರೂ ಆಡು ಅಥವಾ ಮೇಕೆ ಹಾಲನ್ನು (Goat Milk) ಟ್ರೈ ಮಾಡಿದ್ದೀರಾ? ಬಹಳ ಕಡಿಮೆ ಜನ ಆಡಿನ ಹಾಲನ್ನು ಕುಡಿಯುತ್ತಾರೆ. ಇದು ಒಂದು ಆರೋಗ್ಯಕರ ಪಾನೀಯವಾಗಿದ್ದು, ಹಲವಾರು ಪೋಷಕಾಂಶಗಳನ್ನು ಹೊಂದಿದೆ. ಹಾಗಾಗಿಯೇ ಆರೋಗ್ಯ (Health) ತಜ್ಞರು ಆಡಿನ ಹಾಲು ಹಸುವಿನ ಹಾಲಿಗಿಂತ ಉತ್ತಮ ಎಂದು ಹೇಳುತ್ತಾರೆ. ಇದರಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ವಿಟಮಿನ್ ಎ ಸಮೃದ್ಧವಾಗಿದೆ. ಹಸುವಿನ ಹಾಲಿಗೆ ಹೋಲಿಸಿದರೆ ಆಡಿನ ಹಾಲಿನಲ್ಲಿ ಪ್ರೋಟೀನ್ ಪ್ರಮಾಣ ತುಸು ಹೆಚ್ಚಾಗಿರುತ್ತದೆ ಮತ್ತು ಇದರ ರಚನೆ ಕೂಡ ಭಿನ್ನವಾಗಿದೆ. ಈ ಹಾಲಿನಲ್ಲಿ ತಾಯಿಯ ಎದೆ ಹಾಲಿನಷ್ಟೇ ಶಕ್ತಿ ಇದೆ. ಹಾಗಾದರೆ ಇದರ ಸೇವನೆಯಿಂದ ಸಿಗುವ ಪ್ರಯೋಜನಗಳೇನು? ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.
ಆಡಿನ ಹಾಲು ಹಲವಾರು ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿ ಕ್ಯಾಲ್ಸಿಯಂ, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಆದ್ದರಿಂದ, ಈ ಹಾಲನ್ನು ನಿಯಮಿತವಾಗಿ ಕುಡಿಯುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು ಎಂದು ತಜ್ಞರು ಹೇಳುತ್ತಾರೆ. ಆಡಿನ ಹಾಲು ಸುಲಭವಾಗಿ ಜೀರ್ಣವಾಗುತ್ತದೆ. ಮಾತ್ರವಲ್ಲ ಅಲರ್ಜಿ ಅಂಶವು ಕಡಿಮೆ ಇರುತ್ತದೆ.
ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ರಕ್ತನಾಳ ಸಂಬಂಧಿ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಆಡಿನ ಹಾಲಿನಲ್ಲಿರುವ ಪೊಟಾಶಿಯಂ ಅಂಶವು ರಕ್ತದೊತ್ತಡ ನಿವಾರಣೆ ಮಾಡುತ್ತದೆ.
ಆಡಿನ ಹಾಲನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದಾಗಿದೆ. ಇದು ಯಾವುದೇ ರೀತಿಯ ಅಸ್ವಸ್ಥತೆಗಳಿರಲಿ ಅವುಗಳನ್ನು ಕಡಿಮೆ ಮಾಡಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಆಡಿನ ಹಾಲಿನಲ್ಲಿ ಸೆಲೆನಿಯಮ್, ಸತು ಮತ್ತು ವಿಟಮಿನ್ ಎ ಮತ್ತು ಸಿ ಇರುತ್ತದೆ. ಇವು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಮಾತ್ರವಲ್ಲ ಸೋಂಕುಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಆಡಿನ ಹಾಲಿನಲ್ಲಿ ಆಲ್ಫಾ ಹೈಡ್ರಾಕ್ಸಿ ಆಮ್ಲಗಳಿವೆ. ಇವು ಚರ್ಮದ ಹೊಳಪು ಮತ್ತು ರಕ್ಷಣೆಗೆ ಪ್ರಯೋಜನಕಾರಿಯಾಗಿದೆ. ಮಾತ್ರವಲ್ಲ ಇದು ಚರ್ಮವನ್ನು ಮೃದುವಾಗಿಸಲು ಸಹ ಸಹಾಯ ಮಾಡುತ್ತದೆ.
ಆಡಿನ ಹಾಲಿನಲ್ಲಿ ಒಮೆಗಾ- 3 ಕೊಬ್ಬಿನಾಮ್ಲಗಳಿವೆ. ಇವು ಮೆದುಳಿನ ಬೆಳವಣಿಗೆ ಮತ್ತು ಸ್ಮರಣಶಕ್ತಿಗೆ ಬಹಳ ಒಳ್ಳೆಯದು.
ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿರುವ ಮೇಕೆ ಹಾಲು ನಮ್ಮ ಮೂಳೆಯ ಬಲವನ್ನು ಹೆಚ್ಚಿಸುತ್ತದೆ. ಜೊತೆಗೆ ಆಸ್ಟಿಯೊಪೊರೋಸಿಸ್‌ನಂತಹ ದೇಹದ ಸಮಸ್ಯೆಗಳನ್ನು ತಡೆಯುತ್ತದೆ.
ಇದನ್ನೂ ಓದಿ: ನಿಮ್ಮ ಹೊಟ್ಟೆ ಕರಗಿಸಬೇಕು ಅಂದ್ರೆ ಚಹಾ ಜೊತೆ ಈ ತಿಂಡಿಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ
ಮೇಕೆ ಹಾಲು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಇದು ಪಿತ್ತರಸದ ಸಮಸ್ಯೆಗಳನ್ನು ನಿವಾರಿಸುತ್ತದೆ. ಮೇಕೆ ಹಾಲಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಎ ಮತ್ತು ಬಿ6 ಸಮೃದ್ಧವಾಗಿದೆ. ಇದನ್ನು ಕುಡಿಯುವುದರಿಂದ ಹೃದಯ ಮತ್ತು ಮೂಳೆಗಳ ಆರೋಗ್ಯ ಸುಧಾರಿಸುತ್ತದೆ. ಮಾತ್ರವಲ್ಲ ಇದು ಊತವನ್ನು ಕಡಿಮೆ ಮಾಡುತ್ತದೆ. ಆತಂಕವನ್ನು ನಿವಾರಿಸುತ್ತದೆ. ರಕ್ತಹೀನತೆಯ ಸಮಸ್ಯೆಗಳು ತಡೆಯಲು ಸಹಾಯ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ