AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗಿಯಾಗಿ, ಮೈಗೆ ಅಂಟಿಕೊಳ್ಳುವ ಬಟ್ಟೆ ಹಾಕಿಕೊಳ್ಳುವುದಕ್ಕೆ ತುಂಬಾ ಇಷ್ಟನಾ? ಹಾಗಿದ್ರೆ ಈ ಸ್ಟೋರಿ ತಪ್ಪದೆ ಓದಿ

ಕೆಲವರು ಎಷ್ಟೇ ರೀತಿಯ ಉಡುಪುಗಳಿದ್ದರೂ ಕೂಡ ಬಿಗಿಯಾದ ಬಟ್ಟೆಗಳನ್ನು ಧರಿಸುವುದನ್ನು ನಿಲ್ಲಿಸುವುದಿಲ್ಲ. ಅದರಲ್ಲಿಯೂ ವ್ಯಾಯಾಮ ಮಾಡುವ ಸಮಯದಲ್ಲಿ ಹೆಚ್ಚಾಗಿ ಬಿಗಿಯಾದ ಬಟ್ಟೆಗಳನ್ನು ಹಾಕಿಕೊಳ್ಳುತ್ತಾರೆ. ಆದರೆ ದೀರ್ಘಕಾಲದ ವರೆಗೆ ಬಿಗಿಯಾದ ಬಟ್ಟೆಗಳನ್ನು ಹಾಕಿಕೊಳ್ಳುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ಅಂದ ಚೆಂದಕ್ಕೆ ಮುಗಿಬಿದ್ದು ಆರೋಗ್ಯ ಹಾಳು ಮಾಡಿಕೊಳ್ಳುವ ಮೊದಲು ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಹೆಚ್ಚಿನ ಮಾಹಿತಿ ಈ ಸ್ಟೋರಿಯಲ್ಲಿದೆ.

ಬಿಗಿಯಾಗಿ, ಮೈಗೆ ಅಂಟಿಕೊಳ್ಳುವ ಬಟ್ಟೆ ಹಾಕಿಕೊಳ್ಳುವುದಕ್ಕೆ ತುಂಬಾ ಇಷ್ಟನಾ? ಹಾಗಿದ್ರೆ ಈ ಸ್ಟೋರಿ ತಪ್ಪದೆ ಓದಿ
Tight Clothes
ಪ್ರೀತಿ ಭಟ್​, ಗುಣವಂತೆ
|

Updated on: Oct 24, 2025 | 8:02 PM

Share

ಇತ್ತೀಚಿನ ದಿನಗಳಲ್ಲಿ, ಎಲ್ಲರೂ ಹೊಸ ಫ್ಯಾಷನ್ (Fashion) ಫಾಲೋ ಮಾಡುವುದರಲ್ಲಿಯೇ ಹೆಚ್ಚು ಬ್ಯುಸಿಯಾಗಿರುತ್ತಾರೆ. ಮಾರುಕಟ್ಟೆಗೆ ಯಾವುದೇ ಪ್ರಾಡಕ್ಟ್ ಬಂದರೂ ಕೂಡ ಅದನ್ನು ಟ್ರೈ ಮಾಡದಿದ್ದರೆ ಮನಸ್ಸಿಗೆ ಸಮಾಧಾನವೇ ಇರುವುದಿಲ್ಲ ಎನ್ನುವ ಮಟ್ಟಿಗೆ ಫ್ಯಾಷನ್ ಹಿಂದೆಬಿದ್ದಿದ್ದಾರೆ. ಎಲ್ಲರೂ ಈ ಸಾಲಿಗೆ ಸೇರುವುದಿಲ್ಲವಾದರೂ ಕೂಡ ಹೋಲಿಕೆ ಮಾಡಹೊರಟರೆ ನಮ್ಮ ಮಧ್ಯೆ ಫ್ಯಾಷನ್ ಪ್ರಿಯರ ಸಂಖ್ಯೆಯೇ ತುಸು ಹೆಚ್ಚಿದೆ. ಅದಲ್ಲದೆ ಜನರು ಸ್ಟೈಲಿಶ್ ಆಗಿ ಕಾಣಲು ವಿವಿಧ ರೀತಿಯ ಬಟ್ಟೆಗಳನ್ನು (Clothes) ಕೂಡ ಧರಿಸುತ್ತಾರೆ. ಕೆಲವರು ಸಡಿಲವಾದ ಬಟ್ಟೆಗಳನ್ನು ಧರಿಸಲು ಬಯಸಿದರೆ ಇತರರು ದೇಹಕ್ಕೆ ಅಂಟಿಕೊಂಡು ಫಿಟ್ ಆಗಿರುವ ಬಟ್ಟೆಗಳನ್ನು ಹಾಕಿಕೊಳ್ಳುವುದಕ್ಕೆ ಇಷ್ಟಪಡುತ್ತಾರೆ. ಅದು ಜೀನ್ಸ್ ಆಗಿರಲಿ, ಲೆಗ್ಗಿಂಗ್ಸ್ ಆಗಿರಲಿ, ಬಾಡಿಕಾನ್ ಡ್ರೆಸ್ ಆಗಿರಲಿ ಅಥವಾ ಸ್ಟ್ರೆಚಬಲ್ ಟಾಪ್ ಆಗಿರಲಿ. ಹೀಗೆ ನಾನಾ ರೀತಿಯ ಉಡುಗೆಗಳನ್ನು ಟ್ರೈ ಮಾಡುತ್ತಾರೆ. ಇದರಿಂದ ನೀವು ಸ್ಟೈಲಿಶ್ ಆಗಿ ಕಾಣಬಹುದು, ಆದರೆ ತುಂಬಾ ಸಮಯದ ವರೆಗೆ ಈ ರೀತಿ ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು. ಅಂದ ಚೆಂದಕ್ಕೆ ಮುಗಿಬಿದ್ದು ಆರೋಗ್ಯ ಹಾಳು ಮಾಡಿಕೊಳ್ಳುವ ಮೊದಲು ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಹೆಚ್ಚಿನ ಮಾಹಿತಿ ಈ ಸ್ಟೋರಿಯಲ್ಲಿದೆ.

ಆಫೀಸ್, ಕಾಲೇಜು ಅಥವಾ ನೀವು ಕೆಲಸ ಮಾಡುವ ಕಡೆ ಬಿಗಿಯಾದ ಬಟ್ಟೆಗಳನ್ನು ಧರಿಸಿ ಹೋಗುವ ಅಭ್ಯಾಸ ನಿಮಗೂ ಇದ್ದರೆ ನೀವು ಬಹಳ ಜಾಗರೂಕರಾಗಿರಬೇಕಾಗುತ್ತದೆ. ಹೌದು. ಸಂಶೋಧನೆಯಿಂದ ತಿಳಿದು ಬಂದ ಮಾಹಿತಿ ಅನುಸಾರ ತುಂಬಾ ಸಮಯದ ವರೆಗೆ ಅಥವಾ ಪದೇ ಪದೇ ಬಿಗಿಯಾದ ಬಟ್ಟೆಗಳನ್ನು ಧರಿಸುವವರ ಆರೋಗ್ಯ ಬೇಗ ಹಾಳಾಗುತ್ತದೆ ಮಾತ್ರವಲ್ಲ ಇದು ದೇಹಕ್ಕೆ ಹಾನಿಕಾರಕವಾಗಿದೆ. ಹಾಗಾಗಿ ಆದಷ್ಟು ಈ ರೀತಿ ಉಡುಪುಗಳನ್ನು ಧರಿಸುವುದನ್ನು ಕಡಿಮೆ ಮಾಡಬೇಕು. ಅದರಲ್ಲಿಯೂ ಪ್ರತಿನಿತ್ಯ ಈ ರೀತಿ ಬಟ್ಟೆಗಳನ್ನು ಹಾಕಬಾರದು.

ಸಂಶೋಧನೆ ಏನು ಹೇಳುತ್ತದೆ?

ಹೆಲ್ತ್‌ಲೈನ್ ಪ್ರಕಾರ, ಬಿಗಿಯಾದ ಬಟ್ಟೆಗಳು ಕೆಲವರಿಗೆ ಬಹಳ ಆರಾಮದಾಯಕವೆನಿಸಬಹುದು, ಆದರೆ ಅದನ್ನು ಧರಿಸುವುದರಿಂದ ನಿಮಗೆ ಸರಿಯಾದ ವಿಶ್ರಾಂತಿ ಸಿಗುವುದಿಲ್ಲ. ಮಾತ್ರವಲ್ಲ ಪ್ರತಿನಿತ್ಯ ಉಪಯೋಗ ಮಾಡುವ ಶೇಪ್‌ವೇರ್, ಪ್ಯಾಂಟಿಹೌಸ್ ಮತ್ತು ಬ್ರಾಗಳಂತಹ ಬಿಗಿಯಾದ ಒಳ ಉಡುಪುಗಳು ಚರ್ಮದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಈ ಬಗ್ಗೆ ಆಹಾರ ತಜ್ಞೆ ಮಿಚೆಲ್ ರೌಶ್ ಅವರು ಕೆಲವು ಮಾಹಿತಿ ಹಂಚಿಕೊಂಡಿದ್ದು, ಪ್ರತಿದಿನ ಉಪಯೋಗ ಮಾಡುವ ಟೈಗಳು, ಸ್ಟ್ರೆಚ್ ಉಡುಪುಗಳು ಅಥವಾ ದೇಹಕ್ಕೆ ಬಿಗಿಯಾಗಿ ಅಂಟಿಕೊಳ್ಳುವ ಬಟ್ಟೆಗಳನ್ನು ಧರಿಸುವುದರಿಂದ ಹೊಟ್ಟೆ ಮತ್ತು ಜೀರ್ಣಕಾರಿ ಸಮಸ್ಯೆಗಳು ಹೆಚ್ಚಾಗಬಹುದು. ಮಾತ್ರವಲ್ಲ ದೀರ್ಘಕಾಲದ ನಿರಂತರ ಆಮ್ಲೀಯತೆಯು ಅನ್ನನಾಳವನ್ನು ಹಾನಿಗೊಳಿಸುತ್ತದೆ, ಆಹಾರವನ್ನು ನುಂಗಲು ಕಷ್ಟವಾಗುತ್ತದೆ. ಹೊಟ್ಟೆ ಉಬ್ಬಿರುವಾಗ ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಜೀರ್ಣಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರ ಜೊತೆಗೆ, ಬಿಗಿಯಾದ ಪ್ಯಾಂಟ್ ಅಥವಾ ಶೇಪ್‌ವೇರ್ ಉಸಿರಾಟವನ್ನು ಕಷ್ಟಕರವಾಗಿಸುತ್ತದೆ. ಬಿಗಿಯಾದ ಬಟ್ಟೆಗಳನ್ನು ಹಾಕಿಕೊಂಡು ವ್ಯಾಯಾಮ ಮಾಡುವಾಗ ಬರುವ ಬೆವರು ಕೂಡ ಚರ್ಮದ ಸಂಬಂಧಿ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Sleeping Tips: ಬಟ್ಟೆಯಿಲ್ಲದೆ ನಗ್ನವಾಗಿ ಮಲಗುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ?

ಟೊರೊಂಟೊ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದ ಪ್ರಕಾರ, ಬಿಗಿಯಾಗಿರುವ ವ್ಯಾಯಾಮದ ಬಟ್ಟೆಗಳು ಮಹಿಳೆಯರ ಅಥ್ಲೆಟಿಕ್ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು. ಬಿಗಿಯಾದ ಬಟ್ಟೆಯಲ್ಲಿ ವ್ಯಾಯಾಮ ಮಾಡುವುದು ತಪ್ಪಲ್ಲದಿದ್ದರೂ, ಅದು ಎಲ್ಲರಿಗೂ ಆರಾಮದಾಯಕವಲ್ಲ. ಆಯ್ಕೆಯು ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ವ್ಯಾಯಾಮ ಮಾಡುವ ಸಮಯದಲ್ಲಿ ಹೆಚ್ಚು ಬೆವರು ಬರುತ್ತಿದ್ದರೆ ಬಿಗಿಯಾದ ಬಟ್ಟೆಗಳನ್ನು ಧರಿಸಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ