ಬಾಳೆಹಣ್ಣು, ಪಪ್ಪಾಯಿಯನ್ನು ಒಟ್ಟಿಗೆ ಸೇವನೆ ಮಾಡಬಾರದು ಎಂಬುದಕ್ಕೆ ಈ ಅಂಶಗಳೇ ಕಾರಣ

Side Effects of Eating Banana and Papaya Together: ಬಾಳೆಹಣ್ಣು ಮತ್ತು ಪಪ್ಪಾಯಿ ಇವೆರಡು ಹಣ್ಣುಗಳು ಕೂಡ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಅದರಲ್ಲಿಯೂ ಇವೆರಡು ನಮ್ಮ ದೇಸಿ ಹಣ್ಣುಗಳಾಗಿರುವುದರಿಂದ ಇದರ ಗುಣಮಟ್ಟವೂ ಚೆನ್ನಾಗಿರುತ್ತದೆ. ಹಾಗಾಗಿ ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವುದು ನಮ್ಮ ದೇಹಕ್ಕೆ ಒಳ್ಳೆಯದು. ಆದರೆ ಇವೆರಡನ್ನೂ ಒಟ್ಟಿಗೆ ತಿನ್ನುವುದು ಒಳ್ಳೆಯದಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹೌದು, ಬಾಳೆಹಣ್ಣು ಮತ್ತು ಪಪ್ಪಾಯಿ ವಿಭಿನ್ನ ಗುಣಲಕ್ಷಣಗಳನ್ನು ಹೊಂದಿರುವ ಹಣ್ಣುಗಳು ಹಾಗಾಗಿ ಒಟ್ಟಿಗೆ ತಿನ್ನುವುದಕ್ಕಿಂತ ಪ್ರತ್ಯೇಕವಾಗಿ ಸೇವನೆ ಮಾಡುವುದೇ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಹಾಗಾದರೆ ಆಹಾರ ತಜ್ಞರು ಹೇಳುವ ಪ್ರಕಾರ ಬಾಳೆಹಣ್ಣಿನ ಜೊತೆಗೆ ಯಾಕೆ ಪಪ್ಪಾಯಿ ಸೇವನೆ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬಾಳೆಹಣ್ಣು, ಪಪ್ಪಾಯಿಯನ್ನು ಒಟ್ಟಿಗೆ ಸೇವನೆ ಮಾಡಬಾರದು ಎಂಬುದಕ್ಕೆ ಈ ಅಂಶಗಳೇ ಕಾರಣ
ಬಾಳೆಹಣ್ಣು ಮತ್ತು ಪಪಾಯ
Image Credit source: Getty Images
Updated By: Digi Tech Desk

Updated on: Nov 11, 2025 | 11:53 AM

ಬಾಳೆಹಣ್ಣು (Banana) ಮತ್ತು ಪಪ್ಪಾಯಿ (Papaya) ಇವೆರಡು ಹಣ್ಣುಗಳು ಕೂಡ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದ್ದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಆರೋಗ್ಯ ತಜ್ಞರು ಕೂಡ ಈ ಎರಡು ಹಣ್ಣುಗಳನ್ನು ಹೆಚ್ಚು ಹೆಚ್ಚು ತಿನ್ನಿ ಎಂದು ಶಿಫಾರಸ್ಸು ಮಾಡುತ್ತಾರೆ. ಅದರಲ್ಲಿಯೂ ಇವೆರಡು ನಮ್ಮ ದೇಸಿ ಹಣ್ಣುಗಳಾಗಿರುವುದರಿಂದ ಇದರ ಗುಣಮಟ್ಟವೂ ಚೆನ್ನಾಗಿರುತ್ತದೆ. ಆದರೆ ಪ್ರತಿಯೊಂದು ಹಣ್ಣು ಕೂಡ ಕೆಲವೊಂದು ಅಡ್ಡಪರಿಣಾಮಗಳನ್ನು ಹೊಂದಿದ್ದು ತನ್ನದೇ ಆದ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಮರೆಯಬಾರದು. ಅದಕ್ಕಾಗಿಯೇ ಒಂದೇ ಸಮಯದಲ್ಲಿ ವಿಭಿನ್ನ ಗುಣಲಕ್ಷಣಗಳನ್ನು ಹೊಂದಿರುವ ಎರಡು ಹಣ್ಣುಗಳನ್ನು ತಿನ್ನುವುದು ಹಾನಿಕಾರಕ ಎಂದು ಹೇಳಲಾಗುತ್ತದೆ. ಇದು ಬಾಳೆಹಣ್ಣು ಮತ್ತು ಪಪ್ಪಾಯಿ ಹಣ್ಣಿಗೂ ಅನ್ವಯಿಸುತ್ತದೆ. ಹಾಗಾದರೆ ಆಹಾರ ತಜ್ಞರು ಹೇಳುವ ಪ್ರಕಾರ ಬಾಳೆಹಣ್ಣಿನ ಜೊತೆಗೆ ಯಾಕೆ ಪಪ್ಪಾಯಿ ಸೇವನೆ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ ಹಲವು ಅಗತ್ಯ ಪೋಷಕಾಂಶಗಳು ದೊರೆಯುತ್ತವೆ. ಈ ಹಣ್ಣಿನಲ್ಲಿ ನಮಗೆ ಅಗತ್ಯವಿರುವ ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಇದ್ದು, ಇದು ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಪಪ್ಪಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಾಯವಾಗುತ್ತದೆ. ಹೀಗೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಎರಡು ಹಣ್ಣು ಕೂಡ ಸಹಾಯ ಮಾಡುತ್ತದೆ. ಆದರೆ ಬಾಳೆಹಣ್ಣು ಮತ್ತು ಪಪ್ಪಾಯಿ ವಿಭಿನ್ನ ಗುಣಲಕ್ಷಣಗಳನ್ನು ಹೊಂದಿರುವ ಹಣ್ಣುಗಳು. ಅದಕ್ಕಾಗಿಯೇ ವೈದ್ಯರು ಅವುಗಳನ್ನು ಒಟ್ಟಿಗೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಮಾತ್ರವಲ್ಲ, ಇದು ವಾಂತಿ, ಅಲರ್ಜಿ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇನ್ನು ಉಸಿರಾಟದ ತೊಂದರೆ ಇರುವವರು ಪಪ್ಪಾಯಿ ತಿನ್ನುವುದನ್ನು ತಪ್ಪಿಸುವುದೇ ಒಳ್ಳೆಯದು.

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಈ ಒಂದು ಅಭ್ಯಾಸ ರೂಢಿಸಿಕೊಂಡರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳೇ ಬರಲ್ಲ!

ಯಾವ ರೀತಿಯ ಆರೋಗ್ಯ ಸಮಸ್ಯೆಗಳಾಗುತ್ತೆ?

ಬಾಳೆಹಣ್ಣು ಮತ್ತು ಪಪ್ಪಾಯಿಯನ್ನು ಒಟ್ಟಿಗೆ ತಿನ್ನುವುದರಿಂದ ಕೆಲವರಲ್ಲಿ ಹೊಟ್ಟೆ ಉಬ್ಬರ ಮತ್ತು ಇತರ ಉಸಿರಾಟದ ತೊಂದರೆಗಳು ಉಂಟಾಗಬಹುದು. ಅದಕ್ಕಾಗಿಯೇ ಈ ಹಣ್ಣುಗಳ ಸಂಯೋಜನೆ ಒಳ್ಳೆಯದಲ್ಲ. ಅದರ ಬದಲು ಇವುಗಳನ್ನು ಬೇರೆ ಬೇರೆ ಸಮಯದಲ್ಲಿ ಸೇವನೆ ಮಾಡುವುದು ಒಳ್ಳೆಯದು ಇದರಿಂದ ಸಮಸ್ಯೆಗಳು ಉಲ್ಬಣಗೊಳ್ಳುವುದನ್ನು ತಡೆಯಬಹುದು. ಅಂದರೆ ಪಪ್ಪಾಯಿ ಮತ್ತು ಬಾಳೆಹಣ್ಣನ್ನು ಪ್ರತ್ಯೇಕವಾಗಿ ತಿನ್ನುವುದು ದೇಹಕ್ಕೆ ಪ್ರಯೋಜನಕಾರಿ. ಆಯುರ್ವೇದದ ಪ್ರಕಾರ, ಬಾಳೆಹಣ್ಣುಗಳು ದೇಹವನ್ನು ತಂಪಾಗಿಸುತ್ತವೆ, ಆದರೆ ಪಪ್ಪಾಯಿಗಳು ದೇಹವನ್ನು ಬಿಸಿಮಾಡುತ್ತವೆ. ಈ ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ಜೀರ್ಣಕ್ರಿಯೆ ದುರ್ಬಲಗೊಳ್ಳುತ್ತದೆ ಮತ್ತು ತಲೆನೋವು, ವಾಂತಿ, ತಲೆ ತಿರುಗುವಿಕೆ, ಅಲರ್ಜಿಗಳು ಮತ್ತು ಅಜೀರ್ಣದಂತಹ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಸಾಧ್ಯವಾದಷ್ಟು ಈ ಎರಡು ಹಣ್ಣುಗಳ ಸಂಯೋಜನೆಯನ್ನು ಕಡಿಮೆ ಮಾಡಿ. ಆರೋಗ್ಯವನ್ನು ಕಾಪಾಡಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:26 am, Tue, 11 November 25