
ಗುಜರಾತ್‌ನ ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ(Air India Flight) ದುರಂತ ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ. ನೂರಾರು ಕನಸುಗಳನ್ನು ಹೊತ್ತು ಆಕಾಶಕ್ಕೆ ಏರುವ ಮೊದಲೇ ಅವರ ಜೀವಗಳು ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದನ್ನು ಇಂದಿಗೂ ಅರಗಿಸಿಕೊಳ್ಳುವುದು ಕಷ್ಟವಾಗುತ್ತದೆ. ಅಲ್ಲದೆ ಈ ದುರಂತ ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಿಮಾನ (Flight) ಅಪಘಾತವೆಂದು ಪರಿಗಣಿಸಲಾಗಿದೆ. ತನಿಖಾಧಿಕಾರಿಗಳು ಈ ಅಪಘಾತವಾಗಲು ಯಾವ ರೀತಿ ಯಾಂತ್ರಿಕ ಸಮಸ್ಯೆಯಾಗಿರಬಹುದು ಎಂದು ಹುಡುಕುತ್ತಿದ್ದರೆ, ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಮನೆಯವರು ತಮ್ಮ ಪ್ರೀತಿಪಾತ್ರರು ವಿಮಾನದಲ್ಲಿ ಕೊನೆಯ ಕ್ಷಣ ಹೇಗೆ ಕಳೆದಿರಬಹುದು? ವಿಮಾನ ಡಿಕ್ಕಿ ಹೊಡೆದಾಗ ಅವರಿಗೆ ಪ್ರಜ್ಞೆ ಇತ್ತೇ, ಹೀಗೆ ನಾನಾ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದಾರೆ.
ಈ ರೀತಿಯ ಗೊಂದಲಗಳನ್ನು ದೂರ ಮಾಡಲು ಕೆಲವು ನರವಿಜ್ಞಾನಿಗಳು, ಮನಶ್ಶಾಸ್ತ್ರಜ್ಞರು ನ್ಯೂಸ್ 18ಗೆ ಕೆಲವು ಮಾಹಿತಿ ನೀಡಿದ್ದು ಅಲ್ಲಿನ ವಾಸ್ತವತೆಯನ್ನು ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಅಂತಿಮ ಕ್ಷಣಗಳಲ್ಲಿ ಮೆದುಳು ಹೇಗೆ ಕೆಲಸ ಮಾಡುತ್ತದೆ? ಕೊನೆಯ ಹಂತದಲ್ಲಿ ವ್ಯಕ್ತಿಯ ಯೋಚನೆಗಳು ಹೇಗಿರುತ್ತವೆ ಎಂಬುದರ ಬಗ್ಗೆ ವಿವರವಾದ ಮಾಹಿತಿ ನೀಡಿದ್ದು, ಅಪಘಾತವಾಗುವ ಸಮಯದಲ್ಲಿ ಮನುಷ್ಯ ಹೇಗೆಲ್ಲಾ ವರ್ತಿಸಬಹುದು, ಆ ಸಮಯದಲ್ಲಿ ದೇಹದಲ್ಲಿ ಯಾವ ರೀತಿ ಬದಲಾವಣೆಗಳಾಗಬಹುದು ಎನ್ನುವುದನ್ನು ನೀವು ಕೂಡ ತಿಳಿದುಕೊಳ್ಳಬಹುದು.
ಗಾಜಿಯಾಬಾದ್‌ನ ಯಶೋದಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಲಹಾ ಮನಶ್ಶಾಸ್ತ್ರಜ್ಞೆ ಡಾ. ಶೋಭಾ ಶರ್ಮಾ ಅವರು ಹೇಳುವ ಪ್ರಕಾರ, ವಿಮಾನವು ತನ್ನ ನಿಯಂತ್ರಿಣ ತಪ್ಪಿ ಇಳಿಯಲು ಪ್ರಾರಂಭಿಸಿದಾಗ, ಮೆದುಳು ಬದುಕುಳಿಯಲು ಯೋಚಿಸುತ್ತದೆ. ಆಗ ಉಂಟಾಗುವ ಭಯದಿಂದ ಮಾನವ ದೇಹವು ‘ಅಡ್ರಿನಲ್’ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಹಾಗಾಗಿ ಆಘಾತಕಾರಿಯಾಗಿರುವ ಅಪಘಾತಕ್ಕೆ ಮುಂಚಿನ ಕೊನೆಯ ಸೆಕೆಂಡುಗಳಲ್ಲಿ, ಮಾನವ ದೇಹವು ತೀವ್ರ ಒತ್ತಡದ ಸ್ಥಿತಿಗೆ ತಲುಪುತ್ತದೆ. ಹೃದಯ ಬಡಿತ ಹೆಚ್ಚಾಗುತ್ತದೆ, ಉಸಿರಾಟವು ವೇಗವಾಗುತ್ತದೆ ಮತ್ತು ಸ್ನಾಯುಗಳು ಉದ್ವಿಗ್ನಗೊಳ್ಳುತ್ತವೆ” ಎಂದು ಅವರು ಹೇಳಿದ್ದಾರೆ.
ವಿಮಾನ ಡಿಕ್ಕಿ ಹೊಡೆದ ಸಂದರ್ಭದಲ್ಲಿ, ಮೆದುಳಿಗೆ ತೀವ್ರವಾದ ದೈಹಿಕ ಆಘಾತವಾಗುತ್ತದೆ. ಇದರ ಪರಿಣಾಮ ವಿಮಾನ ಇದ್ದ ವೇಗ ಮತ್ತು ವಿಮಾನದಲ್ಲಿರುವ ವ್ಯಕ್ತಿಯ ಸ್ಥಳ ಮತ್ತು ವ್ಯಕ್ತಿಯು ಸೀಟ್‌ಬೆಲ್ಟ್‌ಗಳಂತಹ ಯಾವುದೇ ರಕ್ಷಣಾ ಸಾಧನಗಳನ್ನು ಧರಿಸಿದ್ದಾರೆಯೇ, ಇಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ನಮ್ಮ ಮೆದುಳು ದುರ್ಬಲವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ತಲೆಬುರುಡೆಗೆ ಪೆಟ್ಟಾಗುವ ಸಾಧ್ಯತೆಗಳು ಜಾಸ್ತಿ ಇರುವುದರಿಂದ, ವ್ಯಕ್ತಿಯ ದೇಹಕ್ಕೆ ಗಂಭೀರ ಗಾಯಗಳಾಗುವ ಸಂಭವ ಹೆಚ್ಚಾಗಿರುತ್ತದೆ.
ಚೆನ್ನೈನ ಅಪೋಲೋ ಆಸ್ಪತ್ರೆಗಳ ತುರ್ತು ಪ್ರತಿಕ್ರಿಯೆ ವಿಭಾಗದ ಮುಖ್ಯಸ್ಥರಾದ ಡಾ. ಧವಪಳನಿ ಅಳಗಪ್ಪನ್ ಅವರ ಪ್ರಕಾರ, ವಿಮಾನ ಬೆಂಕಿಗೆ ಆಹುತಿಯಾಗುವ ಮುನ್ನ ಪ್ರಜ್ಞೆ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಏಕೆಂದರೆ ಎತ್ತರ ಮತ್ತು ವೇಗ ಮೆದುಳು ಮತ್ತು ಮಾನವ ದೇಹದ ಇತರ ಭಾಗಗಳಿಗೆ ಭಾರಿ ಆಘಾತವನ್ನುಂಟು ಮಾಡುತ್ತದೆ. ಕೊನೆಯ ಕ್ಷಣದವರೆಗೂ ಜಾಗೃತರಾಗಿದ್ದರೂ ಕೂಡ ಅವರು ತಮ್ಮ ಇಂದ್ರಿಯಗಳನ್ನು ಕಳೆದುಕೊಳ್ಳುತ್ತಿದ್ದರು. ಇದೆಲ್ಲಾ ಸೆಕೆಂಡುಗಳಲ್ಲಿ ಆಗುವುದರಿಂದ ಪ್ರಜ್ಞೆ ಕಳೆದುಕೊಳ್ಳಲು ಕ್ಷಣ ಸಾಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅಚ್ಚರಿಯ ಸೀಟ್ ನಂಬರ್ 11ಎ: ಎರಡು ವಿಮಾನ ಅಪಘಾತದಲ್ಲಿ ಬದುಕುಳಿದವರು ಈ ಸೀಟ್ನಲ್ಲಿ ಕೂತವರೆಯೇ
ಫರಿದಾಬಾದ್ ಮೂಲದ ಅಮೃತಾ ಆಸ್ಪತ್ರೆಯ ಹಿರಿಯ ಸಲಹೆಗಾರ, ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಆನಂದ್ ಬಾಲಸುಬ್ರಮಣಿಯಂ, ಅವರು 2014 ರಲ್ಲಿ ಆದ ಘಟನೆ ನೆನಪಿಸಿಕೊಂಡಿದ್ದು, ಮಲೇಷ್ಯಾ ಏರ್ಲೈನ್ಸ್ ವಿಮಾನ MH17, ಎತ್ತರದ ಪ್ರದೇಶದಲ್ಲಿ ಕ್ಷಿಪಣಿಗೆ ಡಿಕ್ಕಿ ಹೊಡೆದಿತ್ತು. ಅಲ್ಲಿ ಡಿಕ್ಕಿ ಹೊಡೆದು ಬೀಳುವ ಸಮಯ ಹೆಚ್ಚಿದ್ದಾಗ ಕೆಲವು ಪ್ರಯಾಣಿಕರಿಗೆ ಪ್ರಜ್ಞೆ ಇರಬಹುದು ಎಂದು ತನಿಖಾಧಿಕಾರಿಗಳು ನಂಬುತ್ತಾರೆ. ಇನ್ನು 2009 ರಲ್ಲಿ ಏರ್ ಫ್ರಾನ್ಸ್ ವಿಮಾನ 447 ರಲ್ಲೂ ಇದೇ ರೀತಿಯ ಪ್ರಕರಣ ಸಂಭವಿಸಿತ್ತು. ಈ ಸಂದರ್ಭದಲ್ಲಿ, ವಿಮಾನ ಲ್ಯಾಂಡ್ ಆಗುವುದಕ್ಕೆ ಮೂರು ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತ್ತು, ಇಂತಹ ಸಮಯದಲ್ಲಿ ಪ್ರಯಾಣಿಕರು ಜಾಗೃತರಾಗಿರುವ ಸಾಧ್ಯತೆ ಹೆಚ್ಚಿರುತ್ತದೆ, ಆದರೆ ಇಂತಹ ಸಮಯದಲ್ಲಿ ಅವರಿಗಾದ ಆಘಾತ ಕೂಡ ತೀವ್ರವಾಗಿರುತ್ತದೆ. ಆದ್ದರಿಂದ, ಪ್ರಜ್ಞೆ ತಪ್ಪುವುದು ಆ ಸಮಯವನ್ನು ಅವಲಂಬಿಸಿರುತ್ತದೆ. ಹೆಚ್ಚಿನ ವೇಗದಲ್ಲಿ ನಡೆದಂತಹ ಘಟನೆಗಳಲ್ಲಿ ತಕ್ಷಣ ಪ್ರಜ್ಞೆತಪ್ಪುವ ಸಾಧ್ಯತೆ ಹೆಚ್ಚಾಗಿರುತ್ತದೆ. ಏಕೆಂದರೆ ಸನ್ನಿವೇಶಗಳು ನಿಧಾನವಾದಂತೆ ಪ್ರಜ್ಞೆ ತಪ್ಪುವ ಸಾಧ್ಯತೆ ಕೂಡ ನಿಧಾನವಾಗಿರುತ್ತದೆ” ಎಂದು ಬಾಲಸುಬ್ರಮಣಿಯಂ ಹೇಳಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ