ಕಡಿಮೆ ನಿದ್ರೆ ಅಂದರೆ ಹಲವು ತೊಂದರೆ; ನಿದ್ರಾಹೀನತೆಯಿಂದ ಬಳಲುತ್ತಿರುವವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

| Updated By: shruti hegde

Updated on: Jun 21, 2021 | 9:49 AM

ದೇಹದ ತೂಕವನ್ನು ಹೆಚ್ಚಿಸಲು ನಿದ್ರಾಹೀನತೆಯೂ ಕಾರಣವಾಗುತ್ತದೆ. ಸರಿಯಾದ ನಿದ್ರೆ ಇಲ್ಲದೆ, ದೇಹದ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ.

ಕಡಿಮೆ ನಿದ್ರೆ ಅಂದರೆ ಹಲವು ತೊಂದರೆ; ನಿದ್ರಾಹೀನತೆಯಿಂದ ಬಳಲುತ್ತಿರುವವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಪ್ರಾತಿನಿಧಿಕ ಚಿತ್ರ
Follow us on

ಜೀವನಶೈಲಿಯಲ್ಲಿನ ಬದಲಾವಣೆ, ವೃತ್ತಿ ಜೀವನದಲ್ಲಿನ ಏರುಪೇರು, ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ಮತ್ತು ರಾತ್ರಿ ಪಾಳಿಯಲ್ಲಿನ ಉದ್ಯೋಗ, ಮೊಬೈಲ್ ಅತಿಯಾಗಿ ಬಳಸುವುದು, ತಂತ್ರಜ್ಞಾನದ ಅವಲಂಬನೆ, ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಸಮಯ ಕಳೆಯುವುದು, ಓಟಿಟಿ ಪ್ಲಾಟ್​ಫಾರ್ಮ್​ಗಳಿಗೆ ದಾಸರಾಗುವುದು ಆ ಮೂಲಕ ರಾತ್ರಿಯಿಡಿ ಎಚ್ಚರ ಇರುವುದು ನಿದ್ರಾಹೀನತೆಗೆ ಕಾರಣವಾಗುತ್ತದೆ. ಆದರೆ ನಿದ್ರೆಯನ್ನು ನಿರ್ಲಕ್ಷಿಸುವುದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅವಶ್ಯಕವಾಗಿ ತಿಳಿದುಕೊಳ್ಳಿ ಮತ್ತು ಇದರಿಂದ ಉಂಟಾಗುವ ಅಪಾಯದಿಂದ ದೂರವಿರಿ.

* ದೇಹದ ತೂಕವನ್ನು ಹೆಚ್ಚಿಸಲು ನಿದ್ರಾಹೀನತೆಯೂ ಕಾರಣವಾಗುತ್ತದೆ. ಸರಿಯಾದ ನಿದ್ರೆ ಇಲ್ಲದೆ, ದೇಹದ ಚಯಾಪಚಯ ನಿಧಾನವಾಗುತ್ತದೆ. ಈ ಕಾರಣದಿಂದಾಗಿ, ಆಹಾರದಿಂದ ಪಡೆದ ಕ್ಯಾಲೊರಿಗಳನ್ನು ಸರಿಯಾಗಿ ಖರ್ಚು ಮಾಡಲಾಗುವುದಿಲ್ಲ. ಇದು ಕೊಬ್ಬನ್ನು ದೇಹಕ್ಕೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ ಮತ್ತು ಆ ಮೂಲಕ ಹೆಚ್ಚುವರಿ ತೂಕವನ್ನು ನೀಡುತ್ತದೆ.

* ಇತ್ತೀಚಿನ ದಿನಗಳಲ್ಲಿ ಅನೇಕ ಜನರಲ್ಲಿ ಕೋಪ, ಹತಾಶೆ ಮತ್ತು ಒತ್ತಡ ಹೆಚ್ಚುತ್ತಿದೆ. ನಿದ್ರಾಹೀನತೆಯೂ ಇದಕ್ಕೆ ಒಂದು ಪ್ರಮುಖ ಕಾರಣವಾಗಿ ಎಂದು ವಿಜ್ಞಾನಿಗಳು ಹೇಳುತ್ತಾರೆ. ನಿದ್ರೆ ಸರಿಯಾಗಿ ಆದರೆ ಮಾತ್ರ ಆ ದಿನ ಚೆನ್ನಾಗಿರುತ್ತದೆ. ಇಲ್ಲವಾದಲ್ಲಿ ಕಿರಿಕಿರಿ ಎದುರಾಗುತ್ತದೆ.

* ನಿದ್ರಾಹೀನತೆ ಇರುವವರಲ್ಲಿ ಬೇಗನೆ ಮಧುಮೇಹ ಬರುವ ಸಾಧ್ಯತೆ ಇದೆ. ನಿದ್ರೆ ಸರಿಯಾಗಿ ಆಗದಿದ್ದಾಗ ದೇಹದಲ್ಲಿ ಇನ್ಸುಲಿನ್ ಪ್ರತಿರೋಧ ಹೆಚ್ಚಾಗುತ್ತದೆ. ಮೇದೋಜ್ಜೀರಕ ಗ್ರಂಥಿಯಿಂದ ಉತ್ಪತ್ತಿಯಾಗುವ ಇನ್ಸುಲಿನ್ ಅನ್ನು ದೇಹವು ಸರಿಯಾಗಿ ಹೀರಿಕೊಳ್ಳುವುದಿಲ್ಲ, ಇದು ಮಧುಮೇಹಕ್ಕೆ ಕಾರಣವಾಗಬಹುದು.

* ಸರಿಯಾದ ನಿದ್ರೆ ಪಡೆಯಲು ವಿಫಲವಾದರೆ ಥೈರಾಯ್ಡ್ ಕಾಯಿಲೆಗೆ ತುತ್ತಾಗಬೇಕಾಗುತ್ತದೆ. ಅಲ್ಲದೆ ನಿದ್ರೆಯಿಂದ ದೂರವಾದವರಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತದೆ.

* ನಿದ್ರಾಹೀನತೆಯಿಂದಾಗಿ ಒಣ ಚರ್ಮ, ಕೂದಲು ಉದುರುತ್ತದೆ. ಅಲ್ಲದೆ ಚರ್ಮಕ್ಕೆ ಸಂಬಂಧಿಸಿದ ಇತರ ಕಾಯಿಲೆಗಳಿಗೂ ಕೂಡ ನಿದ್ರಾಹೀನತೆ ದಾರಿ ಮಾಡಿಕೊಡುತ್ತದೆ.

ಇದನ್ನೂ ಓದಿ:

Health Benefits: ಹಾಲು ಕುಡಿಯುವ ಅಭ್ಯಾಸ ಇದೆಯೇ? ಹಾಗಿದ್ದರೆ ಸೇವಿಸುವ ಸಮಯದ ಬಗ್ಗೆ ತಿಳಿಯವುದನ್ನು ಮರೆಯಬೇಡಿ

Health Tips: ಮನೆಯಲ್ಲೇ ಇದೆ ಮದ್ದು; ಬೆನ್ನು ನೋವಿನ ಉಪಶಮನಕ್ಕಾಗಿ ಸರಳ ವಿಧಾನ

Health Tips: ಕೆಮ್ಮು ಮತ್ತು ಮನೆಮದ್ದು; ಅಡುಗೆ ಮನೆಯಲ್ಲಿರುವ ಪದಾರ್ಥಗಳೇ ಮಳೆಗಾಲಕ್ಕೆ ಔಷಧಿ